TOP STORIES:

ಅಶಕ್ತ ಕುಟುಂಬಕ್ಕೆ ಬಿರುವೆರ್ ಕುಡ್ಲದಿಂದ ರೂ: 50 ಸಾವಿರ ಆರ್ಥಿಕ ನೆರವು ಹಸ್ತಾಂತರ


ಕುದ್ರೋಳಿ:- ಫ್ರೆಂಡ್ಸ್ ಬಳ್ಳಾಲ್‍ಬಾಗ್ ಬಿರುವೆರ್ ಕುಡ್ಲ ಇದರ ವತಿಯಿಂದ ಕುಪ್ಪೆ ಪದವಿನ ಜಗದೀಶ್ ಜಯಶ್ರೀ ಅವರ ಪುತ್ರ ಎರಡುವರ್ಷದ ಶಮಿತ್ ಚಿಕಿತ್ಸೆಗಾಗಿ 50 ಸಾವಿರ ಆರ್ಥಿಕ ನೆರವನ್ನು ಬುಧವಾರ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದವಠಾರದಲ್ಲಿ ಹಸ್ತಾಂತರಿಸಲಾಯಿತು.

ಕ್ಷೇತ್ರದ ಮೊಕ್ತೇಸರ ಸಾಯೀರಾಮ್ ಅವರು ನೆರವಿನ ಚೆಕ್ ಹಸ್ತಾಂತರಿಸಿ, ಬಿರುವೆರ್ ಕುಡ್ಲ  ಸಮಾಜಮುಖೀ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಬಿರುವೆರ್ ಕುಡ್ಲ ವಕ್ತಾರ ದಿನೇಶ್ ರಾಯಿ ಅವರು ಬಿರುವೆರ್ ಕುಡ್ಲದ ಕುರಿತಾಗಿ ಮಾಹಿತಿ ನೀಡಿ,

ಬಿರುವೆರ್ ಕುಡ್ಲದ  ಸ್ಥಾಪಕಾಧ್ಯಕ್ಷ ಉದಯಪೂಜಾರಿ ಬಳ್ಳಾಲ್‍ಬಾಗ್ ನೇತೃತ್ವದಲ್ಲಿ ಅವರ ಸದಸ್ಯರ,ಸ್ನೇಹಿತರ,ದಾನಿಗಳಕೊಡುಗೆಯಿದೆ.

ನಮ್ಮ ಸಂಘಟನೆಯು ಶಾರದಾ ಹುಲಿ ವೇಷ ಕುಣಿತ, ಕುದ್ರೋಳಿ ಕ್ಷೇತ್ರದ ದಸರದಲ್ಲಿ ಭಾಗವಹಿಸುತ್ತಾ ಬಂದಿದೆ. ಹುಲಿ ವೇಷದಲ್ಲಿಬಂದ ಹಣವನ್ನು ಸೇವಾ ರೂಪದಲ್ಲಿ ಖರ್ಚು ಮಾಡುತ್ತಿದ್ದೆವು. ಕಳೆದ 8 ವರ್ಷದಿಂದ ಸಂಸ್ಥೆಯು ಬಡ ವರ್ಗದ ಸೇವೆಗಾಗಿ  5 ಕೋಟಿರೂ.ನಷ್ಟು ನೆರವಿಗೆ ವಿನಿಯೋಗಿಸಿದ್ದೇವೆ. ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶದಲ್ಲಿ ಎಲ್ಲಾ ಜಾತಿ ಧರ್ಮದ ಕುಟುಂಬಕ್ಕೆನೆರವು ನೀಡಲಾಗಿದೆ.ಬೇರೆ ಬೇರೆ ಘಟಕಗಳು ತಮ್ಮ ಕರ್ತವ್ಯ ನಿರತವಾಗಿದೆ. ಕೊರೊನಾ ಸಂದರ್ಭದಲ್ಲಿ ನೀಡಿದ ಉಚಿತವಾಗಿ  ಸೇವೆನೀಡುವ ಆಂಬುಲೆನ್ಸ್  ನಿರ್ವಹಣೆ ಮಾಡುತ್ತಿದ್ದೇವೆ.ಹೀಗೆ ನಮ್ಮಿಂದಾದ ಸೇವೆ ಸಮಾಜಕ್ಕೆ ನಿರಂತರವಾಗಿ ಮಾಡುತ್ತಾ  ಬಂದಿದ್ದೇವೆಎಂದರು.

ನೆರವು ಪಡೆದ ಕುಟುಂಬದ ಸದಸ್ಯರಾದ ಸಂಜಿತ್ ಅಚಾರ್ಯ ಮನವಿ ಮಾಡಿ,

ಪ್ರತೀ ತಿಂಗಳು 50 ಸಾವಿರ ವೆಚ್ಚ  ಬರುತ್ತಿದ್ದು,ಬಡ ಕುಟುಂಬಕ್ಕೆ ಭರಿಸಲು ಕಷ್ಟವಾಗುತ್ತಿದೆ.

ಬಿರುವೆರ್ ಕುಡ್ಲದ ನೆರವಿಗೆ ಕೃತಜ್ಞತೆ ವ್ಯಕ್ತ ಪಡಿಸುತ್ತೇವೆ.

ಇತರರೂ ಮುಂದೆ ಬಂದು ಸಹಾಯ ಮಾಡಿದರೆ ನಮಗೆ ಮಗುವಿನ ರಕ್ಷಣೆಗೆ ಸಹಾಯವಾಗುತ್ತದೆ‌ ಎಂದು ಮನವಿ ಮಾಡಿದರು.

ಪ್ರಮುಖರಾದ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್ ಬಾಗ್, ವಸಂತ ಪೂಜಾರಿ, ವೆಂಕಟೇಶ್ ಭಂಡಾರಿ,ರಾಧಕೃಷ್ಣಮುಂಬಾಯಿ ಅಧ್ಯಕ್ಷ  ರಾಕೇಶ್ ಪೂಜಾರಿ ಬಳ್ಳಾಲ್‍ಬಾಗ್,ವಿನು ಶೆಟ್ಟಿ  ತಲಪಾಡಿ,ಲತೀಶ್ ಪೂಜಾರಿ,ಕಿಶೋರ್ ಬಾಬು,ರಾಕೇಶ್ಚಿಲಿಂಬಿ,ಲೋಹಿತ್ ಗಟ್ಟಿ,ರಾಮ್‍ಪ್ರಸಾದ್ ಎಕ್ಕೂರ್,ಗಣೇಶ್ ಚಿಲಿಂಬಿ,ವಾಝಿ ಫೆರ್ನಾಂಡಿಸ್,ಪ್ರಾಣೇಶ್ ಬಂಗೇರ,ವಿಘ್ನೇಶ್  ಮತ್ತಿತರರು ಉಪಸ್ಥಿತರಿದ್ದರು.


Related Posts

ಶೈಕ್ಷಣಿಕ ಸಾಧನೆಯಲ್ಲೂ ‘ಸೇಮ್ ಟು ಸೇಮ್’: ಕುಂದಾಪುರದ ಅವಳಿ ಸಹೋದರಿಯರ SSLC ಪವಾಡ!


Share         ​ಕುಂದಾಪುರ: ಅವಳಿ ಜವಳಿ ಮಕ್ಕಳು ಅಂದಮೇಲೆ ಅವರ ರೂಪ, ಬಣ್ಣ, ನಡವಳಿಕೆ ಹಾಗೂ ಆಲೋಚನೆಗಳಲ್ಲಿ ಸಾಮ್ಯತೆ ಇರುವುದು ಸಹಜ ಸಂಗತಿ. ಆದರೆ, ಕುಂದಾಪುರದ ಈ ಇಬ್ಬರು ಸಹೋದರಿಯರು ಶೈಕ್ಷಣಿಕ ಸಾಧನೆಯಲ್ಲೂ ತಾವು ಸಂಪೂರ್ಣವಾಗಿ


Read More »

ಮಂಗಳೂರು ದಸರಾ ಇತಿಹಾಸದಲ್ಲಿ ಹೊಸ ಮೈಲಿಗಲ್ಲು – ₹67 ಕೋಟಿ ವೆಚ್ಚದ ಭೂಗತ ಕೇಬಲ್ ಯೋಜನೆಗೆ ಮಂಜೂರಾತಿ


Share         ವಿಶ್ವವಿಖ್ಯಾತ ಮಂಗಳೂರು ದಸರಾ ಮಹೋತ್ಸವದ ಮೆರವಣಿಗೆಗೆ ದಶಕಗಳಿಂದ ಎದುರಾಗಿದ್ದ ತಾಂತ್ರಿಕ ಸವಾಲಿಗೆ ಈಗ ಶಾಶ್ವತ ಪರಿಹಾರ ಸಿಕ್ಕಂತಾಗಿದೆ. ಕುದ್ರೋಳಿ ಶ್ರೀ ಗೋಕರ್ನಾಥ ಕ್ಷೇತ್ರದ ಆಡಳಿತ ಮಂಡಳಿಯ ಸುದೀರ್ಘ ಪ್ರಯತ್ನದ ಫಲವಾಗಿ, ಮೆರವಣಿಗೆ ಮಾರ್ಗದಲ್ಲಿ


Read More »

ಉಡುಪಿ ಸಿಟಿ ಬಸ್‌ ಚಾಲಕನ ಮಗಳು ಶಾಲೆಗೆ ಪ್ರಥಮ ರಾಂಕ್ – ದ್ರುತಿ ಪೂಜಾರಿ ಸಾಧನೆ…


Share         ಉಡುಪಿ: ಶ್ರಮ, ಸಂಕಲ್ಪ ಮತ್ತು ಕುಟುಂಬದ ಬೆಂಬಲ ಇದ್ದರೆ ಯಾವ ಸಾಧನೆಯೂ ಅಸಾಧ್ಯವಲ್ಲ ಎಂಬುದಕ್ಕೆ ನಗರದ ಸಿಟಿ ಬಸ್ ಚಾಲಕರ ಮಗಳು ದ್ರುತಿ ಪೂಜಾರಿ ಉತ್ತಮ ಉದಾಹರಣೆ ಆಗಿದ್ದಾಳೆ. 23/04/2026 ರಂದು ಪ್ರಕಟವಾದ


Read More »

ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ


Share         ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ ಲಭಿಸಿರುವುದು ನಮ್ಮ ಸಮಾಜಕ್ಕೆ ಹೆಮ್ಮೆಯ ಸಂಗತಿ. ಈ ಕುರಿತು ಏಪ್ರಿಲ್ 2ರಂದು ಸರಕಾರದ


Read More »

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »

ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕವನಕ್ಕೆ ಒಲಿದ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ


Share         ಕರ್ನಾಟಕ ಲೇಖಕಿಯರ ಸಂಘವು 2025ನೇ ಸಾಲಿನ ವಿವಿಧ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಸ್ತಪ್ರತಿಯಲ್ಲಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ, ಅನಿತಾ ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಕ್ಕೆ 


Read More »