TOP STORIES:

ಸೈಬರ್ ಅಟ್ಯಾಕ್‌ಗಳನ್ನು ಕಡಿಮೆ ಮಾಡಲು ಆಪಲ್ ತರುತ್ತಿದೆ ಹೊಸ ಲಾಕ್‌ಡೌನ್ ಮೋಡ್


ವಾಷಿಂಗ್ಟನ್: ಆಪಲ್ ಕಂಪನಿ ತನ್ನ ಐಫೋನ್, ಪ್ಯಾಡ್, ಹಾಗೂ ಮ್ಯಾಕ್ ಸಾಧನಗಳಿಗಾಗಿ ಹೊಸ ಭದ್ರತಾ ಫೀಚರ್‌ಅನ್ನುಹೊರತರುತ್ತಿದೆ. ಇದು ಮುಖ್ಯವಾಗಿ ಉನ್ನತ ಪ್ರೊಫೈಲ್ ಬಳಕೆದಾರರ ಮೇಲಿನ ಉದ್ದೇಶಿತ ಸೈಬರ್ ಅಟ್ಯಾಕ್‌ಗಳನ್ನು ತಡೆಯಲುವಿನ್ಯಾಸಗೊಳಿಸಲಾಗಿದೆ.

ಲಾಕ್‌ಡೌನ್ ಮೋಡ್ ಹೆಸರಿನ ಹೊಸ ಐಚ್ಛಿಕ(ಆಪ್ಶನಲ್) ಫೀಚರ್, ಕೆಲವು ಉನ್ನತ ವ್ಯಕ್ತಿಗಳು ತಮ್ಮ ಆಪಲ್ ಡಿವೈಸ್‌ಗಳಲ್ಲಿಬಳಸಬಹುದಾಗಿದ್ದು, ಇದು ಸೈಬರ್ ಅಟ್ಯಾಕ್‌ಗಳಿಂದ ರಕ್ಷಣೆ ನೀಡುತ್ತದೆ ಎಂದು ಕಂಪನಿ ತಿಳಿಸಿದೆ. ಇದು ಬಳಕೆದಾರರಸಾಧನಗಳನ್ನು ಹ್ಯಾಕ್ ಮಾಡುವುದನ್ನು ಕಡಿಮೆಗೊಳಿಸುತ್ತದೆ ಎಂದು ಹೇಳಿದೆ.

ಕಳೆದ ಹಲವು ವರ್ಷಗಳಿಂದ ಉನ್ನತ ವ್ಯಕ್ತಿಗಳ ಡಿವೈಸ್‌ಗಳನ್ನು ಹ್ಯಾಕ್ ಮಾಡಿರುವಂತಹ ಹಲವು ಪ್ರಕರಣಗಳು ವರದಿಯಾಗಿವೆ. ಮುಖ್ಯವಾಗಿ ಕಂಪನಿ ಸ್ಪೈವೇರ್ ನಂತಹ ದಾಳಿಯನ್ನು ಕಡಿಮೆ ಮಾಡುವ ಉದ್ದೇಶದಿಂದ ಹೊಸ ಫೀಚರ್ ಅನ್ನು ಹೊರತಂದಿದೆಎಂದು ತಿಳಿಸಿದೆ.

ಪ್ರಪಂಚದಾದ್ಯಂತ ಸುಮಾರು 150 ದೇಶಗಳಲ್ಲಿ ಕೆಲವು ಪ್ರಭಾವಿ ವ್ಯಕ್ತಿಗಳನ್ನು ಗುರಿಪಡಿಸಿಕೊಂಡು ಸೈಬರ್ ದಾಳಿಗಳುನಡೆಯುತ್ತವೆ. ಇದಕ್ಕಾಗಿ ಲಾಕ್‌ಡೌನ್ ಮೋಡ್ ಫೀಚರ್ ಅನ್ನು ತರಲಾಗಿದ್ದು, ಇದನ್ನು ಬಳಕೆದಾರರಿಗೆ ತಿಳಿಸುವ ವ್ಯವಸ್ಥೆಯನ್ನುಮಾಡಲಾಗುತ್ತಿದೆ ಎಂದು ಹೇಳಿದೆ.

ವಿಡಿಯೋ ಸಿಸಿ ಟಿ

ವರದಿಗಳ ಪ್ರಕಾರ ಲಾಕ್‌ಡೌನ್ ಮೋಡ್, ಆಪಲ್ ಡಿವೈಸ್‌ಗಳಲ್ಲಿ ಮೆಸೇಜಿಂಗ್ ಆಪ್‌ಗಳ ಅಟ್ಯಾಚ್‌ಮೆಂಟ್‌ಗಳನ್ನು ಬ್ಲಾಕ್ಮಾಡುತ್ತದೆ. ಇವು ಹ್ಯಾಕರ್‌ಗಳಿಗೆ ಡಿವೈಸ್‌ಗಳನ್ನು ಹ್ಯಾಕ್‌ಮಾಡಲು ಲಭ್ಯವಿರುವ ಸುಲಭದ ಹಾಗೂ ಮುಖ್ಯವಾದ ವಿಧಾನವಾಗಿದೆ.

ಆಪಲ್ ಮುಂಬರುವ ಐಒಎಸ್ 16, ಐಪ್ಯಾಡ್ ಐಎಸ್ 16 ಹಾಗೂ ಮ್ಯಾಕ್ ಒಎಸ್‌ಗಳಲ್ಲಿ ನವೀಕರಣದ ಭಾಗವಾಗಿ ಲಾಕ್‌ಡೌನ್ಮೋಡ್‌ಅನ್ನು ಬಿಡುಗಡೆ ಮಾಡಲು ಯೋಜಿಸಿದೆ. ಫೀಚರ್ ಸದ್ಯ ಬೀಟಾ ಆವೃತ್ತಿಯಲ್ಲಿ ಪರೀಕ್ಷೆ ನಡೆಯುತ್ತಿದೆ.


Related Posts

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »

ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕವನಕ್ಕೆ ಒಲಿದ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ


Share         ಕರ್ನಾಟಕ ಲೇಖಕಿಯರ ಸಂಘವು 2025ನೇ ಸಾಲಿನ ವಿವಿಧ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಸ್ತಪ್ರತಿಯಲ್ಲಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ, ಅನಿತಾ ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಕ್ಕೆ 


Read More »

ಚಿಕ್ಕ ವಯಸ್ಸಿನಲ್ಲಿ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಬಾಲಕ ಸುಹಾಂಶ್‌ನ ಎಸ್ ಬಂಗೇರ ದಾಖಲೆ


Share         ದಾವಣಗೆರೆ : ನಗರದ ಶಾಂತಪ್ಪ ಪೂಜಾರಿ ಹಾಗೂ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ಇವರ ಮೊಮ್ಮಗನಾದ ಕು. ಸುಹಾಂಶ್ ಎಸ್ ಬಂಗೇರ “ಇಂಡಿಯಾ ಬುಕ್ ಆಫ್ ರೆಕಾರ್ಡ್’ನ ಸಾಧಕನಾಗಿದ್ದು, ಸರಿಸುಮಾರು 195 ರಾಷ್ಟ್ರಗಳ


Read More »

ಖೇಲೋ ಇಂಡಿಯಾ ರಾಷ್ಟ್ರೀಯ ಕರಾಟೆ ತಂಡಕ್ಕೆ ಆಯ್ಕೆಯಾದ ಕರಾಟೆ ಪಟು ಛಾಯಾ ಎಸ್. ಪೂಜಾರಿ.


Share         ಚಿನ್ನ 30 ಬೆಳ್ಳಿ 1 ಕಂಚು – ಇದು ಛಾಯಾ ಎಸ್. ಪೂಜಾರಿ ಅವರ ಒಂದು ದಶಕದ ಪರಿಶ್ರಮ ಹಾಗೂ ಸಾಧನೆಗೆ ಸಂದಿರುವ ಗೌರವದ ತುರಾಯಿ. ಉಡುಪಿ ಜಿಲ್ಲೆಯ ಹೆರ್ಗ ಕಾಂತಾ ಬೆಟ್ಟು


Read More »

ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಅವರಿಗೆ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ


Share         ನಮ್ಮ ಹೆಮ್ಮೆಯ ಕರಾವಳಿಯ ಪ್ರತಿಭೆ, ಅಂತರಾಷ್ಟ್ರೀಯ ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಸಿದ್ದಕಟ್ಟೆ ಅವರಿಗೆ ಫಸ್ಟ್ ನ್ಯೂಸ್ ವಾಹಿನಿಯ ಪ್ರತಿಷ್ಠಿತ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ ಲಭಿಸಿರುವುದು ನಾಡಿಗೆ ಸಂದ ಗೌರವ. ಗ್ರಾಮೀಣ


Read More »

ಪುತ್ತೂರು:ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿಯ ಮಾಜಿ ಅಧ್ಯಕ್ಷ ರವಿಕುಮಾರ್ ಕಲ್ಕಾರ್ ನಿಧನ


Share         ಪುತ್ತೂರು: ಶಾಂತಿಗೋಡು ಕಲ್ಕಾರ್ ನಿವಾಸಿ ರವಿಕುಮಾರ್ ಕಲ್ಕಾರ್(48ವ.)ರವರು ಫೆ.15ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಪೂಜೆ ಸಂದರ್ಭ ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿ ವತಿಯಿಂದ ನಡೆಸಲ್ಪಟ್ಟ ಕ್ರೀಡಾಕೂಟದಲ್ಲಿ ರವಿ ಕಲ್ಕಾರ್ ರವರು


Read More »