TOP STORIES:

ದಿನನಿತ್ಯ ದಾಳಿಂಬೆ ತಿಂದರೆ ಹೀಗೆ ಆಗುವುದು ಕಂಡಿತ…


ನಾವು ದಿನನಿತ್ಯ ಉಪಯೋಗಿಸುವ ಹಣ್ಣುಹಂಪಲುಗಳಲ್ಲಿ ದಾಳಿಂಬೆ ವಿಭಿನ್ನ ಮತ್ತು ವಿಶಿಷ್ಟ ಹಣ್ಣಾಗಿದ್ದು ನಾಲಿಗೆ ರುಚಿ ಮಾತ್ರವಲ್ಲದೆ ದೇಹಕ್ಕೆ ಶಕ್ತಿಕೊಡುವ ಗುಣವನ್ನು ಹೊಂದಿದೆ ಎಂದರೆ ತಪ್ಪಾಗಲಾರದು.

ಇದನ್ನು ಹಣ್ಣಿನ ರೂಪದ ತಿನಿಸಾಗಿ ಮಾತ್ರವಲ್ಲದೆ, ಸಂಬಾರ ಪದಾರ್ಥಗಳಲ್ಲಿಯೂ ಉಪಯೋಗಿಸಲಾಗುತ್ತದೆ. ದಾಳಿಂಬೆಯು ಹಲವಷ್ಟು ಔಷಧೀಯ ಗುಣಗಳನ್ನು ಹೊಂದಿದ್ದು, ಸೇವನೆಗೆ ಉಪಯುಕ್ತವಾಗಿದೆ. ಮಾರುಕಟ್ಟೆಯಲ್ಲಿ ದೊರೆಯುವ ದಾಳಿಂಬೆಗೆ ಬಹಳಷ್ಟು ಬೇಡಿಕೆಯಿದ್ದು, ಇದನ್ನು ಎಲ್ಲ ಕಡೆಗಳಲ್ಲಿ ಬೆಳೆಯುವುದು ಸಾಧ್ಯವಾಗದ ಮಾತು. ಸಮಶೀತೋಷ್ಣ ವಾತಾವರಣ ಶೀತವಲಯಗಳಲ್ಲಿ ಇದು ಚೆನ್ನಾಗಿ ಬೆಳೆಯುತ್ತದೆ. ಹಿಮಾಚಲಪ್ರದೇಶ, ಜಮ್ಮು ಇಲ್ಲಿನ ಕಾಡುಗಳಲ್ಲಿ ಕಾಡು ದಾಳಿಂಬೆಗಳು ಹೆಚ್ಚಾಗಿ ಕಂಡು ಬರುತ್ತವೆ.

ಈಗಾಗಲೇ ಹಲವು ರೈತರು ದಾಳಿಂಬೆ ಬೆಳೆದು ಬದುಕು ಕಂಡುಕೊಂಡಿದ್ದಾರೆ. ಇತ್ತೀಚೆಗೆ ಹಲವು ತಳಿಗಳು ಬಂದಿವೆ. ಬಹಳಷ್ಟು ಕಡೆಗಳಲ್ಲಿ ತಮ್ಮ ಮನೆಯ ಹಿತ್ತಲಲ್ಲಿ ಗಿಡನೆಟ್ಟು ಬೆಳೆಸುವುದು ಕೂಡ ಕಾಣಸಿಗುತ್ತದೆ. ದಾಳಿಂಬೆ ವಾಣಿಜ್ಯಿಕವಾಗಿ ಆದಾಯ ತರುವುದನ್ನು ಆಚೆಗಿಟ್ಟು ಆರೋಗ್ಯದ ದೃಷ್ಠಿಯಿಂದ ಸಿಗುವ ಲಾಭವನ್ನು ಅರಿತರೆ ಮನೆ ಪಕ್ಕದಲ್ಲೊಂದು ಗಿಡನೆಡೋಣ ಎಂದೆನಿಸದಿರದು. ಕಾರಣ ಇದರ ಹಣ್ಣು ಮಾತ್ರವಲ್ಲದೆ, ಮರದ ಬೇರಿನಿಂದ ಹಿಡಿದು ತೊಗಟೆ, ಹೂ, ಬೀಜ ಎಲ್ಲವೂ ಔಷಧೀಯ ಗುಣಗಳಿಂದ ಕೂಡಿದ್ದು ಬಹು ಉಪಯುಕ್ತವಾಗಿವೆ.

ದಾಳಿಂಬೆ ರಸವನ್ನು ಸೇವಿಸುವುದರಿಂದ ಅಮಶಂಕೆಯನ್ನು ತಡೆಯಬಹುದಾಗಿದೆ. ಗಿಡದ ತೊಗಟೆಯ ಕಷಾಯಕ್ಕೆ ಚಿಟಿಕೆ ಉಪ್ಪು ಬೆರೆಸಿ ಮುಕ್ಕಳಿಸಿದರೆ ಹಲ್ಲು ನೋವು ಕಡಿಮೆಯಾಗುತ್ತದೆ. ಇದರ ಚಿಗುರು ಎಲೆಗಳನ್ನು ಬಾಯಲ್ಲಿ ಹಾಕಿಕೊಂಡು ಅಗೆಯುವುದರಿಂದ ವಸಡಿನಿಂದ ರಕ್ತ ಬರುವುದನ್ನು ತಡೆಯಲು ಸಾಧ್ಯವಿದೆ. ಹಣ್ಣಿನ ಸಿಪ್ಪೆಯನ್ನು ಒಣಗಿಸಿ ಚೆನ್ನಾಗಿ ಪುಡಿ ಮಾಡಿ ಅದರೊಂದಿಗೆ ಸ್ವಲ್ಪ ಕರಿಮೆಣಸು, ಉಪ್ಪು ಬೆರೆಸಿ ನುಣ್ಣಗೆ ಪುಡಿ ಮಾಡಿ ಆ ಪುಡಿಯಿಂದ ಹಲ್ಲು ಉಜ್ಜಿದರೆ ಹಲ್ಲು ಹೊಳಪು ಬರುತ್ತದೆ. ಜತೆಗೆ ದೃಢತ್ವ ಹೊಂದುತ್ತದೆ.

ದಾಳಿಂಬೆ ಹಣ್ಣು ಸೇವಿಸುವುದರಿಂದ ವಿಷಮ ಶೀತ ಜ್ವರ, ಅಸ್ತಮಾ, ಮಾನಸಿಕ ಒತ್ತಡ ಹಾಗೂ ನರಗಳ ದೌರ್ಬಲ್ಯದಿಂದ ಉಂಟಾಗುವ ತಲೆನೋವು ಕಡಿಮೆಯಾಗುತ್ತದೆ. ಇದು ಪಿತ್ತಶಮನ ಗುಣ ಹೊಂದಿದ್ದು, ಬಾಯಾರಿಕೆಯನ್ನು ನೀಗಿಸುವಲ್ಲಿ ಮತ್ತು ದೇಹಕ್ಕೆ ಶಕ್ತಿ ನೀಡುವಲ್ಲಿ ಸಹಕಾರಿಯಾಗಿದೆ. ರಸದೊಂದಿಗೆ ಅಷ್ಟೇ ಪ್ರಮಾಣದ ಜೇನು ಬೆರೆಸಿ ಸೇವಿಸಿದ್ದೇ ಆದಲ್ಲಿ ಶರೀರದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಬೇಸಿಗೆಯಲ್ಲಿ ಆಗುವ ಬಾಯಾರಿಕೆ ತಡೆಗೆ ದಾಳಿಂಬೆ ರಸದಿಂದ ಮಾಡಿದ ಪಾನೀಯ ಉತ್ತಮವಾಗಿದ್ದು, ಬಾಯಾರಿಕೆ ನೀಗಿಸಿ ದೇಹವನ್ನು ತಂಪಾಗಿಡುವಲ್ಲಿ ಸಹಾಯ ಮಾಡುತ್ತದೆ.

ದಾಳಿಂಬೆಯ ಬೀಜದಲ್ಲಿ ಜಠರೋತ್ತೇಜಕ ಗುಣವಿದ್ದು, ಬೀಜದ ಪುಡಿಯೊಂದಿಗೆ ಸ್ವಲ್ಪ ಜೇನು ಸೇರಿಸಿ ಸೇವಿಸಿದರೆ ಅತಿಸಾರವನ್ನು ನಿಯಂತ್ರಿಸಬಹುದು. ಒಂದು ಚಮಚದಷ್ಟು ಹಣ್ಣಿನ ಬೀಜಗಳನ್ನು ತೆಗೆದುಕೊಂಡು ಚೆನ್ನಾಗಿ ಅರೆದು ನಂತರ ಒಂದು ಲೋಟದ ತುಂಬಾ ಹುರುಳಿ ಕಾಳಿನ ಸೂಪ್ ನ್ನು ತೆಗೆದುಕೊಂಡು ಎರಡನ್ನು ಬೆರೆಸಿ ಕುಡಿಯುವುದರಿಂದ ಮೂತ್ರಕೋಶದ ಮತ್ತು ಮೂತ್ರ ಜನಕಾಂಗಗಳಲ್ಲಿ ಸಿಕ್ಕಿ ಹಾಕಿಕೊಂಡ ಕಲ್ಲುಗಳು ಕರಗುತ್ತವೆ ಎನ್ನಲಾಗಿದೆ.

ಇನ್ನು ದಾಳಿಂಬೆ ಹಣ್ಣಿನ ಒಳಗಡೆ ರಸ ತುಂಬಿದ ಕೆಂಪು ಗುಲಾಬಿ ಹಳದಿ ಬಿಳಿಯ ಸಿಹಿ ಒಗರು ಹುಳಿ ರುಚಿಯ ತಿರುಳಿನ ಬೀಜಗಳನ್ನು ಒಣಗಿಸಿ ಅನಾರ್ ದಾನ್ ತಯಾರಿಸುತ್ತಾರೆ ಇದು ರುಚಿಕಾರಕ ಗುಣ ಹೊಂದಿದ್ದು, ಉತ್ತರ ಭಾರತದಲ್ಲಿ ಹೆಚ್ಚಾಗಿ ಅಡುಗೆಗಳಿಗೆ ಹುಳಿಯ ರುಚಿ ಕೊಡಲು ಬಳಸುತ್ತಾರೆ. ಒಟ್ಟಾರೆಯಾಗಿ ಹೇಳಬೇಕೆಂದರೆ ದಾಳಿಂಬೆ ಆರೋಗ್ಯದ ದೃಷ್ಠಿಯಿಂದ ಹಲವು ರೀತಿಯಲ್ಲಿ ಉಪಕಾರಿಯಾಗಿದ್ದು, ಅದನ್ನು ಸೇವಿಸಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಜಾಣತನವಾಗಿದೆ.


Related Posts

ಸತತ 216 ಗಂಟೆಗಳ ಭರತನಾಟ್ಯ ಮಾಡುವುದರ ಮೂಲಕ ಗೋಲ್ಡನ್ ಬುಕ್ ವಲ್ಡ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ಬರೆಸಿಕೊಂಡ ನವರಸಧಾರ ದೀಕ್ಷಾ. ವಿ


Share         ದೀಕ್ಷಾ ವಿ. ಅವರ ಜೀವನವು ಕಲೆಯ ತಪಸ್ಸಿನ ಜೀವಂತ ಪ್ರತೀಕವಾಗಿದೆ. ತಂದೆ ಶ್ರೀ ವಿಠಲ್ ಪೂಜಾರಿ ಮತ್ತು ತಾಯಿ ಶುಭಾ ವಿಠಲ್ ಅವರ ಮಗಳಾದ ಅವರು, ಬಾಲ್ಯದಿಂದಲೇ ಕಲೆಯ ಕಡೆ ಮನಸ್ಸು ತಿರುಗಿಸಿಕೊಂಡಿದ್ದರು.


Read More »

ಬಹರೖನ್ ನ ಕಸ್ತೂರಿ ಕನ್ನಡ ಎಫ್.ಎಂ ರೇಡಿಯೋ ಆರ್.ಜೆ ಕಮಲಾಕ್ಷ ಅಮೀನ್ ಅವರಿಗೆ ಗೋಲ್ಡನ್ ಐಕಾನಿಕ್ ಅವಾರ್ಡ್


Share         ಮಂಗಳೂರು: ಬಹರೖನ್ ನ ಕಸ್ತೂರಿ ಕನ್ನಡ ಎಫ್.ಎಂ ರೇಡಿಯೋ ಆರ್.ಜೆ ಕಮಲಾಕ್ಷ ಅಮೀನ್ ಅವರನ್ನು ಮಂಗಳೂರಿನಲ್ಲಿ ಗೋಲ್ಡನ್ ಐಕಾನಿಕ್ ಅವಾರ್ಡ್ ಗೌರವ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಹೋಟೆಲ್ ಓಷನ್ ಪರ್ಲ್ ನಲ್ಲಿ ನಡೆದ


Read More »

ಪೂಜಾರಿ ಎಂದು ಗುರುತಿಸಿಕೊಂಡಿರುವವರು ಜನಗಣತಿಯಲ್ಲಿ ಕಡ್ಡಾಯವಾಗಿ ಬಿಲ್ಲವ ಎಂದು ನಮೂದಿಸಿ ಡಾ. ರಾಜಶೇಖರ್ ಕೋಟ್ಯಾನ್


Share         ಮಂಗಳೂರು ಅಗಸ್ಟ್ 18: ಅನೇಕ ಕಡೆ ದೇವಸ್ಥಾನದಲ್ಲಿ ಪೂಜೆ ಮಾಡುವವರೂ ಪೂಜಾರಿ ಎಂದು ಗುರುತಿಸಿಕೊಂಡಿರುವುದರಿಂದ ಈ ಸಲದ ಜನಗಣತಿಯಲ್ಲಿ ನಾವು ʻಜಾತಿ’ ಎಂಬ ಕಾಲಂನಲ್ಲಿ ಕಡ್ಡಾಯವಾಗಿ ʻಬಿಲ್ಲವ’ ಎಂದೇ ನಮೂದಿಸಬೇಕು ಎಂದು ಬಿಲ್ಲವ


Read More »

ಬಿಲ್ಲವ ಸಮಾಜದ ಹೆಮ್ಮೆಯ ಕಣ್ಮಣಿ ಪ್ರಾಮಾಣಿಕ ಪೊಲೀಸ್ ಅಧಿಕಾರಿ ಶಾಂತಾರಾಮ್ ಕುಂದರ್


Share         ಬಿಲ್ಲವ ಸಮಾಜದ  ಹೆಮ್ಮೆಯ ಕಣ್ಮಣಿ ದಕ್ಷ, ಧೈರ್ಯ ಪ್ರಾಮಾಣಿಕ ಪೊಲೀಸ್ ಅಧಿಕಾರಿ ನಮ್ಮವರಾಧ ಪೊಲೀಸ್ ಇನ್ಸ್ಪೆಕ್ಟರ್ ಶಾಂತಾರಾಮ್ ಕುಂದರ್ ಅವರ ವೃತ್ತಿಜೀವನದುದ್ದಕ್ಕೂ ಸಾರ್ವಜನಿಕ ಸೇವೆಯ ಕಡೆಗೆ ಅವರ ಅಪಾರ ಸಮರ್ಪಣೆ, ಶಿಸ್ತು, ನಿಷ್ಠೆ


Read More »

ಪುತ್ತೂರು ಕೆಯ್ಯೂರಿನ ಪಿಎಸ್‌ಐ ಪ್ರದೀಪ್ ಪೂಜಾರಿಯವರಿಗೆ ಮುಂಬಡ್ತಿ ಲೋಕಾಯುಕ್ತ ಇನ್ಸ್‌ಪೆಕ್ಟ‌ರ್ ಆಗಿ ನಿಯುಕ್ತಿ..


Share         ಬೆಂಗಳೂರು: ರಾಜ್ಯದಲ್ಲಿ ಸಬ್ ಇನ್ ಪೆಕ್ಟರ್ (ಸಿವಿಲ್)ಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದ 16 ಮಂದಿಗೆ ಪೊಲೀಸ್ ಇನ್ಸ್‌ಪೆಕ್ಟರ್‌ಗಳಾಗಿ ಮುಂಬಡ್ತಿ ನೀಡಿ ವರ್ಗಾವಣೆ ಮಾಡಲಾಗಿದ್ದು ಕೆಯ್ಯರಿನ ಪ್ರದೀಪ್ ಪೂಜಾರಿಯವರನ್ನು ಪೊಲೀಸ್ ಇನ್ಸ್‌ಪೆಕ್ಟ‌ರ್ ಆಗಿ ಭಡ್ತಿಗೊಳಿಸಿ ಕರ್ನಾಟಕ


Read More »