ಮಂಗಳೂರು: ಇತ್ತೀಚಿಗೆ ಅಮ್ಮುoಜೆ ನಿವಾಸಿ ಬಡ ಟೂರಿಸ್ಟ್ ಡ್ರೈವರ್ ಜನಾರ್ದನ ಪೂಜಾರಿ ಇವರನ್ನು ನಗರದ ಪುರಭವನದ ಬಳಿಕಳ್ಳತನ ಕಾರಣಕ್ಕಾಗಿ ಕೊಲೆ ಮಾಡಲಾಯಿತು. ಇದರಿಂದ ಆಧಾರ ಕಳೆದುಕೊಂಡು ಚಿಂತಾಜನಕ ಸ್ಥಿತಿಯಲ್ಲಿ ಇರುವ ಜನಾರ್ದನಅವರ ಕುಟುಂಬಕ್ಕೆ ಹಿಂದೂ ಟೂರಿಸ್ಟ್ ಡ್ರೈವರ್ಸ್ ದ.ಕ ಚಾಲಕ ನಿರ್ವಾಹಕರ ಕಡೆಯಿಂದ 93 ಸಾವಿರಕ್ಕೂ ಹೆಚ್ಚು ಧನ ಸಹಾಯಮಾಡಿ ಕರಾವಳಿಗರು ಹೆಮ್ಮೆ ಪಡುವಂತಹ ಕೆಲಸ ಮಾಡಿದ್ದಾರೆ.
ಇಲ್ಲಿ ಗಮನಿಸ ಬೇಕಾದ ವಿಷಯ ಏನೆಂದರೆ ದಿನಕೂಲಿ ಪಡೆಯುವ ಚಾಲಕರು ತಮ್ಮ ಸವಾಲಿನ ಜೀವನದ ಮದ್ಯೆಯುಪರಿಚಯವೇ ಇಲ್ಲದ ಚಾಲಕ ವರ್ಗದ ಬಡ ಶ್ರಮಿಕನ ಕುಟುಂಬಕ್ಕೆ ನೆರವಾಗಿ ಕಾರವಳಿಗರಿಗೆ ಪ್ರೇರಣೆಯಾಗಿದ್ದಾರೆ.
ಘಟನೆ ವಿವರ::
ಏಪ್ರಿಲ್ 18 ರಂದು ಜನಾರ್ಧನ ಪೂಜಾರಿ ಮಂಗಳೂರಿನ ನೆಹರು ಮೈದಾನದ ಪುಟ್ ಬಾಲ್ ಗ್ರೌಂಡ್ ನ ಪಬ್ಲಿಕ್ ಗ್ಯಾಲರಿ ಮೇಲೆಮಲಗಿದ್ದಾಗ ನಾಲ್ಕು ಜನ ಕ್ರಿಮಿನಲ್ ಗಳ ಗುಂಪು ಇವರ ಮೇಲೆ ಕಣ್ಣಿಟ್ಟಿತ್ತು. ದರೋಡೆಗೆ ಸ್ಕೆಚ್ ಹಾಕಿ. ಖದೀಮರು ಮೊಬೈಲ್ ಮತ್ತುಹಣ ಕೊಡು, ಇಲ್ಲ ಸಾಯಿಸಿಬಿಡುತ್ತೇವೆ ಎಂದು ಧಮಕಿ ಹಾಕಿದ್ದಾರೆ. ಇದಕ್ಕೆ ಪ್ರತಿರೋದ ವ್ಯಕ್ತಪಡಿಸಿದ ಜನಾರ್ಧನ ಪೂಜಾರಿಗೆಹಿಂದಿನಿಂದ ಬಲವಾಗಿ ಹೊಡಿದಿದ್ದಾರೆ. ಬಳಿಕ ಅವರ ಬಳಿ ಇದ್ದ ಮೊಬೈಲ್ ಮತ್ತು ಹಣವನ್ನು ಕಿತ್ತುಕೊಂಡಿದ್ದಾರೆ. ಜನಾರ್ಧನಪೂಜಾರಿ ಸ್ಥಳದಲ್ಲೇ ಸಾವನ್ನಪ್ಪಿದ್ದರು.