TOP STORIES:

FOLLOW US

” ದೀಪಾವಳಿ ಮಾಂಕಾಳಿ ಕುಣಿತ “


ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ಹಾಗು ಉಡುಪಿ ತಾಲೂಕುಗಳಲ್ಲಿ ಮಾತ್ರ ಹೆಚ್ಚಾಗಿ ಈ ಕುಣಿತ ಕಂಡು ಬರುತ್ತದೆ. ದೀಪಾವಳಿ ಪಾಡ್ಯದಿಂದ ಮೊದಲ್ಗೊಂಡು ಪ್ರತೀ ಹಗಲಲ್ಲಿ ನಲಿಕೆ (ಪಾಣ) ಜನಾಂಗದವರು ಈ ಕುಣಿತವನ್ನು ನಡೆಸುತ್ತಾರೆ. ಗ್ರಾಮದ ಗುತ್ತು ಅಥವಾ ಗೂಡಿನ ಮನೆಯಿಂದ ಆರಂಭಿಸಿ ಎಲ್ಲಾ ಮನೆಗಳಿಗೂ ಹೋಗುತ್ತಾರೆ. ಇವರಿಗೆ ಸಂಭಾವನೆಯಾಗಿ ಮನೆಮನೆಯಿಂದ ಹಣ ಸಿಗುವುದಿಲ್ಲ. ಬದಲಿಗೆ ಅಕ್ಕಿ, ಎಣ್ಣೆ, ಉಪ್ಪು, ಮೆಣಸು ದೊರೆಯುತ್ತದೆ.ಮಾಂಕಾಳಿ ಕುಣಿತದಲ್ಲಿ ಒಬ್ಬ ನರ್ತಕ ಇರುತ್ತಾನೆ. ಈತ ಕಂಗಿನ ಹಾಳೆಯಿಂದ ತಯಾರಿಸಿದ ಮುಖವಾಡವನ್ನು ಮುಖಕ್ಕೆ ಹಿಡಿದುಕೊಳ್ಳುತ್ತಾನೆ. ಮುಖವಾಡವೆಂದರೆ ಕಣ್ಣು, ಮೂಗು, ತೆರೆದ ಬಾಯಿ, ಚಾಚಿದ ನಾಲಿಗೆಯನ್ನು ಬಿಳಿ, ಹಳದಿ, ಕಪ್ಪು, ಹಸಿರು, ಕೆಂಪು ಬಣ್ಣಗಳಿಂದ ತಯಾರಿಸುತ್ತಾರೆ. ಕುಣಿಯುವವ ಸೀರೆಯನ್ನು ನೆರಿಗೆ ಹಾಕಿ ಒಂದರ ಮೇಲೊಂದರಂತೆ ಹಂತಹಂತವಾಗಿ ಹಾಕಿ ಸೊಂಟಕ್ಕೆ ಕಟ್ಟಿಕೊಳ್ಳುತ್ತಾನೆ. ಕಾಲಿಗೆ ಗಗ್ಗರ ಕಟ್ಟಿ ಮೈಯನ್ನು ದೊಗಲೆ ಅಂಗಿಯಿಂದ ಮುಚ್ಚಿಕೊಳ್ಳುತ್ತಾನೆ. ಮುಖವಾಡದ ಹಿಂದಿನಿಂದ ಒಂದು ಸೀರೆಯನ್ನು ಇಳಿ ಬಿಟ್ಟಿರುತ್ತಾನೆ. ಇದು ಮುಖವಾಡ ಇಟ್ಟುಕೊಂಡ ವ್ಯಕ್ತಿಯ ಬೆನ್ನನ್ನು ಆವರಿಸುತ್ತದೆ. ಮುಖವಾಡವನ್ನು ಮುಖಕ್ಕೆ ಕಟ್ಟಿಕೊಳ್ಳುವುದಿಲ್ಲ. ಬದಲಿಗೆ ಎರಡು ಕೈಗಳಿಂದ ಮುಖದೆದುರು ಹಿಡಿದುಕೊಳ್ಳುತ್ತಾರೆ.

Watch Video is here:  https://www.facebook.com/watch/?v=698187894157792

ಹಾಡು ಹೇಳುವಾತ ತೆಂಬರೆಯನ್ನು ಬಡಿದು ಹಾಡು ಹೇಳುತ್ತಿದ್ದಂತೆ ಇದರ ಲಯಕ್ಕನುಗುಣವಾಗಿ ನರ್ತಕ ಸಣ್ಣ ಹೆಜ್ಜೆಗಳನ್ನಿಟ್ಟು ಸುತ್ತು ಬರುತ್ತಾನೆ. ತೆಂಬರೆಯ ಬಡಿತ ನಿಧಾನವಾಗಿರುತ್ತದೆ. ಕೈಗಳಲ್ಲಿ ಮುಖವಾಡವನ್ನು ಮುಖಕ್ಕೆ ಎದುರಾಗಿ ಹಿಡಿದುಕೊಂಡಿರುವುದರಿಂದ ಕೈಗಳಲ್ಲಿ ಯಾವುದೇ ಭಂಗಿಯನ್ನು ಅಭಿನಯಿಸುವಂತಿಲ್ಲ. ಮುಖವಾಡವನ್ನೆತ್ತಿ ಕುಣಿತಗಾರ ನೆಲವನ್ನು ನೋಡಬೇಕಾಗಿರುವುದರಿಂದ ಕುಣಿತದಲ್ಲಿ ವೇಗ ಇರುವುದಿಲ್ಲ. ಈ ಸಂದರ್ಭದಲ್ಲಿ ಹೇಳುವ ಹಾಡು ತುಳು ಭಾಷೆಯಲ್ಲಿರುತ್ತದೆ. ಊರಿನ ರೋಗ ರುಜಿನಗಳನ್ನು ಹೋಗಲಾಡಿಸಲು ಘಟ್ಟದಿಂದ ಇಳಿದು ಮಾಂಕಾಳಿ ಬರುತ್ತಾಳೆ ಎಂಬ ನಂಬಿಕೆ ಜನಪದರಲ್ಲಿದೆ. ತುಳು ನಾಡಿನಲ್ಲಿ ಆಚರಣೆಯಲ್ಲಿರುವ ಅಟಿಕಳಿಂಜನು ಊರಿನ ಮಾರಿಯನ್ನು ನಿವಾರಿಸುವುದಕ್ಕಾಗಿ ಆಷಾಢ ಮಾಸದಲ್ಲಿ ವರ್ಷಕ್ಕೆ ಒಂದಾವರ್ತಿ ಗ್ರಾಮದಲ್ಲಿ ಬರುವುದು. ತುಳಸಿ ಪೂಜೆಯ ದಿನ ಮಾಂಕಾಳಿ ಕುಣಿತದ ಅಂತ್ಯ ಪೂಜೆ. ಆ ದಿನ ಸಂಭಾವನೆಯಾಗಿ ದೊರೆತ ಭತ್ತ, ಅಕ್ಕಿ, ತೆಂಗಿನಕಾಯಿ, ಉಪ್ಪು, ಹುಳಿ, ಮಸಿ, ಮೆಣಸುಗಳನ್ನು ಸರಳೀ ಎಲೆಯಲ್ಲಿ ಸಾಂಕೇತಿಕವಾಗಿ ಮನೆಯ ಪಕ್ಕದಲ್ಲಿ ಬಡಿಸಿಡುತ್ತಾರೆ, ಅದರ ಎದುರು ಮಾಂಕಾಳಿಯ ಮುಖವಾಡವನ್ನಿಟ್ಟು ಊರಿನ ಮಾರಿಯನ್ನು ಕಳೆಯುವಂತೆ ಪ್ರಾರ್ಥಿಸುತ್ತಾರೆ, ಹಾಗೂ ಮುಖವಾಡವನ್ನು ತೆಗೆದು ಹೊಳೆಯಲ್ಲಿ ಬಿಡುತ್ತಾರೆ. ಈ ಮೂಲಕವಾಗಿ ಊರಿನ ಮಾರಿಯನ್ನು ಹೊಳೆ ದಾಟಿಸುವ ಆಶಯವನ್ನು ಕಾಣಬಹುದಾಗಿದೆ.

(ಸಂಪಾದಕರು: ಪ್ರೊ. ಹಿ. ಚಿ. ಬೋರಲಿಗಯ್ಯ, ಕರ್ನಾಟಕ ಜನಪದ ಕಲೆಗಳ ಕೋಶ. ಪುಟ ೨೬.)

Credits: Beauty of Tulunad  facebook page


Share:

More Posts

Category

Send Us A Message

Related Posts

ಚತುರ್ಭಾಷಾ ತಾರೆ, ಮಂಗಳೂರು ಮೂಲದ ಚಿರಶ್ರೀ ಅಂಚನ್ ಅವರು ಮುಂಬಯಿನಲ್ಲಿ ಉದ್ಯಮಿ ಲೋಹಿತ್ ಪೂಜಾರಿ ಜತೆ ನಿಶ್ಚಿತಾರ್ಥ


Share       ಉಡುಪಿ: ಚತುರ್ಭಾಷಾ ತಾರೆ, ಮಂಗಳೂರು ಮೂಲದ ಚಿರಶ್ರೀ ಅಂಚನ್ ಅವರು ಮುಂಬಯಿನಲ್ಲಿ ಉದ್ಯಮಿ ಲೋಹಿತ್ ಪೂಜಾರಿ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.ಇನ್ನು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಮುಂಬೈ ಲೋನಾವಾಲದ ಉದ್ಯಮಿ ಲೋಹಿತ್ ಪೂಜಾರಿ ಅವರೊಂದಿಗೆ 


Read More »

ಬಂಟ್ವಾಳ ತಾಲೂಕು ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾಗಿ ವೆಂಕಪ್ಪ ಪೂಜಾರಿ ಆಯ್ಕೆ


Share       ಬಂಟ್ವಾಳ ತಾಲೂಕು ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾಗಿ ವೆಂಕಪ್ಪ ಪೂಜಾರಿ ಆಯ್ಕೆ ಬಂಟ್ವಾಳ : ಬಂಟ್ವಾಳ ತಾಲೂಕು ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಅಧಿಕಾರೇತರ ಸದಸ್ಯರಾಗಿ ವೆಂಕಪ್ಪ ಪೂಜಾರಿ ಅರ್ಬಿಗುಡ್ಡೆ ನಾಮ


Read More »

ವಿಶ್ವ ಮಾನ್ಯ ಕನ್ನಡಿಗ. 2024 ಪ್ರಶಸ್ತಿಗೆ ಭಾಜನರಾದ ಸನ್ಮಾನ್ಯ ಶ್ರೀ ಕೆ.ಪಿ ಮಂಜುನಾಥ್ ಸಾಗರ್ 


Share       ಅಮೆರಿಕದ ರಿಚ್ಮಂಡ್ ನಗರ ದ ಗ್ರೇಟರ್ ರಿಚ್ಮಂಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ 12 ನೇ ಅಕ್ಕ ವಿಶ್ವ ಮಾನ್ಯ ಕನ್ನಡ ಸಮ್ಮೇಳನವು ನಡೆಯಿತು. ಈ ಸಂದರ್ಭದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ


Read More »

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಶಾಲೆಗೆ ಶಾಲಾ ವಾಹನ ಕೊಡುಗೆ ನೀಡಿದ ಉದ್ಯಮಿ…!! ಸುಭಾಷ್ ಪೂಜಾರಿ


Share       ಬೈಂದೂರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಗ್ಗರ್ಸೆ – ಬೈಂದೂರು ಇಲ್ಲಿ 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು  ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸುರೇಶ್ ಪೂಜಾರಿ ಧ್ವಜಾರೋಹಣ ಕಾರ್ಯಕ್ರಮ ನೆರೆವೆರೆಸಿದರು. ಈ ಸಮಯದಲ್ಲಿ ಶಾಲೆಗೆ


Read More »

ಬಿರುವೆರ್ ಕುಡ್ಲದಿಂದ ಸ್ವಾತಂತ್ರ್ಯ ದಿನಾಚರಣೆ ಮೂರು ಕುಟುಂಬಗಳಿಗೆ 1 ಲಕ್ಷ ರೂ.ನೆರವು


Share       ಕುದ್ರೋಳಿ,ಆ.15: ಬಿರುವೆರ್ ಕುಡ್ಲ ದಿಂದ ಲೇಡಿಹಿಲ್ ಸರ್ಕಲ್ ನಲ್ಲಿ ಅದ್ದೂರಿಯ ಸ್ವಾತಂತ್ರ್ಯ ದಿನಾಚರಣೆ ಹಾಗೂ ಮೂರು ಕುಟುಂಬಗಳಿಗೆ ಒಂದು ಲಕ್ಷ ರೂ.ನೆರವು ಹಸ್ತಾಂತರ ಕಾರ್ಯಕ್ರಮವು ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್


Read More »

ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆ : ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಉದಯ ಪೂಜಾರಿಗೆ ಸಮ್ಮಾನ


Share       ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆಯ 5 ನೇ ವಾರ್ಷಿಕೋತ್ಸವದ ಸಂಭ್ರಮ. ಕಾರ್ಯಕ್ರಮದಲ್ಲಿ ಫ್ರೆಂಡ್ಸ್ ಬಲ್ಲಾಳ್ ಭಾಗ್,ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಉದಯ ಪೂಜಾರಿಯವರ ಸಮಾಜ ಸೇವೆಯನ್ನು ಗುರುತಿಸಿ ಸಮ್ಮಾನ


Read More »