TOP STORIES:

ಗೆಜ್ಜೆ ಗಿರಿ ಕ್ಷೇತ್ರದ ಸೇವಾ ಕಾರ್ಯಕರ್ತ ಪ್ರವೀಣ್ ನೆಟ್ಟರ್ ಅವರ ಅಂತಿಮ ನಮನ ಕಾರ್ಯದಲ್ಲಿ ಕ್ಷೇತ್ರದ ಆಡಳಿತ ಮಂಡಳಿಯ ಪಾಲ್ಗೊಂಡ ಬಗ್ಗೆ.


ಶ್ರೀ ಕ್ಷೇತ್ರಗೆಜ್ಜೆ ಗಿರಿಯ ಸೇವಕರಾಗಿ ಕ್ಷೇತ್ರದಲ್ಲಿ ಜರಗಿದ ಅಭೂತಪೂರ್ವ, ದಾಖಲೆಯ ಭಕ್ತರು ಸಂದರ್ಶಿಸಿದ್ದ ಬ್ರಹ್ಮಕಲಶೋತ್ಸವದಲ್ಲಿತನ್ನನ್ನು ತಾನು ಸಮರ್ಪಿಸಿಕೊಂಡು   ಜವಾಬ್ದಾರಿಯುತ ಕೆಲಸಗಳನ್ನು  ಅತ್ಯುತ್ತಮವಾಗಿ ತೊಡಗಿಸಿಕೊಂಡು ಸಮಾಜಮುಖಿಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದ ನಮ್ಮೆಲ್ಲರ ಆತ್ಮೀಯ ವಿ ಪ್ರವೀಣ್ ನೆಟ್ಟರ್ ರವರ ಅಗಲುವಿಕೆಯನ್ನು ನಾವು ಅರಗಿಸಿಕೊಳ್ಳಲುಸಾಧ್ಯವಿಲ್ಲ ಇಂತಹ ವ್ಯಕ್ತಿಯನ್ನು ಕಳೆದುಕೊಂಡ ನೋವು ನಮ್ಮ ಬಿಲ್ಲವ ಸಮುದಾಯದ ಯಾವೊಬ್ಬ ವ್ಯಕ್ತಿಯು ಮರೆಯಲಾಸಾಧ್ಯರಾಕ್ಷಸೀಯ ಪ್ರವೃತ್ತಿಯ ದುಷ್ಕೃತ್ಯಗಳಿಗೆ ಯಬಲಿಯಾದ ಪ್ರವೀಣ್ ನೆಟ್ಟಾರುರವರ ಅಂತಿಮ ಯಾತ್ರೆಯಲ್ಲಿ ಶ್ರೀ ಕ್ಷೇತ್ರದ  ಆಡಳಿತಸಮಿತಿಯ ಪದಾಧಿಕಾರಿಗಳು ಪ್ರಾರಂಭದಿಂದ ಕೊನೆಯವರೆಗೂ ಸಮಾಜದ ಒಂದು ಅಮೂಲ್ಯ ಮುತ್ತನ್ನು ಕಳೆದುಕೊಂಡನೋವಿನಿಂದಲೇ ಅಂತಿಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಮುದಾಯದ ವಿಧಿ ವಿಧಾನದಂತೆ ದಿವಂಗತ ಪ್ರವೀಣ್ ನೆಟ್ವರ್ ಅವರಅಂತ್ಯಕ್ರಿಯೆಯನ್ನು ನೆರವೇರಿಸಿವಲ್ಲಿ ಕ್ಷೇತ್ರದ ಗೌರವಾಧ್ಯಕ್ಷರಾದ ಜಯಂತ್ ನಡುಬೈಲ್ ಸ್ಥಳದಲ್ಲೇ ಇದ್ದು ಸೂಕ್ತ ವಾದಮಾರ್ಗದರ್ಶನ ನೀಡುತಿದ್ದರು‌. ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್ ಸೇರಿದ್ದ ಐದು ಸಾವಿರ ಕ್ಕಿಂತಲೂ ಅಧಿಕ ಪ್ರವೀಣ್ಅವರ ಆಪ್ತರು, ಸಂಘಪರಿವಾರ, ಪಕ್ಷದ ಪ್ರಮುಖರು, ಜನಪ್ರತಿನಿಧಿಗಳು, ಸಂಘಟನೆಗಳ ಮುಖಂಡರು ಕಾರ್ಯಕರ್ತರು, ಕುಟುಂಬಬಳಗ,ಅವರ ಮಿತ್ರ ವೃಂದ ಎಲ್ಲರಿಗೂ ಅಂತಿಮ ನಮನ ಸಲ್ಲಿಸಲು ಅವಕಾಶ ಕಲ್ಪಿಸಲು ಉಲ್ಲಾಸ್ ಹರಸಾಹಸ ಪಡುತಿದ್ದರು‌. ನಂತರ ಅವರ ಕುಟುಂಬಕ್ಕೂ ಆರ್ಥಿಕವಾಗಿ ಸಹಕಾರವಾಗಬೇಕು, ದುರ್ದೈವ ದಿಂದ ಕುಟುಂಬದ ದುಡಿಯುವ ಕೈಗಳೆ ಇಂದುಮರೆಯಾಗಿದೆ ಎಂದು ಪ್ರವೀಣ್ ನೆಟ್ಟಾರರವರ ಧರ್ಮ ಪತ್ನಿ ನೂತನ ಪ್ರವೀಣ್  ಯವರ ಖಾತೆಯನ್ನು ಸಾಮಾಜಿಕ ಜಾಲತಾಣದಲ್ಲಿಸಹಕಾರ ಕೋರಿ  ಹರಿಬಿಟ್ಟರು ಇದರ ಪರಿಣಾಮ ಒಂದು ಉತ್ತಮ ಮೊತ್ತ  ಸಂಗ್ರಹವಾಗಿ, ದಿವಂಗತರ ಕುಟುಂಬದ ಮುಂದಿನಜೀವನದ ನಿರ್ವಹಣೆಗೆ ಸರ್ಕಾರದ ಸಹಾಯ ಹಸ್ತವನ್ನು ಚಾಚುವ ಮಾನವೀಯ ದೃಷ್ಟಿಯಿಂದ  ಸಂದರ್ಭದಲ್ಲಿಯೋಚಿಸಿರುವುದು ಒಂದು ಉತ್ತಮ ಕೆಲಸವಾಗಿದೆ ಅಷ್ಟೇ ಅಲ್ಲದೆ ಉಸ್ತುವಾರಿ ಸಚಿವರಲ್ಲಿ ಶಾಸಕರುಗಳಲ್ಲಿ ಕುಟುಂಬಕ್ಕೆ ಹೆಚ್ಚಿನರೀತಿಯ ಸಹಕಾರವನ್ನು ಸರಕಾರದಿಂದ ನೀಡಬೇಕೆಂದು ಸಮಾಜದ ಪರವಾಗಿ ವಿನಂತಿಸಿ ಸರ್ವರ ಪ್ರೀತಿ ಚೋರ ಇಹಲೋಕತ್ಯಜಿಸಿದ ಪ್ರವೀಣ್ ಮನೆಗೆ ಮುಖ್ಯಮಂತ್ರಿಗಳು ಮತ್ತು ಗ್ರಹ ಸಚಿವರು ಭೇಟಿ ನೀಡಿ ಧೈರ್ಯ ತುಂಬ ಕೆಲಸವನ್ನು ಮಾಡಬೇಕೆಂದುಬೆಳ್ತಂಗಡಿ ಶಾಸಕರಲ್ಲಿ ಕೇಳಿಕೊಂಡರು ಜಯಂತ್ ನಡುಬೈಲ್. ಇದೆಲ್ಲವೂ ಒಬ್ಬ ಸಮಾಜದ ವ್ಯಕ್ತಿಯು ಅತ್ಯಂತ ಕಷ್ಟ ಸಂದರ್ಭದಲ್ಲಿನಮ್ಮ ಸಮಾಜದ ಶಕ್ತಿಪೀಠ ವಾದ ಶ್ರೀ ಕ್ಷೇತ್ರದ ಪದಾಧಿಕಾರಿಗಳ ಒಟ್ಟು ಸಮಾಜದ ಕಾಳಜಿಯ ಚಿಂತನೆಯ ಪ್ರತಿಫಲವಾಗಿ ಮುಖ್ಯಮಂತ್ರಿ, ಗೃಹಮಂತ್ರಿ, ರಾಷ್ಟ್ರ, ರಾಜ್ಯ, ಕೇರಳ ಬಿಜೆಪಿ ನಾಯಕರು, ಮೂರು ಸಚಿವರು ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರು, ವಿಧಾನಪರಿಷತ್ ಸದಸ್ಯರು ಮಾಜಿ ಶಾಸಕರು ಬೇರೆ ಜಿಲ್ಲೆಗಳಿಂದ ಈಡಿಗ ಸಮುದಾಯದ ಶಾಸಕರು ಜಿಲ್ಲೆಯ ಹೆಚ್ಚಿನ ಜನ ಪ್ರತಿನಿಧಿಗಳು  ಎಲ್ಲರಿಗೂ ಅಂತ್ಯಕ್ರಿಯೆ  ಮತ್ತು ದುಃಖತ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರು.ಸಮಾಜದ  ಮೆಚ್ಚಿಗೆಯಕಾರ್ಯ.ಕ್ಷೇತ್ರದ ಅಧ್ಯಕ್ಷರಾದ ಶ್ರೀ ಪಿತಾಂಬರ ಹೇರಾಜೆ, ಪದಾಧಿಕಾರಿಗಳಾದ ರವಿ ಪೂಜಾರಿ ಚಿಲಿಂಬಿ, ಮೋಹನ್ ದಾಸ್,ದೀಪಕ್ಕೋಟ್ಯಾನ್, ಕ್ಷೇತ್ರದ ಟ್ರಸ್ಟಿಗಳು ಮತ್ತು ಸಿಬ್ಬಂದಿ ವರ್ಗ ಬಿಲ್ಲವ ಸಮಾಜದ ಗಣ್ಯರು ಮೃತ ಪ್ರವೀಣ್ ಅವರ ಅಂತಿಮ ದರ್ಶನಪಡೆದು ಕಂಬನಿ ಮಿಡಿದರು. ಮುಂದಿನ ದಿನಗಳಲ್ಲಿ ನಮ್ಮ ಸಮಾಜದ ಯುವಕರು ಉತ್ತಮ ರೀತಿಯಲ್ಲಿ ಸಜ್ಜನ ಜೀವನವನ್ನುನಡೆಸಲು ಉತ್ತಮ ರೀತಿಯ ಸಲಹೆ, ಮಾರ್ಗದರ್ಶನವನ್ನ ಹಂತ ಹಂತವಾಗಿ ಸಮಾಜದ ಯುವಕರಿಗೆ ತಲುಪಿಸಿ ನಮ್ಮ ಸಮಾಜಕ್ಕೆಶ್ರೀ ಕ್ಷೇತ್ರದಿಂದ ಒಂದು ಉತ್ತಮ ಮಾರ್ಗದರ್ಶನವನ್ನು ನೀಡಬೇಕು ಇದೇ ರೀತಿ ಅನೇಕ ಸಂದರ್ಭಗಳಲ್ಲಿ ಅಸಹಾಯಕಪರಿಸ್ಥಿತಿಯಲ್ಲಿರುವ ಎಲ್ಲರಿಗೂ ಸಹಾಯ ಮಾಡುವ ಶಕ್ತಿಯನ್ನು ಯೋಚನೆಯನ್ನು ಶ್ರೀ ಕ್ಷೇತ್ರದ ಶಕ್ತಿಗಳು ಕರುಣಿಸಲಿ ಎಂದು ಕ್ಷೇತ್ರದಭಕ್ತರ ಕೋರಿಕೆ.


Related Posts

ಚಿಕ್ಕ ವಯಸ್ಸಿನಲ್ಲಿ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಬಾಲಕ ಸುಹಾಂಶ್‌ನ ಎಸ್ ಬಂಗೇರ ದಾಖಲೆ


Share         ದಾವಣಗೆರೆ : ನಗರದ ಶಾಂತಪ್ಪ ಪೂಜಾರಿ ಹಾಗೂ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ಇವರ ಮೊಮ್ಮಗನಾದ ಕು. ಸುಹಾಂಶ್ ಎಸ್ ಬಂಗೇರ “ಇಂಡಿಯಾ ಬುಕ್ ಆಫ್ ರೆಕಾರ್ಡ್’ನ ಸಾಧಕನಾಗಿದ್ದು, ಸರಿಸುಮಾರು 195 ರಾಷ್ಟ್ರಗಳ


Read More »

ಖೇಲೋ ಇಂಡಿಯಾ ರಾಷ್ಟ್ರೀಯ ಕರಾಟೆ ತಂಡಕ್ಕೆ ಆಯ್ಕೆಯಾದ ಕರಾಟೆ ಪಟು ಛಾಯಾ ಎಸ್. ಪೂಜಾರಿ.


Share         ಚಿನ್ನ 30 ಬೆಳ್ಳಿ 1 ಕಂಚು – ಇದು ಛಾಯಾ ಎಸ್. ಪೂಜಾರಿ ಅವರ ಒಂದು ದಶಕದ ಪರಿಶ್ರಮ ಹಾಗೂ ಸಾಧನೆಗೆ ಸಂದಿರುವ ಗೌರವದ ತುರಾಯಿ. ಉಡುಪಿ ಜಿಲ್ಲೆಯ ಹೆರ್ಗ ಕಾಂತಾ ಬೆಟ್ಟು


Read More »

ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಅವರಿಗೆ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ


Share         ನಮ್ಮ ಹೆಮ್ಮೆಯ ಕರಾವಳಿಯ ಪ್ರತಿಭೆ, ಅಂತರಾಷ್ಟ್ರೀಯ ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಸಿದ್ದಕಟ್ಟೆ ಅವರಿಗೆ ಫಸ್ಟ್ ನ್ಯೂಸ್ ವಾಹಿನಿಯ ಪ್ರತಿಷ್ಠಿತ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ ಲಭಿಸಿರುವುದು ನಾಡಿಗೆ ಸಂದ ಗೌರವ. ಗ್ರಾಮೀಣ


Read More »

ಪುತ್ತೂರು:ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿಯ ಮಾಜಿ ಅಧ್ಯಕ್ಷ ರವಿಕುಮಾರ್ ಕಲ್ಕಾರ್ ನಿಧನ


Share         ಪುತ್ತೂರು: ಶಾಂತಿಗೋಡು ಕಲ್ಕಾರ್ ನಿವಾಸಿ ರವಿಕುಮಾರ್ ಕಲ್ಕಾರ್(48ವ.)ರವರು ಫೆ.15ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಪೂಜೆ ಸಂದರ್ಭ ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿ ವತಿಯಿಂದ ನಡೆಸಲ್ಪಟ್ಟ ಕ್ರೀಡಾಕೂಟದಲ್ಲಿ ರವಿ ಕಲ್ಕಾರ್ ರವರು


Read More »

ಉದಯೋನ್ಮುಖ ಪ್ರತಿಭಾ ಪುರಸ್ಕಾರಕ್ಕೆ ಅಕ್ಷತಾ ಸುಧೀರ್


Share         ಮಂಗಳೂರು/ಬೆಂಗಳೂರು: ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘದ ವತಿಯಿಂದ ಆಯೋಜಿಸಲಾದ ರಾಷ್ಟ್ರೀಯ ಸಮ್ಮೇಳನದಲ್ಲಿ, ಯುವವಾಹಿನಿಯ ಬೆಂಗಳೂರು ಘಟಕದ ಹೆಮ್ಮೆಯ ಸದಸ್ಯೆಯೂ ಹಾಗೂ ಪ್ರಸಕ್ತ ಲೆಕ್ಕಪರಿಶೋಧಕರೂ ಆಗಿರುವ ಶ್ರೀಮತಿ ಅಕ್ಷತಾ ಸುಧೀರ್ ಅವರಿಗೆ ಉದಯೋನ್ಮುಖ


Read More »

ಕಲರ್ಸ್ ಕನ್ನಡ ಬಿಗ್ ಬಾಸ್ 12ರ ಸ್ಪರ್ಧಿ ಧ್ರುವಂತ್ (ಚರಿತ್ ಬಾಳಪ್ಪ ಪೂಜಾರಿ) ಜೀವನದ ಯಶೋಗಾಥೆ


Share         ಜೀವನದಲ್ಲಿ ಅದೆಷ್ಟೋ ಕಷ್ಟಗಳನ್ನು ಸಹಿಸಿಕೊಂಡು, ಅವಕಾಶಗಳಿಂದ ವಂಚಿತನಾದರೂ ಧೃತಿಗೆಡದೆ, ಸಾಧನೆಯ ಹಾದಿಯಲ್ಲಿ ಹಂತ ಹಂತವಾಗಿ ಮುನ್ನಡೆಯುತ್ತ ಇಂದು ಎಲ್ಲರ ಮನಗಳಲ್ಲಿ ಮನೆ ಮಾಡಿರುವಂತಹ ನಮ್ಮೆಲ್ಲರ ಹೆಮ್ಮೆಯ ಸಾಧಕ ಧ್ರುವಂತ್ ಇವರ ಯಶಸ್ಸಿನ ಹಿಂದಿನ


Read More »