TOP STORIES:

FOLLOW US

ಕಡು ಬಡತನದ ಕುಟುಂಬದಲ್ಲಿ ಹುಟ್ಟಿದ ಹುಡುಗಿ ಕರ್ನಾಟಕದ ಕೋಟ್ಯಂತರ ಜನರ ಮನ ಗೆದ್ದು, ಪ್ರಸ್ತುತ ಮುಂಬೈ ಮಹಾನಗರದ ವಾಸಿಯಾಗಿದ್ದಾರೆ..ಹರಿಣಿ ನಿಲೇಶ್ ಪೂಜಾರಿ


ಕಡು ಬಡತನದ ಕುಟುಂಬದಲ್ಲಿ ಹುಟ್ಟಿದ ಹುಡುಗಿ ಕರ್ನಾಟಕದ ಕೋಟ್ಯಂತರ ಜನರ ಮನ ಗೆದ್ದು, ಪ್ರಸ್ತುತ ಮುಂಬೈ ಮಹಾನಗರದವಾಸಿಯಾಗಿದ್ದಾರೆ.

ಹರಿಣಿ ನಿಲೇಶ್ ಪೂಜಾರಿ: ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬಜಗೋಳಿ    ಶ್ರೀ ರಘುನಾಥ್ ಸುವರ್ಣ ಮತ್ತುಶ್ರೀಮತಿ ಶೋಭಾ ದಂಪತಿಯ ಪುತ್ರಿ. ಬೆಳೆಯುವ ಸಿರಿ ಮೊಳಕೆಯಲ್ಲಿಯೇ ಎಂಬಂತೆ ಶಾಲಾ ದಿನಗಳಲ್ಲಿಯೇ ಹರಿಣಿ ಸಾಕಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಬಾಗವಹಿಸಿ ಪ್ರಶಸ್ತಿ ಪಡೆಯುತ್ತಿದ್ದರು.. ಪ್ರಾಥಮಿಕ ಶಿಕ್ಷಣವನ್ನು ಸರ್ಕಾರಿ ಶಾಲೆಯಲ್ಲಿ ಮುಗಿಸಿದಹರಿಣಿ.. 12 ನೇ ತರಗತಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ.

ಹರಿಣಿ ನಿಲೇಶ್ ಪೂಜಾರಿ: ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬಜಗೋಳಿ    ಶ್ರೀ ರಘುನಾಥ್ ಸುವರ್ಣ ಮತ್ತುಶ್ರೀಮತಿ ಶೋಭಾ ದಂಪತಿಯ ಪುತ್ರಿ. ಬೆಳೆಯುವ ಸಿರಿ ಮೊಳಕೆಯಲ್ಲಿಯೇ ಎಂಬಂತೆ ಶಾಲಾ ದಿನಗಳಲ್ಲಿಯೇ ಹರಿಣಿ ಸಾಕಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಬಾಗವಹಿಸಿ ಪ್ರಶಸ್ತಿ ಪಡೆಯುತ್ತಿದ್ದರು.. ಪ್ರಾಥಮಿಕ ಶಿಕ್ಷಣವನ್ನು ಸರ್ಕಾರಿ ಶಾಲೆಯಲ್ಲಿ ಮುಗಿಸಿದಹರಿಣಿ.. 12 ನೇ ತರಗತಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ.

ಮುಂದೆ ಆಳ್ವಾಸ್ ಕಾಲೇಜು ಮೂಡಬಿದ್ರೆಯಲ್ಲಿ M. Com ಪದವಿದರೆಯಾದ ಹರಿಣಿ  ಅಲ್ಲಿಂದ ನೇರಾ ಹೊರಟಿದ್ದು ಕಲಾಜಗತ್ತಿಗೆ.. ಆವತ್ತಿನ ನಂಬರ್ ಒನ್ ಕನ್ನಡ ಕಾಮಿಡಿ ಸೀರಿಯಲ್ ಪಂಚರಂಗಿ ಪೊಂ ಪೊಂ ಸಾವಿರ ಸಂಚಿಕೆಗಳಲ್ಲಿ ಅಭಿನಯಿಸಿದ ಕೀರ್ತಿಹರಿಣಿಗಿದೆ.. ಅಲ್ಲಿಂದ ಮುಂದೆ ಹರ ಹರ ಮಹಾದೇವ ಧಾರಾವಾಹಿಯಲ್ಲಿ ಇವರು ಮಾಡಿದ ಸರಸ್ವತಿ ದೇವಿಯ ಪಾತ್ರದಿಂದಜನಮಾನಸದಲ್ಲಿ ಹರಿಣಿ ಅಚ್ಚಳಿಯದೆ ಉಳಿದರು..ಮದುಬಾಲ, ಲಕ್ಷ್ಮಿ ಬಾರಮ್ಮ,ಮದುಮಗಳು ಹೀಗೆ ಸಾಲು ಸಾಲುಧಾರಾವಾಹಿಗಳಲ್ಲಿ ಹರಿಣಿ ಮಿಂಚಿದರು

ಕಂಚಿಲ್ದಾ ಬಾಲೆ ತುಳು ಸಿನಿಮಾದಲ್ಲಿ ಬಾಲಮಾಣಿಯಾಗಿ ಅಭಿನಯಿಸಿ ತುಳುಚಿತ್ರ ರಸಿಕರಿಗೆ ಮಾತ್ರವಲ್ಲದೆ ಆದ್ಯಾತ್ಮಿಕವಾದಿಗಳಿಗೂಹತ್ತಿರ

ವಾದರೂ.. ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಗೆ ಬಾಜನವಾದ ಅರ್ಜುನ್ ವೆಡ್ಸ್ ಅಮೃತ ತುಳು ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿಕಾಣಿಸಿಕೊಂಡರು.. ಸುವರ್ಣ ಸೂಪರ್ ಜೋಡಿ, ಡ್ರೀಮ್ ಗರ್ಲ್ಸ್ ಹೀಗೆ ಹಲವಾರು ರಿಯಾಲಿಟಿ ಶೋಗಳಲ್ಲಿ ಬಾಗವಹಿಸಿದರು..

ಬೆಸ್ಟ್ ಕಾಮಿಡಿ ಆಕ್ಟ್ರೆಸ್ಸ್, ಬೆಸ್ಟ್ ಪರ್ಫಾರ್ಮೆನ್ಸ್, ಹೀಗೆ ಹಲವಾರು ಪ್ರಶಸ್ತಿ, ಸನ್ಮಾನಗಳು ಹರಿಣಿಯನ್ನ ಹುಡುಕಿ ಬಂದವು.

ಮುಂದೆ ಬಿಲ್ಲವ ಅಸೋಸಿಯೇಷನ್ ಮುಂಬೈ ಯುವ ವಿಭಾಗದ ಕಾರ್ಯಧ್ಯಕ್ಷರಾದ ನಿಲೇಶ್ ಪೂಜಾರಿ ಪಲಿಮಾರು ಅವರಬಾಳಸಂಗಾತಿಯಾದ ಹರಿಣಿ ಸದ್ಯಕ್ಕೆ ಕಲಾಜಗತ್ತಿನಿಂದ ದೂರವಿದ್ದರೂ ಕೂಡ ಸಾಮಾಜಿಕ ಸೇವೆಯಲ್ಲಿ ತಮ್ಮನ್ನ ತಾವುನಿರಂತರವಾಗಿ ತೊಡಗಿಸಿಕೊಂಡಿದ್ದಾರೆ..ಜೊತೆಗೆ ಬರವಣಿಗೆಯಲ್ಲಿಯೂ ಹರಿಣಿ ತಮ್ಮ ಛಾಪನ್ನ ಮೂಡಿಸುವತ್ತ ಹೆಜ್ಜೆ ಇಡುತ್ತಿದ್ದಾರೆ.. ಜೆಸಿಐ ಸಂಸ್ಥೆಯ ವಾರ್ಷಿಕ ಪುಸ್ತಕ ಚೈತನ್ಯ ಸಂಪಾದಕಿಯಾಗಿಯೂ ಹರಿಣಿ ಕಾರ್ಯನಿರ್ವಾಹಿಸಿದ್ದಾರೆ. ನಿರೂಪಕಿಯಾಗಿಯೂಹರಿಣಿಯ ಹೆಸರು ಪ್ರಸಿದ್ದಿಯಾಗಿದೆ.

2018ರಲ್ಲಿ ಮಡಿಕೇರಿಯಲ್ಲಿ ಸಂಭವಿಸಿದ ನೆರೆ ಸಂದರ್ಭದಲ್ಲಿ ಮಡಿಕೇರಿಯಲ್ಲಿಸ್ವಯಂಸೇವಕಿಯಾಗಿ ಕೆಲಸ ಮಾಡಿದ ಹರಿಣಿ, ತಮ್ಮ ಮಗಳು ಸಹನಿ ಮೊದಲ ವರ್ಷದ ಹುಟ್ಟುಹಬ್ಬವನ್ನ ಮಾನಸಿಕ ಭಿನ್ನಸಾಮರ್ಥ್ಯದ ಮಕ್ಕಳ ವಿಜೇತ ವಿಶೇಷ ಶಾಲೆಯಲ್ಲಿ ಆಚರಿಸಿ ಮೆಚ್ಚುಗೆ ಪಡೆದಿದ್ದರು..

  ಸದ್ಯ ಸಹನಿ ಸ್ಟಾರ್ ಎಂಬ ಹೆಸರಿನ ಸಂಸ್ಥೆಯ ಮುಖ್ಯಸ್ತೆ ಯಾಗಿರುವ ಹರಿಣಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳಲ್ಲಿಬಾಗಿಯಾಗುವ ಇಂಗಿತಾ ಹೊಂದಿದ್ದಾರೆ..ಹಲವಾರು ಬಾರಿ ರಕ್ತದಾನ ಶಿಬಿರ ಆಯೋಜನೆ ಮಾಡಿರುವ ಹರಿಣಿ ಸ್ವತಃ 24 ಬಾರಿರಕ್ತದಾನ ಮಾಡಿ ಸಾಮಾಜಿಕ ಕಳಕಳಿ ತೋರಿದ್ದಾರೆ..

   ಹರಿಣಿ ಅವರ ಯಶಸ್ಸಿಗೆ ಸ್ಫೂರ್ತಿಯಾದ ಅಪ್ಪ, ಅಮ್ಮ ಅಣ್ಣ ಹರಿಪ್ರಸಾದ್, ತಮ್ಮ ನಿತೇಶ್ ಜೊತೆಗೆ ಗಂಡ ನಿಲೇಶ್ ಪೂಜಾರಿಫಲಿಮಾರ್ ಅವರ ಸಹಕಾರಕ್ಕೆ ಅಭಾರಿಯಾಗಿರುವ ಹರಿಣಿ ಸದ್ಯ ಕಲಾ ಜಗತ್ತಿನಿಂದ ದೂರವಿದ್ದರೂ ಅವರೂ ನವರಾತ್ರಿಸಂದರ್ಭದಲ್ಲಿ ಮಾಡಿಸಿದ ಶಾರದೆಯಾ ಫೋಟೋಶೂಟ್ ಎಲ್ಲೆಲ್ಲೂ ಮೆಚ್ಚುಗೆಗೆ ಪಾತ್ರವಾಗಿದೆ..

  ಶಾರದೆಯ ಫೋಟೋಶೂಟ್ ಗಾಗಿ 21 ದಿನ ಕಟ್ಟುನಿಟ್ಟಿನ ವೃತ ಆಚರಿಸಿದ ಹರಿಣಿಗೆ ಶಾರದೆಯ ಆಶೀರ್ವಾದ ಮಡಿಲು ಸೇರಲಿಎನ್ನುವುದು ನಮ್ಮ ಆಶಯ..

ನವೀನ್ ಪಡ್ಡು ಇನ್ನಾ

ಕಮಲ  ಕಲಾ ವೇದಿಕೆ ಮುಂಬೈ


Share:

More Posts

Category

Send Us A Message

Related Posts

‘ಕುಸಲ್ದ ಅರಸೆ’ ನವೀನ್ ಡಿ. ಪಡೀಲ್‌ಗೆ ‘ವಿಶ್ವಪ್ರಭಾ ಪುರಸ್ಕಾರ – 2025’


Share       ಉಡುಪಿ: ತುಳು ರಂಗಭೂಮಿ ಮತ್ತು ಚಲನಚಿತ್ರ ನಟ ನವೀನ್ ಡಿ ಪಡೀಲ್ ಅವರು ಸಂಸ್ಕೃತಿ ವಿಶ್ವ ಪ್ರತಿಷ್ಠಾನದಿಂದ ಕೊಡಲಾಗುವ ‘ವಿಶ್ವಪ್ರಭಾ ಪುರಸ್ಕಾರ-2025’ ಕ್ಕೆ ಆಯ್ಕೆಯಾಗಿದ್ದಾರೆ. 11 ನವೆಂಬರ್ 1969 ನವೀನ್ ಡಿ ಪಡೀಲ್


Read More »

ಆಯತಪ್ಪಿ ಕಂದಕಕ್ಕೆ ಬಿದ್ದ ಸೇನೆಯ ಟ್ರಕ್; ಉಡುಪಿ ಜಿಲ್ಲೆ ಕುಂದಾಪುರ ಬೀಜಾಡಿ ಮೂಲದ ಸೈನಿಕ ಅನೂಪ್ ಪೂಜಾರಿ ಹುತಾತ್ಮ


Share       ಕುಂದಾಪುರ: ಸೇನಾ ಟ್ರಕ್ ರಸ್ತೆಯಿಂದ ಸ್ಕಿಡ್ ಆಗಿ ಕಂದಕಕ್ಕೆ ಬಿದ್ದ ಘಟನೆ ಪೂಂಚ್ ಜಿಲ್ಲೆಯ ಮೆಂಧರ್ ಪ್ರದೇಶದ ಬಲ್ನೋಯಿ ಪ್ರದೇಶದಲ್ಲಿ ನಡೆದಿದ್ದು ಈ ಟ್ರಕ್ನಲ್ಲಿ ಚಲಿಸುತ್ತಿದ್ದ ದೇಶ ಕಾಯುವ ಯೋಧರು ಪ್ರಯಾಣಿಸುತ್ತಿದ್ದು, ಇದರಲ್ಲಿ


Read More »

ಗೆಜ್ಜೆಗಿರಿ ನೂತನ ಪಧಾಧಿಕಾರಿಗಳ ಪದಗ್ರಹಣ


Share       ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿಯ ನೂತನ ಅಧ್ಯಕ್ಷರಾದ ರವಿ ಪೂಜಾರಿ ಚಿಲಿಂಬಿ ಇವರ ನೇತೃತ್ವದ ಪಧಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಇಂದು ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಜರಗಿತು. ನೂತನ ಪಧಾಧಿಕಾರಿಗಳನ್ನು


Read More »

ನಾರಾಯಣ ಗುರುಗಳ ಗುಣಗಾನ ಮಾಡಿದ ಪೋಪ್! ವ್ಯಾಟಿಕನ್ ಸಿಟಿಯಲ್ಲಿ ಕ್ರೈಸ್ತ ಪರಮೋಚ್ಛ ಗುರುವಿನಿಂದಲೇ ‘ಬ್ರಹ್ಮಶ್ರೀ’ಗೆ’ನಮನ!


Share       బ్ర ಹ್ಮ ಶ್ರೀ ನಾರಾಯಣ ಗುರುಗಳ (Brahma Shree Narayana Guru) ಪ್ರಸ್ತುತ ಜಗತ್ತಿನಲ್ಲಿ ಬಹಳ ಪ್ರಸ್ತುತವಾಗಿವೆ ಎಂದು ಪೋಪ್‌ ಫ್ರಾನ್ಸಿಸ್ (Pope Francis) ಹೇಳಿದರು. ಪ್ರತಿಯೊಬ್ಬ ಮಾನವರೂ ಒಂದೇ ಕುಟುಂಬ ಎಂದು


Read More »

ನಗರ ಪಾಲಿಕೆ ಪ್ರತಿಪಕ್ಷದ ನಾಯಕರಾಗಿ ಅನಿಲ್ ಕುಮಾರ್ ಆಯ್ಕೆ


Share       ಮಂಗಳೂರು ಮಹಾನಗರ ಪಾಲಿಕೆಯ ಪ್ರತಿಪಕ್ಷದ ನಾಯಕರಾಗಿ ನೂತನವಾಗಿ ಆಯ್ಕೆಯಾದ ಜನಪರ ನಿಲುವಿನ ರಾಜಕೀಯ ನಾಯಕ, ಬ್ರಹ್ಮ ಶ್ರೀ ನಾರಾಯಣ ಗುರು ಧರ್ಮ ಪರಿಪಾಲನೆಯ ಪ್ರತಿಪಾದಕ, ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ


Read More »

ವಿಟ್ಲ :ಯುವವಾಹಿನಿ (ರಿ.)ವಿಟ್ಲ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ :ಅಧ್ಯಕ್ಷರಾಗಿ ಹರೀಶ್ ಪೂಜಾರಿ ಮರುವಾಳ


Share       ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಯುವವಾಹಿನಿ (ರಿ.) ವಿಟ್ಲ ಘಟಕದ 2024 /25 ನೇ ವರ್ಷದ ನೂತನ ಪದಾಧಿಕಾರಿಗಳ ಆಯ್ಕೆಯು ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನ ವಿಟ್ಲದಲ್ಲಿ ನಡೆಯಿತು. ಅಧ್ಯಕ್ಷರಾಗಿ ಹರೀಶ್ ಪೂಜಾರಿ


Read More »