TOP STORIES:

ಅವರು ನಾರಾಯಣ ಗುರುಗಳನ್ನು ಹಿಂದೆಯೂ ತಿರಸ್ಕರಿಸಿದ್ದರು, ಮುಂದೆಯೂ ತಿರಸ್ಕರಿಸುತ್ತಾರೆ-ದಿನೇಶ್ ಅಮೀನ್ ಮಟ್ಟು


ಗಣರಾಜ್ಯೋತ್ಸವ ಪರೇಡ್ ನಲ್ಲಿ ನಾರಾಯಣ ಗುರುಗಳ ಮೂರ್ತಿ ಇದ್ದ ಸ್ಥಬ್ದಚಿತ್ರವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದ್ದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ಇದನ್ನು ಯಾರೂ ವಿರೋಧಿಸಬೇಕಾಗಿಲ್ಲ, ಬದಲಿಗೆ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಆಡಳಿತಾರೂಢ ಬಿಜೆಪಿಯ ಪ್ರಾಮಾಣಿಕ ನಡವಳಿಕೆಗಾಗಿ ಎಲ್ಲರೂ ಅಭಿನಂದಿಸಬೇಕು.
ಇದೇ ರೀತಿಯ ಪ್ರಾಮಾಣಿಕತೆಯಿಂದ ಬುದ್ದ,ಬಸವ, ಅಂಬೇಡ್ಕರ್, ಕನಕ, ಕಬೀರ, ವಾಲ್ಮೀಕಿಯೂ ಸೇರಿದಂತೆ ಎಲ್ಲ ಮಹಾ ಪುರುಷರ ಬಗೆಗಿನ ತಮ್ಮ ವಿರೋಧವನ್ನು ಬಿಜೆಪಿ ಮತ್ತು ಅದರ ಸರ್ಕಾರಗಳು ಮುಕ್ತವಾಗಿ ದಾಖಲಿಸಬೇಕು ಎಂದು ನಾವೆಲ್ಲರೂ ಕೂಡಿ ಒತ್ತಾಯಿಸಬೇಕು.
ಸಾವರ್ಕರ್, ಗೋಲ್ವಾಲ್ಕರ್, ಹೆಗಡೆವಾರ್ , ಗೋಡ್ಸೆ ಸೇರಿದಂತೆ ರಾಜಕೀಯ ಹಿಂದುತ್ವದ ಪ್ರಚಾರಕರ ವಿರುದ್ದ ನಮ್ಮ ವಿರೋಧವನ್ನು ನಾವು ಹೇಗೆ ಮುಕ್ತವಾಗಿ ಮಂಡಿಸುತ್ತೇವೆಯೋ ಹಾಗೆ ಅವರು ಆತ್ಮವಂಚನೆ ಮಾಡಿಕೊಳ್ಳದೆ ನಾವು ಆದರ್ಶಪ್ರಾಯರೆಂದು ತಿಳಿದುಕೊಂಡ ಮತ್ತು ಅವರು ಮನಸ್ಸಿನೊಳಗೆ ವಿರೋಧಿಸುತ್ತಿರುವ ಮಹಾಪುರುಷರ ವಿರುದ್ದದ ತಮ್ಮ ಅಭಿಪ್ರಾಯವನ್ನು ಪ್ರಾಮಾಣಿಕತೆಯಿಂದ ಮುಕ್ತವಾಗಿ ಹೇಳಿಕೊಳ್ಳಬೇಕು.
ನಡೆಯಲಿ ಇಂತಹದ್ದೊಂದು ಸೈದ್ದಾಂತಿಕ ಸಂಘರ್ಷ. ಗಟ್ಟಿಯಾಗಿರುವುದು ಉಳಿಯುತ್ತದೆ, ಉಳಿದದ್ದು ಇತಿಹಾಸದ ಕಸದ ಬುಟ್ಟಿಗೆ ಸೇರುತ್ತದೆ. ಹೊಡೆದು, ಬಡಿದು, ಕಡಿದು ಯಾವ ಸಿದ್ದಾಂತವನ್ನೂ ನೆಲೆ ಗೊಳಿಸಲಾಗುವುದಿಲ್ಲ.
ಇಂತಹದ್ದೊಂದು ದಾರಿಯನ್ನು ಹೇಳಿಕೊಟ್ಟವರೇ ನಾರಾಯಣ ಗುರುಗಳು. ಅವರು ತನ್ನ ಜನರಿಗೆ ಉಳಿದ ಸಮಾಜ ಸುಧಾರಕರಂತೆ ದೇವಸ್ಥಾನದೊಳಗೆ ಪ್ರವೇಶ ನೀಡಿ ಎಂದು ಅಂಗಲಾಚಲಿಲ್ಲ. ಅಲ್ಲಿಯೇ ಇದ್ದ ನದಿಯೊಳಗೆ ಧುಮುಕಿ ಶಿವಲಿಂಗವನ್ನು ಎದೆಗಪ್ಪಿಕೊಂಡು ಬಂದು ಅರವಿಪುರಂನಲ್ಲಿ ಸ್ಥಾಪಿಸಿ ಇದು ನಿಮ್ಮ ಶಿವ ಎಂದು ತನ್ನ ಜನರಿಗೆ ಹೇಳಿದರು.
ಪ್ರಶ್ನಿಸಿದ ಪುರೋಹಿತರಿಗೆ ‘ನಿಮ್ಮ ಶಿವ ನಿಮ್ಮಲ್ಲಿಯೇ ಇದ್ದಾನೆ, ಇದು ಈಳವರ ಶಿವ. ನೀವು ನಿಮ್ಮ ಪಾಡಿಗೆ ನಿಮ್ಮ ದೇವರನ್ನು ಪೂಜಿಸಿ, ನನ್ನ ಜನ ಅವರು ನಂಬಿದ ದೇವರನ್ನು ಪೂಜಿಸುತ್ತಾರೆ.. ’’ ಎಂದು ಬಾಯಿ ಮುಚ್ಚಿಸಿದ್ದರು.
ಅವರು ದೇವಾಲಯದೊಳಗೆ ಜನರನ್ನು ನುಗ್ಗಿಸಲಿಲ್ಲ, ದೇವರಮೂರ್ತಿಯನ್ನು ಒಡೆದುಹಾಕಲಿಲ್ಲ, ಅರ್ಚಕರನ್ನು ಪ್ರಶ್ನಿಸಲೂ ಇಲ್ಲ.. ಇದು ಯುದ್ಧದಲ್ಲಿ ಶಸ್ತ್ರ ಪ್ರಯೋಗ ಮಾಡದೆ ಶತ್ರುವನ್ನು ನಿಶಸ್ತ್ರಗೊಳಿಸುವ ಅಪರೂಪದ ಹೋರಾಟ.
ತಿರುವಾಂಕೂರು ಸಂಸ್ಥಾನದಲ್ಲಿ ಇಂದು ಕೇಂದ್ರ ಸರ್ಕಾರದಲ್ಲಿರುವಂತಹರದ್ದೇ ಪ್ರಭುತ್ವ ಇತ್ತು. ಅವರೊಡನೆ ನಾರಾಯಣ ಗುರುಗಳು ಸಂಘರ್ಷಕ್ಕಿಳಿದಿರಲಿಲ್ಲ. ವೈಕಂ ನಲ್ಲಿ ದೇವಸ್ಥಾನದ ಎದುರಿನ ಹಾದಿಯಲ್ಲಿ ನಡೆದುಕೊಂಡು ಹೋಗುವ ಸ್ವಾತಂತ್ರ್ಯಕ್ಕಾಗಿ ನಡೆದ ಸತ್ಯಾಗ್ರಹದ ಬಗ್ಗೆಯೂ ನಾರಾಯಣ ಗುರುಗಳ ವಿರೋಧ ಇತ್ತು. ‘’ಅವರು ಕಟ್ಟಿಕೊಂಡ ದೇವಸ್ಥಾನ, ಅದರ ಎದುರಿನ ಹಾದಿಯನ್ನು ಕಟ್ಟಿಕೊಂಡು ನೀವ್ಯಾಕೆ ಬಡಿದಾಡಿಕೊಳ್ಳುತ್ತೀರಿ,ನಿಮ್ಮ ದೇವಸ್ಥಾನವನ್ನು ನೀವೇ ಕಟ್ಟಿಕೊಳ್ಳಿ’’, ಎಂದು ಹೇಳುತ್ತಿದ್ದರು ನಾರಾಯಣ ಗುರುಗಳು.
ಆದರೆ ನಾರಾಯಣ ಗುರುಗಳು ಕಟ್ಟಿದ ದೇವಸ್ಥಾನಗಳನ್ನಷ್ಟೇ ಉಳಿಸಿಕೊಂಡಿರುವ ಅವರ ಅನುಯಾಯಿಗಳು ಅವರು ಹೇಳಿಕೊಟ್ಟಿರುವ ಚಿಂತನೆಯ ಪಾಠವನ್ನು ಮರೆತುಬಿಟ್ಟಿದ್ದಾರೆ.
ಮಂಗಳೂರಿನ ಕುದ್ರೋಳಿಯಲ್ಲಿ ಅಸ್ಪೃಶ್ಯ ಬಿಲ್ಲವರಿಗಾಗಿ ನಾರಾಯಣ ಗುರುಗಳೂ ಬಂದು ಸ್ಥಾಪಿಸಿದ್ದ ದೇವಸ್ಥಾನವನ್ನು ಹತ್ತಾರು ಕೋಟಿ ರೂಪಾಯಿ ವೆಚ್ಚದಲ್ಲಿ ನವೀಕರಿಸಲಾಗಿದೆ. ಆದರೆ ಬಿಲ್ಲವರು ಧಾರ್ಮಿಕ ಪ್ರವಾಸಕ್ಕೆ ಹೋದ ರೀತಿ ಅಲ್ಲಿಗೆ ಹೋಗಿ ಕೊಂಡಾಡಿ ಸೆಲ್ಪಿ ತೆಗೆಸಿಕೊಂಡು ಬರುತ್ತಾರೆ. ಅಲ್ಲಿಂದ ಉಡುಪಿ ಮಠ, ಕಟೀಲು, ಧರ್ಮಸ್ಥಳಗಳಿಗೆ ಹೋಗಿ ತಾವು ಕಷ್ಟ ಪಟ್ಟು ದುಡಿದ ದುಡ್ಡನ್ನು ಸುರಿದು ಬರುತ್ತಾರೆ.
ಉಡುಪಿ ಮಠದ ಸ್ವಾಮಿಗಳು, ಕಟೀಲಿನ ಆಸ್ರಣ್ಣರು ಮತ್ತು ಧರ್ಮಸ್ಥಳದ ಹೆಗಡೆಯವರು ಇಲ್ಲವೆ ಅವರ ಸಮುದಾಯದವರು ಎಂದಾದರೂ ಕುದ್ರೋಳಿ ದೇವಸ್ಥಾನಕ್ಕೆ ಭಕ್ತರಂತೆ ಬಂದು ಕೈಮುಗಿದು ನಾರಾಯಣ ಗುರುಗಳಿಗೆ ನಮಿಸಿ ಹೋಗಿದ್ದಾರೆಯೇ?
ಮತ್ತೆ ಯಾಕೆ ಗಣರಾಜ್ಯೋತ್ಸವದಲ್ಲಿ ನಾರಾಯಣ ಗುರುಗಳ ಸ್ಥಬ್ದಚಿತ್ರವನ್ನು ತಿರಸ್ಕರಿಸಿದ್ದಾರೆ ಎಂದು ಗೋಳು ಹೋಯ್ಕೊಳ್ತೀರಿ? ಅವರು ನಾರಾಯಣ ಗುರುಗಳನ್ನು ಹಿಂದೆಯೂ ತಿರಸ್ಕರಿಸಿದ್ದರು, ಮುಂದೆಯೂ ತಿರಸ್ಕರಿಸುತ್ತಾರೆ. ಅವರನ್ನು ವಿರೋಧಿಸುವುದನ್ನು ಬಿಟ್ಟು ನಾರಾಯಣ ಗುರುಗಳ ಅನುಯಾಯಿಗಳು ನಿಜವಾಗಿ ತಮ್ಮನ್ನು ತಾವೇ ಪ್ರಶ್ನೆ ಮಾಡಬೇಕಾಗಿದೆ. ನಾರಾಯಣ ಗುರುಗಳನ್ನು ತಿರಸ್ಕರಿಸಿದವರನ್ನು ನಾವು ಯಾಕೆ ಪುರಸ್ಕರಿಸುತ್ತಿದ್ದೇವೆ? ಎಂದು.
ಇದಕ್ಕಾಗಿಯೇ ಕುವೆಂಪು “…ಹುಲಿಗೆ ಗುಂಡು ಹೊಡೆಯುವ ಮೊದಲು ನಿಮ್ಮ ಮೆದುಳಿಗೆ ಹೊಡೆಯಬೇಕು..” ಹೇಳಿದ್ದು.

Related Posts

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »

ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕವನಕ್ಕೆ ಒಲಿದ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ


Share         ಕರ್ನಾಟಕ ಲೇಖಕಿಯರ ಸಂಘವು 2025ನೇ ಸಾಲಿನ ವಿವಿಧ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಸ್ತಪ್ರತಿಯಲ್ಲಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ, ಅನಿತಾ ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಕ್ಕೆ 


Read More »

ಚಿಕ್ಕ ವಯಸ್ಸಿನಲ್ಲಿ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಬಾಲಕ ಸುಹಾಂಶ್‌ನ ಎಸ್ ಬಂಗೇರ ದಾಖಲೆ


Share         ದಾವಣಗೆರೆ : ನಗರದ ಶಾಂತಪ್ಪ ಪೂಜಾರಿ ಹಾಗೂ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ಇವರ ಮೊಮ್ಮಗನಾದ ಕು. ಸುಹಾಂಶ್ ಎಸ್ ಬಂಗೇರ “ಇಂಡಿಯಾ ಬುಕ್ ಆಫ್ ರೆಕಾರ್ಡ್’ನ ಸಾಧಕನಾಗಿದ್ದು, ಸರಿಸುಮಾರು 195 ರಾಷ್ಟ್ರಗಳ


Read More »

ಖೇಲೋ ಇಂಡಿಯಾ ರಾಷ್ಟ್ರೀಯ ಕರಾಟೆ ತಂಡಕ್ಕೆ ಆಯ್ಕೆಯಾದ ಕರಾಟೆ ಪಟು ಛಾಯಾ ಎಸ್. ಪೂಜಾರಿ.


Share         ಚಿನ್ನ 30 ಬೆಳ್ಳಿ 1 ಕಂಚು – ಇದು ಛಾಯಾ ಎಸ್. ಪೂಜಾರಿ ಅವರ ಒಂದು ದಶಕದ ಪರಿಶ್ರಮ ಹಾಗೂ ಸಾಧನೆಗೆ ಸಂದಿರುವ ಗೌರವದ ತುರಾಯಿ. ಉಡುಪಿ ಜಿಲ್ಲೆಯ ಹೆರ್ಗ ಕಾಂತಾ ಬೆಟ್ಟು


Read More »

ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಅವರಿಗೆ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ


Share         ನಮ್ಮ ಹೆಮ್ಮೆಯ ಕರಾವಳಿಯ ಪ್ರತಿಭೆ, ಅಂತರಾಷ್ಟ್ರೀಯ ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಸಿದ್ದಕಟ್ಟೆ ಅವರಿಗೆ ಫಸ್ಟ್ ನ್ಯೂಸ್ ವಾಹಿನಿಯ ಪ್ರತಿಷ್ಠಿತ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ ಲಭಿಸಿರುವುದು ನಾಡಿಗೆ ಸಂದ ಗೌರವ. ಗ್ರಾಮೀಣ


Read More »

ಪುತ್ತೂರು:ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿಯ ಮಾಜಿ ಅಧ್ಯಕ್ಷ ರವಿಕುಮಾರ್ ಕಲ್ಕಾರ್ ನಿಧನ


Share         ಪುತ್ತೂರು: ಶಾಂತಿಗೋಡು ಕಲ್ಕಾರ್ ನಿವಾಸಿ ರವಿಕುಮಾರ್ ಕಲ್ಕಾರ್(48ವ.)ರವರು ಫೆ.15ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಪೂಜೆ ಸಂದರ್ಭ ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿ ವತಿಯಿಂದ ನಡೆಸಲ್ಪಟ್ಟ ಕ್ರೀಡಾಕೂಟದಲ್ಲಿ ರವಿ ಕಲ್ಕಾರ್ ರವರು


Read More »