TOP STORIES:

ಸಾಧನೆಯ ಹಾದಿಯಲ್ಲಿ ಎಲ್ಲರ ಮನಗೆದ್ದಿರುವ ತುಳುನಾಡಿನ ಹೆಮ್ಮೆಯ ಮಗ ದೇವಿಕಿರಣ್ ಗಣೇಶಪುರ.


ಉಸಿರು ಇರೋ ತನಕ ನಾವು ಪ್ರಪಂಚ ನೋಡ ಬಹುದು, ಉಸಿರು ನಿಂತ ನಂತರ ಜನ ನಮ್ಮನು ನೋಡಬೇಕಾದರೆ ನಾವು ಮಾಡುವ ಸಾಧನೆ ಹಾಗೆ ಇರಬೇಕು.

ಇಲ್ಲೊಬ್ಬರು ಸಕಲ ಕಲಾ ವಲ್ಲಭ ಸಾಧನೆಯ ಪಣ ತೊಟ್ಟು ಹಂತ ಹಂತವಾಗಿ ಸಾಧನೆಯ ಹಾದಿಯಲ್ಲಿ ಎಲ್ಲರ ಮನಗೆದ್ದಿರುವ ತುಳುನಾಡಿನ ಹೆಮ್ಮೆಯ ಮಗ ದೇವಿಕಿರಣ್ ಗಣೇಶಪುರ.

ಕಾಟಿಪಳ್ಳದ ಚಂದ್ರಹಾಸ್ ಕುಕ್ಯಾನ್ ಮತ್ತು ರತ್ನ ಕೋಟ್ಯಾನ್ ದಂಪತಿಗಳ ಮಗ.

ಇವರು ಎಸ್ ಎಸ್ ಎಲ್ ಸಿ ಮಾಡಿರುವ ಇವರಿಗೆ ಎಸ್ಟಿಡಿ ಡ್ರೀಮ್ ಕಲಾವಿದ ಆಗುವ ಬಹು ದೊಡ್ಡ ಕನಸಿದೆ.

ಇವರು ತನ್ನ ಪ್ರಾಥಮಿಕ ವಿದ್ಯಾಬ್ಯಾಸ ವನ್ನು ದಕ್ಷಿಣ ಕನ್ನಡ ಜಿಲ್ಲಾ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢ ಶಾಲೆಯನ್ನು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮುಗಿಸಿದರು

ಸಂಗೀತ, ಚಿತ್ರಕಲೆ, ಮರುಳಾಕೃತಿ, ನಿರೂಪಣೆ, ನಟನೆ ಎಲ್ಲಾದರಲ್ಲಿಯೂ ಆಸಕ್ತಿ ಹೊಂದಿರುವ ಇವರಿಗೆ ಇವರ ಗುರುಗಳಾದ ಪದ್ಮನಾಭ ಸುರತ್ಕಲ್, ಬೆನ್ನೆಲುಬಾಗಿ ನಿಂತವರು. ಸಂಪೂರ್ಣ ಸಹಕಾರ ನೀಡಿದವರು ಪ್ರಮೀಳಾ ದೀಪಕ್ ಪೆರ್ಮುದೆ, ಸತೀಶ್ ಮುಂಡ್ಕೂರು ಮುಂಬೈ,ಹಾಗೆಯೇ ತಂದೆ ತಾಯಿಯ,ಮಡದಿ,ಮಕ್ಕಳ ಸಂಪೂರ್ಣ ಪ್ರೋತ್ಸಾಹ ಬೆಂಬಲವಿದೆ.

ಇವರ ಕೈಯಿಂದ ಅನೇಕ ಗಣ್ಯ ವ್ಯೆಕ್ತಿಗಳ ಪ್ರತಿರೂಪಗಳು ಅದ್ಭುತವಾಗಿ ಮೂಡಿ ಬಂದಿದೆ ” ಮರಳಾಕೃತಿಯಲ್ಲಿ ಸತತ ನಾಲ್ಕು ಬಾರಿ ಪ್ರಶಸ್ತಿ ತನ್ನ ಮುಡಿಗೆರಿಸಿ ಎಲ್ಲರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾದರು.

ಕಾರ್ಕಳ ಜೈನ ಸ್ವಾಮೀಜಿ, ಶ್ರೀ ಮಹಾಗಣಪತಿ ದೇವಸ್ಥಾನ ಗಣೇಶ ಪುರ, ಕರವಳಿ ಫ್ರೆಂಡ್ಸ್ ಕ್ಲಬ್,ಕರ್ನಾಟಕ ಸೇವಾ ವೃಂದ ಸುರತ್ಕಲ್, ಮಣಿಪಾಲದ ಕಾರ್ಯಕ್ರಮದಲ್ಲಿ, ವಿನಾಯಕ ಮಂದಿರ ಕಾಟಿಪಳ್ಳ, ಕುಳಾಯಿ ನಾರಾಯಣ ಗುರು ಸಮಾಜ ಸೇವಾ ಸಂಘ, ರಾಮಾಂಜನೇಯ ವ್ಯಾಯಾಮ ಶಾಲೆ ಕಾಟಿಪಳ್ಳ, ಕುವೈಟ್, ಮುಂಬೈ, ಪಡುಬಿದ್ರೆ, ಬಿಲ್ಲವ ಸೇವಾ ಮಾಣಿಕ್ಯದಾತರ ಸಮಾಗಮ, ಹಿಂದೂ ಧಾರ್ಮಿಕ ಸೇವಾ ಸಮಿತಿ ಗಣೇಶ ಪುರ,ಕೊಟ್ಟಾರ ಕುಕ್ಯಾನ್ ಕುಟುಂಬ, ತ್ರಿಶೂಲ್ ಡ್ಯಾನ್ಸ್ ಕಾಟಿಪಳ್ಳ, ಮುಂಬೈ ಗರಡಿ, ಮಂಗಲಪೇಟೆ, ಕುದ್ರೋಳಿ ದಸರಾ,ಗಣೇಶ ಪುರ ಆದರ್ಶ ಯುವಕ ಮಂಡಲ ಕೈಕಂಬ ಮತ್ತು ಕುಡು ಅರಿ ಸಿನಿಮಾ. ಅನೇಕ ಕಡೆ ಇವರ ಪ್ರತಿಭೆಗೆ ಸನ್ಮಾನಗಳು ಆಗಿದೆ.

ಇವರ ಈ ಪ್ರತಿಭೆ ಅನೇಕ ಪ್ರಶಸ್ತಿ ಪುರಸ್ಕಾರ ದೊರತಿವೆ, ಕಡು ಅರಿ ಮತ್ತು ಕುರು ಕುರು ಎಂಬ ಎರಡು ಆಲ್ಬಮ್ ಸಾಂಗ್ ಹಾಡಿ ಜನ ಮನ ಗೆದ್ದು ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ಕೇವಲ ಹಾಡು ಚಿತ್ರ ಕಲೆ ಮಾತ್ರ ಅಲ್ಲದೆ ನಟನೆಯಲ್ಲಿಯೂ ತನ್ನ ಪ್ರತಿಭೇನ ತೋರಿಸಿದ್ದಾರೆ,ಇವರು ಆ ಒಂದು ಕೆರೆ ಎಂಬ ತುಳು ಕಿರು ಚಿತ್ರ  ಸಂಪೂರ್ಣ ನಾಯಕನಾಗಿ ನಟಿಸಿ ಸೈ ಎಣಿಸಿಕೊಂಡಿದ್ದಾರೆ, ಸಾವಿರಾರು ವೇದಿಕೆ ಹಾಡಿ ದ ಕೀರ್ತಿ ಇವರದು 2000 ಕ್ಕೂ ಹೆಚ್ಚು ರಸಮಂಜರಿ ಕಾರ್ಯಕ್ರಮ, 60 ಕ್ಕೂ ಹೆಚ್ಚು ಕಲಾ ಕುಂಚದಿಂದ ಜನರ ಮನವನ್ನು ಮಂತ್ರ ಮುಗ್ದವಾಗಿಸಿದ ಮಾಂತ್ರಿಕ.

ಇವರು ಹಾಡಿರುವ ಕುಡು ಅರಿ ಹಾಡಿಗೆ ಉತ್ತಮ ಗಾಯಕ ಎಂಬ ಪ್ರಶಸ್ತಿ ಇವರಿಗೆ ದೊರಕಿದೆ. ಹೊರದೇಶಗಳಲ್ಲಿ ತನ್ನ ಗಾಯನ ಹಾಗೂ ಚಿತ್ರ ಕಲೆಯನ್ನು ಪ್ರದರ್ಶಿಸಿ ತುಳುನಾಡಿನ ಹೆಮ್ಮೆಯ ಮಗ ಎಣಿ ಸಿಕೊಂದ್ದಾರೆ.

ಇವರು ಹಾಡಿರುವ ಕೊರಗಜ್ಜ ತುಳು ಭಕ್ತಿ ಗೀತೆ “ಭಕ್ತಿದ ಅಸರ್ “ಸದ್ಯದಲ್ಲಿಯೇ ಬಿಡುಗಡೆ ಆಗಲಿದೆ.

ಇಷ್ಟೇ ಅಲ್ಲದೆ ವಾಹನಗಳಿಗೆ ಸ್ಟಿಕರ್ ಕಟ್ಟಿಗ್ ಬ್ಯಾನರ್ ಬರೆಯುದು ಇವರ ವೃತ್ತಿ ಆಗಿದೆ .

ಇಂತಹ ಒಬ್ಬ ಅದ್ಭುತ ಪ್ರತಿಭೆಯ ಬಗ್ಗೆ ಎಷ್ಟು ಬರೆದರು ಅದು ಮುಗಿಯದ ಅದ್ಯಾಯ , ಎಸ್ ಪಿ ಬಾಲಸುಬ್ರಮಣ್ಯ ಮತ್ತು ಎಸ್ ಜಾನಕಿ ಯವರಿಂದಲೇ ಭೇಷ್ ಎಣಿಸಿಕೊಂಡ ದೇವಿ ಕಿರಣ್ ಇವರ ಕಲಾ ಬದುಕಿಗೆ ಸರಸ್ವತಿ ದೇವಿಯ ಅನುಗ್ರಹ ಸದಾ ಇರಲಿ ಇವರ ಕನಸು ನನಸಾಗಲಿ ಎಂದು ಹಾರೈಸುವ.

✍️ ಪ್ರಶಾಂತ್ ಅಂಚನ್ ಮಸ್ಕತ್ತ್

 


Related Posts

ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ


Share         ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ ಲಭಿಸಿರುವುದು ನಮ್ಮ ಸಮಾಜಕ್ಕೆ ಹೆಮ್ಮೆಯ ಸಂಗತಿ. ಈ ಕುರಿತು ಏಪ್ರಿಲ್ 2ರಂದು ಸರಕಾರದ


Read More »

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »

ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕವನಕ್ಕೆ ಒಲಿದ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ


Share         ಕರ್ನಾಟಕ ಲೇಖಕಿಯರ ಸಂಘವು 2025ನೇ ಸಾಲಿನ ವಿವಿಧ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಸ್ತಪ್ರತಿಯಲ್ಲಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ, ಅನಿತಾ ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಕ್ಕೆ 


Read More »

ಚಿಕ್ಕ ವಯಸ್ಸಿನಲ್ಲಿ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಬಾಲಕ ಸುಹಾಂಶ್‌ನ ಎಸ್ ಬಂಗೇರ ದಾಖಲೆ


Share         ದಾವಣಗೆರೆ : ನಗರದ ಶಾಂತಪ್ಪ ಪೂಜಾರಿ ಹಾಗೂ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ಇವರ ಮೊಮ್ಮಗನಾದ ಕು. ಸುಹಾಂಶ್ ಎಸ್ ಬಂಗೇರ “ಇಂಡಿಯಾ ಬುಕ್ ಆಫ್ ರೆಕಾರ್ಡ್’ನ ಸಾಧಕನಾಗಿದ್ದು, ಸರಿಸುಮಾರು 195 ರಾಷ್ಟ್ರಗಳ


Read More »

ಖೇಲೋ ಇಂಡಿಯಾ ರಾಷ್ಟ್ರೀಯ ಕರಾಟೆ ತಂಡಕ್ಕೆ ಆಯ್ಕೆಯಾದ ಕರಾಟೆ ಪಟು ಛಾಯಾ ಎಸ್. ಪೂಜಾರಿ.


Share         ಚಿನ್ನ 30 ಬೆಳ್ಳಿ 1 ಕಂಚು – ಇದು ಛಾಯಾ ಎಸ್. ಪೂಜಾರಿ ಅವರ ಒಂದು ದಶಕದ ಪರಿಶ್ರಮ ಹಾಗೂ ಸಾಧನೆಗೆ ಸಂದಿರುವ ಗೌರವದ ತುರಾಯಿ. ಉಡುಪಿ ಜಿಲ್ಲೆಯ ಹೆರ್ಗ ಕಾಂತಾ ಬೆಟ್ಟು


Read More »

ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಅವರಿಗೆ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ


Share         ನಮ್ಮ ಹೆಮ್ಮೆಯ ಕರಾವಳಿಯ ಪ್ರತಿಭೆ, ಅಂತರಾಷ್ಟ್ರೀಯ ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಸಿದ್ದಕಟ್ಟೆ ಅವರಿಗೆ ಫಸ್ಟ್ ನ್ಯೂಸ್ ವಾಹಿನಿಯ ಪ್ರತಿಷ್ಠಿತ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ ಲಭಿಸಿರುವುದು ನಾಡಿಗೆ ಸಂದ ಗೌರವ. ಗ್ರಾಮೀಣ


Read More »