ರಾತ್ರಿ ಬೆಂಗಳೂರಿನಲ್ಲಿ ಕಾರು ಅಪಘಾತ, ಬೆಳಿಗ್ಗೆ ಮನೆಯಲ್ಲಿ ಸಾರ್ವಜನಿಕರ ಭೇಟಿಗೆ ಹಾಜರ್-ಇದು ಕೋಟಾ ಶ್ರೀನಿವಾಸ ಪೂಜಾರಿಯವರ ಪವರ್
ಇತ್ತೀಚಿಗೆ ಖ್ಯಾತ ಮಹರ್ಷಿ ಆನಂದ ಗುರೂಜಿಯವರು ಕೋಟ ಶ್ರೀನಿವಾಸ ಪೂಜಾರಿಯವರ ಬಗ್ಗೆ ಒಂದು ಮಾತು ಹೇಳಿದ್ದರು. “ಬೆಳಿಗ್ಗೆ ಎದ್ದು ಸಚಿವರ ಮನೆಯ ಮುಂದೆ ಹೋದರೆ ಅಲ್ಲಿರುವ ಜನರ ಜಂಗುಳಿಯೇ ಅವರ ಕಾರ್ಯವೈಖರಿಯನ್ನು ಸಾರುತ್ತದೆ.
ಇಂತಹ ಸಚಿವರು ಟಾರ್ಚ್ ಹಾಕಿ ಹುಡುಕಿದರೂ ಸಿಗಲ್ಲ” ಎಂದು. ಈ ಬಾರಿ ಒಂದು ಅಹಿತಕರ ಘಟನೆಯೊಂದಿಗೆ ಅದು ಮತ್ತೆ ಸಾಬೀತಾಗಿದೆ. ನಿನ್ನೆ ಬೆಂಗಳೂರಿನಲ್ಲಿ ಅವಿರತ ಸರ್ಕಾರಿ ಸಭೆಗಳನ್ನು ಮುಗಿಸಿ ಊರಿನತ್ತ ಪ್ರಯಾಣ ಬೆಳೆಸುತ್ತಿರುವ ಸಂದರ್ಭದಲ್ಲಿ ತಮ್ಮ ಕಾರು ಅಪಘಾತಕ್ಕೀಡಾಗಿತ್ತು. ಅಪಘಾತ ಎಂದಮೇಲೆ ಅಲ್ಲಿ ನಂತರ ನಡೆಯುವ ಬೆಳವಣಿಗಳು ಗೊತ್ತೇ ಇದೆ. ಪ್ರಕರಣ, ಸಮಾಧಾನ ಅದು ಇದು ಎಂದು ಕೆಲವೊಂದು ಫಾರ್ಮಲಿಟೀಸ್ ಇದೆ. ಎಲ್ಲಾ ಮುಗಿಸಿ ಬೇರೆ ಕಾರು ತರಿಸಿ ಕೋಟಾ ದ ತಮ್ಮ ಮನೆಗೆ ತಲುಪುವಾಗ ಮುಂಜಾನೆ 4 ಗಂಟೆ.
ಇಂದಿನ ದಿನಚರಿಯಲ್ಲಿ ಮನೆಯಲ್ಲಿ ಸಾರ್ವಜನಿಕ ಭೇಟಿ ಎಂದಿತ್ತು. ಬಹುಶಃ ಎಲ್ಲರೂ ಇದು ಅಸಾಧ್ಯ ಎಂದೆನಿಸಿರಬಹುದು.ಆದರೆ ಅವರು ಅದನ್ನೂ ಸಾಧಿಸಿ ತೋರಿಸಿದ್ದಾರೆ. ತಮ್ಮ ವೇಳಾಪಟ್ಟಿಯಂತೆ ಬೆಳಿಗ್ಗೆ 7 ಗಂಟೆಗೆ ಸಾರ್ವಜನಿಕರ ಭೇಟಿಗೆ ಹಾಜರಾಗಿದ್ದಾರೆ. 10 ಗಂಟೆಗೆ ಮಲಗಿ 7 ಗಂಟೆಗೆ ಏಳಲೂ ಕಷ್ಟವಾಗುವ ಈಗಿನ ಕಾಲದಲ್ಲಿ ಪ್ರತಿದಿನ ತಡರಾತ್ರಿ ಮಲಗಿ ಬೆಳಗೆದ್ದು ಸಾರ್ವಜನಿಕರ ಸಮಸ್ಯೆ ಆಲಿಸುವ ಸಚಿವರು ವಿಶೇಷವಾಗಿಯೇ ಕಾಣುತ್ತಾರೆ. ರಾಜ್ಯದಲ್ಲಿ ಅದೆಷ್ಟೇ ಸಜ್ಜನ ಸಚಿವರು ಇರಬಹುದು.
ಆದರೆ ಕೋಟ ಶ್ರೀನಿವಾಸ ಪೂಜಾರಿ ಎಲ್ಲರಿಗಿಂತಲೂ ಭಿನ್ನ ಅವರಿಗೆ ಅವರೇ ಸಾಟಿ.