TOP STORIES:

ಬಣ್ಣದ ಲೋಕದಲ್ಲಿ ಚರಿತ್ರೆ ಸೃಷ್ಟಿಸುವತ್ತ….ಕಿರುತೆರೆಯ ಮುದ್ದುಲಕ್ಷ್ಮಿ ಧಾರಾವಾಹಿಯ ಡಾ||ಧ್ರುವಂತ್ ಪಾತ್ರಧಾರಿ : ಚರಿತ್ ಬಾಳಪ್ಪ ಪೂಜಾರಿ


ಭವಿಷ್ಯದ ಹಾದಿಗೆ ಸಾಧನೆಯ ನಿರಂತರತೆಯ ಬೆಳಕು ಪಸರಿಸಿ ಚಿತ್ತದಲಿ ಚಿಂತನೆಯು ಟಿಸಿಲೊಡೆದಾಗ ಸಂಕಲ್ಪಿತದೆಡೆ ಸಾಕ್ಷಾತ್ಕಾರ ಸಾಧ್ಯ. ಬದುಕಿನಲ್ಲಿ ಹಾಗೆ-ಹೀಗೆಯ ಕನವರಿಕೆಗೆ ಕನರದೆ ಗುರಿಯೆಡೆಗೆ ಸಾಗಿ ಚರಿತ್ರೆ ಸೃಷ್ಟಿಸಲು ಹೊರಟಿರೋ ಕನಸಿಗ ಚರಿತ್ ಬಾಳಪ್ಪ ಪೂಜಾರಿ ಇವರ ಬಾಲ್ಯದ ಬಗ್ಗೆ ತಿಳಿಯುವುದಾದರೆ ತಂದೆ ಬಾಳಪ್ಪ ಕೊಡಗಿನ ಕೊಡ್ಲಿಪೇಟೆಯವರು. ತಾಯಿ ಪ್ರೇಮ ದಕ್ಷಿಣ ಕನ್ನಡದ ಬಂಟ್ವಾಳದವರು.

ಚರಿತ್ ಬಂಟ್ವಾಳದಲ್ಲಿ ಹುಟ್ಟಿದರೂ ಪ್ರಾಥಮಿಕ, ಪಿಯು ಶಿಕ್ಷಣದವರೆಗೆ ಕೊಡಗನ್ನು ಆಶ್ರಯಿಸಿ ನಂತರದ ಶಿಕ್ಷಣವನ್ನು ಕರಾವಳಿಯಲ್ಲಿ ಮುಂದುವರೆಸಿದರು. ಕೊಡಗೆಂಬ ವೀರತ್ವದ ಮಣ್ಣಲ್ಲಿ ಆಡಿ ಬೆಳೆದ ಇವರಿಗೆ ಸೈನ್ಯಕ್ಕೆ ಸೇರಬೇಕು ಅಥವಾ ಸೇವಾ ಧರ್ಮದ ವೈದ್ಯನಾಗಬೇಕೆಂಬ ಹಂಬಲವಿತ್ತು. ಕಾಲೇಜು ದಿನದಲ್ಲಿ ಪಠ್ಯೇತರ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಇವರು ಮಾಡೆಲಿಂಗ್ ಮತ್ತು ನಟನಾ ಕ್ಷೇತ್ರದ ಬಗೆಗೂ ಆಸಕ್ತಿಯುತರಾದರು. ಕಬಡ್ಡಿ, ವಾಲಿಬಾಲ್, ಶಟಲ್ ಇತ್ಯಾದಿ ಕ್ರೀಡೆಗಳಲ್ಲಿ ಭಾಗಿಯಾಗಿದ್ದು, ದೈನಂದಿನ ದೈಹಿಕ ಕಸರತ್ತಿನ ಮೂಲಕ ಸದೃಢ ಮೈಕಟ್ಟು ಕೂಡ ನಟನಾ ಕ್ಷೇತ್ರಕ್ಕೆ ಪೂರಕವಾದಂತಿತ್ತು. ಮುಂದೆ ಸ್ನಾತಕೋತ್ತರ ಪದವಿಯನ್ನು ಪಡೆದು ಉದ್ಯೋಗಕ್ಕೆ ಸೇರಿ ಕೈತುಂಬ ಸಂಬಳವಿದ್ದರು, ಮನಸ್ಸು ಬಣ್ಣದ ಬದುಕಿಗೆ ಮುಖಮಾಡಿತ್ತು.

ಏನಾದರಾಗಲಿ ಅಂದುಕೊಂಡು ಕೆಲಸಕ್ಕೆ ಗುಡ್ ಬೈ ಹೇಳಿ ನಟನಾ ಕ್ಷೇತ್ರದತ್ತ ಪಥ ಬದಲಿಸಿದರು. ಒಂದೆರಡು ವರ್ಷ ಕಾದರೂ ಅವಕಾಶ ಇವರ ಪಾಲಿಗೆ ಒಲಿಯಲಿಲ್ಲ. ಹೆತ್ತವರ ವಿರೋಧವು ಉಂಟಾಗಿ ಮತ್ತೆ ಮನಸ್ಸು ಉದ್ಯೋಗದತ್ತ ವಾಲಿತು. ದುಡಿದರೂ ಮನಸ್ಸಿನ ಮೂಲೆಯಲ್ಲಿ ಬಣ್ಣದ ಕನಸು ಹಾಗೆಯೇ ಇತ್ತು. ರಜಾ ಸಮಯ ಗೆಳೆಯನೊಬ್ಬನ ಕರೆಯಂತೆ ‘ಲವಲವಿಕೆ’ ಧಾರವಾಹಿಯ ಆಡಿಷನ್ನಲ್ಲಿ ಭಾಗವಹಿಸಿದರು. ಅಲ್ಲಿ ಆಯ್ಕೆಯಾದರು. ಮುಂದೆ 300 ಕಂತುಗಳನ್ನು ಪೂರೈಸಿದ ಈ ಧಾರವಾಹಿಯ ‘ಲಕ್ಕಿಯ’ ಪಾತ್ರ ಜನಮಾನಸದಲ್ಲಿ ಮೆಚ್ಚುಗೆಯಾಯಿತು.

‘ಅಮ್ಮ’ ಧಾರಾವಾಹಿಯಲ್ಲಿ ‘ನವೀನ’ ನಾಗಿ ಮಿಂಚಿದ್ದಾರೆ. ಉತ್ತಮ ನಟನೆಗಾಗಿ ”ಅತ್ಯುತ್ತಮ ನಟ ಪ್ರಶಸ್ತಿ”ಯ ಗರಿಯು ಇವರಿಗೆ ದೊರೆಯಿತು. ‘ಸರ್ಪ ಸಂಬಂಧ’ ಧಾರಾವಾಹಿಯ ನಂತರ ಸ್ಟಾರ್ ಸುವರ್ಣ ಚಾನೆಲ್ನ 700 ಕಂತು ಪೂರೈಸಿದ ‘ಮುದ್ದುಲಕ್ಷ್ಮಿ’ ಧಾರಾವಾಹಿಯಲ್ಲಿ ‘ಡಾ|| ಧ್ರುವಂತ್’ ಪಾತ್ರಧಾರಿಯಾಗಿ ಜನ-ಮನ ಗೆದ್ದಿದ್ದಾರೆ. ಕನ್ನಡ, ಮಲೆಯಾಳಿ, ತಮಿಳು ಭಾಷೆಯ ಜಾಹೀರಾತುಗಳಲ್ಲಿಯೂ ನಟಿಸಿದ್ದಾರೆ. ಇವರು ಸಿನಿಮಾ ಕ್ಷೇತ್ರಕ್ಕೂ ಪಾದರ್ಪಣೆ ಮಾಡಿರುತ್ತಾರೆ. ಕರ್ಮಯೋಗಿ ಚಲನಚಿತ್ರದೊಂದಿಗೆ, ಹಲವಾರು ಚಿತ್ರಗಳಲ್ಲಿ ನಟಿಸುವ ಬಗ್ಗೆ ಮಾತುಕತೆಯೂ ನಡೆದಿದೆ. ಆಸಕ್ತಿಗೆ ಸದಾ ಬೆನ್ನೆಲುಬಾಗಿ ಪತ್ನಿ ಮಂಜುಶ್ರೀ ಅವರಿದ್ದಾರೆ. ತನಗೆ ಬಂದ ಪಾತ್ರಗಳಿಗೆ ಶ್ರದ್ಧಾಪೂರ್ವಕವಾಗಿ ಜೀವ ತುಂಬುತ್ತಿರುವ ಚರಿತ್ ಅವಕಾಶ ನೀಡಿದ ನಿರ್ಮಾಪಕರು, ನಿರ್ದೇಶಕರಿಗೆ ಸದಾ ಚಿರ ಋಣಿಯಾಗಿದ್ದಾರೆ. ತಾನು ಆಸೆ ಪಟ್ಟಂತಹ ಈ ಕ್ಷೇತ್ರಕ್ಕೆ ಶ್ರಮಪಟ್ಟು ಕಾರ್ಯನಿರ್ವಹಿಸುತ್ತೇನೆ ಎಂಬ ಗಟ್ಟಿತನದ ಮಾತಿನ ಚರಿತ್ ಬಾಳಪ್ಪ ಪೂಜಾರಿ ರವರ ಬಣ್ಣದ ಬದುಕಿಗೆ ಶುಭವಾಗಲಿ ಎಂದು ಹಾರೈಸೋಣ.

✍️ ದೀಪಕ್ ಬೀರ ಪಡುಬಿದ್ರಿ


Related Posts

ಬಹರೖನ್ ನ ಕಸ್ತೂರಿ ಕನ್ನಡ ಎಫ್.ಎಂ ರೇಡಿಯೋ ಆರ್.ಜೆ ಕಮಲಾಕ್ಷ ಅಮೀನ್ ಅವರಿಗೆ ಗೋಲ್ಡನ್ ಐಕಾನಿಕ್ ಅವಾರ್ಡ್


Share         ಮಂಗಳೂರು: ಬಹರೖನ್ ನ ಕಸ್ತೂರಿ ಕನ್ನಡ ಎಫ್.ಎಂ ರೇಡಿಯೋ ಆರ್.ಜೆ ಕಮಲಾಕ್ಷ ಅಮೀನ್ ಅವರನ್ನು ಮಂಗಳೂರಿನಲ್ಲಿ ಗೋಲ್ಡನ್ ಐಕಾನಿಕ್ ಅವಾರ್ಡ್ ಗೌರವ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಹೋಟೆಲ್ ಓಷನ್ ಪರ್ಲ್ ನಲ್ಲಿ ನಡೆದ


Read More »

ಪೂಜಾರಿ ಎಂದು ಗುರುತಿಸಿಕೊಂಡಿರುವವರು ಜನಗಣತಿಯಲ್ಲಿ ಕಡ್ಡಾಯವಾಗಿ ಬಿಲ್ಲವ ಎಂದು ನಮೂದಿಸಿ ಡಾ. ರಾಜಶೇಖರ್ ಕೋಟ್ಯಾನ್


Share         ಮಂಗಳೂರು ಅಗಸ್ಟ್ 18: ಅನೇಕ ಕಡೆ ದೇವಸ್ಥಾನದಲ್ಲಿ ಪೂಜೆ ಮಾಡುವವರೂ ಪೂಜಾರಿ ಎಂದು ಗುರುತಿಸಿಕೊಂಡಿರುವುದರಿಂದ ಈ ಸಲದ ಜನಗಣತಿಯಲ್ಲಿ ನಾವು ʻಜಾತಿ’ ಎಂಬ ಕಾಲಂನಲ್ಲಿ ಕಡ್ಡಾಯವಾಗಿ ʻಬಿಲ್ಲವ’ ಎಂದೇ ನಮೂದಿಸಬೇಕು ಎಂದು ಬಿಲ್ಲವ


Read More »

ಬಿಲ್ಲವ ಸಮಾಜದ ಹೆಮ್ಮೆಯ ಕಣ್ಮಣಿ ಪ್ರಾಮಾಣಿಕ ಪೊಲೀಸ್ ಅಧಿಕಾರಿ ಶಾಂತಾರಾಮ್ ಕುಂದರ್


Share         ಬಿಲ್ಲವ ಸಮಾಜದ  ಹೆಮ್ಮೆಯ ಕಣ್ಮಣಿ ದಕ್ಷ, ಧೈರ್ಯ ಪ್ರಾಮಾಣಿಕ ಪೊಲೀಸ್ ಅಧಿಕಾರಿ ನಮ್ಮವರಾಧ ಪೊಲೀಸ್ ಇನ್ಸ್ಪೆಕ್ಟರ್ ಶಾಂತಾರಾಮ್ ಕುಂದರ್ ಅವರ ವೃತ್ತಿಜೀವನದುದ್ದಕ್ಕೂ ಸಾರ್ವಜನಿಕ ಸೇವೆಯ ಕಡೆಗೆ ಅವರ ಅಪಾರ ಸಮರ್ಪಣೆ, ಶಿಸ್ತು, ನಿಷ್ಠೆ


Read More »

ಪುತ್ತೂರು ಕೆಯ್ಯೂರಿನ ಪಿಎಸ್‌ಐ ಪ್ರದೀಪ್ ಪೂಜಾರಿಯವರಿಗೆ ಮುಂಬಡ್ತಿ ಲೋಕಾಯುಕ್ತ ಇನ್ಸ್‌ಪೆಕ್ಟ‌ರ್ ಆಗಿ ನಿಯುಕ್ತಿ..


Share         ಬೆಂಗಳೂರು: ರಾಜ್ಯದಲ್ಲಿ ಸಬ್ ಇನ್ ಪೆಕ್ಟರ್ (ಸಿವಿಲ್)ಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದ 16 ಮಂದಿಗೆ ಪೊಲೀಸ್ ಇನ್ಸ್‌ಪೆಕ್ಟರ್‌ಗಳಾಗಿ ಮುಂಬಡ್ತಿ ನೀಡಿ ವರ್ಗಾವಣೆ ಮಾಡಲಾಗಿದ್ದು ಕೆಯ್ಯರಿನ ಪ್ರದೀಪ್ ಪೂಜಾರಿಯವರನ್ನು ಪೊಲೀಸ್ ಇನ್ಸ್‌ಪೆಕ್ಟ‌ರ್ ಆಗಿ ಭಡ್ತಿಗೊಳಿಸಿ ಕರ್ನಾಟಕ


Read More »

ವೆನ್ಲಾಕ್‌ನ ಖ್ಯಾತ ಮೂತ್ರರೋಗ ತಜ್ಞ ಡಾ.ಸದಾನಂದ ಪೂಜಾರಿಗೆ ಪ್ರತಿಷ್ಠಿತ ಹೆಲ್ತ್‌ಕೇರ್‌ ಎಕ್ಸಲೆನ್ಸ್‌ ಅವಾರ್ಡ್‌


Share         ಮಂಗಳೂರು: ಕನ್ನಡದ ಜನಪ್ರಿಯ ವಾಹಿನಿ ‘ಏಷ್ಯಾನೆಟ್‌ ಸುವರ್ಣ ನ್ಯೂಸ್’ ಹಾಗೂ ಕನ್ನಡದ ಖ್ಯಾತ ದಿನಪತ್ರಿಕೆ ‘ಕನ್ನಡ ಪ್ರಭ’ ಜಂಟಿಯಾಗಿ ನೀಡುವ ಪ್ರತಿಷ್ಠಿತ ‘ಹೆಲ್ತ್‌ಕೇರ್ ಎಕ್ಸಲೆನ್ಸ್ 2025’ ಅವಾರ್ಡ್‌ಗೆ ಮಂಗಳೂರು ವೆನ್ಲಾಕ್‌ ಆಸ್ಪತ್ರೆಯ ಖ್ಯಾತ


Read More »