TOP STORIES:

FOLLOW US

ಹಳದಿ ಶಾಲು, ಧ್ವಜಕ್ಕೆ ಮಾತ್ರ ಅವಕಾಶ’ಜ. 26ರಂದು ಬಿಲ್ಲವ ಸಂಘಟನೆಗಳಿಂದ ‘ಗುರುವಿನ ಕಡೆಗೆ ಸ್ವಾಭಿಮಾನದ ನಡಿಗೆ’


!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!

ಹಳದಿ ಶಾಲು, ಧ್ವಜಕ್ಕೆ ಮಾತ್ರ ಅವಕಾಶ

. 26ರಂದು ಬಿಲ್ಲವ ಸಂಘಟನೆಗಳಿಂದಗುರುವಿನ ಕಡೆಗೆ ಸ್ವಾಭಿಮಾನದ ನಡಿಗೆ.ಮಂಗಳೂರು, . 24: ಗಣರಾಜ್ಯೋತ್ಸವಪರೇಡ್‌ಗೆ ಕೇರಳ ಸರಕಾರ ಕಳುಹಿಸಿದ್ದ ಬ್ರಹ್ಮಶ್ರೀ ನಾರಾಯಣಗುರುಗಳ ಸ್ತಬ್ಧಚಿತ್ರ ನಿರಾಕರಣೆ ಖಂಡಿಸಿ .26ರಂದು ಸಮಸ್ತಅವಿಭಜಿತ .. ಜಿಲ್ಲೆಯ ಬಿಲ್ಲವ ಸಂಘಗಳು, ಸಂಘಟನೆಗಳು ಹಾಗೂ ಬಿಲ್ಲವ ಸಮಾಜದ ವತಿಯಿಂದಗುರಿ ತೋರಿದ ಗುರುವಿನಕಡೆಗೆ ಸ್ವಾಭಿಮಾನದ ಜಾಥಾವನ್ನು ಆಯೋಜಿಸಲಾಗಿದೆ ಎಂದು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ಸಮಿತಿಯಕೋಶಾಧಿಕಾರಿ ಪದ್ಮರಾಜ್ ತಿಳಿಸಿದ್ದಾರೆ.

ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಇಂದು ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕೇಂದ್ರದ ಮಾಜಿ ಸಚಿವಜನಾರ್ದನ ಪೂಜಾರಿ ನೇತೃತ್ವದಲ್ಲಿ ಜಾಥಾ ನಡೆಯಲಿದ್ದು, ಜಾಥಾದಲ್ಲಿ ಘೋಷಣೆಗಳಿರುವುದಿಲ್ಲ. ಯಾರ ವಿರುದ್ಧವೂ ಧಿಕ್ಕಾರಕೂಗಲು ಅವಕಾಶವಿಲ್ಲ. ಭಾಗವಹಿಸುವ ವಾಹನಗಳು ನಾರಾಯಣಗುರುಗಳು ಶಾಂತಿಯ ಸಂಕೇತವಾಗಿ ನೀಡಿರುವ ಹಳದಿಪತಾಕೆಯನ್ನು ಹಾಗೂ ಭಾಗವಹಿಸುವ ನಾರಾಯಣ ಗುರುಗಳ ಅನುಯಾಯಿಗಳು ಹಳದಿ ಶಾಲು ಮಾತ್ರ ಧರಿಸಲುಅವಕಾಶವಿರುತ್ತದೆ ಎಂದರು.

ಕೇಂದ್ರ ಸರಕಾರದ ಸುತ್ತೋಲೆ ಪ್ರಕಾರ ಕೇರಳ ರಾಜ್ಯ ಸರಕಾರ ಕಳುಹಿಸಿದ್ದ ಸ್ತಬ್ಧಚಿತ್ರಗಳಲ್ಲಿ ಆಯ್ಕೆ ಸಮಿತಿಯು ಮಹಿಳಾಸಬಲೀಕರಣಕ್ಕೆ ಒತ್ತು ನೀಡಿ ನಾರಾಯಣಗುರುಗಳ ಪ್ರತಿಮೆಯಿದ್ದ ಸ್ತಬ್ಧಚಿತ್ರಕ್ಕೆ ಮೆಚ್ಚುಗೆ ಸೂಚಿಸಿತ್ತು. ಆದರೆ, ನಾರಾಯಣಗುರುಗಳಪ್ರತಿಮೆ ತೆಗೆದು, ಶಂಕರಾರಾರ್ಯ ಬದಲಾವಣೆಗೆ ಸೂಚನೆ ನೀಡಿರುವುದು ನಾರಾಯಣಗುರುಗಳ ಅನುಯಾಯಿಗಳಿಗೆ ಆಗಿರುವನೋವು. ಆಯ್ಕೆ ಸಮಿತಿ ನೇರವಾಗಿ ನಿರಾಕರಿಸಿದ್ದರೆ ನಾವು ಮಾತನಾಡುತ್ತಿರಲಿಲ್ಲ. ಗಣರಾಜ್ಯೋತ್ಸವ ಪೆರೇಡ್ ದೇಶದ ಹೆಮ್ಮೆ. ಸ್ತಬ್ಧಚಿತ್ರಗಳನ್ನು ಆಯ್ಕೆ ಮಾಡಲು ಅದರದ್ದೇ ಆದ ಮಾನದಂಡಗಳಿವೆ. ಆದರೆ ಸ್ತಬ್ಧ ಚಿತ್ರದ ಪರಿಕಲ್ಪನೆ ಎಲ್ಲವೂ ಉತ್ತಮವಾಗಿದೆ ಎಂದುಹೇಳಿ ಅಲ್ಲಿ ನಾರಾಯಣಗುರುಗಳ ಪ್ರತಿಮೆ ಬದಲಿಗೆ ಶಂಕರಾಚಾರ್ಯರ ಪ್ರತಿಮೆ ಹಾಕುವಂತೆ ಹೇಳಿದ್ದು, ಅವರಅನುಯಾಯಿಗಳಾದ ನಮಗೆ ನೋವಾಗಿದೆ. ಇದನ್ನು ಸರಿಪಡಿಸುವಂತೆ ಹೇಳಿದಾಗ ಇದನ್ನು ಸಮರ್ಥನೆ ಮಾಡುವಂತಹ ಪ್ರಯತ್ನನಡೆದಿದೆ. ಬಗ್ಗೆ ಕುದ್ರೋಳಿ ಕ್ಷೇತ್ರದ ನವೀಕರಣದ ರುವಾರಿ ಜನಾರ್ದನ ಪೂಜಾರಿಯವರು ಕೂಡಾ ತಮ್ಮ ನೋವನ್ನುತೋಡಿಕೊಂಡು ಇದರ ವಿರುದ್ಧ ಧ್ವನಿ ಎತ್ತುವುದು ಅಗತ್ಯವೆಂದು ಹೇಳಿದ್ದಾರೆ.

ನಿಟ್ಟಿನಲ್ಲಿ ಜಾಥಾ ನಡೆಸಲಾಗುತ್ತಿದೆ. ಬ್ರಹ್ಮಶ್ರೀ ನಾರಾಯಣ ಗುರುಗಳು ಮಾಡಿರುವ ಕ್ರಾಂತಿ, ಶಾಂತಿಯುತ ಸಂಘರ್ಷ ರಹಿತಕ್ರಾಂತಿಗಳು. ಪ್ರಕಾರ . 26ರಂದು ಕರಾವಳಿ ಜಿಲ್ಲೆಗಳಲ್ಲಿ ನಾರಾಯಣಗುರು ಸ್ವಾಭಿಮಾನ ಜಾಥಾ ನಡಿಗೆ ಹಮ್ಮಿಕೊಲ್ಳಲಾಗಿದೆ. ಜಿಲ್ಲೆಯ ವಿವಿಧ ತಾಲೂಕುಗಳಿಂದ ನಾರಾಯಣಗುರುಗಳ ಟ್ಯಾಬ್ಲೋ ಹಾಗೂ ಭಜನಾ ತಂಡಗಳು ಆಯ್ದ ಸ್ಥಳಗಳಲ್ಲಿ ಸಂಚರಿಸಿಸಂಜೆ 6 ಗಂಟೆಗೆ ಗೋಕರ್ಣನಾಥ ಕ್ಷೇತ್ರ ತಲುಪಲಿವೆ. ಮಂಗಳೂರಿನಿಂದ ಬಿಲ್ಲವ ಸಮುದಾಯದ ವತಿಯಿಂದ ಹೊರಡುವ ಸ್ತಬ್ಧಚಿತ್ರಅಂದು ಮಧ್ಯಾಹ್ನ 3 ಗಂಟೆಗೆ ಗರೋಡಿ ಕ್ಷೇತ್ರದಿಂದ ಹೊರಟು ಪಂಪವೆಲ್ ಸರ್ಕಲ್, ಕರಾವಳಿ ಜಂಕ್ಷನ್, ಅಂಬೇಡ್ಕರ್ ವೃತ್ತ ಹಾಗೂಹಂಪನ್‌ಕಟ್ಟ ಸಿಗ್ನಲ್‌ನಿಂದ ಕೆ.ಎಸ್.ರಾವ್ ರೋಡ್, ನವಭಾರತ್ ಸರ್ಕಲ್, ಪಿವಿಎಸ್‌ ಜಂಕ್ಷನ್, ಎಂಜಿ.ರಸ್ತೆ, ಲಾಲ್‌ಬಾಗ್, ಲೇಡಿಹಿಲ್ ಸರ್ಕಲ್ ಆಗಿ ಕ್ಷೇತ್ರಕ್ಕೆ ತಲುಪಲಿದೆ. ಬೈಂದೂರು, ಕಾರ್ಕಳ, ಉಡುಪಿ, ಮುಲ್ಕಿ, ಪುತ್ತೂರು, ಬಂಟ್ವಾಳದಿಂದ ಸಮಯಹೊಂದಾಣಿಕೆ ಮಾಡಿಕೊಂಡು ಒಟ್ಟು ಸೇರಿಕೊಂಡು ಕ್ಷೇತ್ರಕ್ಕೆ ತಲುಪಲಿದೆ ಎಂದು ಪದ್ಮರಾಜ್ ವಿವರಿಸಿದರು.

ನಾರಾಯಣ ಗುರು ಒಂದೇ ಮತ, ಒಂದೇ ದೇವರು ಎಂಬ ಅದ್ಭುತ ಸಂದೇಶ ನೀಡಿದವರು. ಸಮಾಜದಲ್ಲಿ ಈಗಲೂ ಅಸಮಾನತೆಇದೆ ಎಂಬುದು ಮೇಲ್ನೋಟಕ್ಕೆ ಎಲ್ಲರಿಗೂ ಗೊತ್ತಿದೆ, ಆಗುತ್ತಲೇ ಇದೆ. ಹಿಂದುಳಿದವರನ್ನು ತುಳಿಯುವರನ್ನು ಕೆಲಸ ಈಗಲೂನಡೆಯುತ್ತಿದೆ. ನಾರಾಯಣಗುರುಗಳಿಂದ ಪ್ರತಿಷ್ಠಾಪಿಸಲ್ಪಟ್ಟ ಗೋಕರ್ಣನಾಥ ಕ್ಷೇತ್ರದಲ್ಲಿ ನಾರಾಯಣಗುರುಗಳ ತತ್ವ, ಸಂದೇಶವನ್ನುಅಕ್ಷರಶ: ಪಾಲಿಸುವ ಕಾರ್ಯ ಆಗುತ್ತಿದೆ. ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿಯವರು ಇಲ್ಲಿ ನಾರಾಯಣಗುರುಗಳ ತತ್ವಸಂದೇಶವನ್ನು ಪಾಲಿಸುವ ನಿಟ್ಟಿನಲ್ಲಿ ಹಗಲಿರುಳು ದುಡಿದವರು. ಇಲ್ಲಿ ಹಿಂದುಳಿದ ವರ್ಗದ ಅರ್ಚಕರೇ ಇರುವಂತದ್ದು. ಪರಿಶಿಷ್ಟಜಾತಿಯ ಅರ್ಚಕರನ್ನು ನೇಮಕ ಮಾಡಲಾಗಿತ್ತು, ಮಹಿಳೆಯ ಪಾದಪೂಜೆಯನ್ನೂ ಇಲ್ಲಿ ಮಾಡಲಾಗಿತ್ತು. ಮುಂದಿನ ಜನಾಂಗಕಕ್ಕೂನಾರಾಯಣಗುರುಗಳ ತತ್ವ ಸಂದೇಶವನ್ನು ಲೋಕಾದ್ಯಂತ ಪ್ರಚಾರ ಆಗಬೇಕು ಎಂಬುದು ನಮ್ಮ ಆಶಯ ಎಂದವರು ಹೇಳಿದರು.

ಜಾಥಾದಲ್ಲಿ ಯಾವುದೇ ರೀತಿಯ ಘೋಷಣೆ ರಹಿತವಾಗಿ ಮೌನವಾಗಿ ನಡೆಯಲಿದೆ. ಕೇವಲ ಹಳದಿ ಧ್ವಜ, ಶಾಲು ಮಾತ್ರಅವಕಾಶ. ಬೇರೆ ಯಾವುದೇ ಬಣ್ಣದ ಧ್ವಜ, ಶಾಲಿಗೆ ಇಲ್ಲಿ ಅವಕಾಶವಿಲ್ಲ. ಗುರುಗಳ ತತ್ವದ ಪ್ರಕಾರ ಎಲ್ಲಾ ಜಾತಿ, ಮತ, ಧರ್ಮ, ಪಕ್ಷ, ಪಂಥದ ಜಾಥಾ ಇದಾಗಲಿದೆ. ಕೇವಲ ಹಿಂದುಳಿದ ವರ್ಗ ಮಾತ್ರವಲ್ಲ ಎಲ್ಲಾ ಜಾತಿ, ಧರ್ಮಗಳವರು ಜಾಥಾದಲ್ಲಿಭಾಗವಹಿಸಲಿದ್ದಾರೆ ಎಂದು ಬಿಲ್ಲವ ಮುಖಂಡರಾದ ಸತ್ಯಜಿತ್ ಸುರತ್ಕಲ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕುದ್ರೋಳಿ ಕ್ಷೇತ್ರದ ಅಭಿವೃದ್ಧಿ ಸಮಿತಿ ಅಧ್ಯಕ್ಷೃ ದೇವೇಂದ್ರ ಪೂಜಾರಿ, ಉಪಾಧ್ಯಕ್ಷ ಡಾ.ಬಿ.ಜಿ. ಸುವರ್ಣ, ಸದಸ್ಯರಾದ ಶೈಲೇಂದ್ರ ವೈ. ಸುವರ್ಣ, ಲೀಲಾಕ್ಷ ಕರ್ಕೇರಾ, ರಾಜ್ಯ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಪದ್ಮನಾಭ ಕೋಟ್ಯಾನ್, ಕಂಕನಾಡಿ ಗರೋಡಿ ಮೊಕ್ತೇಸರ ದಿನೇಶ್ ಅಂಚನ್, ಕಂಕನಾಡಿ ಗರೋಡಿ ಬಿಲ್ಲವ ಸಂಘದ ಅಧ್ಯಕ್ಷ ಭರತೇಶ್, ತುಳುನಾಡಬಿರುವೆರ್ ಸಂಘದ ಅಧ್ಯಕ್ಷ ಲೋಕೇಶ್ ಕೋಡಿಕೆರೆ, ಬಿಲ್ಲವ ಬ್ರಿಗೇಡ್ ಸಂಸ್ಥಾಪಕ ಅವಿನಾಶ್, ಯುವವೇದಿಕೆ ಮಾಜಿ ಅಧ್ಯಕ್ಷಎಂ.ಎಸ್. ಕೋಟ್ಯಾನ್, ಜಪ್ಪಿನಮೊಗರು ಬಿಲ್ಲವ ಸಂಘದ ಅಧ್ಯಕ್ಷ ನಾಗಾರಾಜ್, ಮುಖಂಡರಾದ ಸಚಿನ್, ಹರಿಪ್ರಸಾದ್, ಕೃಷ್ಣಪ್ಪಪೂಜಾರಿ, ಚಂದ್ರಶೇಖರ್ ಉಪಸ್ಥಿತರಿದ್ದರು.

ವರದಿ ಕೃಪೆ :ವಾರ್ತಾಭಾರತಿ


Share:

More Posts

Category

Send Us A Message

Related Posts

ವಿಶ್ವ ಮಾನ್ಯ ಕನ್ನಡಿಗ. 2024 ಪ್ರಶಸ್ತಿಗೆ ಭಾಜನರಾದ ಸನ್ಮಾನ್ಯ ಶ್ರೀ ಕೆ.ಪಿ ಮಂಜುನಾಥ್ ಸಾಗರ್ 


Share       ಅಮೆರಿಕದ ರಿಚ್ಮಂಡ್ ನಗರ ದ ಗ್ರೇಟರ್ ರಿಚ್ಮಂಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ 12 ನೇ ಅಕ್ಕ ವಿಶ್ವ ಮಾನ್ಯ ಕನ್ನಡ ಸಮ್ಮೇಳನವು ನಡೆಯಿತು. ಈ ಸಂದರ್ಭದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ


Read More »

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಶಾಲೆಗೆ ಶಾಲಾ ವಾಹನ ಕೊಡುಗೆ ನೀಡಿದ ಉದ್ಯಮಿ…!! ಸುಭಾಷ್ ಪೂಜಾರಿ


Share       ಬೈಂದೂರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಗ್ಗರ್ಸೆ – ಬೈಂದೂರು ಇಲ್ಲಿ 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು  ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸುರೇಶ್ ಪೂಜಾರಿ ಧ್ವಜಾರೋಹಣ ಕಾರ್ಯಕ್ರಮ ನೆರೆವೆರೆಸಿದರು. ಈ ಸಮಯದಲ್ಲಿ ಶಾಲೆಗೆ


Read More »

ಬಿರುವೆರ್ ಕುಡ್ಲದಿಂದ ಸ್ವಾತಂತ್ರ್ಯ ದಿನಾಚರಣೆ ಮೂರು ಕುಟುಂಬಗಳಿಗೆ 1 ಲಕ್ಷ ರೂ.ನೆರವು


Share       ಕುದ್ರೋಳಿ,ಆ.15: ಬಿರುವೆರ್ ಕುಡ್ಲ ದಿಂದ ಲೇಡಿಹಿಲ್ ಸರ್ಕಲ್ ನಲ್ಲಿ ಅದ್ದೂರಿಯ ಸ್ವಾತಂತ್ರ್ಯ ದಿನಾಚರಣೆ ಹಾಗೂ ಮೂರು ಕುಟುಂಬಗಳಿಗೆ ಒಂದು ಲಕ್ಷ ರೂ.ನೆರವು ಹಸ್ತಾಂತರ ಕಾರ್ಯಕ್ರಮವು ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್


Read More »

ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆ : ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಉದಯ ಪೂಜಾರಿಗೆ ಸಮ್ಮಾನ


Share       ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆಯ 5 ನೇ ವಾರ್ಷಿಕೋತ್ಸವದ ಸಂಭ್ರಮ. ಕಾರ್ಯಕ್ರಮದಲ್ಲಿ ಫ್ರೆಂಡ್ಸ್ ಬಲ್ಲಾಳ್ ಭಾಗ್,ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಉದಯ ಪೂಜಾರಿಯವರ ಸಮಾಜ ಸೇವೆಯನ್ನು ಗುರುತಿಸಿ ಸಮ್ಮಾನ


Read More »

ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ ನಿಧನ


Share       ವಿಟ್ಲ; ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ( 92 ವರ್ಷ) ಇತ್ತೀಚಿಗೆ ತನ್ನ ಸ್ವಗೃಹದಲ್ಲಿ ವಯೋ ಸಹಜವಾಗಿ ನಿಧನರಾದರು. ಇವರು ಸರಕಾರಿ ಪ್ರಾಥಮಿಕ ಶಾಲೆ ಅನಿಲಕಟ್ಟೆಯಲ್ಲಿ ಶಿಕ್ಷಕರಾಗಿ


Read More »

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »