ಬೆಂಗಳೂರಿನ ಅರಮನೆ ಮೈದಾನದಲ್ಲಿ ಡಿಸೆಂಬರ್ 10 ರಂದು ಸಮಾಜದ ಸಮಸ್ತ ಸ್ವಾಮಿಜಿಗಳ ಉಪಸ್ಥಿತಿಯಲ್ಲಿ ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘದ ಅಧ್ಯಕ್ಷರಾದ ಎಂ. ತಿಮ್ಮೇಗೌಡರ ಅಧ್ಯಕ್ಷತೆಯಲ್ಲಿ ಜರಗುವ ಬಿಲ್ಲವ ಈಡಿಗ ಸೇರಿ ಒಟ್ಟು 26 ಪಂಗಡಗಳ ಬೃಹತ್ ಜಾಗೃತ ಸಮಾವೇಶದ ಪೂರ್ವಭಾವಿ ಸಭೆ ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಜರಗಿತು.
ಸಮಾವೇಶದಲ್ಲಿ ಎಲ್ಲರನ್ನೂ ಸೇರಿಸಿಕೊಂಡು ಒಗ್ಗಟ್ಟಿನಿಂದ ಸಮಾಜ ಕೆಲಸ ಮಾಡಬೇಕು, ತಳಮಟ್ಟದಲ್ಲಿ ಸಂಘಟನೆಯನ್ನು ಬಲಪಡಿಸ ಬೇಕು, ಬಿಲ್ಲವ ಸಂಘ ಯುವಸಂಘಟನೆಗಳು ಬಸ್ಸಿನ ವ್ಯವಸ್ಥೆ ಮಾಡಿಕೊಂಡು ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ತೆರಳುವ ಬಗ್ಗೆ ವಿವರವಾಗಿ ಚರ್ಚಿಸಲಾಯಿತು.
ಆರ್ಯ ಈಡಿಗ ಮಹಾಸಂಸ್ಥಾನ ಇದರ ಪೀಠಾಧಿಪತಿ ಶ್ರೀ ವಿಖ್ಯಾತನಂದ ಸ್ವಾಮೀಜಿ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಸಾಯಿರಾಂ , ಕೋಶಾಧಿಕಾರಿ ಪದ್ಮರಾಜ್ ಆರ್, ಶ್ರೀ ನಾರಾಯಣ ಗುರು ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ , ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷರಾದ ರಾಜೇಶ್ ಬಿ, ಶ್ರೀ ನಾರಾಯಣ ಗುರು ಯುವ ವೇದಿಕೆಯ ಎಂ ಎಸ್ ಕೋಟ್ಯಾನ್, ಮೂರ್ತೆದಾರ ಸಂಘದ ಅಧ್ಯಕ್ಷರಾದ ಬಿರ್ವ ಸಂಜೀವ ಪೂಜಾರಿ, ಚಿತ್ತರಂಜನ್ ಆತ್ಮಶಕ್ತಿ, ತೀಯ ಸಮಾಜದ ದಿನೇಶ್ ಕುಂಪಲ,ಗೋಕರ್ಣನಾಥ ಕ್ಷೇತ್ರದ ಟ್ರಸ್ಟಿ ಎಂ ಶೇಖರ್ ಪೂಜಾರಿ, ಬೆಳ್ತಂಗಡಿ ತಾಲೂಕು ಬಿಲ್ಲವ ಸಂಘದ ಅಧ್ಯಕ್ಷರಾದ ಚಿದಾನಂದ ಪೂಜಾರಿ, ಆರ್ಯ ಈಡಿಗ ಮಹಾಸಂಸ್ಥಾನದ ಧರ್ಮ ವಿಜೀತ್, ಮೂಡಬಿದ್ರೆ ಬಿಲ್ಲವ ಸಂಘದ ಅಧ್ಯಕ್ಷರಾದ ಸುರೇಶ್ ಕೆ ಪೂಜಾರಿ, ಮಾಜಿ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ಪದ್ಮನಾಭ ಕೋಟ್ಯಾನ್,ಬಿಲ್ಲವ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ಗಂಗಾಧರ ಚೆಲ್ಯಾರ್,ಶ್ರೀ ಕ್ಷೇತ್ರ ಗೆಜ್ಜೆಗಿರಿ ಉಪಾಧ್ಯಕ್ಷ ರವಿಪೂಜಾರಿ ಚಿಲಿಂಬಿ, ಬಿಲ್ಲವ ಬ್ರಿಗೇಡ್ ಕೇಂದ್ರೀಯ ಮಂಡಳಿ ಅಧ್ಯಕ್ಷ ಸದಾನಂದ ಪೂಜಾರಿ, ಕಂಕನಾಡಿ ಬಿಲ್ಲವ ಸಂಘದ ಅಧ್ಯಕ್ಷರಾದ ದಿನೇಶ್ ಅಂಚನ್, ಉರ್ವ ಬಿಲ್ಲವ ಸಂಘದ ಅಧ್ಯಕ್ಷರಾದ ಹರಿಪ್ರಸಾದ್, ಯಶವಂತ್ ದೇರಾಜೆ ಗುತ್ತು, ಬೇಬಿ ಕುಂದರ್ ಬಂಟ್ವಾಳ ರವೀಂದ್ರ ಬಂಗೇರ ಕೊಣಾಜೆ, ಮಾಜಿ ಕಾರ್ಪೊರೇಟರ್ ಗಳಾದ ದೀಪಕ್ ಪೂಜಾರಿ, ರಾಧಾಕೃಷ್ಣ , ಮಂಗಳೂರು ವಲಯ ಉಳ್ಳಾಲ ವಲಯ, ಸುರತ್ಕಲ್ ವಲಯ, ನೀರ್ ಮಾರ್ಗ ಗುರುಪುರ ವಲಯ, ಮೂಡಬಿದ್ರೆ ವಲಯ, ಬಂಟ್ವಾಳ ವಲಯ, ಬೆಳ್ತಂಗಡಿ ವಲಯ ವಿವಿಧ ಬಿಲ್ಲವ ಸಂಘಗಳು, ಯುವಸಂಘಟನೆ ಮತ್ತು ಅದರ ಘಟಕಗಳ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.