TOP STORIES:

ಸೋಲನ್ನು ಪಾಠವನ್ನಾಗಿ, ಗೆಲುವು, ಸಹಕಾರವನ್ನು ಮಾರ್ಗದರ್ಶನವನ್ನಾಗಿ ಸಾಧನೆಯ ಹಾದಿಯಲ್ಲಿ ಬಿಲ್ಲವ ಪ್ರತಿಭೆ ಅಂಚನ್ ಗೀತಾ


“ಅನುಭವಕ್ಕಿಂತ ಮಿಗಿಲಾದುದು ಏನು ಇಲ್ಲ ” ಎಂಬ ಮಾತಿದೆ ಅಂತೆಯೇ ತಾನು ಅನುಭವಿಸಿದ ನೋವು , ಸೋಲನ್ನು ಪಾಠವನ್ನಾಗಿ, ಗೆಲುವು, ಸಹಕಾರವನ್ನು ಮಾರ್ಗದರ್ಶನವನ್ನಾಗಿ ಇಟ್ಟುಕೊಂಡು ಸಾಧನೆಯ ಹಾದಿಯಲ್ಲಿ ಸಾಗುತ್ತಿರುವ ಬಿಲ್ಲವ ಪ್ರತಿಭೆ ಅಂಚನ್ ಗೀತಾ.ಇವರು ಅಣ್ಣಿ ಅಂಚನ್ ಹಾಗೂ ಶ್ರೀಮತಿ ಭವಾನಿ ಪೂಜಾರ್ತಿಯವರ ಪುತ್ರಿ. ಹುಟ್ಟಿದ್ದು ಮಾಯಾನಗರಿ ಮುಂಬಯಿಯಲ್ಲಿ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮುಂಬಯಿಯಲ್ಲಿ , ಪ್ರೌಢ ಶಿಕ್ಷಣವನ್ನು ನೀರುಡೆಯಲ್ಲಿ, ಪಿಯುಸಿ ಯನ್ನು ಕಟೀಲು ಕಾಲೇಜಿನಲ್ಲಿ ಪೂರೈಸಿ ನಂತರ ಆಳ್ವಾಸ್ ನಲ್ಲಿ ಪತ್ರಿಕೋದ್ಯಮ ಪದವಿ ಶಿಕ್ಷಣವನ್ನು ಪಡೆದಿದ್ದಾರೆ. ನಂತರ ಮೈಸೂರಿನಲ್ಲಿ ಎಂ.ಎ ಜರ್ನಲಿಸಂ , ಬೆಂಗಳೂರಿನಲ್ಲಿ ಎಂ.ಎ ಇಂಗ್ಲಿಷ್ ಲಿಟರೇಚರ್ ಮುಗಿಸಿ ಇವರು ಸತತ ಮೂರು ಪದವಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

“ಯಾವುದೇ ಯಶಸ್ವಿನ ದಾರಿಯ ಪ್ರಾರಂಭ ಮೊದಲು ಶೂನ್ಯದಿಂದಲೇ ಆರಂಭವಾಗುವುದು.” ಅಂತೆಯೇ 2010 ರಲ್ಲಿ ಏಕಾಂಗಿಯಾಗಿ ಬೆಂಗಳೂರಿನತ್ತ ಪಯಣಿಸಿದ ಗೀತಾರವರಿಗೆ ಆಗ ಬೆಂಗಳೂರು ನಗರ ಜೀವನದ ಅರಿವೇ ಇರಲಿಲ್ಲ ಆ ಸಂದರ್ಭದಲ್ಲಿ ಸಹಕರಿಸಿದ ಅವರ ಜರ್ನಲಿಸಂ ಶಿಕ್ಷಕಿ ಮೌಲ್ಯ ಜೀವನ್ ರವನ್ನು ಪ್ರತಿ ಬಾರಿ ಸ್ಮರಿಸುತ್ತಾರೆ. ಮುಂದೆ ಬೆಂಗಳೂರಿನ ಭಾರತೀಯ ವಿದ್ಯಾಭವನದಲಿ ಒಂದು ಕೋರ್ಸ್ ಶಿಕ್ಷಣ ಪಡೆಯುತ್ತಿರುವಾಗ ಬೆಳಗ್ಗೆ ಕ್ಲಾಸ್ ಪಡೆದು ಮಧ್ಯಾಹ್ನದ ನಂತರ ಏರ್ ಟೇಲ್ ಕಂಪನಿಯ ಲ್ಲಿ ಕೆಲಸ ಮಾಡುವ ಮೂಲಕ ಬೆಂಗಳೂರಿನಲ್ಲಿ ಜೀವನ ನಡೆಸಿದರು.

ಅಂಚನ್ ಗೀತಾರವರು ತಮ್ಮ ಜೀವನದ ಪ್ರತಿ ಕಷ್ಟ , ನೋವನ್ನು ಮರೆಸುತ್ತಿದ್ದದ್ದು ಅದು ನನ್ನ ತಂದೆ ತಾಯಿ ಹಾಗೂ ಸಹೋದರಿಯರ ಪ್ರೀತಿ, ಮತ್ತು ಸದಾ ಧೈರ್ಯ ತುಂಬೋ ಸ್ನೇಹಿತೆಯರು ಎಂದು ಹೇಳುತ್ತಾರೆ. ಅಲ್ಲದೆ ನನ್ನ ತಂದೆ ತಾಯಿ ಅನುಭವಿಸಿದ ನೋವು ನನಗೆ ಆತ್ಮವಿಶ್ವಾಸವನ್ನು ಕಲಿಸಿಕೊಟ್ಟಿದೆ ಎನ್ನುತ್ತಾರೆ. ಮುಂದೆ 2010 ರಿಂದ ಮಾಧ್ಯಮದಲ್ಲಿ ತಮ್ಮ ಪಯಣ ಆರಂಭಿಸಿದ ಇವರು ಸುಮಾರು 9 ವರ್ಷಗಳ ಕಾಲ ಸುವರ್ಣ ನ್ಯೂಸ್, ಕಸ್ತೂರಿ ನ್ಯೂಸ್, ಪ್ರಜಾ ಟಿವಿ ಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಇವರು ಮಾಡೆಲಿಂಗ್ ಕ್ಷೇತ್ರದಲ್ಲೂ ಮಿಂಚಿದ್ದು ಹೆಮ್ಮೆಯ ಸಂಗತಿಯಾಗಿದೆ.ಅಷ್ಟೇ ಅಲ್ಲದೆ ತುಳು ,ಕನ್ನಡ ಸಿನಿಮಾದಲ್ಲಿ ಅಭಿನಯಿಸಿರುವ ಇವರು ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ ಶ್ ರಿಯಾಲಿಟಿ ಶೋ ನಲ್ಲೂ ಭಾಗವಹಿಸಿದ್ದಾರೆ. ಬಾಲಿವುಡ್ ತಾರೆಯರಾದ ಅನಿಲ್ ಕಪೂರ್, ಸುನಿಲ್ ಶೆಟ್ಟಿ ಯವರ ಜೊತೆ ಇಂಟರ್ ವ್ಯೂ ಮಾಡಿದ ಹೆಗ್ಗಳಿಕೆ ಇವರದ್ದಾಗಿದೆ. ಅಷ್ಟೆಅಲ್ಲ ಇವರ ಹಲವಾರು ಕವನ ಸಂಕಲನಗಳು ಬಿಡುಗಡೆಯಾಗಿದೆ.

ಪ್ರಸ್ತುತ ವಿಧಾನಸೌಧದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರಿಗೆ ಪತಿ ರವಿ ಶಿವರಾಮ್ ಪ್ರತಿ ಹೆಜ್ಜೆಯಲ್ಲೂ ಪ್ರೋತ್ಸಾಹವನ್ನು ನೀಡುತ್ತಿದ್ದಾರೆ ಎನ್ನುತ್ತಾರೆ‌. ಅಲ್ಲದೆ ತಮ್ಮ ಸಂಬಳದಲ್ಲಿ ಒಂದಷ್ಟು ಪಾಲನ್ನು ವೃಧ್ದಾಶ್ರಮಕ್ಕೆ ನೀಡುತ್ತಿದ್ದು ಇದು ಇವರ ಸಮಾಜಪರ ಕಾಳಜಿಯನ್ನು ಪ್ರತಿನಿಧಿಸುತ್ತದೆ.

ಹೀಗೆ ಸಾಧನೆಯ ಹಾದಿಯಲಿ ಸಾಗುತ್ತಿರುವ ಅಂಚನ್ ಗೀತಾರವರ ಬದುಕು ಉಜ್ವಲವಾಗಲಿ ಇನ್ನಷ್ಟು ಸಾಧನೆ ಮಾಡುವಂತಾಗಲಿ ಎಂಬುದೇ ನಮ್ಮೆಲ್ಲರ ಆಶಯ.

Email us: billavaswarriors@gmail.com


Related Posts

ಕೇರಳದ ಶಿವಗಿರಿಯ ಶಾಖಾ ಮಠವನ್ನು ಉಡುಪಿ ಅಥವಾ ಮಂಗಳೂರಿನಲ್ಲಿ ಸ್ಥಾಪಿಸಲು ಅಗತ್ಯ ಇರುವ ಐದು ಎಕರೆ ಜಮೀನನ್ನು ಒದಗಿಸಲಾಗುವುದು : ಮುಖ್ಯಮಂತ್ರಿ ಸಿದ್ದರಾಮಯ್ಯ


Share         ಕೇರಳದ ಶಿವಗಿರಿಯ ಶಾಖಾ ಮಠವನ್ನು ಉಡುಪಿ ಅಥವಾ ಮಂಗಳೂರಿನಲ್ಲಿ ಸ್ಥಾಪಿಸಲು ಅಗತ್ಯ ಇರುವ ಐದು ಎಕರೆ ಜಮೀನನ್ನು ಒದಗಿಸಲಾಗುವುದು : ಮುಖ್ಯಮಂತ್ರಿ ಸಿದ್ದರಾಮಯ್ಯ ಉಳ್ಳಾಲ: ಕೇರಳದ ಶಿವಗಿರಿಯ ಶಾಖಾ ಮಠವನ್ನು ಉಡುಪಿ ಅಥವಾ


Read More »

ವಿಶೇಷ ಮಕ್ಕಳ ಕಲೆಗಾರಿಕೆಯಿಂದ ರೂಪುಗೊಂಡ ಜನನಾಯಕ ಪದ್ಮರಾಜ್ ಆರ್. ಪೂಜಾರಿಯವರ ಭಾವಚಿತ್ರ


Share         ಕಲಾಸೇತು — ಬಂಟ್ವಾಳ ತಾಲೂಕಿನ ಕಾವಳಕಟ್ಟೆಯ ಗುರಿಮಜಲ್ ಹಿದಾಯ ವಿಶೇಷ ಮಕ್ಕಳ ವಸತಿ ಶಾಲೆ ದಶಮಾನೋತ್ಸವ ಕಾರ್ಯಕ್ರಮದಲ್ಲಿ, ವಿಶೇಷ ಮಕ್ಕಳ ಕಲೆಗಾರಿಕೆಯಿಂದ ರೂಪುಗೊಂಡ ಜನನಾಯಕ ಪದ್ಮರಾಜ್ ಆರ್. ಪೂಜಾರಿಯವರ ಭಾವಚಿತ್ರ ವನ್ನು ಶಾಲೆಯ


Read More »

ಯುವವಾಹಿನಿ ಪುತ್ತೂರು ಘಟಕದಿಂದ ಅವಿಭಜಿತ ಪುತ್ತೂರು ತಾ ಮಟ್ಟದ ಕೋಟಿ-ಚೆನ್ನಯ ಕ್ರೀಡಾಕೂಟ ಸಮಾರೋಪ.


Share         ಪುತ್ತೂರು:ವಿದ್ಯೆ, ಉದ್ಯೋಗ, ಸಂಪರ್ಕ ಧ್ಯೇಯವನ್ನೊಳಗೊಂಡ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಪುತ್ತೂರು ಘಟಕ ಇದರ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು ಇದರ ವ್ಯಾಪ್ತಿಗೆ ಒಳಪಟ್ಟ ಸಮಾಜ ಬಾಂಧವರಿಗಾಗಿ


Read More »

🏆ವಿಶ್ವ ಚಾಂಪಿಯನ್ ಭಾರತ 🇮🇳🏆ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಧನಲಕ್ಷ್ಮಿ ಪೂಜಾರಿ


Share         🏆ವಿಶ್ವ ಚಾಂಪಿಯನ್ ಭಾರತ 🇮🇳🏆 ಢಾಕಾದಲ್ಲಿ ನಡೆದ 2025ರ ಕಬಡ್ಡಿ ವಿಶ್ವಕಪ್ ಟೂರ್ನಿಯಲ್ಲಿ ಚೈನೀಸ್ ತೈಪೆ ತಂಡವನ್ನು ರೋಚಕವಾಗಿ ಮಣಿಸಿ ಪ್ರತಿಷ್ಠಿತ ಕಬಡ್ಡಿ ವಿಶ್ವಕಪ್ ಟ್ರೋಫಿಯನ್ನು ಗೆದ್ದ ಭಾರತೀಯ ಮಹಿಳಾ ಕಬಡ್ಡಿ ತಂಡಕ್ಕೆ


Read More »

ಮಸ್ಕತ್ ನ ಭೀಷ್ಮ ಎಂಬ ಹೆಗ್ಗಳಿಕೆಗೆ ಪಾತ್ರರಾದ ಹಿರಿಯ ಉದ್ಯಮಿ ಶ್ರೀಯುತ ಎಸ್ ಕೆ ಪೂಜಾರಿ


Share         ಮೂಲತಃ ಗಂಜಿಮಠ ಪೆರಾರ ಎಂಬಲ್ಲಿ 1956 ರಲ್ಲಿ ಜನಿಸಿದ ಶ್ರೀಯುತರು ಕಿರಿಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಊರಿನಲ್ಲಿ ಪ್ರಾರಂಭಿಸಿ ನಂತರ ಮುಂಬೈಗೆ ಬಂದು ಕೆಲಸದ ಜೊತೆಗೆ ಹೆಚ್ಚಿನ ವಿದ್ಯಾಭ್ಯಾಸವನ್ನು ಮುಂಬೈನಲ್ಲಿ ಪ್ರಾರಂಭಿಸಿ


Read More »

ನಿರೂಪಣಾ ಕ್ಷೇತ್ರದಲ್ಲಿ ಮಿಂಚುತ್ತಿರುವ ಉದಯೋನ್ಮುಖ ಪ್ರತಿಭೆ – ಕೃತಿ ಪೂಜಾರಿ ಮೂಡುಬೆಟ್ಟು


Share           ಸಾಧನೆಯೆಂಬುದು ಯಾರೊಬ್ಬನ ಸೊತ್ತೂ ಅಲ್ಲ, ಅದು ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಭಾವದಿಂದ ಮುನ್ನಡೆಯುವ ಮನಸು ಮತ್ತು ವ್ಯಕ್ತಿಗಳ ಪಾಲಿನ ವರದಾನ. ಸಾಧನೆಯ ಮನಸ್ಸೆಂಬ ಸಸಿಗೆ ಸತತ ನೀರೆರೆದು ಪೋಷಿಸಿ, ಶ್ರಮವನ್ನು


Read More »