“ಸೇವಾ ಹಿ ಸಂಘಟನ್” ಹೆಸರಿನಡಿ ಬಿಜೆಪಿ ರಾಜ್ಯ ಅಧ್ಯಕ್ಷರ ಮತ್ತು ನಮ್ಮ ನೆಚ್ಚಿನ ಶಾಸಕರ ಮಾರ್ಗದರ್ಶನದಂತೆ ಬಿಜೆಪಿ ಯುವಮೋರ್ಚಾ ಜಿಲ್ಲಾ ಉಪಾಧ್ಯಕ್ಷರಾದ ಅಮಿತ್ ರಾಜ್ ಹಾಗೂ ಹ್ಯೂಮನ್ ರೈಟ್ಸ್ ಸುಡೆಂಟ್ ಇಂಚಾರ್ಜ್ ಭುವನ್ ದೇವಾಡಿಗರವರನೇತೃತ್ವದಲ್ಲಿ ಅಶೋಕನಗರ ಶೇಡಿಗುರಿ ರೂಟಿನ ಬಸ್ ಗಳ ಚಾಲಕರು, ಕಂಡಕ್ಟರ್ ನಿರ್ವಾಹಕರಿಗೆ ಹಾಗು ಟೈಮ್ ಕೀಪರ್ ರವರಿಗೆ ದಿನನಿತ್ಯ ಆಹಾರ ಸಾಮಾಗ್ರಿಗಳ ಕಿಟ್ ಗಳನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಸಾಮಾಜಿಕ ಜಾಲತಾಣ ಸಹಸಂಚಾಲಕರಾದ ಕಿಶೋರ್ ಬಾಬು, ಹಿಂದೂ ಮುಖಂಡರು ಹಾಗೂಬಸ್ ಚಾಲಕ ನಿರ್ವಾಹಕ ಸಂಘದ ಪ್ರಮುಖರಾದ ಶರತ್ ಪದವಿನಂಗಡಿ, ಸಾಮಾಜಿಕ ಕಾರ್ಯಕರ್ತ ನಟರಾಜ್ ಪಚ್ಚನಾಡಿ, ದೀಕ್ಷಿತ್ಅಶೋಕನಗರ, ಸಾಯಿಪ್ರಸಾದ್ ಶೆಟ್ಟಿ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.