ಬೊಜ್ಜಿಲ್ಲದ ವ್ಯಕ್ತಿಗಳಿಲ್ಲ ಎನ್ನುವ ಸ್ಥಿತಿ ಈಗಿದೆ. ಎಲ್ಲರ ಹೊಟ್ಟೆ ಮುಂದೆ ಬಂದಿರೋದನ್ನು ನಾವು ನೋಡ್ಬಹುದು. ಏನೇ ಮಾಡಿದ್ರೂ ಈ ಕೊಬ್ಬು ಇಳಿಯಲ್ಲ ಎನ್ನುವವರು ಅಡುಗೆ ಮನೆಯಲ್ಲಿರೋ ಈ ಮನೆಮದ್ದನ್ನು ಒಮ್ಮೆ ಟ್ರೈ ಮಾಡಿ.
ನಿಮ್ಮ ಹೊಟ್ಟೆ ಬೊಜ್ಜು ಇಳಿಸುತ್ತೆ ಈ ಪಾನೀಯ : ಅಡುಗೆ ಮನೆಯಲ್ಲಿರುವ ಜೇನುತುಪ್ಪ ಹಾಗೂ ದಾಲ್ಚಿನಿಯನ್ನು ಬಳಸಿ ನೀವು ಬೊಜ್ಜನ್ನು ಕಡಿಮೆ ಮಾಡ್ಕೊಳ್ಳಬಹುದು. ಜೇನುತುಪ್ಪ ಮತ್ತು ದಾಲ್ಚಿನಿ ವಿವಿಧ ಪೋಷಕಾಂಶ (Nutrient) ಗಳನ್ನು ಹೊಂದಿದೆ. ಅದು ಆರೋಗ್ಯ (Health) ಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಆದ್ರೆ ಅವುಗಳನ್ನು ಸೇವಿಸುವ ಸರಿಯಾದ ಸಮಯ ಮತ್ತು ಸರಿಯಾದ ಮಾರ್ಗ ತಿಳಿದಿರಬೇಕು.
ದಾಲ್ಚಿನಿ (Cinnamon) ಹಾಗೂ ಜೇನುತುಪ್ಪ (Honey) ದ ಪಾನೀಯ ತಯಾರಿಸುವ ವಿಧಾನ : ಒಂದು ಪಾತ್ರೆಗೆ ಒಂದು ಕಪ್ ನೀರನ್ನು ಹಾಕಿ, ಅದನ್ನು ಕುದಿಸಿ. ನೀರು ಕುದಿಯುತ್ತಿರುವ ವೇಳೆ ಅದಕ್ಕೆ ಒಂದು ದಾಲ್ಚಿನಿ ಕಡ್ಡಿಯನ್ನು ಹಾಕಿ. ನೀವು ದಾಲ್ಚಿನಿ ಪುಡಿಯನ್ನು ಕೂಡ ಹಾಕ್ಬಹುದು. ಈ ನೀರನ್ನು 5 -7 ನಿಮಿಷ ಚೆನ್ನಾಗಿ ಕುದಿಸಿ. ನಂತ್ರ ಗ್ಯಾಸ್ ಬಂದ್ ಮಾಡಿ ಇದು ಸ್ವಲ್ಪ ತಣ್ಣಗಾದ್ಮೇಲೆ ಒಂದು ಚಮಚ ಜೇನುತುಪ್ಪ ಬೆರೆಸಿ ಸೇವನೆ ಮಾಡಿ. ಇದಕ್ಕೆ ನೀವು ನಿಂಬೆ ರಸವನ್ನು ಕೂಡ ಬೆರೆಸಿಕೊಂಡು ಕುಡಿಯಬಹುದು. ವರ್ಕ್ ಔಟ್ ಗೆ ಹೋಗುವ ಮುನ್ನ, ಹಸಿವಾದಾಗ ಅಥವಾ ರಾತ್ರಿ ಮಲಗಲು ಹೋಗುವ ಮೊದಲು ನೀವು ಈ ನೀರನ್ನು ಅವಶ್ಯವಾಗಿ ಸೇವನೆ ಮಾಡಿ.
ಈ ಪಾನೀಯದಿಂದಾಗುವ ಲಾಭಗಳು : ಜೇನುತುಪ್ಪದಲ್ಲಿ ಅನೇಕ ಪೋಷಕಾಂಶಗಳಿವೆ. ಅದು ತೂಕ ಇಳಿಕೆಗೆ ಸಹಕಾರಿಯಾಗಿದೆ. ಜೇನುತುಪ್ಪದಲ್ಲಿ ಅನೇಕ ಪ್ರಮುಖ ಜೀವಸತ್ವಗಳು ಮತ್ತು ಖನಿಜಗಳಿವೆ. ಈ ಎಲ್ಲಾ ಪೋಷಕಾಂಶಗಳು ಅದರಲ್ಲಿರುವ ಸಕ್ಕರೆಯ ಪರಿಣಾಮವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಜೇನುತುಪ್ಪದಲ್ಲಿರುವ ಫ್ರಕ್ಟೋಸ್ ಹೊಟ್ಟೆಯ ಕೊಬ್ಬನ್ನು ಸುಡುತ್ತದೆ. ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ದೀರ್ಘ ಸಮಯ ದೈಹಿಕವಾಗಿ ಸಕ್ರಿಯವಾಗಿರಲು ಇದು ಸಹಾಯ ಮಾಡುತ್ತದೆ. ಜೀರ್ಣಕ್ರಿಯೆಗೂ ಜೇನುತುಪ್ಪ ಒಳ್ಳೆಯದು. ಸರಿಯಾದ ಪ್ರಮಾಣದಲ್ಲಿ ಜೇನುತುಪ್ಪ ಸೇವನೆ ಮಾಡಿದ್ರೆ ಜೀರ್ಣಕ್ರಿಯೆ ಸರಿಯಾಗಿ ಆಗುತ್ತದೆ.
ಇನ್ನು ದಾಲ್ಚನಿಯಲ್ಲಿ ಸಾಕಷ್ಟು ಪೋಷಕಾಂಶವಿದೆ. ತೂಕ ಇಳಿಕೆ ಜೊತೆಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಇದು ಸಹಕಾರಿ. ದಾಲ್ಚಿನಿ ನೀರಿನ ಸೇವನೆ ಮಾಡೋದ್ರಿಂದ ಚಯಾಪಚಯ ಸುಗಮವಾಗುತ್ತದೆ. ಹೊಟ್ಟೆಯಲ್ಲಿ ಸಂಗ್ರಹವಾಗಿರುವ ಕೊಬ್ಹು ಕರಗುತ್ತದೆ. ದಾಲ್ಚಿನಿ ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ದೇಹದಲ್ಲಿ ಹೆಚ್ಚುತ್ತಿರುವ ಸಕ್ಕರೆಯ ಮಟ್ಟವು ಹೊಟ್ಟೆಯ ಮೇಲೆ ಹೆಚ್ಚುವರಿ ಕೊಬ್ಬಿನ ಶೇಖರಣೆಗೆ ಕಾರಣವಾಗಬಹುದು. ಈ ಸಂದರ್ಭದಲ್ಲಿ ಜೇನುತುಪ್ಪ ನೈಸರ್ಗಿಕವಾಗಿ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹಸಿವನ್ನು ನಿಯಂತ್ರಿಸುತ್ತದೆ.