ಎಂಟು ವರುಷಗಳು ಸಮಾಜಕ್ಕಾಗಿ ಸೇವೆಯನ್ನು ನೀಡಿರುವ ಉದಯಣ್ಣ…..
ಇತ್ತಿಚಿನ ಚುನಾವಣೆಯ ಸಂಧರ್ಭದಲ್ಲಿ ಹಲವಾರು ಜನರ ಟೀಕೆಗೆ ಗುರುಯಾಗಿರುವ ಉದಯ ಪೂಜಾರಿ ಬಳ್ಳಾಲ್ ಬಾಗ್ ರವರಬಗೆಗಿನ ಸಣ್ಣದಾದ ಬರವಣಿಗೆ
ಬಿಲ್ಲವ ಸಮಾಜ ಇಂದು ತುಳುನಾಡಿನಲ್ಲಿ ಅತೀ ಹೆಚ್ಚು ಜನಬಲ ಹೊಂದಿರುವಂತಹ ಸಮಾಜ. ಇಂತಹ ಒಂದು ಸಮಾಜದಲ್ಲಿನಾಯಕತ್ವವಿದ್ದರೂ ಬೆಳೆಯಲು ಮಾತ್ರ ಬಹಳ ಕಷ್ಟ ಕರವಾದ ಮಾತು ಕಾರಣ ಇವರನ್ನು ತುಳಿಯಲು ಕಾಯುವ ವ್ಯಕ್ತಿಗಳುಸ್ವಜಾತಿಯಲ್ಲೇ ಹೆಚ್ಚು, ಇನ್ನು ಉದಯ ಪೂಜಾರಿಯವರು ಪ್ರಪ್ರಥಮವಾಗಿ ಬಿರುವೆರ್ ಎನ್ನುವ ಪದ ನವಯುವಕರಲ್ಲಿ ರಾರಾಜಿಸುವಂತೆ ಮಾಡಿರುವ ಚಾಣಾಕ್ಷರು. ಬಿರುವೆರ್ ಕುಡ್ಲ ಸಂಘಟನೆಯು ಬೆಳೆಯುತ್ತಿದ್ದಂತೆಯೆ ಸಂಘಟನೆಯನ್ನು ಮುರಿಯಲುಶತ ಪ್ರಯತ್ನ ಪಟ್ಟ ವಿರೋಧಿಗಳು ಇವರ ಸುತ್ತಮುತ್ತ ಇದ್ದರು ಈ ಸಂಘಟನೆಯ ಕಾರ್ಯಪ್ರಕಾರವನ್ನು ಕಂಡು ಜಾತಿ ಬೇದವಿಲ್ಲದೆಅನೇಕ ಯುವಕರು ಕೈ ಜೋಡಿಸಿ ಮುನ್ನಡೆದರು ಇಷ್ಟೇ ಅಲ್ಲದೆ ಅನೇಕ ಯುವಜನತೆ ಸಮಾಜಕ್ಕಾಗಿ ಒಂದಿಷ್ಟು ಸೇವೆ ನೀಡುವಪರಿಕಲ್ಪನೆಯನ್ನು ತೋಡಗಿಸಿಕೊಂಡರು. ಇಂದು ಬಿರುವೆರ್ ಎನ್ನುವ ಹೆಸರಲ್ಲಿ ಸಮಾಜಕ್ಕೆ ಕೋಟ್ಯಾಂತರ ಮೌಲ್ಯವನ್ನು ನೀಡಿ ಜನರಪಾಲಿಗೆ ಆಸರೆಯಾದರು ಜೀವನಕ್ಕೆ ಬೆಳಕಾದರು. ಬಿಲ್ಲವ ಸಮಾಜ ಮತ್ತೊಮ್ಮೆ ಮಾನವೀಯ ಮೌಲ್ಯ ಜಾತಿಮತವಿಲ್ಲದೆ ಸ್ನೇಹಕ್ಕೆಗೌರವಿಸುತ್ತದೆ ಎನ್ನುವುದನ್ನು ಸಾಭಿತು ಪಡಿಸಿದರು…
ಇತ್ತೀಚೆಗೆ ಹರೀಶ್ ಪೂಂಜರ ಪ್ರಚಾರಕ್ಕೆ ಇವರನ್ನು ಆಹ್ವಾನಿಸಿದಾಗ ತಕ್ಷಣವೇ ತಾವು ಮಾತಿಗೆ ಗೌರವಿಸಿ ಆಹ್ವಾನಕ್ಕೆ ಒಪ್ಪಿದರು, ತನ್ನಹೆತ್ತ ತಾಯಿ ಮನೆಯಲ್ಲಿಯೇ ವಿರೋಧವಿದ್ದರು ಈ ಆಹ್ವಾನಕ್ಕೆ ಒಪ್ಪಲು ಮೂಲ ಕಾರಣ ಈ ಹಿಂದೆ ತನ್ನ ಸಮಾಜದ ಎರಡುಹಿರಿಜೀವಗಳ ಕೋರಿಕೆಗೆ ಹಾಗು ತನ್ನ ಒಬ್ಬ ಕಾರ್ಯಕರ್ತನಿಗೆ ಹರೀಶ್ ಪೂಂಜರಿಂದ ಆದ ಸಹಾಯದ ನೆನಪಿಗಾಗಿ ಮಾಡಿದಉಪಕಾರ ವನ್ನು ಯಾವತ್ತೂ ಮರೆಯುವುದಿಲ್ಲ ಎನ್ನುವ ಋಣದಿಂದ ಹರೀಶ್ ಪೂಂಜರ ಪ್ರಚಾರಕ್ಕೆ ಬೆಂಬಲವಾಗಿ ನಿಂತರು, ಇಲ್ಲಿನಾವು ಉದಯ ಪೂಜಾರಿ ಟೀಕಿಸುವ ಮೊದಲು ಉದಯ ಪೂಜಾರಿ ಯವರು ಸಮಾಜಕ್ಕೆ ಯಾವ ಕೊಡುಗೆಯನ್ನು ನೀಡಿರುತ್ತಾರೆಎಂಬುದನ್ನು ಒಮ್ಮೆ ಸ್ಮರಿಸೋಣ. ಅಷ್ಟಕ್ಕೂ ಯಾವುದೇ ಪ್ರಚೋದನಕಾರಿ ಭಾಷಣ, ತನ್ನ ಸಮಾಜದ ವಿರುದ್ಧವಾಗಿ ಹೇಳಿಕೆ ನೀಡದೆವಯಕ್ತಿಕ ವಾಗಿ ಹರೀಶ್ ಪೂಂಜರ ಜೊತೆಗೆ ಬೆಂಬಲಿಸಿದರು.
ಈ ಹಿಂದೆ ತನ್ನ ಕಾರ್ಯಕರ್ತರು ರಾಜಕೀಯವಾಗಿ ಮುಂದೆ ಬರುತ್ತಾರೆ ಎಂದಾಗ ಅವರ ಜೊತೆಯಲ್ಲಿಯೇ ನಿಂತು ಸಹಕರಿಸಿದವರುಉದಯಣ್ಣ
ಸಂಘಟನೆಯ ಕಾರ್ಯಕರ್ತರು ತನ್ನ ಸಹೋದರನಂತೆ ಪ್ರೀತಿಸುವ ಇವರನ್ನು ಟೀಕಿಸುವ ಮೊದಲು ಯೋಚಿಸಿ
ರಾಜಕೀಯ ನಾಯಕರು ಇವತ್ತು ಬರುತ್ತಾರೆ ನಾಳೆ ಹೊಗುತ್ತಾರೆ. ಆದರೆ ಸಮಾಜದ ಪರ ನಿಂತು ಕಷ್ಟ ಎಂದಾಗ ಬರುವವರುಉದಯಣ್ಣನಂತಹ ನಾಯಕರು..!
ಕೋಟ್ಯಾಂತರ ಆಸ್ತಿಯ ಒಡಯರಿಗೆ ಯಾಕೆ ಬಡವರ ನೋವು ಕಾಣಿಸುವುದಿಲ್ಲ….?
ಹೆಮ್ಮೆ ಪಡುತ್ತೇನೆ ಉದಯಣ್ಣ ಯಾವತ್ತೂ ಈ ಸಮಾಜದ ಆಸ್ತಿ
ಇನ್ನು ಅವರ ಬಗೆಗೆ ಚರ್ಚಿಸಬೇಕಾದರೆ ಅವರ ಜೊತೆಯಲ್ಲಿ ನೇರವಾಗಿ ಚರ್ಚಿಸಬಹುದು…!
*ನಾನು ನನ್ನ ಸಂಘಟನೆಯನ್ನು ಯಾವತ್ತೂ ಗೌರವಿಸುತ್ತೇನೆ*
ಜೈ ಬಿರುವೆರ್ ಕುಡ್ಲ ಜೈ ಉದಯಣ್