ಹೊರಗೆ ಮಾತು ಜಾಸ್ತಿ.. ಹೆಂಡತಿ ಮಕ್ಕಳ ಜತೆ…?
ಕಾಂಗ್ರೆಸ್ ಮುಖಂಡ ಬಿ. ಜನಾರ್ದನ ಪೂಜಾರಿ ತುಂಬಾ ಮಾತನಾಡುತ್ತಾರೆ.’
ಕಾಂಗ್ರೆಸ್ ಪರ ಮತ್ತು ವಿರೋಧಿಗಳ ಬಾಯಲ್ಲಿ ಇದೇ ಮಾತು. ಆದರೆ ಮನೆಯಲ್ಲಿ ಇದಕ್ಕೆ ವ್ಯತಿರಿಕ್ತ. ಮಕ್ಕಳ ಬಳಿ ತಿಂಗಳುಗಟ್ಟಲೆಮಾತನಾಡದೆ ಇದ್ದದ್ದೂ ಉಂಟು!
ಅವರು ಮಗಳ ಜತೆ ಸರಿಯಾಗಿ ಮಾತನಾಡಿದ್ದು ಒಂದೇ ಬಾರಿಯಂತೆ. ಅದು ಮದುವೆಯ ಹಿಂದಿನ ದಿನ, ಭರ್ತಿ ಒಂದು ಗಂಟೆಮಾತನಾಡಿದ್ದಾರೆ. ಸೊಸೆಯಂದಿರ ಜತೆ ವರ್ಷಕ್ಕೆ ಒಮ್ಮೆ ಮಾತನಾಡಿದರೆ ಹೆಚ್ಚು. ಮಕ್ಕಳು ಬಿಡಿ ಮೊಮ್ಮಕ್ಕಳ ಜತೆಯೂಮಾತನಾಡುವುದಿಲ್ಲ.
ಖುದ್ದು ಅವರ ಕಿರಿ ಮಗ ದೀಪಕ್ ಪೂಜಾರಿ ‘ಕನ್ನಡಪ್ರಭ‘ ಜತೆ ತಂದೆಯ ಅಂತರಂಗ ತೆರೆದಿಟ್ಟ ಬಗೆ.
ತಂದೆ ಮನೆಯಲ್ಲಿ ಮಾತನಾಡುವುದೇ ಅಪರೂಪ. ಸೊಸೆಯಂದಿರ ಬಳಿ ಸರಾಸರಿ ವರ್ಷಕ್ಕೆ ಒಮ್ಮೆ ಮಾತನಾಡುತ್ತಾರೆ. ತಾಯಿ ಬಳಿಮನೆ, ಸಂಬಂಧಿಕರ ವಿಚಾರ ಮಾತನಾಡುತ್ತಾರೆ, ಆದರೆ ರಾಜಕೀಯ ಮಾತನಾಡುವುದೇ ಇಲ್ಲ‘.
‘ಪ್ರೀತಿ ಇಲ್ಲವೆಂದಲ್ಲ. ಬಾಯಿ ಬಿಟ್ಟು ಹೇಳುವುದಿಲ್ಲ. ಪ್ರೀತಿ, ವಿಶ್ವಾಸ ತಂದೆ ಮಾತಲ್ಲಿಲ್ಲ. ಆದರೆ, ಉದಾಹರಣೆ ಮೂಲಕತೋರ್ಪಡಿಸಿದ್ದಾರೆ‘ ಎನ್ನುತ್ತಾರೆ ದೀಪಕ್.
‘ಎಲ್ಲ ಕುಟುಂಬದವರು ಒಟ್ಟಾಗಿ ಕಾರ್ ನಲ್ಲಿ ವಾರದ ಕೊನೆಯಲ್ಲಿ ಸಮಾರಂಭಗಳಿಗೆ ಹೋಗುವುದು ಮಾಮೂಲು.ಆದರೆ
ಪೂಜಾರಿ ಅವರು ತಮ್ಮ ಪತ್ನಿ, ಮಕ್ಕಳ ಜತೆ ಕಾರ್ ನಲ್ಲಿ ಮದುವೆಗೆ ಹೋಗಿದ್ದಾಗಲಿ,ಹೋಟೆಲ್ಗೆ ಹೋಗಿದ್ದಾಗಲಿ ನಾವುಜೀವಮಾನದಲ್ಲಿ ನೋಡಿಲ್ಲ‘ ಎನ್ನುತ್ತಾರೆ ಪೂಜಾರಿಯವರ ನೆರೆ ಮನೆಯ ರಿಯಾಜ್.
ನನ್ನ ಎರಡನೇ ಅಣ್ಣ ತೀರಿ ಹೋದಾಗ ತಂದೆ ತುಂಬಾ ಖಿನ್ನರಾಗಿದ್ದರು. ಐದು ವರ್ಷಗಳ ಕಾಲ ದುಃಖದಿಂದ ಹೊರ ಬಂದಿರಲಿಲ್ಲ. ಮಕ್ಕಳ ಮೇಲೆ ಎಷ್ಟು ಪ್ರೀತಿ ಇದೆ ಎನ್ನುವುದು ನಮಗೆ ಆಗ ಸಂಪೂರ್ಣ ಗೊತ್ತಾಗಿತ್ತು ಎನ್ನುತ್ತಾರೆ ದೀಪಕ್.
‘ರಾಜಕೀಯ ಮನೆ ಒಳಗೆ ಬಿಡುವುದಿಲ್ಲ. ಕಾರ್ಯಕರ್ತರಿಗೂ ಸರ್ಕ್ಯುಟ್ ಹೌಸ್ಗೆ ಬರ ಹೇಳುತ್ತಾರೆ. ನಮ್ಮ ಹುದ್ದೆ, ಬಡ್ತಿ ಈ ಬಗ್ಗೆಕೇಳುವುದೇ ಇಲ್ಲ. ಇನ್ನು ಶಿಫಾರಸು ಕನಸಲ್ಲಿಯೂ ಅಸಾಧ್ಯ. ಬಹಳ ಹಿಂದೆ ನಮ್ಮ ಕಚೇರಿಯ ಸಹಾಯಕರ ಸಂಬಂಧಿಗೆ ಉದ್ಯೋಗಬೇಕಾಗಿತ್ತು. ತಂದೆ ಬಳಿ ಹೋದೆ, ಕೆಲಸ ಮಾಡಿಸಿದರು.
ಮತ್ತೊಮ್ಮೆ ಬೇರೊಬ್ಬರಿಗೆ ಉದ್ಯೋಗ ನೀಡುವಂತೆ ಕೇಳಿದಾಗ ಚೆನ್ನಾಗಿ ಬೈಯ್ದರು. ‘ನೀನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆಬಂದಿರಬಹುದು. ಆದರೆ ನಿನ್ನ ಬಳಿ ಕೆಲಸ ಮಾಡಿಸಿಕೊಳ್ಳುವವರು ದುರುಪಯೋಗ ಮಾಡಿಕೊಳ್ಳುತ್ತಾರೆ. ಇದೇ ಕೊನೆ, ಇನ್ನೊಂದುಬಾರಿ ಇಂಥ ವಿಚಾರದಲ್ಲಿ ಬರಬೇಡ‘ ಎಂದು ಗದರಿದ್ದರು. ಇದು ಜೀವನದ ಪಾಠ ನನಗೆ‘ ಎನ್ನುತ್ತಾರೆ ದೀಪಕ್
ಸೋನಿಯಾ ಚಪ್ಪಲಿ ಕಾದದ್ದು!
ಕುದ್ರೋಳಿ ದೇವಸ್ಥಾನದಲ್ಲಿ ಶತಮಾನೋತ್ಸವ ಸಂಭ್ರಮಕ್ಕೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯೇ ಬಂದಿದ್ದರು. ಸೋನಿಯಾ ಗಾಂಧಿ ಚಪ್ಪಲಿ ಮೇಲೆ ನಿಗಾ ಇರಿಸಲು ಅತ್ಯಂತ ವಿಶ್ವಾಸಿ ಒಬ್ಬನಿಗೆ ಸೂಚಿಸಿ ಎಂದು ಭದ್ರತಾ ಸಿಬ್ಬಂದಿ ಪೂಜಾರಿ ಬಳಿಹೇಳಿದರು. ಪೂಜಾರಿ ಆಚೆ ಈಚೆ ನೋಡಿದರು, ಕಾರ್ಯಕರ್ತರ, ನಾಯಕರ ಬಳಿ ಹೇಳಲು ಆಗದು, ಅವರು ಒಪ್ಪಿದರೂ ಭದ್ರತೆಸಿಬ್ಬಂದಿಗೂ ನಂಬಿಕೆ ಬಾರದು. ಯಾರಾದರೂ ಚಪ್ಪಲಿ ಅಡಿ ಬಾಂಬ್ ಇಟ್ಟರೆ. ಹೀಗಾಗಿ ತಮ್ಮ ಮಗನನ್ನೇ ಕರೆದು ಚಪ್ಪಲಿಕಾಯುವಂತೆ ಹೇಳಿದರು.
‘ನಾನು ಚಪ್ಪಲಿಯನ್ನು ಅನೇಕ ಗಂಟೆಗಳ ಕಾಲ ಕಣ್ಣಿಟ್ಟು ಕಾದೆ. ಮರುದಿನ ನನ್ನನ್ನು ಕರೆದ ತಂದೆ, ಬೇಸರ ಆಯಿತೇ‘ ಎಂದುಪ್ರಶ್ನಿಸಿದರು. ನಾನು ಸುಮ್ಮನಿದ್ದೆ. ಆದರೆ ನನಗೆ ಬೇಸರವಾಗಿರುವುದು ತಂದೆಗೆ ಅರ್ಥ ಆಗಿತ್ತು.
‘ನೋಡು ಕಾರ್ಯಕರ್ತರು, ಮುಖಂಡರಿಗೆ ಹೇಳಿದರೆ ಅವರಿಗೂ ಬೇಸರ ಆಗಬಹುದು. ತನ್ನ ಮಗ ಇರುವಾಗ ಕಾರ್ಯಕರ್ತರಿಗೆಹೇಳಿದರು ಎಂಬ ಅಪವಾದವೂ ಬರಬಹುದು. ನೀನಾದರೆ ನನ್ನ ಮಗ, ನಿನಗೆ ಪರಿಸ್ಥಿತಿ ವಿವರಿಸಬಲ್ಲೆ‘ ಎಂದರು. ಇದು ನಮ್ಮ ತಂದೆವಿಶಾಲ ಮನಸ್ಸು ಎನ್ನುತ್ತಾರೆ ದೀಪಕ್.
ಮಕ್ಕಳ ಕರೆಯೋದು ಬೆಲ್ ಮೂಲಕ!
ಎಲ್ಲರೂ ಮಕ್ಕಳನ್ನು ಮುದ್ದಿನ ಹೆಸರು ಹೇಳಿ ಕರೆಯುತ್ತಾರೆ. ಆದರೆ ಪೂಜಾರಿ ತಮ್ಮ ಮಕ್ಕಳನ್ನು ಕರೆಯಲು ಕೈ ಬೆಲ್ಮಾಡಿಸಿಕೊಂಡಿದ್ದಾರೆ. ಒಂದು ಬೆಲ್ ಮಾಡಿದರೆ ಸಾಕು ಮಕ್ಕಳು ದಡದಡನೆ ಕೆಳಗೆ ಇಳಿದು ಬಂದು ಕೈಕಟ್ಟಿ ನಿಲ್ಲುತ್ತಾರೆ. ‘ತಂದೆನಮ್ಮನ್ನು ಹೆಸರೆತ್ತಿ ಕರೆಯೋದಿಲ್ಲ. ಬೆಲ್ ಮಾಡುತ್ತಾರೆ, ತಕ್ಷಣ ನಾವು ಹೋಗುತ್ತೇವೆ‘ ಎನ್ನುತ್ತಾರೆ ದೀಪಕ್.
✍ :ಜಿತೇಂದ್ರ ಕುಂದೇಶ್ವರ