TOP STORIES:

ಇನ್ನು ಮುಂದೆ ಚೀನಾಗೆ ಸರಿಸಮನಾಗಿ ಭಾರತದಿಂದಲೇ ರವಾನೆಯಾಗಲಿದೆ ಆಪಲ್‌ ಐಫೋನ್‌


ಐಫೋನ್‌ ಎಂಬ ಅಮೆರಿಕದ ಉತ್ಪನ್ನ ಜಾಗತಿಕವಾಗಿ ಪ್ರತಿಷ್ಠೆಯ ವಿಷಯವಾಗಿರುವುದು ಗೊತ್ತೇ ಇದೆ. ಇದನ್ನು ಹೆಚ್ಚಿನಪ್ರಮಾಣದಲ್ಲಿ ಚೀನಾ ತಯಾರು ಮಾಡುತ್ತದೆ. ಚೀನಾದಲ್ಲಿ ಹೆಚ್ಚಿನ ಐಫೋನ್‌ ಕಂಪನಿಗಳಿವೆ. ಭಾರತದಲ್ಲೂ ಕೂಡ ಐಫೋನ್‌ಉತ್ಪಾದನಾ ಪಾಲುದಾರ ಫಾಕ್ಸ್‌ಕಾನ್‌ ಅದನ್ನು ತಯಾರಿಸುತ್ತಿದೆ. ಆದರೆ ಇತ್ತೀಚಿನ ಬೆಳವಣಿಗೆಯೊಂದರಲ್ಲಿ ಚೀನಾದಿಂದ ಜಗತ್ತಿನಮಾರುಕಟ್ಟೆಗೆ ರವಾನೆಯಾಗುವ ಐಫೋನ್‌ ಗಳ ಸಂಖ್ಯೆಗೆ ಸರಿಸಮನಾಗಿ ಭಾರತದಲ್ಲಿ ಉತ್ಪಾದನೆಯಾದ ಐಫೋನ್‌ ಗಳನ್ನುಜಗತ್ತಿನ ಮಾರುಕಟ್ಟೆಗೆ ರವಾನಿಸುವಷ್ಟರ ಮಟ್ಟಿಗೆ ಭಾರತದ ಬೆಳೆದು ನಿಂತಿದೆ. ಹಿನ್ನೆಲೆಯಲ್ಲಿ ಜಾಗತಿಕ ಟೆಕ್‌ ದಿಗ್ಗಜ ಆಪಲ್‌ ತನ್ನ ಹೊಸ ಐಫೋನ್‌ ಆವೃತ್ತಿಯನ್ನು ಚೀನಾಗೆ ಸರಿಸಮನಾಗಿ ಭಾರತದಿಂದಲೇರವಾನಿಸಲು ಸಜ್ಜಾಗಿದೆ. . ಇದಕ್ಕೆ ಪೂರಕವೆಂಬಂತೆ ಪ್ರಮುಖ ಸೆಕ್ಯುರಿಟೀಸ್ ವಿಶ್ಲೇಷಕ, ಮಿಂಗ್ ಚಿ ಕುವೊ ಅವರು ತಮ್ಮ ಟ್ವೀಟ್ವರ್ನಲ್ಲಿಫಾಕ್ಸ್‌ಕಾನ್ ಶೀಘ್ರದಲ್ಲೇ ಚೀನಾದೊಂದಿಗೆ ಏಕಕಾಲದಲ್ಲಿ ಭಾರತದಿಂದ ಇತ್ತೀಚಿನ ಆವೃತ್ತಿಯ ಐಫೋನ್‌ಗಳನ್ನು ರವಾನಿಸಲುಪ್ರಾರಂಭಿಸಬಹುದುಎಂದಿದ್ದಾರೆ. ಮುಂದುವರೆದುಇತ್ತೀಚಿನ ಸಮೀಕ್ಷೆಯು ಭಾರತದಲ್ಲಿನ ಫಾಕ್ಸ್‌ಕಾನ್‌ನ ಐಫೋನ್ ಉತ್ಪಾದನಾಸೈಟ್ ಹೊಸ 6.1 ಐಫೋನ್ 14 ಅನ್ನು 2H22 ನಲ್ಲಿ ಮೊದಲ ಬಾರಿಗೆ ಚೀನಾದೊಂದಿಗೆ ಏಕಕಾಲದಲ್ಲಿ ಸಾಗಿಸುತ್ತದೆ ಎಂದುಸೂಚಿಸುತ್ತದೆಎಂದಿದ್ದಾರೆ.

ಕೆಲ ವರದಿಗಳ ಪ್ರಕಾರ ಆಪಲ್‌ ಕಂಪನಿಯು ಮುಂದಿನ ಪ್ರಮುಖ ಬೆಳವಣಿಗೆಯ ಚಾಲಕನಾಗಿ ಭಾರತವನ್ನು ನೋಡುತ್ತಿದ್ದು ಬೆಳವಣಿಗೆಯು ಚೈನೀಸ್ ಅಲ್ಲದ ಐಫೋನ್ ಉತ್ಪಾದನಾ ತಾಣವನ್ನು ನಿರ್ಮಿಸುವಲ್ಲಿ ಆಪಲ್‌ಗೆ ಪ್ರಮುಖ ಮೈಲಿಗಲ್ಲಾಗಿಪರಿಣಮಿಸಲಿದೆ.. ತನ್ನ ಪೂರೈಕೆಯ ಮೇಲೆ ಜಾಗತಿಕ ರಾಜಕೀಯ ಪರಿಣಾಮಗಳನ್ನು ಕಡಿಮೆ ಮಾಡಲು ಆಪಲ್‌ ಪ್ರಯತ್ನಿಸುತ್ತಿದ್ದುಮುಂದಿನ ಮಾರುಕಟ್ಟೆ ಚಾಲಕನಾಗಿ ಭಾರತವನ್ನು ಅದು ಎದುರು ನೋಡುತ್ತಿದೆ ಎಂದು ಮಿಂಗ್ ಚಿ ಕುವೊ ಕೂಡ ಟ್ವೀಟ್‌ಮಾಡಿದ್ದಾರೆ.

Apple 2017 ರಲ್ಲಿ iPhone SE ಯೊಂದಿಗೆ ಭಾರತದಲ್ಲಿ ಐಫೋನ್‌ಗಳನ್ನು ತಯಾರಿಸಲು ಪ್ರಾರಂಭಿಸಿತು. ಇದು ಪ್ರಸ್ತುತ iPhone 11, iPhone 12, ಮತ್ತು iPhone 13 ಸೇರಿದಂತೆ ಭಾರತದಲ್ಲಿ ತನ್ನ ಕೆಲವು ಅತ್ಯಾಧುನಿಕ ಐಫೋನ್‌ಗಳನ್ನು ತಯಾರಿಸುತ್ತಿದೆ. ಭಾರತದಲ್ಲಿ ಸುಮಾರು 20 ವರ್ಷಗಳ ಇತಿಹಾಸವನ್ನು ಆಪಲ್‌ ಹೊಂದಿದ್ದು 2020ರಲ್ಲಿ ಮೊದಲ ಆಪಲ್‌ ಆನ್‌ ಲೈನ್ ಸ್ಟೋರ್‌ಅನ್ನು ತೆರೆದಿದ್ದು ಮುಂದಿನ ದಿನಗಳಲ್ಲಿ ದೇಶದಲ್ಲಿ ಹೆಚ್ಚಿನ ಆನ್‌ ಲೈನ್‌ ಸ್ಟೋರ್‌ ಗಳನ್ನು ತೆರೆಯಲು ಕಂಪನಿ ಯೋಚಿಸುತ್ತದೆ ಎಂದುಕೆಲ ವರದಿಗಳು ಹೇಳಿವೆ.


Related Posts

ಸ್ವಾಮಿಗಳ ಚಿತ್ರ ಮತ್ತು ಪ್ರತಿಮೆಯ ಮುಂದೆ ರಾಜ್ಯಪಾಲರೊಂದಿಗೆ ಇರುವ ಚಿತ್ರ


Share         ಶಿವಗಿರಿ: ರಾಜ್ಯಪಾಲ ಆರ್.ವಿ. ಅರ್ಲೆಕ್ಕರ್ ಅವರು ರಾಜಭವನದ ಅತಿಥಿ ಕೊಠಡಿಯಲ್ಲಿ ಶ್ರೀ ನಾರಾಯಣ ಗುರುಗಳ ಚಿತ್ರ ಮತ್ತು ಕಂಚಿನ ಪ್ರತಿಮೆಯನ್ನು ಸ್ವಾಮಿಗಳಿಗೆ ತೋರಿಸಿದರು. ಅತಿಥಿ ಕೊಠಡಿಯನ್ನು ಪ್ರವೇಶಿಸುವಾಗ ಮೊದಲು ನೋಡುವುದು ಗುರುಗಳ ಚಿತ್ರ.


Read More »

ಕವಿ ಗವಿಸಿದ್ದ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಅನಿತಾ ಪಿ. ತಾಕೊಡೆಯವರ “ಮೇಣಕ್ಕಂಟಿದ ಬತ್ತಿ” ಕವನ ಸಂಕಲನ ಬಿಡುಗಡೆ


Share         ಅ.26: ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಅನಿತಾ ಪಿ. ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ಕವನ ಸಂಕಲನ ಬಿಡುಗಡೆ, ಪ್ರಶಸ್ತಿ ಪ್ರದಾನ,ಸಾಹಿತ್ಯ ಚರ್ಚೆ ಮುಂಬಯಿ, ಅ.23-  ಖ್ಯಾತ ಬಂಡಾಯ ಕವಿ ಗವಿಸಿದ್ದ ಎನ್. ಬಳ್ಳಾರಿ


Read More »

ಮಂಗಳೂರು: ಅಳದಂಗಡಿಯ ಶ್ರೀಮತಿ ಅನುಷಾ ಪ್ರಸಾದ್ ಪೂಜಾರಿ ಅವರಿಗೆ ಗಣಿತಶಾಸ್ತ್ರ ವಿಷಯದಲ್ಲಿ ಪಿ.ಎಚ್.ಡಿ ಪದವಿ


Share         ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಣಿಪಾಲ (Manipal Institute of Technology, Manipal) ನ ಗಣಿತಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಶ್ರೀಮತಿ ಅನುಷಾ ಎಲ್ ಅವರು ಮಂಡಿಸಿದ “A study on N-Covering


Read More »

ಬ್ರಿಟನ್ ಬಿಲ್ಲವ ಬಳಗ ಯುಕೆ ದೇಶದಲ್ಲಿ ಉತ್ಸಾಹದಿಂದ ಉದ್ಘಾಟನಾ ಸಮಾರಂಭವನ್ನು ಆಯೋಜಿಸಿದೆ.


Share         ಬ್ರಿಟನ್ ಬಿಲ್ಲವ ಬಳಗ ಯುಕೆಯ ಉದ್ಘಾಟನಾ ಸಮಾರಂಭವು ಸೆಪ್ಟೆಂಬರ್ 13 ರ ಶನಿವಾರದಂದು ಕೋವೆಂಟ್ರಿ ಹಾಲಿಡೇ ಇನ್ ಎಕ್ಸ್‌ಪ್ರೆಸ್ ಹೋಟೆಲ್‌ನಲ್ಲಿ ಸಂಘದ ಆಯ್ಕೆಯಾದ ಅಧ್ಯಕ್ಷ ಡಾ. ಪಿ.ಕೆ. ಮನೋಜ್ ಪೂಜಾರಿ ಅವರ ನೇತೃತ್ವದಲ್ಲಿ


Read More »

ಬಾರ್ಕೂರು ನಾಗರ ಮಠದ ಕ್ರೀಡಾ ಬಹು ಮುಖ ಪ್ರತಿಭೆಯ ಧನ್ವಿತಪೂಜಾರಿ ಧನ್ವಿತಪೂಜಾರಿ ಅವರಿಗೆ ಮೂರು ಪ್ರಶಸ್ತಿಗಳ ಗರಿ


Share         ಜನತಾ ಪದವಿ ಪೂರ್ವ ಕಾಲೇಜು ಹೆಮ್ಮಾಡಿ ಕಿರಿಮಂಜೇಶ್ವರ ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಕಿರಿ, ಮಂಜೇಶ್ವರ ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಉಡುಪಿ ಜಿಲ್ಲೆ ಇವರ ಆಶ್ರಯದಲ್ಲಿ  ದಿನಾಂಕ 30-08-2025 ರಂದು


Read More »

ಸತತ 216 ಗಂಟೆಗಳ ಭರತನಾಟ್ಯ ಮಾಡುವುದರ ಮೂಲಕ ಗೋಲ್ಡನ್ ಬುಕ್ ವಲ್ಡ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ಬರೆಸಿಕೊಂಡ ನವರಸಧಾರ ದೀಕ್ಷಾ. ವಿ


Share         ದೀಕ್ಷಾ ವಿ. ಅವರ ಜೀವನವು ಕಲೆಯ ತಪಸ್ಸಿನ ಜೀವಂತ ಪ್ರತೀಕವಾಗಿದೆ. ತಂದೆ ಶ್ರೀ ವಿಠಲ್ ಪೂಜಾರಿ ಮತ್ತು ತಾಯಿ ಶುಭಾ ವಿಠಲ್ ಅವರ ಮಗಳಾದ ಅವರು, ಬಾಲ್ಯದಿಂದಲೇ ಕಲೆಯ ಕಡೆ ಮನಸ್ಸು ತಿರುಗಿಸಿಕೊಂಡಿದ್ದರು.


Read More »