TOP STORIES:

ಇಂಡಿಯನ್ ಟಾಯ್ಲೆಟ್ V/s ವೆಸ್ಟರ್ನ್ ಟಾಯ್ಲೆಟ್ ಸೀಟ್, ಆರೋಗ್ಯಕ್ಕೆ ಯಾವುದು ಬೆಸ್ಟ್?


ಬದಲಾದ ಕಾಲಕ್ಕೆ ತಕ್ಕಂತೆ ಎಲ್ಲವೂ ಬದಲಾಗುತ್ತದೆ. ಹಾಗೆಯೇ ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲಾ ಮನೆಗಳಲ್ಲಿ ವೆಸ್ಟರ್ನ್‌ ಟಾಯ್ಲೆಟ್‌ಗಳ ಬಳಕೆ ಹೆಚ್ಚುತ್ತಿದೆ. ಹಳೆಯ ಕಾಲದ ಕೆಲವೇ ಕೆಲವು ಮನೆಗಳಲ್ಲಿ ಮಾತ್ರ ಇಂಡಿಯನ್‌ ಟಾಯ್ಲೆಟ್ ಬಳಕೆಯಲ್ಲಿದೆ. ಆದ್ರೆ ಇವೆರಡರಲ್ಲೂ ಆರೋಗ್ಯಕ್ಕೆ ಯಾವ ರೀತಿಯ ಟಾಯ್ಲೆಟ್ ಬಳಸೋದು ಉತ್ತಮ ತಿಳಿಯೋಣ.

ಭಾರತೀಯ ಶೌಚಾಲಯ ಬಳಕೆಯ ಪ್ರಯೋಜನಗಳು
ಭಾರತೀಯ ಶೌಚಾಲಯ ದೇಹ (Body)ವನ್ನು ಸದೃಢವಾಗಿರಿಸುತ್ತದೆ: ಭಾರತೀಯ ಶೌಚಾಲಯಗಳಲ್ಲಿ ಕುಳಿತುಕೊಳ್ಳುವ, ಏಳುವ ಅಭ್ಯಾಸ ಪ್ರತಿದಿನದ ವ್ಯಾಯಾಮ (Exercise)ದಂತೆ ಆಗುತ್ತದೆ. ಇದು ಒಟ್ಟಾರೆ ಆರೋಗ್ಯಕ್ಕೆ (Health) ಒಳ್ಳೆಯದು. ನಮ್ಮಲ್ಲಿ ಹೆಚ್ಚಿನವರು ವ್ಯಾಯಾಮದ ಪ್ರಾಮುಖ್ಯತೆಯನ್ನು ತಿಳಿದಿದ್ದರೂ, ಅದನ್ನು ನಿರ್ಲಕ್ಷಿಸುತ್ತಾರೆ. ಭಾರತೀಯ ಟಾಯ್ಲೆಟ್‌ಗಳಲ್ಲಿ ಕುಳಿತುಕೊಳ್ಳುವುದು ಸಣ್ಣ ಮಟ್ಟಿನ ವ್ಯಾಯಾಮ ಚಟುವಟಿಕೆಯಂತೆ ಆಗುತ್ತದೆ. ಇದು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ಕೈ ಮತ್ತು ಕಾಲುಗಳಿಗೆ ಉತ್ತಮ ವ್ಯಾಯಾಮವಾಗಿದೆ ಎಂದು ಹೇಳಲಾಗುತ್ತದೆ.

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ: ಸ್ಕ್ವಾಟಿಂಗ್ ನಿಮ್ಮ ಹೊಟ್ಟೆಯನ್ನು ಹಿಂಡುತ್ತದೆ, ಇದು ಹೊಟ್ಟೆಯಲ್ಲಿರುವ ಆಹಾರವನ್ನು ಒತ್ತುವ, ಒತ್ತಡದ ಮೂಲಕ ಜೀರ್ಣಕ್ರಿಯೆಗೆ (Digestion) ಸಹಾಯ ಮಾಡುತ್ತದೆ. ಪಾಶ್ಚಿಮಾತ್ಯ ಶೈಲಿಯ ಶೌಚಾಲಯದಲ್ಲಿ ಕುಳಿತುಕೊಳ್ಳುವುದು ಹೊಟ್ಟೆಯ ಮೇಲೆ ಯಾವುದೇ ಒತ್ತಡವನ್ನು ಬೀರುವುದಿಲ್ಲ.

ಭಾರತೀಯ ಶೌಚಾಲಯಗಳು ಪರಿಸರ ಸ್ನೇಹಿ: ಪಾಶ್ಚಿಮಾತ್ಯ ಶೌಚಾಲಯಗಳಲ್ಲಿ ಟಾಯ್ಲೆಟ್ ಪೇಪರ್‌ನ್ನು ಬಳಸಬೇಕಾಗುತ್ತದೆ. ಇದು ಕಾಗದದ ವ್ಯರ್ಥಕ್ಕೆ ಕಾರಣವಾಗುತ್ತದೆ. ಭಾರತೀಯ ಶೌಚಾಲಯಗಳಲ್ಲಿ ಪೇಪರ್ ವೇಸ್ಟ್ ಆಗುವುದಿಲ್ಲ. ಭಾರತೀಯ ಶೌಚಾಲಯಗಳಿಗೆ ಹೋಲಿಸಿದರೆ ಪಾಶ್ಚಿಮಾತ್ಯ ಶೌಚಾಲಯಗಳಿಗೆ ಇನ್ನೂ ಹೆಚ್ಚಿನ ನೀರಿನ ಅಗತ್ಯವಿರುತ್ತದೆ.

ಹೊತ್ತು ಗೊತ್ತಿಲ್ಲದ ಹೊತ್ತಲ್ಲಿ ಟಾಯ್ಲೆಟ್‌ಗೆ ಹೋಗೋದು ಅನಾರೋಗ್ಯದ ಲಕ್ಷಣ!

ಭಾರತೀಯ ಶೌಚಾಲಯಗಳು ಗರ್ಭಿಣಿಯರಿಗೆ ಒಳ್ಳೆಯದು: ಭಾರತೀಯ ಶೌಚಾಲಯಗಳನ್ನು ಬಳಸುವುದು ಗರ್ಭಿಣಿಯರಿಗೆ (Pregnant) ಪ್ರಯೋಜನಕಾರಿಯಾಗಿದೆ ಏಕೆಂದರೆ ಅವುಗಳನ್ನು ಬಳಸುವಾಗ ಅವರು ಕುಳಿತುಕೊಳ್ಳಬೇಕಾಗುತ್ತದೆ. ಗರ್ಭಿಣಿ ಮಹಿಳೆ ಭಾರತೀಯ ಶೌಚಾಲಯದಲ್ಲಿ ಕುಳಿತುಕೊಳ್ಳುವಾಗ ಗರ್ಭಾಶಯದ ಮೇಲೆ ಯಾವುದೇ ಒತ್ತಡವಿಲ್ಲ. ಭಾರತೀಯ ಶೌಚಾಲಯವನ್ನು ನಿಯಮಿತವಾಗಿ ಬಳಸುವುದರಿಂದ ಗರ್ಭಿಣಿಯರು ಸುಗಮ ಮತ್ತು ನೈಸರ್ಗಿಕ ಹೆರಿಗೆಗೆ ಸಿದ್ಧರಾಗುತ್ತಾರೆ ಎಂದು ಹೇಳಲಾಗುತ್ತದೆ.

ಕರುಳಿನ ಕ್ಯಾನ್ಸರ್ ಮತ್ತು ಇತರ ಕಾಯಿಲೆಗಳನ್ನು ತಡೆಯುತ್ತದೆ: ಸ್ಕ್ವಾಟಿಂಗ್ ನಮ್ಮ ದೇಹದಲ್ಲಿನ ಕೊಲೊನ್‌ನಿಂದ ಮಲವನ್ನು ಸಂಪೂರ್ಣವಾಗಿ ಹೊರಹಾಕಲು ಸಹಾಯ ಮಾಡುತ್ತದೆ. ಇದು ಮಲಬದ್ಧತೆ, ಅಪೆಂಡಿಸೈಟಿಸ್ ಮತ್ತು ಕರುಳಿನ ಕ್ಯಾನ್ಸರ್‌ಗೆ ಕಾರಣವಾಗುವ ಇತರ ಅಂಶಗಳ ಸಾಧ್ಯತೆಗಳನ್ನು ತಡೆಯುತ್ತದೆ.

ವೆಸ್ಟರ್ನ್ ಶೌಚಾಲಯ ಬಳಕೆಯಿಂದಾಗುವ ತೊಂದರೆಗಳು
ವೆಸ್ಟರ್ನ್ ಟಾಯ್ಲೆಟ್ ಶೀಟ್ ಕೂಡ ಅನೇಕ ಪ್ರಯೋಜನಗಳನ್ನ ಹೊಂದಿದೆ. ವೆಸ್ಟರ್ನ್ ಟಾಯ್ಲೆಟ್ ವಿಶೇಷವಾಗಿ ಕಾಲುನೋವಿನ ಸಮಸ್ಯೆಯಿಂದ ಕುಳಿತುಕೊಳ್ಳಲು ಸಾಧ್ಯವಾಗದವರಿಗೆ, ಕೀಲು ನೋವಿನಿಂದ ಬಳಲುತ್ತಿರುವ ಜನರಿಗೆ ತುಂಬಾ ಆರಾಮದಾಯಕವಾಗಿದೆ. ಆದರೆ ಇದರಿಂದಾಗುವ ಅನಾನುಕೂಲಗಳು ಹೆಚ್ಚು. ವಿಪರ್ಯಾಸವೆಂದರೆ ಆರೋಗ್ಯವಂತರೂ ಇದನ್ನು ಬಳಸುತ್ತಿದ್ದಾರೆ. ಆದ್ರೆ, ವಸ್ಟರ್ನ್ ಶೌಚಾಲಯವು ಅನುಕೂಲಗಳನ್ನ ಹೊಂದಿದೆ. ಈ ಕಾರಣದಿಂದಾಗಿ, ವ್ಯಕ್ತಿಯು ಅನಾರೋಗ್ಯಕ್ಕೆ ಒಳಗಾಗುತ್ತಾನೆ. ಪಾಶ್ಚಿಮಾತ್ಯ ಶೌಚಾಲಯಕ್ಕೆ ಹೋಗುವ ಅಭ್ಯಾಸ ದೇಹದ ಸೋಂಕಿನ ಅಪಾಯವನ್ನ ಹೆಚ್ಚಿಸುತ್ತದೆ. ಇದು ಅತಿಸಾರ ಮತ್ತು ಅನೇಕ ಹೊಟ್ಟೆ ಸಮಸ್ಯೆಗಳನ್ನ ಉಂಟು ಮಾಡಬಹುದು. ಯಾಕಂದ್ರೆ, ವೆಸ್ಟರ್ನ್ ಟಾಯ್ಲೆಟ್ ಸೀಟ್ ಬಳಸುವಾಗ ಚರ್ಮ ಸಂಪರ್ಕಕ್ಕೆ ಬರುತ್ತದೆ. ಇದರಿಂದ ರೋಗಾಣುಗಳು ಸುಲಭವಾಗಿ ಹರಡಬಹುದು.


Related Posts

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »

ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕವನಕ್ಕೆ ಒಲಿದ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ


Share         ಕರ್ನಾಟಕ ಲೇಖಕಿಯರ ಸಂಘವು 2025ನೇ ಸಾಲಿನ ವಿವಿಧ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಸ್ತಪ್ರತಿಯಲ್ಲಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ, ಅನಿತಾ ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಕ್ಕೆ 


Read More »

ಚಿಕ್ಕ ವಯಸ್ಸಿನಲ್ಲಿ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಬಾಲಕ ಸುಹಾಂಶ್‌ನ ಎಸ್ ಬಂಗೇರ ದಾಖಲೆ


Share         ದಾವಣಗೆರೆ : ನಗರದ ಶಾಂತಪ್ಪ ಪೂಜಾರಿ ಹಾಗೂ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ಇವರ ಮೊಮ್ಮಗನಾದ ಕು. ಸುಹಾಂಶ್ ಎಸ್ ಬಂಗೇರ “ಇಂಡಿಯಾ ಬುಕ್ ಆಫ್ ರೆಕಾರ್ಡ್’ನ ಸಾಧಕನಾಗಿದ್ದು, ಸರಿಸುಮಾರು 195 ರಾಷ್ಟ್ರಗಳ


Read More »

ಖೇಲೋ ಇಂಡಿಯಾ ರಾಷ್ಟ್ರೀಯ ಕರಾಟೆ ತಂಡಕ್ಕೆ ಆಯ್ಕೆಯಾದ ಕರಾಟೆ ಪಟು ಛಾಯಾ ಎಸ್. ಪೂಜಾರಿ.


Share         ಚಿನ್ನ 30 ಬೆಳ್ಳಿ 1 ಕಂಚು – ಇದು ಛಾಯಾ ಎಸ್. ಪೂಜಾರಿ ಅವರ ಒಂದು ದಶಕದ ಪರಿಶ್ರಮ ಹಾಗೂ ಸಾಧನೆಗೆ ಸಂದಿರುವ ಗೌರವದ ತುರಾಯಿ. ಉಡುಪಿ ಜಿಲ್ಲೆಯ ಹೆರ್ಗ ಕಾಂತಾ ಬೆಟ್ಟು


Read More »

ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಅವರಿಗೆ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ


Share         ನಮ್ಮ ಹೆಮ್ಮೆಯ ಕರಾವಳಿಯ ಪ್ರತಿಭೆ, ಅಂತರಾಷ್ಟ್ರೀಯ ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಸಿದ್ದಕಟ್ಟೆ ಅವರಿಗೆ ಫಸ್ಟ್ ನ್ಯೂಸ್ ವಾಹಿನಿಯ ಪ್ರತಿಷ್ಠಿತ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ ಲಭಿಸಿರುವುದು ನಾಡಿಗೆ ಸಂದ ಗೌರವ. ಗ್ರಾಮೀಣ


Read More »

ಪುತ್ತೂರು:ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿಯ ಮಾಜಿ ಅಧ್ಯಕ್ಷ ರವಿಕುಮಾರ್ ಕಲ್ಕಾರ್ ನಿಧನ


Share         ಪುತ್ತೂರು: ಶಾಂತಿಗೋಡು ಕಲ್ಕಾರ್ ನಿವಾಸಿ ರವಿಕುಮಾರ್ ಕಲ್ಕಾರ್(48ವ.)ರವರು ಫೆ.15ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಪೂಜೆ ಸಂದರ್ಭ ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿ ವತಿಯಿಂದ ನಡೆಸಲ್ಪಟ್ಟ ಕ್ರೀಡಾಕೂಟದಲ್ಲಿ ರವಿ ಕಲ್ಕಾರ್ ರವರು


Read More »