ಬೆಳಿಗ್ಗೆ ಎದ್ದ ತಕ್ಷಣ ಅನೇಕರಿಗೆ ಕಾಫಿ, ಟೀ ಬೇಕೆಬೇಕು. ಕೆಲಸದ ಒತ್ತಡದಲ್ಲಿ ರಿಲ್ಯಾಕ್ಸ್ ಆಗಲು ಅನೇಕರು ಪದೇ ಪದೇ ಕಾಫಿ, ಟೀ ಕುಡಿಯುತ್ತಿರುತ್ತಾರೆ. ಮನೆಯಲ್ಲಿ ಗ್ಲಾಸ್,ಸ್ಟೀಲ್ ಬಳಸುವ ನಾವು ಹೊರಗೆ ಹೋದಾಗ ಪೇಪರ್ ಕಪ್ ನಲ್ಲಿ ಟೀ, ಕಾಫಿ ಕುಡಿಯುತ್ತೇವೆ.
ಆದ್ರೆ ಅದು ಆರೋಗ್ಯಕ್ಕೆ ಅಪಾಯಕಾರಿ ಎಂಬುದು ನಿಮಗೆ ಗೊತ್ತಾ?
ಪೇಪರ್ ನಂತೆ ಕಾಣುವ ಕಪ್ ಪಾಲಿಯೆಸ್ಟರ್‌ಗಳಿಂದ ತಯಾರಿಸಲಾಗುತ್ತದೆ. ಅದು ಅತ್ಯಂತ ಹಾನಿಕಾರಕ. ಈ ಕಪ್ ಗೆ ಬಿಸಿ ಚಹಾವನ್ನು ಹಾಕಿದಾಗ ಅದರಲ್ಲಿನ ಕೆಲವು ಹಾನಿಕಾರಕ ಅಂಶಗಳು ಚಹಾಕ್ಕೆ ಸೇರಿ ಅದ್ರಿಂದ ಕೆಲವು ಬಾರಿ ಕ್ಯಾನ್ಸರ್ ಗೆ ಸಹ ಕಾರಣವಾಗಬಹುದು. ಇದ್ರಲ್ಲಿನ ಹಾನಿಕಾರಕ ಅಂಶಗಳಿಂದ ಆಯಾಸ, ಹಾರ್ಮೋನುಗಳ ಏರುಪೇರು ಸಹಜ.
ನೀವು ಪ್ರತಿದಿನ ಥರ್ಮೋಕೋಲ್ ಕಪ್ನಲ್ಲಿ ಚಹಾವನ್ನು ಕುಡಿಯುತ್ತಿದ್ದರೆ, ನಿಮಗೆ ಚರ್ಮದ ಸೋಂಕು ಕಾಡುತ್ತದೆ. ಚರ್ಮದ ಮೇಲೆ ಕೆಂಪು ಕಲೆಗಳು, ತುರಿಕೆ ಕಾಣಿಸಿಕೊಳ್ಳುತ್ತದೆ. ಥರ್ಮೋಕೋಲ್ ಕಪ್ ನಿಯಮಿತವಾಗಿ ಬಳಸುವುದರಿಂದ ಹೊಟ್ಟೆಯ ಸಮಸ್ಯೆಯೂ ಉಂಟಾಗುತ್ತದೆ.
ಕಪ್ ಸೋರದಂತೆ ತಡೆಯಲು ಕೃತಕ ಮೇಣದ ಲೇಪನ ಮಾಡಿರುತ್ತಾರೆ. ಕಪ್ಪಿನ ತಾಪ 45 ಡಿಗ್ರಿಗಿಂತ ಹೆಚ್ಚಾದಾಗ ಮೇಣ ಕರಗುತ್ತೆ. ಹಾಗಾಗಿ ನಾವು ಚಹಾ ಕುಡಿಯುವಾಗ ಈ ಮೇಣವು ಕಪ್ ಜೊತೆಗೆ ನಮ್ಮ ದೇಹಕ್ಕೂ ಹೋಗಿ ಕರುಳಿನ ಸೋಂಕು ಅಥವಾ ಜೀರ್ಣಾಂಗ ಪ್ರಕ್ರಿಯೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.