ತುಳು ಶಾಸನಗಳು | ತುಳುನಾಡಿನ ಚರಿತ್ರೆ ಮತ್ತು ಭಾಷೆಯ ಅಧ್ಯಯನದಲ್ಲಿ ಬಾಕಿ ಉಳಿದ ಅಧ್ಯಯನ ಮತ್ತು ನಿರ್ಲಕ್ಷಕ್ಕೆ ಒಳಪಟ್ಟಿದ್ದು ಇಲ್ಲಿಯ ತುಳು ಶಾಸನಗಳು.
ತುಳುನಾಡು ಕಂಡಂತಹ ಇತಿಹಾಸಕಾರರಾದ Dr. P. Gururaj Bhat ಅವರು ಒಂದೆರಡು ತುಳು ಶಾಸನಗಳನ್ನು ಗುರುತಿಸಿದರೂ, ಓದಿ ಪ್ರಕಟನೆ ಮಾಡಿರಲಿಲ್ಲ. Dr. K.V Ramesh ಶಾಸನ ತಜ್ಞರು ಇವರು ಕಾಸರಗೋಡಿನ ಅನಂತಪುರ ಶಾಸನವನ್ನು ಓದಿ, ಪ್ರಕಟಿಸಿ ತುಳು ಭಾಷೆಯಲ್ಲಿಯೂ ಶಾಸನ ಇರುವುದನ್ನು ತೋರಿಸಿ ಕೊಟ್ಟರು. ಹಾಗೆಯೇ ಮಾಮೇಶ್ವರ, ವಿಟ್ಲದ ಶಾಸನವನ್ನು ಕೂಡ ಅವರು ಓದಿರುವರು. ಆನಂತರದಲ್ಲಿ ಧರ್ಮಸ್ಥಳದ Dr. S R Vighnaraja Bhat ಅವರು ಪಡುಮಲೆ, ಪರಕ್ಕಿಲ, ರೆಂಜಾಳ, ಇಲಂತಿಲ ಶಾಸನ ಸಂಶೋಧನೆಯನ್ನು ಮಾಡಿದರು.
ಶಂಕರ ಕುಂಜತ್ತೂರು ಅವರು ಕಿದೂರು ಶಾಸನ ವನ್ನು ಪತ್ತೆ ಹಚ್ಚುವ ಮೂಲಕ ತುಳು ಭಾಷೆಯಲ್ಲಿ ಶಾಸನಗಳು ಇನ್ನೂ ಸಿಗಬಹುದು ಎಂಬ ಭರವಸೆಯೊಂದಿಗೆ ಇನ್ನೊಂದಷ್ಟು ಶಾಸನಗಳು ಪತ್ತೆಯಾದವು. 2014 ರಿಂದ ಗುರುಗಳಾದ ಎಸ್ ಎ ಕೃಷ್ಣಯ್ಯ, Dr. ರಾಧಾಕೃಷ್ಣ ಬೆಳ್ಳೂರು ಮತ್ತು ನಾನು ತಂಡವಾಗಿಯೂ, ವಯಕ್ತಿಕ ವಾಗಿಯೂ ತುಳು ಶಾಸನಗಳನ್ನು ದಾಖಲೀಕರಣ ಆರಂಭಿಸಿದೆವು. ಇಂದಿಗೆ ಸುಮಾರು 27 ತುಳು ಭಾಷೆ ಶಾಸನಗಳು ಪತ್ತೆಯಾಗಿದ್ದು, ಇವುಗಳ ಕಾಲಮಾನ ಸುಮಾರು 11 ರಿಂದ 16 ನೆ ಶತಮಾನ.
ಎಲ್ಲಾ ಶಾಸನಗಳ ಛಾಯಾಚಿತ್ರವನ್ನು, ಶಾಸನಕ್ಕೆ ಸಂಬಂಧಪಟ್ಟ ಲಿಪಿಯನ್ನು ಈ ಗ್ರಂಥದಲ್ಲಿ ನೀಡಲಾಗಿದೆ. ಪ್ರಸಾರಾಂಗ, ಮಂಗಳೂರು ವಿಶ್ವ ವಿದ್ಯಾಲಯ ಈ ಪುಸ್ತಕವನ್ನು ಪ್ರಕಟ ಮಾಡಿದೆ, ಸುಂದರವಾದ ಮುಖಪುಟವನ್ನು ಆಕೃತಿ ಪ್ರಿಂಟರ್ಸ್ ನ ಕಲ್ಲೂರು ನಾಗೇಶ್ ಅವರು ಮಾಡಿದ್ದಾರೆ. ಸಿಂಧು ಮುದ್ರಣ ಮಂಗಳೂರು ಪುಸ್ತಕವನ್ನು ಅಚ್ಚುಕಟ್ಟಾಗಿ ಮುದ್ರಿಸಿದ್ದಾರೆ.
ಧನ್ಯವಾದಗಳು.
Inputs: Beauty of Tulunad