ಸಾಧನೆ ಎಂಬ ಶಿಖರವನ್ನು ಒಂದು ಎರಡು ದಿನಗಳಲ್ಲಿ ಏರಲು ಸಾಧ್ಯವಿಲ್ಲ.ಒಂದು ವೇಳೆ ಅಲ್ಪ ಸಮಯದಲ್ಲಿ ಸಾಧನೆ ನಡೆದರೆ ಆ ಸಾಧನೆ ಶಾಶ್ವತವಾಗಿ ಉಳಿಯಲು ಸಾಧ್ಯವಿಲ್ಲ.ಸಾಧನೆಯ ಹಾದಿ ಯಾವಾಗಲೂ ಕಠಿಣವಾಗಿರಬೇಕು, ಅತೀವವಾದ ಶ್ರಮವಿರಬೇಕು,ಹಲವಾರು ದಿನಗಳ ಪರಿಶ್ರಮ ಎದ್ದು ಕಾಣಬೇಕು.ಆಗ ನಿಜವಾದ ಸಾಧನೆಗೆ ಬೆಲೆ ಸಿಗೊದು ಆದಕ್ಕಾಗಿಯೇ ಹಿರಿಯರು ಹೇಳಿರೋದು ಸಾಧನೆ ಎಂಬುದು ಸಾಧಕನ ಸೊತ್ತೆ ಹೊರತು ಸೋಮಾರಿಯ ಸ್ವತ್ತಲ್ಲ.ಇದೇ ರೀತಿಯ ಸಾಧನೆಯ ಹಾದಿಯಲ್ಲಿ ನಡೆಯುತ್ತಿರುವವರು ಮ್ಯಾರಥನ್ಓಟಗಾರ ಹರೀಶ್ ಕರ್ಕೇರ.
ಸ್ಟೇಡಿಯಂ ರನ್,. ಇದರಲ್ಲಿ ಕ್ರಿಕೆಟ್ ಆಟದಂತಹ ಟ್ವಿಸ್ಟ್ ಇಲ್ಲ , ಕಬ್ಬಡಿ ಆಟದ ತರಹ ರೋಚಕತೆ ಇಲ್ಲ, ಪುಟ್ಬಾಲ್ ಆಟದಲ್ಲಿರುವ ರಂಜನೆಯೂ ಇಲ್ಲ. ಟ್ರ್ಯಾಕ್ ಸ್ಪರ್ದೆಯಾದರೂ ಉಸೇನ್ ಬೋಲ್ಟ್ ತರಹ ಇಲ್ಲಿ ಯಾರೂ ಓಡುವುದಿಲ್ಲ .ಆದರೆ ದಿನಗಟ್ಟಲೆ ಒಡ್ತಾರೆ . ಈ ಕ್ರೀಡೆ ಅಸಾಮಾನ್ಯವಾದ ದೈಹಿಕ ಸಾಮರ್ಥವನ್ನು ಬೇಡುತ್ತದೆ , ಅಪರೂಪದ ದಣಿವರಿಯದ ಹೋರಾಟದ ಕೆಚ್ಚನ್ನು ಕೇಳುತ್ತದೆ.ಇದೆಲ್ಲಾವನ್ನು ಸಾಧ್ಯವಾಗಿಸಿ ಕರಾವಳಿಯ ಯುವಕ ಹರೀಶ_ಕರ್ಕೇರ ಅತ್ಯದ್ಭುತ ಸಾಧನೆ ಮೆರೆದಿದ್ದಾರೆ
ಇವರ ಜೀವನದ ಪುಟಗಳನ್ನು ಒಮ್ಮೆ ತಿರುವಿ ನೋಡಿದಾಗ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನ ಕೊಣಾಜೆ ಗ್ರಾಮದ ಮಚ್ಚಿರೋಡಿ ನಿವಾಸಿ ದೇವಪ್ಪ ಪೂಜಾರಿ ಮತ್ತು ಮೋಹಿನಿ ದಂಪತಿಯ ಮುದ್ದಿನ ಮಗನಾಗಿ ಜನಿಸಿ ತಂದೆ ತಾಯಿಯ ಪ್ರೋತ್ಸಾಹದ ಜೊತೆ ಸಾಧನೆಯ ಹಾದಿ ಹಿಡಿದು ನಡೆದವರು.ಪ್ರಸ್ತುತ ಬೆಂಗಳೂರಿನ ಟೈಟಾನ್ ಕಂಪೆನಿಯಲ್ಲಿ ಉದ್ಯೋಗಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಸಾಧನೆಯಲ್ಲಿ ಯಶಸ್ಸು ಕಾಣಲು ಇಂತಹದೇ ನಿರ್ದಿಷ್ಟ ಕ್ಷೇತ್ರ ಬೇಕೆಂಬ ಅಗತ್ಯವಿಲ್ಲ.ತಾನು ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿ ಅಪಾರವಾದ ಆಸಕ್ತಿ ಮತ್ತು ಪ್ರೀತಿ ಇರಬೇಕು.ಆಗ ಸಾಧನೆಯ ಹಾದಿ ಸುಲಭವಾಗಿ ಕಾಣುತ್ತದೆ ಅದೇ ರೀತಿ ಅವಕಾಶಗಳು ಹುಡುಕಿಕೊಂಡು ಬರುತ್ತವೆ.ಇದೇ ರೀತಿಯ ಸಾಧನೆಯ ಹಾದಿ ಹಿಡಿದ ಹರೀಶ್ ಕರ್ಕೇರ ಅವರು ಆರಿಸಿದ್ದು ಕ್ರೀಡಾ ಕ್ಷೇತ್ರ.ಇವರ ಸಾಧನೆಯನ್ನು ಗಮನಿಸುತ್ತ ಹೋದಂತೆ ಹೀಗೆ ಮ್ಯಾರಥಾನ್ ನಲ್ಲಿ ಹತ್ತು ಹಲವಾರು ದಾಖಲೆ ನಿರ್ಮಿಸಿದ ಕೀರ್ತಿ ಇವರದ್ದು ಇವರ ಈ ಸಾಧನೆಯ ಹಿಂದೆ ಕಂಪೆನಿಯ M.D ಗಳಾದ ಭಾಸ್ಕರ್ ಭಟ್ ಹಾಗೂ ವೆಂಕಟರಮಣ್ ಅವರ ಸಹಕಾರ ತುಂಬಾ ಇದೆ ಎಂದು ನೆನಪಿಸಿಕೊಳ್ಳುತ್ತಾರೆ.
ನಿನ್ನೆ ಬೆಂಗಳೂರುನಲ್ಲಿ ನೆಡೆದ 12 ಗಂಟೆಗಳ ಸ್ಟೇಡಿಯಂ ನಲ್ಲಿ 82.59 ಕಿಲೋಮೀಟರು ಕ್ರಮಿಸಿದ್ದಾರೆ ಇವರು ಕ್ರೀಡಾಕ್ಷೇತ್ರದಲ್ಲಿ ಸಾಧನೆಯ ಶಿಖರವೇರಲಿ.ಇಂಥ ಸಾಧಕರು ಯುವ ಜನಾಂಗಕ್ಕೆ ಪ್ರೇರಣೆಯಾಗಲಿ, ಕ್ರೀಡಾಕ್ಷೇತ್ರದಲ್ಲಿ ಮತಷ್ಟು ಸಾಧನೆಯನ್ನು ಮಾಡಲಿ ಎಂದು ಯುವವಾಹಿನಿ ಬೆಂಗಳೂರು ಘಟಕವು ಹಾರೈಸುತ್ತದೆ.
@ಸಂದೀಪ್ ಯಚ್
ಪ್ರಚಾರ ನಿರ್ದೇಶಕರು
ಯುವವಾಹಿನಿ (ರಿ) ಬೆಂಗಳೂರು