TOP STORIES:

FOLLOW US

ಅಕ್ಕರೆಯ ಮಾತುಗಳು, ಸಕ್ಕರೆಯ ಮನಸುಳ್ಳ ಮಿಂಚುಳ್ಳಿ ನಟಿ ನವ್ಯಾ ಪೂಜಾರಿ


ಜೀವನವೆ ನಾಟಕ ರಂಗ. ನಾವೆಲ್ಲಾ ಸೃಷ್ಟಿಯ ಸೂತ್ರದ ಬೊಂಬೆಗಳು. ಸುಖ ದುಃಖಗಳ ಪರೀಕ್ಷೆಯ ನಡುವೆ ನಮ್ಮೆಲ್ಲರ ಮುಖದಲ್ಲಿ ಮಂದಹಾಸವ ಬರಿಸಲು ನಮ್ಮೆಲ್ಲರನ್ನು ಮನೊರಂಜಿಸಲು ತೆರೆಯ‌ ಮೇಲೆ ಬಣ್ಣ ಹಚ್ಚಿ ನಾಟಕ, ಸಿನಿಮಾ ರಂಗದಲ್ಲಿ ಜನರ ಮನಸೆಳೆವರು ರಂಗದ ಕಲಾವಿದರು. ಅಂತಹ ಸಿನಿಮಾ ರಂಗದಲ್ಲಿ ನಮ್ಮ ಬಿರುವ ಕುಲಕೆ ಹೆಮ್ಮೆಯ ಗುರುತಾಗಿ ಸದ್ದಿಲ್ಲದೆ ಮಿಂಚುತ್ತಿರುವ ನಗುಮುಖದ ಚೆಲುವೆ ನವ್ಯ ಪೂಜಾರಿ. ಮುಖದಲ್ಲಿ ಚೈತನ್ಯದ ಚಿಲುಮೆ, ಭೂಲೋಕದ ಅಪ್ಸರೆ, ನಕ್ಕರೆ ಮಲ್ಲಿಗೆ ಅರಳಿದಂತೆ, ಅಕ್ಕರೆಯ ಮಾತುಗಳು, ಸಕ್ಕರೆಯ ಮನಸುಳ್ಳ ಮಿಂಚುಳ್ಳಿ ನವ್ಯಾ ಪೂಜಾರಿ.

ಯಾದವ ಪೂಜಾರಿ ಹಾಗೂ ಸುಮಿತರವರ ಇಬ್ಬರು ಮಕ್ಕಳಲ್ಲಿ ಮೊದಲ ಮಗಳು ನವ್ಯಾ ಹಾಗೂ ಇವರ ತಂಗಿಯ ಹೆಸರು ಕಾವ್ಯಾ.ಈ ಸುಂದರ ಸಂಸಾರ ಪ್ರಸ್ತುತ ಸುರತ್ಕಲ್ ನಲ್ಲಿ ವಾಸವಾಗಿದ್ದಾರೆ. N.I.TK ಇಂಗ್ಲಿಷ್ ಮೀಡಿಯಂ ಸ್ಕೂಲ್ ನಲ್ಲಿ ವಿಧ್ಯಾಭ್ಯಾಸ ಹಾಗೂ ನಿಟ್ಟೆ ಕರ್ನಾಟಕ ಕಾಲೇಜ್ ನಲ್ಲಿ Computer Science ವಿಭಾಗದಲ್ಲಿ ಕಲಿತು ಮೊದಲಿಗೆ ಒಂದು ಕಚೇರಿಯಲ್ಲಿ ವೃತ್ತಯನ್ನು ಮಾಡುತ್ತಿದ್ದ ಅನುಭವ ಇವರದ್ದು. ತದನಂತರ ಉಮಿಲ್ ಚಲನಚಿತ್ರದ ಆಡಿಷನ್ ನಲ್ಲಿ ಆಯ್ಕೆಯಾಗಿ ಸಿನೆಮಾ ರಂಗಕ್ಕೆ ಕಾಲಿಟ್ಟರು.

ಸಿನಿಮಾ ಕ್ಷೆತ್ರವು ಇವರಿಗೆ ಬಯಸದೆ ಬಂದ ಭಾಗ್ಯವಾಯಿತು. ಆ ಕಲೆಯ ಕಳೆ ಇವರ ಮೊಗದಲ್ಲಿ ಹೊಳೆಯುತ್ತಿತ್ತು. ಅದೇ ಕಾರಣ ಇವರಿಗೆ ಮೊದಲು ತುಳು ಸಿನೆಮಾ ಉಮಿಲ್ ಚಿತ್ರದಲ್ಲಿ ನಟಿಸಲು ಅವಕಾಶ ದೊರಕಿತು. ಸಣ್ಣ ವಯಸ್ಸಿನಲ್ಲೇ ಸಿನೆಮಾ ರಂಗದ ಪುಟ್ಟ ಕನಸು ಬೆಳೆಸಿದ್ದರೂ ಕೂಡ ವಿದ್ಯಾಭ್ಯಾಸಕ್ಕೋಸ್ಕರ ಆ ಕನಸನ್ನೇ ಮರೆತ ಇವರು ಮುಂದೆ ಜೀವನದಲ್ಲಿ ತಾನೊಬ್ಬಳು ಸಿನಮಾ ನಟಿ ಆಗುವೆ ಅಂತಹ ಅವಕಾಶ ಸಿಗಬಹುದು ಎಂದು ಅಂದುಕೊಂಡಿರಲಿಲ್ಲ. ಕಾಲದ ಮಹಿಮೆ ಯಾರು ಅರಿಯರು ಸಾಮರ್ಥ್ಯವಿದ್ದರೆ ಯಾವುದೇ ಕ್ಷೇತ್ರದಲ್ಲಿ ಅನುಭವ ರಹಿತ ಮಿಂಚಬಹುದು. ಹಾಗೇ ಇವರ ಕಥೆ ತನಗೆ ಬಯಸದೆ ಬಂದ ಅವಕಾಶವಾದರೂ ಮೊದಲ ಸಿನೆಮಾದಲ್ಲೇ ಜನರ ಮನಮುಟ್ಟಿ ಒಬ್ಬ ಅದ್ಭುತ ಕಲಾವಿದೆಯಾಗಿ ಮುಂದೆ ಈ ಕ್ಷೇತ್ರದಲ್ಲಿ ನಿರ್ದಿಷ್ಟವಾದ ಗುರಿಯೊಂದನ್ನು ಇಟ್ಟುಕೊಂಡು ನವನವೀನತೆಯಿಂದ ಭವಿಷ್ಯದ ಬಾಗಿಲ ತರೆದರು‌. ಸಿನೆಮಾ ಕ್ಷೇತ್ರಕ್ಕೆ ಕಾಲಿಡುವ ಮೊದಲು ಕಲಿಕೆಯ ಸಂದರ್ಭದಲ್ಲಿ ಇವರು ನೃತ್ಯ ಹಾಗೂ ಕ್ರೀಡಾ ಚಟುವಟಿಕೆಯಲ್ಲಿ ಅಪಾರ ಒಲವು ಹೊಂದಿ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿದ ಉತ್ಸಾಹಿ ವಿಧ್ಯಾರ್ಥಿಯಾಗಿದ್ದರು.

ಉಮಿಲ್ ಇವರ ಮೊದಲ ತುಳು ಚಲನಚಿತ್ರವಾಗಿದ್ದು.ರಂಜಿತ್ ಬಜ್ಪೆರವರ ನಿರ್ದೇಶನದಲ್ಲಿ ಡಿಸೆಂಬರ್ ೨೦೧೮ ರಂದು ಬಿಡುಗಡೆಯಾಗಿದ್ದು. ಹೊಸ ಪರಿಚಯದ ಹೆಜ್ಜೆಯ ಗುರುತು ಸದ್ದಿಲ್ಲದೆ ಸಿನೆಮಾ ರಂಗದಲ್ಲಿ ಸುದ್ಧಿ ಮಾಡ ತೊಡಗಿತು.

ತದನಂತರ ಇವರು ತ್ರಿಬಲ್ ತಲಾಕ್ ಎಂಬ ಆರ್ಟ್ ಮೂವಿಯಲ್ಲಿ ನಟಿಸಿದರು. ಇದು ಇವರ ಮೊದಲ ಆರ್ಟ್ ಮೂವಿಯಾಗಿದೆ. ಈ ಚಲನಚಿತ್ರವು ಹೊಸ ತಂಡದ ಹೊಸ ಪ್ರಯತ್ನದಲ್ಲಿ ಲಂಡನ್ ನಲ್ಲಿ ಬಿಡುಗಡೆಯಾಗಿದೆ. ಚಲನಚಿತ್ರವು ವಿಭಿನ್ನವಾಗಿದ್ದು ಬ್ಯಾರಿ ಸಂಸ್ಕೃತಿಯ ಕುರಿತಾಗಿತ್ತು. ಇದರಲ್ಲಿ ನವ್ಯಾರವರು ಒಬ್ಬ ಮುಸ್ಲಿಂ ಮಹಿಳೆಯಾಗಿ ಪಾತ್ರ ನಿರ್ವಹಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿರುವರು. ದ್ವಿರುಕ್ತಿ ಎಂಬ ಕನ್ನಡ ಚಲನಚಿತ್ರದಲ್ಲಿ ಪಾತ್ರವಹಿಸಿದ್ದು ಇದುವರೆಗಿನ ಇವರ ಮೊದಲ ಕನ್ನಡ ಚಲನಚಿತ್ರವಾಗಿದೆ.

ಸುಂದರ ಕನಸಿನೊಂದಿಗೆ ಇತ್ತೀಚಿಗೆ ತೆರೆಕಂಡ ವಿಶೇಷ ಚಲನಚಿತ್ರ ಕನಸು ಮಾರಾಟಕ್ಕಿದೆ ಎಂಬ ಸಿನೆಮಾದಲ್ಲಿಯೂ ಇವರು ಅಭಿನಯಿಸಿರು. ಚಿತ್ತದಲ್ಲಿರುವ ಉದಯೋನ್ಮುಖ ಕಲಾವಿದರ ನಡುವೆ ತಾನು ಒಬ್ಬ ಯುವ ನಟಿಯಾಗಿ ಪಾತ್ರವಹಿಸಿರುವರು.

ಸಿನೆಮಾ ರಂಗದಲ್ಲಿ ಮುಂದುವರಿಯಲು ಇವರಿಗೆ ಇವರ ಮನೆಯವರ ಅಪಾರ ಪ್ರೋತ್ಸಾಹವಿದ್ದು‌. ಇದೇ ಇವರಿಗೆ ಮುನ್ನಡೆಯಲು ದೀಕ್ಷೆ ಎನ್ನುತ್ತಾರೆ ನವ್ಯಾ ಪೂಜಾರಿಯವರು.

ಎರಡೆಕ್ರೆ, ಇಂಗ್ಲಿಷ್, ಬೋಜರಾಜ್ ಎಂ.ಬಿ.ಬಿ.ಎಸ್, ಗಬ್ಬರ್ ಸಿಂಗ್, ತುಳುನಾಡ ಮಡಿಲು, ಬಿಂದಾಸ್, ಗೂಗ್ಲಿ ಮೊದಲಾದ ಸಿನೆಮಾಗಳು ಬಿಡುಗಡೆಯಾಗಲಿದ್ದು ಈ ಉದಯೋನ್ಮುಖ ನಟಿಗೆ ಪ್ರೋತ್ಸಾಹದ ಜೊತೆಗೆ ಮತ್ತಷ್ಟು ಅವಕಾಶಗಳು ದೊರಕಲಿ. ಮುಖ್ಯವಾಗಿ ತುಳು ರಂಗದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಇವರು ಆದಷ್ಟು ತುಳು ಸಿನೆಮಾಗಳಲ್ಲಿ ನಟಿಸಲು ಬಯಸುತ್ತಾರೆ. ಹುಟ್ಟಿದ ಮಣ್ಣಿನ ಮೇಲಿನ ಅಭಿಮಾನವೇ ಇವರನ್ನು ಎತ್ತರಕ್ಕೆ ಬೆಳೆಸಲು ಕಾರಣವಾಗಬಹುದು. ಹಾಗೆಯೇ ತುಳು, ಕನ್ನಡ ಇತರ ಭಾಷಾ ರಂಗದಲ್ಲೂ ಅವಕಾಶಗಳು ನಿಮ್ಮ ಮುಡಿಗೇರಲಿ. ನಟನೆಯ ಹಾದಿಯಲ್ಲಿ ಯಶಸ್ವಿ ನಟಿಯಾಗಿ ಮಿಂಚುವ ತೌಳವ ಸಿರಿಗೆ ಸವಿನಯದ ಶುಭಾಶಯಗಳು.

✍️ ತೃಪ್ತಿ.ಜಿ.ಕುಂಪಲ


Share:

More Posts

Category

Send Us A Message

Related Posts

ಬಿಲ್ಲವಾಸ್ ಕತಾರ್ ಸಂಘದ ವತಿಯಿಂದ ಗೆಜ್ಜೆಗಿರಿ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ


Share       ಬಿಲ್ಲವಾಸ್ ಕತಾರ್ ಸಂಘದ ವತಿಯಿಂದ ಸಂಘದ ನೂತನ ಅಧ್ಯಕ್ಷರಾದ ಶ್ರೀಮತಿ ಅಪರ್ಣ ಶರತ್ ಅವರ ಅಧ್ಯಕ್ಷತೆಯಲ್ಲಿ ದಿನಾಂಕ 26.02.2025 ರಂದು ಕತಾರ್ ನ ಐ. ಸಿ. ಸಿ. ಮುಂಬೈ ಹಾಲ್ ನಲ್ಲಿ  ಶ್ರೀ


Read More »

ಸೌದಿ ಬಿಲ್ಲವಾಸ್ ದಮ್ಮಾಮ್ ಗೆಜ್ಜೆಗಿರಿ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ


Share       ದಮ್ಮಾಮ್: ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಮಾರ್ಚ್ 1ರಿಂದ ಮಾರ್ಚ್ 5 ರವರೆಗೆ ಜರಗುವ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಸೌದಿ ಬಿಲ್ಲವಾಸ್ ದಮ್ಮಾಮ್ ವತಿಯಿಂದ ಸೌದಿಯ


Read More »

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಮಹಾ ಶಿವರಾತ್ರಿ ಮಹೋತ್ಸವಕ್ಕೆ ಚಾಲನೆ


Share       ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಫೆ.21ರಿಂದ 28ರವರೆಗೆ ಜರುಗುವ ವಾರ್ಷಿಕ ಮಹೋತ್ಸವ ಮತ್ತು ಮಹಾ ಶಿವರಾತ್ರಿ ಮಹೋತ್ಸವಕ್ಕೆ ಶುಕ್ರವಾರ ಧ್ವಜಾರೋಹಣ ನೆರವೇರುವ ಮೂಲಕ ಚಾಲನೆ ನೀಡಲಾಯಿತು. ಶುಕ್ರವಾರ ಗುರು ಪ್ರಾರ್ಥನೆ, ಪುಣ್ಯಾಹ ಹೋಮ,


Read More »

ಬಿಲ್ಲವ ಸಮಾಜ ಸೇವಾ ಸಂಘ ಪುಣೆ  ಆಶ್ರಯದಲ್ಲಿ ಏಪ್ರಿಲ್ ತಿಂಗಳಲ್ಲಿ ನಡೆಯಲಿದೆ “ವಿಶ್ವ ಬಿಲ್ಲವ ಕ್ರಿಕೆಟ್” ಪಂದ್ಯಾಟದ


Share       ಪುಣೆ : ಫೆ.19,ಬಿಲ್ಲವ ಸಮಾಜ ಸೇವಾ ಸಂಘ (ರಿ) ಪುಣೆ ಇದರ  ಆಶ್ರಯದಲ್ಲಿ ಮುಂಬರುವ ಎಪ್ರಿಲ್ ತಿಂಗಳಲ್ಲಿ ನಡೆಯಲಿರುವವಿಶ್ವ ಬಿಲ್ಲವ ಕ್ರಿಕೆಟ್ಪಂದ್ಯಾಟದ  ತಯಾರಿಯ ಬಗ್ಗೆ  ಎರಡನೇ ಪೂರ್ವಭಾವಿ ಸಭೆಯು ಇಂದು ಫೆ. 19ನೇ


Read More »

ಬಿಲ್ಲವಾಸ್ ಕತಾರ್ ನ ಅಧ್ಯಕ್ಷ ಶ್ರೀ ಸಂದೀಪ್ ಸಾಲಿಯಾನ್ ರವರಿಗೆ ವಿನಯಪೂರ್ವಕ ಬೀಳ್ಕೊಡುಗೆ


Share       ಬಿಲ್ಲವಾಸ್ ಕತಾರ್ ನ ನೇತೃತ್ವದಲ್ಲಿ ದಿನಾಂಕ ೮.೨.೨೦೨೫ ರಂದು ಎಂ. ಆರ್. ಎ, ಸಲ್ವ ರೋಡ್, ಕತಾರ್, ಔತಣಕೂಟ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಬಿಲ್ಲವಾಸ್ ಕತಾರ್ ನ ಅಧ್ಯಕ್ಷರಾದ ಶ್ರೀ ಸಂದೀಪ್


Read More »

ರಾಷ್ಟ್ರಮಟ್ಟದ ಪ್ರಶಸ್ತಿ ಸ್ವೀಕರಿಸಿದ ತುಳುನಾಡಿನ ಹೆಮ್ಮೆಯ ಸಾಹಿತಿ ಪ್ರಮೀಳ ದೀಪಕ್ ಪೆರ್ಮುದೆ


Share       ಮಂಗಳೂರು: ರಾಷ್ಟ್ರಮಟ್ಟದ ಪ್ರಶಸ್ತಿ ಸ್ವೀಕರಿಸಿದ ತುಳುನಾಡಿನ ಹೆಮ್ಮೆಯ ಸಾಹಿತಿ ಪ್ರಮೀಳ ದೀಪಕ್ ಪೆರ್ಮುದೆ. MRPL ಸಂಸ್ಥೆಯ ಉದ್ಯೋಗಿ ಆಗಿರುವ ಪ್ರಮೀಳ ದೀಪಕ್ ಪೆರ್ಮುದೆ ಇವರಿಗೆ ಸಾರ್ವಜನಿಕ ವಲಯದಲ್ಲಿ ಮಹಿಳೆಯರು ಪರಿಕಲ್ಪನೆಯಡಿ “ Woman


Read More »