ಪ್ರೀತೇಶ್ ಕೆ.ಸಿ ಪೂಜಾರಿ ಬಹುಷಃ ಈ ಸಾದು ಸ್ವಭಾವದ ಯುವಕನ ಹೆಸರನ್ನು ತಿಳಿದವರು ಒಂದಷ್ಟು ಮಂದಿ ಮಾತ್ರ ಇರಬಹುದು. ಅದರೆ ನಿಮ್ಮ ಗ್ಯರಿಗೂ ತಿಳಿಯದ ಸತ್ಯ ಘಟನೆಯನ್ನು ನಿಮ್ಮ ಮುಂದೆ ಇಡುವ ಸಣ್ಣ ಪ್ರಯತ್ನ ನನ್ನದು. ಪ್ರೀತೇಶ್ ಗುರುಪುರ ಕೈಕಂಬದ ನಿವಾಸಿ, ಮಾಧ್ಯಮ ವರ್ಗದ ಬಿಲ್ಲವ ಸಮಾಜಕ್ಕೆ ಸೇರಿದ ಪ್ರೀತೇಶ್ ಮೇಕ್ಕನಿಕ್ಕಲ್ ಪದವೀಧರ.
ಬಾಲ್ಯದಿಂದಲೂ ಬಿಲ್ಲವ ಸಮಾಜದ ಬಗ್ಗೆ ಎಲ್ಲಿಲ್ಲದ ಪ್ರೀತಿ. ಸಮಯ ಸಿಕ್ಕಾಗ ನಮ್ಮವರೂ ಇನ್ಯರಿಗೊ ಲೈಕ್ ಕಾಮೆಂಟ್ ಚಾಟ್ ಮಾಡುವ ಹೊತ್ತಿನಲ್ಲಿ ಪ್ರೀತೇಶ್ ಮಾತ್ರ ತಾನೇ ಕುದ್ದು ವಿಶೇಷ ಮುತುವರ್ಜಿಯನ್ನು ವಹಿಸಿ ಇಡೀ ಬಿಲ್ಲವ ಸಮಾಜದ ಹಿತ ಚಿಂತನೆ ಯನ್ನು ಇಟ್ಟುಕೊಂಡು, ಶತಮಾನ ದಶಕಗಳ ಹಿಂದೆ ನೊಂದು ಬೆಂದ ನಮ್ಮ ಹಿಂದುಳಿದ ಸಮಾಜದವರು ಎಲ್ಲ ಶೋಷಣೆ ಯನ್ನು ಮೆಟ್ಟಿ ನಿಂತವರು, ಇದರೊಂದಿಗೆ ಪ್ರಿತೇಶ್ ಅವರ ಕಲ್ಪನೆಯ ಪ್ರಕಾರ ನಮ್ಮ ಇಂದಿನ ಯುವ ಪೀಳಿಗೆ ಯವರು ಸಮಾಜ ಮುಖಿ ಮಾಡುವ ಸಾಹಸ ಸಾಧನೆ ಪುಣ್ಯದ ಕಾರ್ಯಗಳನೆಲ್ಲ ಇಡೀ ಜಿಲ್ಲೆಯಲ್ಲಿ ಪ್ರಥಥಮವಾಗಿ ತನ್ನ ಬರಹದ ಮೂಲಕವೇ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ಮುಖಾಂತರ ತಿಳಿಯ ಪಡಿಸಿದು ಪರಿಚಯಿಸಿದು ಇದೇ ಕೈಕಂಬದ ಪ್ರೀತೇಶ್ ಪೂಜಾರಿ ಎಂಬುದು ಬಹುತೇಕ ಮಂದಿಗೆ ಗೊತ್ತಿಲ್ಲ. ಬಹುಷಃ ಬಿಲ್ಲವ ಸಮಾಜದ ಬಂಧುಗಳು ನೀವೆಲ್ಲ ಅನಿಸಿರಬಹುದು ಸಾಮಾಜಿಕ ಜಾಲ ತಾಣ ದಲ್ಲಿ ಇಷ್ಟೆಲ್ಲ ಯುವ ಪ್ರತಿಭೆ ಗಳನ್ನು, ಹಿರಿಯರನ್ನು, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಸಾಹಿತ್ಯ, ಅರ್ಥೀಕ, ಕ್ರೀಡಾ, ಸಿನಿಮಾ, ರಾಜಕೀಯ, ನಮ್ಮ ದೈವ ದೇವಸ್ಥಾನದ ಬಗ್ಗೆ ಹಿರಿಯರ ಬಗ್ಗೆ ಪರಿಚಯ ಮಾಡಿಸುವವನೇ ಈ ಪ್ರೀತೇಶ್ ಪೂಜಾರಿ.ಎಲ್ಲೂ ತಾನು ಪ್ರಚಾರ ಪಡೆಯದೆ ಸದ್ದಿಲ್ಲದೇ ಸಾಮಾಜಿಕ ಜಾಲ ತಾಣ ದಲ್ಲಿ ನಮ್ಮತನ ವನ್ನು ಎತ್ತಿ ತೋರಿಸಿದು ಇದೇ ಪ್ರೀತೇಶ್. ತಾಯಿ ಪೋಳಲ್ಲಿ ರಾಜರಾಜೇಶ್ವರಿಯ ಪರಮ ಭಕ್ತ ನಾಗಿ ಆತೀ ಶ್ರಧ್ಧೆಯಿಂದ ನಾರಾಯಣ ಗುರು ಕೋಟಿ ಚೇನ್ನಯ ಕಾಂತಬಾರೆ ಬೂದಬಾರೆ ಸ್ಮರಿಸುವುದು ಅವರ ಕಾರ್ಣೀಕದ ಸ್ಧಳಗಳಿಗೆ ಬೇಟಿ ಕೊಟ್ಟು ಅಲ್ಲಿಂದ ಮಾಹಿತಿ ಸಂಗ್ರಹಿಸಿ ಇಂಚು ಇಂಚು ವಿಷಯಗಳನ್ನು ಒದಗಿಸುವುದು ಇವನ ಕಾಯಕ ಎಂದರೂ ತಪ್ಪಿಲ್ಲ. ಇವತ್ತು ನಮ್ಮವರು ಸಿನಿಮಾ ಕ್ಷೇತ್ರ, ಕ್ರೀಡೆ, ಮಾಡೆಲಿಂಗ್, ರಾಜಕೀಯ ಕ್ಷೇತ್ರ, ನಾಟಕ, ಯಕ್ಷಗಾನ, ದೈವ ದೇವರ ಪರಿಚಯ, ಹಿಂದು ಸಂಘಟನೆ ಗಳಲ್ಲಿ ಅಥವಾ ಸಂಘ ಸಂಸ್ಥೆಗಳಲ್ಲಿ ನಮ್ಮ ಬಿಲ್ಲವ ಸಂಘಟನೆಗಳು ಸೇರಿದಂತೆ ತೆರೆಮರೆಯಲ್ಲಿ ಇದ್ದು ಕೊಂಡು ನಮ್ಮ ಸಮಾಜದ ಬಂಧುಗಳು ಸಾಧಿಸಿದವರ ಕಾರ್ಯ ವನ್ನ ಸಮಾಜದಲ್ಲಿ ಮುಂದೆ ಬಂದು ಇತತರಿಗೆ ಸ್ಪೂರ್ತಿ ಆಗ ಬೇಕೆಂಬ ಏಕೈಕ ಆಸೆಯಿಂದ ಅಷ್ಟೆ ಈ ಪ್ರೀತೇಶ್ ನ ಆಸೆ ಮತ್ತು ಬಯಕೆ . ಈ ಕಾಲ ಘಟ್ಟದಲ್ಲಿ ಲಕ್ಷಾಂತರ ಮಂದಿ ದಿನಾಲು ನೋಡುವ ಸಾಮಾಜಿಕ ಜಾಲತಾಣ ದಲ್ಲಿ ಸಾಧನೆಯ ಜೊತೆ ಗೆ ಸಮಾಜಮುಖಿ ಕಾರ್ಯ ಮಾಡಿದ ನಮ್ಮ ವರ ಮುಖ ಟಿ.ವಿ ಪತ್ರಿಕೆಯಲ್ಲಿ ಬಂದರೂ ಗುರುತಿಸುವುದು ಕಷ್ಟ, ಒಮ್ಮೆ ಪ್ರೀತೇಶ್ ಲೇಖನ ಓದಿದ ಮೇಲೆ ಅಷ್ಟೇ ಅರ್ರೇ ಇವರು ನಮ್ಮ ಬಿಲ್ಲವರ ? ಎಂದು ನಮ್ಮನ್ನು ನಾವೇ ಪ್ರಶ್ನಿಸಿದಾಗ ಉತ್ತರ ಸಿಗುತ್ತೆ, ಹೌದು ಎಂದು. ದೂರದ ಊರದ ಮುಂಬೈ ದುಬೈ ಗುಜರಾತ್ ಬೆಹ್ರೆನ್ ನಂತಹ ಪ್ರದೇಶದಲ್ಲಿ ಬಿಲ್ಲವರಿದದ್ದರೂ ಅವರು ನಮ್ಮವರು ಎಂದು ಗುರುತಿಸುವುದು ಕಷ್ಟ, ಒಂದಷ್ಟು ದೂರದ ಗಣ್ಯ ವ್ಯಕ್ತಿಗಳು ಇವರು ನಮ್ಮ ಬಿಲ್ಲವ ಮಂದಿ ಎಂದು ಗುರುತಿಸಲು ಸಾಧ್ಯವಾದುದು ಪ್ರೀತೇಶ್ ನಿಂದ ಎಂದರೂ ತಪ್ಪಿಲ್ಲ. ಪ್ರೀತೇಶ್ ಗೂ ಹೀಗೆ ಮಾಹಿತಿ ನೀಡಲು ಅನೇಕ ಊರುಗಳಲ್ಲಿ ಅನೇಕ ಮಂದಿ ಇವರಿಗೆ ಸ್ನೇಹಿತರು ಇರಬಹುದು ಅವರನ್ನು ನಾನು ಅತೀವ ವಾಗಿ ಪ್ರೀತಿ ಯಿಂದ ಆಭಿನಂದಿಸುತ್ತೇನೆ ಅದು ನನ್ನ ಜವಾಬ್ದಾರಿ ಕೂಡ. ನನಗೆ ಅನಿಸಿದನ್ನು ವಿಮರ್ಶೆ ಮಾಡಿ ಚರ್ಚಿಸಿ ಈ ಪುಟ್ಟ ವಿಷಯವನ್ನು ನಿಮ್ಮ ಮುಂದು ಇಡುತ್ತಿದೇನೆ.