ಸಾರ್ವಜನಿಕರಿಗೆ ತಲೆನೋವಾಗಿದ್ದ ಮಾನಸಿಕ ಅಸ್ವಸ್ಥನ ಚಿಕಿತ್ಸೆಗೆ ನೆರವಾದ ಕುಂದಾಪುರ ಪಿ.ಎಸ್.ಐ ಸದಾಶಿವ ಆರ್ ಗವರೋಜಿ*
ಕಳೆದ 2 ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಬಿಹಾರ ಮೂಲದ ಮಾನಸಿಕ ಅಸ್ವಸ್ಥ ಯುವಕನೊರ್ವ ಅರೆ ನಗ್ನ ಅವಸ್ಥೆಯಲ್ಲಿ ಕುಂದಾಪುರದ ಬೀದಿಯಲ್ಲಿ ತನ್ನ ಭಯಾನಕ ವರ್ತನೆಯಿಂದ ಸಾರ್ವಜನಿಕ ವಲಯದಲ್ಲಿ ಆಂತಕ ಸ್ರಷ್ಟಿಸಿದ್ದ ಸುದ್ದಿ ವಾಟ್ಸಪ್ಪ್ ನಲ್ಲಿ ಹರಿದಾಡಿತ್ತು.
ವೇಗವಾಗಿ ನಡೆಯುತ್ತಾ ಸಾರ್ವಜನಿಕರ ಮೇಲೆ ಮುಗಿ ಬೀಳುವ ಈತನಿಂದ ಈಗಾಗಲೇ ಹಲವರು ಮಾರಕ ಹಲ್ಲೆಗೊಳಗಾಗಿದ್ದಾರೆ. ಅಲ್ಲದೇ ಮಹಿಳೆಯರ ಬೆಂಬತ್ತುವ ಈತ ನೇರವಾಗಿ ಅವರ ದೇಹದ ಮೇಲೆ ಕೈಹಾಕುತ್ತಿರುವ ಘಟನೆಗಳು ನಡೆದಿದ್ದು ವಿದ್ಯಾರ್ಥಿನಿಗಳ ಸಹಿತ ಇನ್ನಿತರ ಮಹಿಳೆಯರು ಈತನ ವಿಕಾರತೆಗೆ ಸಿಲುಕಿದ್ದಾರೆನ್ನಲಾಗಿದೆ. ಸಂಬಂಧ ಪಟ್ಟ ಇಲಾಖೆಗಳು ಕೂಡಲೇ ಈತನ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ ಎಂದು ಮ್ಯಾನರ್ ವಾಟ್ಸಪ್ಪ್ ಗ್ರೂಪ್ ನಲ್ಲಿ ಹಾಕಿದ್ದು ಇದಕ್ಕೆ ಆದಷ್ಟು ಬೇಗ ಸಾಮಾಜಿಕ ಕಾರ್ಯಕರ್ತರು ಸ್ಪಂದಿಸಬೇಕು ಎಂದು ರವಿ ಮ್ಯಾನರ್ ವಿನಂತಿಸಿದ್ದರು.
ಈ ಸುದ್ದಿ ತಿಳಿದ ಕೂಡಲೇ ಸಾಮಾಜಿಕ ಕಾರ್ಯಕರ್ತ ಮತ್ತು ಕುಂದಾಪರ ಮಿತ್ರ ವರದಿಗಾರ ಕಿರಣ್ ಪೂಜಾರಿಯವರು ಕುಂದಾಪುರ ಪಿ.ಎಸ್.ಐ ಸದಾಶಿವ ಆರ್ ಗವರೋಜಿ ಅವರ ಗಮನಕ್ಕೆ ತಂದು, ದಿನಾಂಕ 15/10/2020ರಂದು ಬೆಳ್ಳಿಗೆ ಆ ವ್ಯಕ್ತಿ ಚಲನವಲನ್ನು ಗಮನಿಸಿದ್ದ ಕಿರಣ್ ರವರು ಕೂಡಲೇ ಪಿ.ಎಸ್.ಐ ಸದಾಶಿವ ಆರ್ ಗವರೋಜಿರವರಿಗೆ ಮಾಹಿತಿ ನೀಡಿ, ಕುಂದಾಪುರ ಪೊಲೀಸ್ ಸುಧಾಕರ್, ರಾಘವೇಂದ್ರ, ಆನಂದ ಹಾಗೂ ಸ್ಥಳೀಯ ಪುರಸಭೆ ಸದಸ್ಯರಾದ ಪ್ರಭಾಕರ ಮತ್ತು ಹುಸೈನ್ ಹೈಕಾಡಿ ಅವರ ನೆರವಿನೊಂದಿಗೆ ಮಾನಸಿಕ ಅಸ್ವಸ್ಥನ ಮನವೊಲಿಸಿ ಅವರನ್ನು ಕೋಟ ನಾಗರಾಜ್ ರವರ ಆಂಬುಲೆನ್ಸ್ ನಲ್ಲಿ ಉಡುಪಿ ಅಜ್ಜರಕಾರ್ಡ್ ಸರಕಾರಿ ಆಸ್ಪತ್ರೆಗೆ ಚಿಕ್ಸಿತೆಗೆ ಕೊಂಡೊಯ್ಯಲಾಗಿದೆ. ಜನತೆಗೆ ನೆಮ್ಮದಿ ದೊರೆತ್ತಿದು, ಕುಂದಾಪುರ ಪೊಲೀಸರ ಮಾನವೀಯ ಕಾರ್ಯಕ್ಕೆ ಕುಂದಾಪುರ ಜನತೆ ತಲೆದೂಗಿದೆ. ಕುಂದಾಪುರದ ಸಮಸ್ತ ಜನತೆ ಪರವಾಗಿ ಧನ್ಯವಾದವನ್ನು ಸಮರ್ಪಿಸುತ್ತೇವೆ.
ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಲಯದ ಆದೇಶ ಪಡೆದು ಧಾರವಾಡ ಡಿಮ್ಯಾನ್ಸ್ ಆಸ್ಪತ್ರೆಗೆ ಕೋಡಿಯ NMA ಆಸ್ಪತ್ರೆಯವರ ಹಾಗೂ ಜೆಸಿಐ ಕುಂದಾಪುರ ಸಿಟಿ ಯಾ ಸ್ಥಾಪಕ ಅಧ್ಯಕ್ಷ ಹುಸೈನ್ ಹೈಕಾಡಿ NMA ಯಾ ಶಾಬಾನ್ ಹಂಗಳೂರ್ NMA ಯಾ ಅಧ್ಯಕ್ಷ ರಫೀಕ್ ಬಿ ಎಸ್ ಎಫ್ ಇವರ ಸಹಕಾರ ದಿಂದ ಅಂಬ್ಯುಲೆನ್ಸ್ ಮೂಲಕ ಸಿಬ್ಬಂದಿವರ ಭದ್ರಿಕೆಯಲ್ಲಿ ಚಿಕಿತ್ಸೆಗೆ ಕಳುಹಿಸಲಾಗಿದೆ.