TOP STORIES:

ಸಾಧಕರ ಹಾದಿ ಜೊತೆ ಸ್ವರ್ಣ ಜ್ಯೋತ್ಸ್ನ ಎಮ್ ಮಾಣಿ ಇವರ ಸಾಧನೆಯ ಕಥೆ


ಸಾಧನೆಯ ಹಾದಿಯಲ್ಲಿ ಸಾಗುವುದು ಅಷ್ಟು ಸುಲಭದ ಮಾತಲ್ಲ. ನಮ್ಮ ಸರ್ವಸ್ವವನ್ನು ಅದಕ್ಕಾಗಿಯೇ ಮುಡಿಪಾಗಿಟ್ಟರೂ ಕಮ್ಮಿನೇ. ತನ್ನ ಸರ್ವಸ್ವವನ್ನೇ ನೃತ್ಯಕ್ಕಾಗಿ ಮುಡಿಪಾಗಿರಿಸಿಕೊಂಡು ಹಂತ ಹಂತ ವಾಗಿ ಬೆಳೆಯುತ್ತಿರುವ ಪ್ರತಿಭೆಯೇ ಈ ಸ್ವರ್ಣ ಜ್ಯೋತ್ಸ್ನಾ.


ಇವರು ಶ್ರೀಮತಿ  ರಮಾ ಮತ್ತು ಶ್ರೀ ದಿ| ಅಶೋಕ ಪೂಜಾರಿ ದಂಪತಿಗಳ ಒಬ್ಬಳೇ ಮಗಳಾಗಿ 23/05/2000ದಂದು ಬಂಟ್ವಾಳ ತಾಲೂಕಿನ ಮಾಣಿಯಲ್ಲಿ ಜನ್ಮ ಪಡೆದರು. ಇವರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಾಣಿ, ಪ್ರೌಢ ಶಿಕ್ಷಣವನ್ನು ಹಿರಿಯ ಪ್ರಾಥಮಿಕ ಶಾಲೆ ಮಾಣಿಯಲ್ಲಿ ಹಾಗೂ ಪದವಿಪೂರ್ವ ಶಿಕ್ಷಣವನ್ನು ಸರಕಾರಿ ಪದವಿಪೂರ್ವ ಕಾಲೇಜು ಕೊಂಬೆಟ್ಟು, ಪುತ್ತೂರು ಇಲ್ಲಿ ಹಾಗೂ ಫ್ಯಾಷನ್ ಡಿಸೈನಿಂಗನ್ನು ಪುತ್ತೂರು ಗ್ಲೋರಿಯಾ ಕಾಲೇಜ್ ಆಫ್ ಫ್ಯಾಷನ್ ಡಿಸೈನಿಂಗ್ ನಲ್ಲಿ Bsc ಪದವೀಧರೆಯಾಗಿದ್ದಾರೆ.

ಬಾಲ್ಯದಿಂದಲೇ ಈಕೆ ನೃತ್ಯ ಪ್ರವೀಣೆ. ತನ್ನ 2 ವರ್ಷ 9 ತಿಂಗಳು ಮಗುವಿನಿಂದಲೇ ಮೊದಲ ವೇದಿಕೆ ಏರಿದರು. ಸಾಧನೆಯ ಹಾದಿ  2500ಕ್ಕೂ ಹೆಚ್ಚು ವೇದಿಕೆಯಲ್ಲಿ ನೃತ್ಯ ಪ್ರದರ್ಶನ ನೀಡಿರುತ್ತಾರೆ. ದಕ್ಷಿಣ ಕನ್ನಡ, ತುಮಕೂರು, ಬೆಂಗಳೂರು ಹೀಗೆ ಕರ್ನಾಟಕದಾದ್ಯಂತ ನೃತ್ಯ ಪ್ರದರ್ಶನ ನೀಡಿರುತ್ತಾರೆ. ಮನೆಯಲ್ಲಿ ತೀರಾ ಬಡತನ ಇದ್ದರೂ ಇವರ ಛಲ ಸಾಧನೆಯಲ್ಲಿ ಕಡಿಮೆಯಿಲ್ಲ. ಇವರ ತಂದೆ ತಾಯಿ ಪ್ರೀತಿಸಿ ಮದುವೆಯಾಗಿದ್ದರು. ಮೊದ ಮೊದಲು ಜೀವನ ಸುಖವಾಗಿಯೇ ಇತ್ತು. ಆದರೆ, ತಂದೆಯ ತೀರಾ ಕುಡುಕತನ ನೆಮ್ಮದಿಯ ಜೀವನಕ್ಕೆ ಅಡಿಗಾಲಾಯಿತು. ತನ್ನ ತಾಯಿಗೆ ನೃತ್ಯ ಕಲೆ ತುಂಬಾ ಇಷ್ಟ. ಅದೇ ರೀತಿ ತನ್ನ ಒಬ್ಬಳೇ ಮಗಳನ್ನು ನೃತ್ಯ ಪ್ರವೀಣೆಯನ್ನಾಗಿಸಬೇಕು ಎಂಬ ಬಹುದೊಡ್ಡ ಕನಸು. ಇವರು ಕೂಡ ನೃತ್ಯ ಎಂದರೆ ಹಾಡು ಕೇಳಿದಾಗಲೆಲ್ಲ ಕುಣಿದಾಡುತ್ತಿದ್ದರು. ನೃತ್ಯ ತರಬೇತಿಗೆ ಸೇರಿಸೋಣ ಎಂದರೆ, ಆರ್ಥಿಕವಾಗಿ ಹಿಂದುಳಿದಿರುವುದಲ್ಲದೆ ತಂದೆಯ ಪ್ರೋತ್ಸಾಹವೂ ಸಿಗದಾಗಿತ್ತು. ಛಲ ಬಿಡದ ತಾಯಿ ತಾನು ಬಟ್ಟೆ ಹೊಲಿದು ಸಂಪಾದಿಸಿದ ಹಣದಲ್ಲಿ ಇವರನ್ನು ಚಿಕ್ಕ ಮಗುವಿನಲ್ಲೇ ಕದ್ದುಮುಚ್ಚಿ ನೃತ್ಯ ತರಬೇತಿಗೆ ಕಳುಹಿಸುತ್ತಾರೆ. ಇದು ತಂದೆಗೆ ಗೊತ್ತಾಗಿ ದೊಡ್ಡ ಜಗಳವೇ ಆಗುತ್ತದೆ. ಆದರೆ ತಾಯಿ ಎದೆಗುಂದದೆ ಮತ್ತೆ ಮಗಳಿಗೆ ಬೇಕಾದ ಪ್ರೋತ್ಸಾಹವನ್ನು ಧಾರೆ ಎರೆಯುತ್ತಾರೆ. ಇವರಿಗೆ ಒಂದೊಂದಾಗಿ ವೇದಿಕೆ ಸಿಗಲು ಶುರುವಾಯಿತು. ತಂದೆ ಯಾವುದೇ ಕಾರ್ಯಕ್ರಮಕ್ಕೆ ಹೋಗಲು ಬಿಡುತ್ತಿರಲಿಲ್ಲ. ಆದರೂ ಕನಸಿನ ಕೂಸನ್ನು ಇಬ್ಬರೂ ಬಿಡಲಾಗದೆ ಹಲವಾರು ವೆದಿಕೆಗಳಲ್ಲಿ ಮನರಂಜನೆ ನೀಡುತ್ತಾರೆ. ಇವರ ನೃತ್ಯವನ್ನು ನೋಡುತ್ತಾ ತಾಯಿಯ ಆ ಖುಷಿಗೆ ಮಿತಿಯೇ ಇರುತ್ತಿರಲಿಲ್ಲ. ಆದರೆ, ಕಾರ್ಯಕ್ರಮ ಮುಗಿದು ಮನೆಗೆ ಬಂದರೆ ತಂದೆ ಚಿಲಕ ಹಾಕಿಕೊಂಡು ಮಲಗಿರುತ್ತಾರೆ. ಎಷ್ಟೇ ಕೂಗಿದರೂ ಎಚ್ಚರವಾಗದಂತೆ ಮಲಗುತ್ತಿದ್ದರು. ತಾಯಿ ಮತ್ತು ಮಗಳು ಇಬ್ಬರೂ ಹೊರಗಡೆನೇ ಮಲಗಿ ಬೆಳಗಾಗಿಸುವ ಪರಿಸ್ಥಿತಿ. ಅದೆಷ್ಟೋ ಬಾರಿ ಹೀಗೆ ಅನುಭವಿಸಿದ್ದಾರೆ. ಅದಕ್ಕೆ ಸರಿಯಾಗಿ ಊರವರ ಕೀಳು ಮಾತುಗಳು. ಒಬ್ಬ ಬಡ ಹೆಣ್ಣುಮಗಳು ಸಾಧನೆಯ ಕನಸು ಕಂಡರೆ ನೋಡೋರೆಲ್ಲ ಹೀಗೇ ಏನೆನೋ ಅರ್ಥಗಳನ್ನು ಕಲ್ಪಿಸಿ ಕೊಡುವುದು ಈ ಸಮಾಜದ ಕೆಟ್ಟ ಚಟ ಅನ್ನಬಹುದು. ಹೀಗೆ ತಂದೆ ಜಗಳ ಆಡಿ ಆಡಿ ಕುಡಿದು ಕುಡಿದೇ ಒಂದು ದಿನ ಕೊನೆಯುಸಿರೆಳೆದರು. ಇವರ ಬಾಲ್ಯದಿಂದಲೂ ಬಂದ ಈ ಕಷ್ಟಗಳನ್ನು ನೆನೆಸಿಕೊಂಡರೆ ಯಾವ ಸಾಧನೆಯೂ ಬೇಡ ಅನ್ನುವ ರೀತಿ ಇತ್ತು. ಆದರೆ, ತಾಯಿಯ ಛಲದಿಂದ ಮಗಳು ಕೂಡ ಛಲ ಬಿಡದೆ ಕಷ್ಟಗಳನ್ನು ಕಣ್ಣೀರಲ್ಲಿ ಆಚೆಗೆರೆದು ಜಯಶಾಲಿಯಾಗಿ ನಿಂತಿದ್ದಾರೆ.

ಶಿಕ್ಷಣದ ವಿಷಯಕ್ಕೆ ಬಂದರೆ, ಇವರು 95% ಅಂಕಗಳಲ್ಲಿ ತೇರ್ಗಡೆಯಾಗಿರುವ ವಿದ್ಯಾರ್ಥಿನಿ. ಇವರ ಅರ್ಧದಷ್ಟು ವಿದ್ಯಾಭ್ಯಾಸದ ಖರ್ಚನ್ನು ಖ್ಯಾತ ಉದ್ಯಮಿ “ಜಯಂತ್ ನಡುಬೈಲು” ಇವರು ಬರಿಸಿದ್ದಾರೆ ಅನ್ನೋದು ಇವರಿಗೆ ಖುಷಿಯ ವಿಚಾರ. ಹಾಗೇ ಇನ್ನಿತರ ಹಲವಾರು ಸಂಘ ಸಂಸ್ಥೆಗಳು ಆ ರೀತಿ  ಈ ರೀತಿ ಸಹಾಯ ಮಾಡ್ತೀವಿ ಅಂತ ನಾಲ್ಕು ಜನರ ಎದುರು ಹೇಳಿದ್ದಲ್ಲದೆ ಏನೂ ಸಹಾಯ ಮಾಡಿಲ್ಲ ಅನ್ನೋದು ಇವರಿಗೆ ಬೇಸರ ತಂದಿದೆ. ಇವರು ಯಾವುದೇ ಕಾರ್ಯಕ್ರಮಕ್ಕೆ ಇಂತಿಷ್ಟೇ ಸಂಭಾಷಣೆಗಳನ್ನು ಕೊಡಿ ಅಂತ ಕೇಳದೆ, ಬಂದ ಅವಕಾಶಗಳನ್ನು ತಿರಸ್ಕರಿಸಿದೆ, ಇಷ್ಟದಿಂದ ಭರತನಾಟ್ಯ ಪ್ರದರ್ಶನ ಕೊಡುತ್ತಿದ್ದರು. ಅವರು ಕೊಟ್ಟರೆ ಸಂಭಾವನೆ ತಗೋತಿದ್ರು. ಇಲ್ಲಾಂದ್ರೆ ಅವರು ಕೊಟ್ಟ ಗೌರವ ಕಾಣಿಕೆ ಹಿಡ್ಕೊಂಡು ಹಿಂದೆ ಬರ್ತಾ ಇದ್ರು. ಇಂತಹ ನೋವು ಅದೆಷ್ಟೋ ಕಲಾವಿದರು ಅನುಭವಿಸಿರುತ್ತಾರೆ. ಯಾವುದೇ ಸಂಘ ಸಂಸ್ಥೆಗಳಾಗಲಿ ಈ ರೀತಿ ಬಿಟ್ಟಿಯಾಗಿ ಕಲಾವಿದರನ್ನು ಬಳಸಿಕೊಂಡಾಗ ಸ್ವಲ್ಪ ಯೋಚನೆ ಮಾಡಿ. ಕಲಾವಿದರ ಜೀವನವೇ ಅವರ ಕಲೆಯಲ್ಲಿ ಆಧಾರಿತವಾಗಿ ಇರುತ್ತದೆ.

ಇವರು ವೇದಿಕೆಗೆ ಬಂದು ಭರತನಾಟ್ಯ ಪ್ರದರ್ಶನ ಕೊಡುತ್ತಿದ್ದರೆ ಸಿಲ್ಲೆ ಚಪ್ಪಾಳೆಗಳಿಗೆ ಕೊರತೆಯೇ ಇಲ್ಲ. ಯಾಕೆಂದ್ರೆ, ಇವರ ನಾಟ್ಯ ಶೈಲಿ ಜನರನ್ನು ಹುಬ್ಬೇರಿಸುವಂತೆ ಮಾಡುತ್ತದೆ. ಅದಕ್ಕಾಗಿ ಇವರಿಗೆ ಸಂದ ಬಿರುದುಗಳು, ಕಲಾ ಜ್ಯೋತಿ, ಸಿರಿ ಗನ್ನಡ, ಪ್ರತಿಭಾ ಸಂಪನ್ನ, ಕಲಾ ಸರಸ್ವತಿ. ಅಲ್ಲದೆ ಡೆನ್ನಾನ ಡೆನ್ನಾನ ಎಂಬ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಶ್ರೇಷ್ಠ ಕಲಾವಿದೆಯೆಂದು ಸನ್ಮಾನ ಪಡೆದಿರುತ್ತಾರೆ. ಭರತ ನಾಟ್ಯವನ್ನು “ಸುದರ್ಶನ್ ಭಟ್” ಹಾಗೂ ಸಂಗೀತವನ್ನು “ಶ್ಯಾಮಲಾ ಕುಂಟೂರು” ಇವರಿಂದ  ಕಲಿತು ಪ್ರಾಥಮಿಕ ಶಾಲಾ ಶಿಕ್ಷಕಿ “ಗೀತಾ ನಾರಾಯಣ್” ಬೆನ್ನೆಲುಬಾಗಿ ನಿಂತಿದ್ದು ಇವರ ಖುಷಿಗೆ ಕಾರಣವಾಗಿದೆ ಮತ್ತು ಇವರ ತಾಯಿಯೇ ಇವರ ಎಲ್ಲಾ ಕೆಲಸಗಳಿಗೆ ರೋಲ್ ಮಾಡೆಲ್.

ಇವರಿಗೆ ನೃತ್ಯ, ಹಾಡು ಎಂದರೆ ಎಲ್ಲಿಲ್ಲದ ಪ್ರೀತಿ. ತಾನು ಸದಾ ಅದರ ನೆರಳಲ್ಲೇ ಬದುಕುವ ದೊಡ್ಡ ಕನಸನ್ನು ಹೊಂದಿರುವ ಈ ಬಾಲಿಕೆಗೆ ಇನ್ನಷ್ಟು ಹತ್ತು ಹಲವು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವಂತೆ ದೇವರು ಕರುಣಿಸಲಿ. ಇವರ ಜೀವನ ಎಂದಿಗೂ ಸಂತೋಷದಿಂದ ಕೂಡಿ, ನಾಲ್ಕು ಜನರ ಪ್ರೀತಿಯಿಂದ ಬದುಕಲಿ ಎಂದು ಆಶಿಸೋಣ.

ನಮ್ಮ ಕಲಾವಿದರು ನಮ್ಮ ಹೆಮ್ಮೆ
✒ #ಸಾಯಿ_ದೀಕ್ಷಿತ್_ಪುತ್ತೂರು


Related Posts

ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ ಸೀಯಾಳಾಭಿಷೇಕ


Share        ಕುದ್ರೋಳಿಯಲ್ಲಿ ವಿಶ್ವಶಾಂತಿಗಾಗಿ ಶತ ಸೀಯಾಳಾಭಿಷೇಕ ಮಂಗಳೂರು: ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ವಿಶ್ವ ಶಾಂತಿಗಾಗಿ ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ


Read More »

ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ ಕೋಟ್ಯಾನ್‌ಗೆ ಬ್ರಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ


Share        ವಿಕ ಸುದ್ದಿಲೋಕ ಮಂಗಳೂರು ಸೌಹಾರ್ದತೆ ಬಿಂಬಿಸುವ ವರದಿಗೆ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ‘ಬ್ಯಾಂಡ್ ಮಂಗಳೂರು’ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ


Read More »

ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯ ಕೋಟ್ಯಾನ್ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿಗೆ ಆಯ್ಕೆ


Share        ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೌಹಾರ್ದ ಬಿಂಬಿಸುವ ವರದಿಗೆ ನೀಡಲಾಗುವ “ಬ್ರ‍್ಯಾಂಡ್ ಮಂಗಳೂರು” ಪ್ರಶಸ್ತಿಗೆ ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯಕೋಟ್ಯಾನ್ ಪಡು  ಆಯ್ಕೆಯಾಗಿದ್ದಾರೆ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ 2024 ಅಕ್ಟೋಬರ್


Read More »

ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ ಚಾರಿಟೇಬಲ್ ಟ್ರಸ್ಟ್( ರಿ) ಇದರ ನೂತನ ಅಧ್ಯಕ್ಷರಾಗಿ ಕೆ. ಸಂಜೀವ ಪೂಜಾರಿ ಆಯ್ಕೆ


Share        ಶ್ರೀ ಕ್ಷೇತ್ರ ಗೆಜ್ಜೆಗಿರಿಯ ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ  ಚಾರಿಟೇಬಲ್ ಟ್ರಸ್ಟ್(ರಿ) ಇದರ ನೂತನ ಅಧ್ಯಕ್ಷರಾಗಿ ಬಿರ್ವ ಸೆಂಟರ್ ಇದರ ಮಾಲಕರಾದ  ಕೆ ಸಂಜೀವ ಪೂಜಾರಿ ಇವರನ್ನು ಕಂಕನಾಡಿ ಬ್ರಹ್ಮ


Read More »

8ನೇ ವಯಸ್ಸಿನಲ್ಲಿ ಕಪೋತಾಸನದ ಭಂಗಿಯಲ್ಲಿ ವಿಶ್ವ ದಾಖಲೆ ಮಾಡಿದ ಬಾಲಕಿ ಕುಮಾರಿ ಶರಣ್ಯ ಶರತ್!


Share        ಮಂಗಳೂರು, ಜೂ. 20 ಪನ್ನೀರಿನ ಸೈಂಟ್ ಮೇರೀಸ್ ವಿದ್ಯಾಸಂಸ್ಥೆಯಲ್ಲಿ ಎರಡನೇ ತರಗತಿಯಲ್ಲಿ ಕಲಿಯುತ್ತಿರುವ ಕುಮಾರಿ ಶರಣ್ಯ ಶರತ್ ಅವರು ತನ್ನ ಎಂಟನೆಯ ವಯಸ್ಸಿನಲ್ಲಿ ಯೋಗಾಸನದ ಕಪೋತಾಸನದ ಭಂಗಿಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್


Read More »

ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷರಾಗಿ ಎಚ್.ಎಸ್.ಜಯರಾಜ್ ಆಯ್ಕೆ


Share        ಮಂಗಳೂರು: ಬ್ರಹ್ಮಶ್ರೀ ನಾರಾಯಣಗುರುಗಳು ಪ್ರತಿಷ್ಠಾಪಿಸಿದ ಕರ್ನಾಟಕದ ಏಕೈಕ ಕ್ಷೇತ್ರ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ ಆಡಳಿತ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ಜಂಟಿ ಸಭೆ ಕೇಂದ್ರದ ಮಾಜಿ ಸಚಿವ


Read More »