ಕನ್ನಡ ಕಿರುತೆರೆಯ ಧಾರವಾಹಿಗಳಲ್ಲಿ ನಟಿಸಿವ ಅನೇಕ ನಟ – ನಟಿಯರು ಕೆಲವೇ ಸಮಯದಲ್ಲಿ ಜನರ ಮೆಚ್ಚುಗೆಗೆಪಾತ್ರರಾಗುತ್ತಾರೆ. ತಮ್ಮ ನಟನೆಯಿಂದ, ಡ್ರೆಸ್ಸಿಂಗ್ ಸ್ಟೈಲ್ ನಿಂದ, ನಗುವಿನಿಂದ, ಮಾತಿನ ಶೈಲಿಯಿಂದ ಹೀಗೆ ಒಂದಲ್ಲ ಒಂದುಕಾರಣಕ್ಕೆ ಇಷ್ಟವಾಗುತ್ತಾರೆ. ಅದೇ ರೀತಿ ಕನ್ನಡದ ಜೀ ವಾಹಿನಿಯ ಗಟ್ತಿಮೇಳ ಧಾರವಾಹಿ ಇದೀಗ ನಂಬರ್ ವನ್ ಸ್ಥಾನದಲ್ಲಿದೆ. ಆಧಾರವಾಹಿಯಲ್ಲಿ ಪಟ ಪಟ ಅಂತ ಮಾತನಾಡುವ ರೌಡಿ ಬೇಬಿ ಅಮ್ಮು, ಸ್ಮಾರ್ಟ್ ಆಗಿ ಕಾಣಿಸುವ ವೇದಾಂತ್, ತುಂಟಾಟದ ವಿಕ್ಕಿ, ಅದೇ ರೀತಿ ಗಂಭೀರದ ಧೃವ.
ಇನ್ನು ಅವರೆಲ್ಲರ ಮುದ್ದಿನ ತಂಗಿ ಆದ್ಯಾ ಎಲ್ಲವೂ ವೀಕ್ಷಕರನ್ನು ಮೆಚ್ಚಿಸಿದ ಪಾತ್ರಗಳು. ಇವತ್ತು ನಾವು ಮಾತನಾಡಲುಹೊರಟಿರುವುದು ಆದ್ಯಾ ಪಾತ್ರಧಾರಿ ಅನ್ವಿತಾ ಸಾಗರ್ ಬಗ್ಗೆ. ಇದಕ್ಕೆ ಕಾರಣ ಇನ್ನು ಮುಂದೆ ಇವರು ಈ ಸೀರಿಯಲ್ ನಲ್ಲಿ ನಟಿಸಲ್ವಾಅನ್ನುವ ಕೆಲವು ಗುಸು ಗುಸು ಮಾತುಗಳು ಕೇಳಿ ಬರುತ್ತಿದೆ. ಮೂಲತಃ ಮಂಗಳೂರಿವರಾದ ಅನ್ವಿತಾ ಸಾಗರ್, ತಮ್ಮ ಪದವಿವ್ಯಾಸಾಂಗ ಮಾಡುತ್ತಿರುವಾಗಲೇ ಒಂದು ಖಾಸಗಿ ಚಾನೆಲ್ ನಲ್ಲಿ ಆಂಕರ್ ಆಗಿ ಕೆಲಸ ಮಾಡುತ್ತಿದ್ದರು. ಅವರಿಗೆ ಆಕ್ಟಿಂಗ್ ಮೇಲೆತುಂಬಾನೇ ಒಲವಿದ್ದ ಕಾರಣ, ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದ್ದರು.
ತುಳು ಸಿನಿಮಾಗಳಾದ ದಂಡ್, ಬಲೆ ಪುದರ್ ದೀಕ, ಪೆಟ್ಟ್ ಕಮ್ಮಿ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದರು. ಆ ನಂತರ ಬೆಂಗಳೂರಿಗೆಬಂದ ಅವರು ಬೇರೆ ಬೇರೆ ಧಾರವಾಹಿಗಳಲ್ಲಿ ನಟಿಸಿದರೂ, ಗಟ್ಟಿಮೇಳ ಧಾರವಾಹಿಯಲ್ಲಿ ಇವರು ಖ್ಯಾತಿ ಗಳಿಸಿದರು. ಗಟ್ಟಿ ಮೇಳಧಾರವಾಹಿಯ ಆದ್ಯಾ ಪಾತ್ರ ಜನಪ್ರಿಯತೆ ತಂದು ಕೊಟ್ಟಿತ್ತು. ವೀಕ್ಷಕರಿಗೂ ಆ ಪಾತ್ರ ತುಂಬಾನೇ ಹಿಡಿಸಿತ್ತು. ಆದರೆ ಇದೀಗ ಅವರುಆ ಪಾತ್ರದಿಂದ ಹೊರನಡೆಯುತ್ತಾರೆಯೇ ಅನ್ನುವ ಪ್ರಶ್ನೆ ಎದುರಾಗಿದೆ. ಅದಕ್ಕೆ ಕಾರಣ, ಅನ್ವಿತಾ ಸಾಗರ್ ಅವರು ಕಲರ್ಸ್ಕನ್ನಡದಲ್ಲಿ ಹೊಸದಾಗಿ ಆರಂಭವಾಗಿರುವ ಡ್ಯಾನ್ಸ್ ಚಾಂಪಿಯನ್ ನಲ್ಲಿ ಸ್ಪರ್ಧಿಸಲಿದ್ದಾರೆ.
ಆದರೆ ಅವರು ಸೀರಿಯಲ್ ಬಿಡುತ್ತಾರೆ ಅನ್ನುವ ಸುದ್ದಿಯನ್ನು ತಳ್ಳಿಹಾಕಿದ್ದಾರೆ. ಈ ಡ್ಯಾನ್ಸ್ ಶೋಗೂ, ಧಾರವಾಹಿಗೂ ಕ್ಲ್ಯಾಷ್ಆಗುತ್ತಿಲ್ಲ, ಎರಡನ್ನೂ ನಿಭಾಯಿಸಿಕೊಂಡು ಹೋಗುವುದಾಗಿ ಹೇಳಿದ್ದಾರೆ. ಈ ಮೂಲಕ ತಮ್ಮ ಬಗ್ಗೆ ಹುಟ್ಟಿರುವ ಗಾಸಿಪ್’ಗೆ ತೆರೆಎಳೆದಿದ್ದು, ವೀಕ್ಷಕರಿಗೆ ಸಂತಸ ನೀಡಿದ್ದಾರೆ. ಹೀಗಾಗಿ ಇನ್ನು ಮುಂದೆ ಅನ್ವಿತಾರನ್ನು ನಾವು ವಿಭಿನ್ನ ರೀತಿಯಲ್ಲಿ ನೋಡಬಹುದು. ಈಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.