TOP STORIES:

ತುಳು ಸತ್ಯ ಅನಾವರಣದ ಮಹಾಶಕ್ತಿ ಡಾ. ವೆಂಕಟರಾಜ ಪುಣಿಂಚಿತ್ತಾಯ!


ತುಳುವರಿಗೆ ಕುವೆಂಪು, ದ. ರಾ. ಬೇಂದ್ರೆ, ಮಾಸ್ತಿ ಇಂತಹ ಕನ್ನಡ ಕವಿಗಳ ಹೆಸರು ಚಿರಪರಿಚಿತ. ಆಗಾಗ ಅವರ ಕವಿತೆಗಳನ್ನು, ಸಾಹಿತ್ಯಗಳನ್ನು ಓದಿ ಖುಷಿ ಪಡುತ್ತೇವೆ. ಅದರೆ ತುಳು ಕವಿಗಳ ಬಗ್ಗೆ ಕೇಳಿದರೆ ಮಾತ್ರ ಯಾಕೋ ಮುಖ ಮುಖ ನೋಡುತ್ತೇವೆ.

ಯಾರೊಬ್ಬರ ಪರಿಚಯವೂ ನಮಗಿಲ್ಲ. ಅವರ ಬರಹಗಳು ಕವಿತೆಗಳನ್ನಂತೂ ನೋಡಿಯೇ ಇರಲಿಕ್ಕಿಲ್ಲ. ಅನೇಕ ಕವಿಗಳು ಅಥವಾ ಸಾಹಿತಿಗಳು ತುಳು ಭಾಷೆಯಲ್ಲಿ ತುಳು ಭಾಷೆಗಾಗಿ ಅನರ್ಘ್ಯ ಸೇವೆ ಸಲ್ಲಿಸಿದ್ದಾರೆ. ಅಂಥವರಲ್ಲೇ ಒಬ್ಬರು ಡಾ. ವೆಂಕಟರಾಜ ಪುಣಿಚಿತ್ತಾಯ!

ಪುಣಿಚಿತ್ತಾಯರು ಸಾಹಿತಿ ಮಾತ್ರವಲ್ಲ ಸಂಶೋಧಕರು. ತುಳು ಸಾಹಿತ್ಯ ಸಂಶೋಧನೆಯಲ್ಲಿ ಅಗಾಧ ಸಾಧನೆ ಮಾಡಿರುವ ಪುಣಿಂಚಿತ್ತಾಯರು ತುಳುವಿನಲ್ಲಿ ಶಿಷ್ಟ ಸಾಹಿತ್ಯ ಪರಂಪರೆಯೇ ಇರಲಿಲ್ಲ ಎಂಬ ವಾದವನ್ನು ಅಲ್ಲಗಳೆದು 4 ಅತಿ ಪ್ರಾಚೀನ ತಾಡವಾಲೆ ಗ್ರಂಥಗಳನ್ನು ಪತ್ತೆಹಚ್ಚಿ ಅವುಗಳನ್ನು ಕನ್ನಡಕ್ಕೆ ಲಿಪ್ಯಂತರಗೊಳಿಸಿ ವಿಸ್ತಾರವಾದ ಪೀಠಿಕೆ, ಅಡಿಟಿಪ್ಪಣಿ, ಅರ್ಥ ಕೋಶಗಳೊಂದಿಗೆ ಸಂಪಾದಿಸುವ ಮೂಲಕ ತುಳು ಭಾಷೆಗೆ ಭಾರತದ ಇತರ 20 ಭಾಷೆಗಳ ಸಾಲಿನಲ್ಲಿ ಸಮಾನ ಸ್ಥಾನವನ್ನು ದೊರಕಿಸಿಕೊಟ್ಟ ಶ್ರೇಯಸ್ಸು ಹೊಂದಿದ್ದಾರೆ. ಶ್ರೀ ಭಾಗವತೊ, ಕಾವೇರಿ, ದೇವಿ ಮಹಾತ್ಮೆ, ತುಳು ಮಹಾಭಾರತೋ ಈ ಪ್ರಾಚೀನ ತುಳು ಗ್ರಂಥಗಳಾಗಿವೆ. ಹೆಂಗಸರ ಬಾಯಿಯಿಂದ ಕೇಳಿದ ತುಳು ಹಾಡುಗಳ ಬೆನ್ನು ಹತ್ತಿ ಹೋಗಿ ತುಳುವಿಗೂ ಲಿಪಿ ಇದೆ ಎಂದು ತೋರಿಸಿದ ಡಾ. ವೆಂಕಟರಾಜ ಪುಣಿಂಚಿತ್ತಾಯರ ಸಾಧನೆ ತುಳುನಾಡು ಯಾವತ್ತೂ ಮರೆಯಲಾಗದ್ದು.

ಎಲ್ಲ ದ್ರಾವಿಡ ಭಾಷೆಗಳಂತೆ ಸಂಶೋಧನೆಯ ಶಾಸ್ತ್ರೀಯ ಚೌಕಟ್ಟಿನಲ್ಲಿ ತುಳುವಿನ ಬಗ್ಗೆ ಮೊದಲು ಆಸಕ್ತಿ ತೋರಿಸಿದ್ದು ಇಂಗ್ಲಿಷರು. ಆದರೆ, ತುಳುವಿನ ಮೂಲದ ಜಾಡು ಹುಡುಕಿ ಹೊರಟವರು ಪುಣಿಂಚಿತ್ತಾಯರು.

ಅವರನ್ನು ಸಂಶೋಧಕರನ್ನಾಗಿಸಿದ್ದು ಹೊರಗಿನದ್ದಲ್ಲ, ಒಳಗಿನ ಒತ್ತಡ. ಗದ್ದೆಯಲ್ಲಿ ಕಾಯಕ ನಡೆಸುತ್ತಿದ್ದ ಹತ್ತಾರು ಹೆಂಗಸರ ಬಾಯಿಯಿಂದ ಕೇಳಿದ ತುಳು ಹಾಡುಗಳು ಅವರಲ್ಲಿ ಮೂಡಿಸಿದ ಆಸಕ್ತಿ ‘ಶ್ರೀ ಭಾಗವತೋ’ದಂಥ ಪ್ರಾಚೀನ ತುಳು ಕಾವ್ಯದ ಹುಡುಕಾಟ ಸತತ ಸಂಶೋಧನ ಕಾಯಕದ ವರೆಗೆ ತಂದು ನಿಲ್ಲಿಸಿತು.

ಸಂಶೋಧನೆ ಸ್ವಭಾವವನ್ನು ಮೂಲಭೂತವಾಗಿಯೇ ಹೊಂದಿದ್ದ ಪುಣಿಂಚಿತ್ತಾಯರನ್ನು ಪಂಚ ದ್ರಾವಿಡ ಭಾಷೆಗಳ ಪೆಕಿ ತುಳುವನ್ನು ಉಳಿದು ಮಿಕ್ಕ 4ಕ್ಕೂ ಲಿಪಿಯಿದೆ. ಹಾಗಿದ್ದರೆ ತುಳುವಿಗೂ ಲಿಪಿ ಇದ್ದಿರಲೇಬೇಕು ಎಂಬ ಜಿಜ್ಞಾಸೆ ಕಾಡುತ್ತಲೇ ಇತ್ತು. ಪುಣಿಂಚಿತ್ತಾಯರು ಒಮ್ಮೆ ಮಧೂರಿನ ಶಿವನಾರಾಯಣ ಸರಳಾಯ ಅವರ ನಿವಾಸಕ್ಕೆ ತೆರಳಿದ್ದ ವೇಳೆ ಮಾತಿನ ನಡುವೆ ಸರಳಾಯರು ತಂದು ತೋರಿದ ತಾಡವಾಲೆ ಗ್ರಂಥವೇ ಹೊಸ ಅಧ್ಯಾಯ ಬರೆಯಿತು. ಆ ಕೃತಿ ತುಳು ಮಹಾಕಾವ್ಯ ‘ಶ್ರೀಭಾಗವತೋ’.

16ನೇ ಶತಮಾನದ ಅಂದಾಜಿನಲ್ಲಿ ಕವಿ ವಿಷ್ಣುತುಂಗ ಈ ಕತಿ ರಚಿಸಿದ್ದರು. ಇದರ ಜಾಡು ಹಿಡಿದು ಹೋದ ವರು ಕೋಯಿಕೋಡ್ ವಿವಿ ಸಂಸ್ಕೃತ ಗ್ರಂಥಾಲಯದಲ್ಲಿ ಅನಾಥವಾಗಿದ್ದ ತುಳು ಕಾವ್ಯ ‘ಕಾವೇರಿ’ಯನ್ನು ಪತ್ತೆ ಹಚ್ಚಿದರು. ನಂತರ ದೇವಿ ಮಹಾತ್ಮೆ, ನಾಟಿ ವೆದ್ಯ ಪದ್ಧತಿಯ ಚರ್ಚೆಗಳಿರುವ ಗ್ರಂಥವೊಂದನ್ನೂ ಹುಡುಕಿದರು.

ತುಳು ಪಾಡ್ದನಗಳನ್ನು ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸಿದ್ದು ತುಳು ಜಾನಪದ ಲೋಕದಲ್ಲಿ ಅಜರಾಮರರನ್ನಾಗಿಸಿದೆ.

Inputs: Beauty of Tulunadu


Related Posts

ಬಹರೖನ್ ನ ಕಸ್ತೂರಿ ಕನ್ನಡ ಎಫ್.ಎಂ ರೇಡಿಯೋ ಆರ್.ಜೆ ಕಮಲಾಕ್ಷ ಅಮೀನ್ ಅವರಿಗೆ ಗೋಲ್ಡನ್ ಐಕಾನಿಕ್ ಅವಾರ್ಡ್


Share         ಮಂಗಳೂರು: ಬಹರೖನ್ ನ ಕಸ್ತೂರಿ ಕನ್ನಡ ಎಫ್.ಎಂ ರೇಡಿಯೋ ಆರ್.ಜೆ ಕಮಲಾಕ್ಷ ಅಮೀನ್ ಅವರನ್ನು ಮಂಗಳೂರಿನಲ್ಲಿ ಗೋಲ್ಡನ್ ಐಕಾನಿಕ್ ಅವಾರ್ಡ್ ಗೌರವ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಹೋಟೆಲ್ ಓಷನ್ ಪರ್ಲ್ ನಲ್ಲಿ ನಡೆದ


Read More »

ಪೂಜಾರಿ ಎಂದು ಗುರುತಿಸಿಕೊಂಡಿರುವವರು ಜನಗಣತಿಯಲ್ಲಿ ಕಡ್ಡಾಯವಾಗಿ ಬಿಲ್ಲವ ಎಂದು ನಮೂದಿಸಿ ಡಾ. ರಾಜಶೇಖರ್ ಕೋಟ್ಯಾನ್


Share         ಮಂಗಳೂರು ಅಗಸ್ಟ್ 18: ಅನೇಕ ಕಡೆ ದೇವಸ್ಥಾನದಲ್ಲಿ ಪೂಜೆ ಮಾಡುವವರೂ ಪೂಜಾರಿ ಎಂದು ಗುರುತಿಸಿಕೊಂಡಿರುವುದರಿಂದ ಈ ಸಲದ ಜನಗಣತಿಯಲ್ಲಿ ನಾವು ʻಜಾತಿ’ ಎಂಬ ಕಾಲಂನಲ್ಲಿ ಕಡ್ಡಾಯವಾಗಿ ʻಬಿಲ್ಲವ’ ಎಂದೇ ನಮೂದಿಸಬೇಕು ಎಂದು ಬಿಲ್ಲವ


Read More »

ಬಿಲ್ಲವ ಸಮಾಜದ ಹೆಮ್ಮೆಯ ಕಣ್ಮಣಿ ಪ್ರಾಮಾಣಿಕ ಪೊಲೀಸ್ ಅಧಿಕಾರಿ ಶಾಂತಾರಾಮ್ ಕುಂದರ್


Share         ಬಿಲ್ಲವ ಸಮಾಜದ  ಹೆಮ್ಮೆಯ ಕಣ್ಮಣಿ ದಕ್ಷ, ಧೈರ್ಯ ಪ್ರಾಮಾಣಿಕ ಪೊಲೀಸ್ ಅಧಿಕಾರಿ ನಮ್ಮವರಾಧ ಪೊಲೀಸ್ ಇನ್ಸ್ಪೆಕ್ಟರ್ ಶಾಂತಾರಾಮ್ ಕುಂದರ್ ಅವರ ವೃತ್ತಿಜೀವನದುದ್ದಕ್ಕೂ ಸಾರ್ವಜನಿಕ ಸೇವೆಯ ಕಡೆಗೆ ಅವರ ಅಪಾರ ಸಮರ್ಪಣೆ, ಶಿಸ್ತು, ನಿಷ್ಠೆ


Read More »

ಪುತ್ತೂರು ಕೆಯ್ಯೂರಿನ ಪಿಎಸ್‌ಐ ಪ್ರದೀಪ್ ಪೂಜಾರಿಯವರಿಗೆ ಮುಂಬಡ್ತಿ ಲೋಕಾಯುಕ್ತ ಇನ್ಸ್‌ಪೆಕ್ಟ‌ರ್ ಆಗಿ ನಿಯುಕ್ತಿ..


Share         ಬೆಂಗಳೂರು: ರಾಜ್ಯದಲ್ಲಿ ಸಬ್ ಇನ್ ಪೆಕ್ಟರ್ (ಸಿವಿಲ್)ಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದ 16 ಮಂದಿಗೆ ಪೊಲೀಸ್ ಇನ್ಸ್‌ಪೆಕ್ಟರ್‌ಗಳಾಗಿ ಮುಂಬಡ್ತಿ ನೀಡಿ ವರ್ಗಾವಣೆ ಮಾಡಲಾಗಿದ್ದು ಕೆಯ್ಯರಿನ ಪ್ರದೀಪ್ ಪೂಜಾರಿಯವರನ್ನು ಪೊಲೀಸ್ ಇನ್ಸ್‌ಪೆಕ್ಟ‌ರ್ ಆಗಿ ಭಡ್ತಿಗೊಳಿಸಿ ಕರ್ನಾಟಕ


Read More »

ವೆನ್ಲಾಕ್‌ನ ಖ್ಯಾತ ಮೂತ್ರರೋಗ ತಜ್ಞ ಡಾ.ಸದಾನಂದ ಪೂಜಾರಿಗೆ ಪ್ರತಿಷ್ಠಿತ ಹೆಲ್ತ್‌ಕೇರ್‌ ಎಕ್ಸಲೆನ್ಸ್‌ ಅವಾರ್ಡ್‌


Share         ಮಂಗಳೂರು: ಕನ್ನಡದ ಜನಪ್ರಿಯ ವಾಹಿನಿ ‘ಏಷ್ಯಾನೆಟ್‌ ಸುವರ್ಣ ನ್ಯೂಸ್’ ಹಾಗೂ ಕನ್ನಡದ ಖ್ಯಾತ ದಿನಪತ್ರಿಕೆ ‘ಕನ್ನಡ ಪ್ರಭ’ ಜಂಟಿಯಾಗಿ ನೀಡುವ ಪ್ರತಿಷ್ಠಿತ ‘ಹೆಲ್ತ್‌ಕೇರ್ ಎಕ್ಸಲೆನ್ಸ್ 2025’ ಅವಾರ್ಡ್‌ಗೆ ಮಂಗಳೂರು ವೆನ್ಲಾಕ್‌ ಆಸ್ಪತ್ರೆಯ ಖ್ಯಾತ


Read More »