ಕೈ ನೋವು, ಕಾಲು ನೋವು, ಸೊಂಟ ನೋವು, ಬೆನ್ನು ನೋವು..ಎಲ್ಲರ ಬಾಯಲ್ಲೂ ಇದು ಮಾಮೂಲಿ. ವಿಶ್ರಾಂತಿ ಇಲ್ಲದೆ ಒಂದೇ ಸಮನೆ ಕೆಲಸ ಮಾಡುವ ಈಗಿನ ಜನರಿಗೆ ವ್ಯಾಯಾಮ ಮಾಡಲು ಸಮಯವಿಲ್ಲ. ಹಾಗೆ ಫಾಸ್ಟ್ ಫುಡ್ ನಿಂದಾಗಿ ಪೌಷ್ಠಿಕ ಆಹಾರ ದೇಹ ಸೇರ್ತಾ ಇಲ್ಲ. ಹಾಗಾಗಿ ಇಂತ ನೋವುಗಳು ಕಾಣಿಸಿಕೊಳ್ತಾ ಇವೆ.
ಕೀಲು ನೋವು ಈಗ ಸಾಮಾನ್ಯ ಎನ್ನುವಂತಾಗಿದೆ.
ಪ್ರತಿದಿನ ನೋವಿನ ಮಾತ್ರೆ ನುಂಗುವವರೂ ನಮ್ಮಲ್ಲಿದ್ದಾರೆ. ಮಾತ್ರೆ, ಆರೋಗ್ಯವನ್ನು ಮತ್ತಷ್ಟು ಹಾಳು ಮಾಡುತ್ತೆ. ಇದರ ಬದಲು ಕೀಲು ನೋವಿಗೆ ಮನೆ ಮದ್ದು ಬೆಸ್ಟ್. ಸುಲಭವಾಗಿ ಮನೆ ಮದ್ದನ್ನು ತಯಾರಿಸಿಕೊಂಡು ಕೀಲು ನೋವಿಗೆ ಗುಡ್ ಬೈ ಹೇಳಿ. ಇದಕ್ಕೆ ಬೇಕಾಗುವ ಪದಾರ್ಥ ಕೂಡ ಕಡಿಮೆ. ಎರಡು ನಿಂಬೆ ಹಣ್ಣಿನ ಸಿಪ್ಪೆ, ಸ್ವಲ್ಪ ಆಲಿವ್ ಆಯಿಲ್ ಹಾಗೂ ಒಂದು ಬಾಟಲಿ.
ನಿಂಬೆ ಹಣ್ಣಿನ ಸಿಪ್ಪೆಗೆ ಸ್ವಲ್ಪ ಆಲಿವ್ ಆಯಿಲ್ ಹಾಕಿ ಬಾಟಲಿಯಲ್ಲಿ ಮುಚ್ಚಿಡಿ. ಮುಚ್ಚಳ ಗಟ್ಟಿಯಾಗಿರುವಂತೆ ನೋಡಿಕೊಳ್ಳಿ. ಎರಡು ವಾರಗಳ ನಂತ್ರ ಅದನ್ನು ಹೊರಗೆ ತೆಗೆಯಿರಿ. ಈ ಮಿಶ್ರಣವನ್ನು ಒಂದು ರೇಷ್ಮೆ ಬಟ್ಟೆಯಲ್ಲಿ ಕೀಲು ನೋವಿರುವ ಜಾಗಕ್ಕೆ ಹಚ್ಚಿ ನಂತ್ರ ಬ್ಯಾಂಡೇಜ್ ಮಾಡಿಕೊಳ್ಳಿ. 24 ಗಂಟೆಗಳ ತನಕ ಬ್ಯಾಂಡೇಜ್ ಹಾಗೆ ಇರಲಿ. ನಿಧಾನವಾಗಿ ನೋವು ಕಡಿಮೆಯಾದ ಅನುಭವ ನಿಮಗಾಗುತ್ತದೆ