ಒಂದೇ ಜಾತಿ, ಒಂದೇ ಮತ, ಒಂದೇ ದೇವರು, ಎಂದು ವಿಶ್ವಕ್ಕೆ ಸಾರಿದ ಬ್ರಹ್ಮಶ್ರೀ ನಾರಾಯಣ ಗುರು ತತ್ವದ ಅಡಿಯಲ್ಲಿ ಸಾಗುತ್ತಿರುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಬಿರುವೆರ್ ಕುಡ್ಲ ಸಂಘಟನೆಯ ಅಂಗ ಸಂಸ್ಥೆಯಾದ ಬಿರುವೆರ್ ಕುಡ್ಲ (ರಿ) ಬೆಳ್ತಂಗಡಿ ಘಟಕದ 27ನೇ ಬ್ರಹ್ಮಶ್ರೀ ಸೇವಾ ನಿಧಿ, ಸೇವಾ ಯೋಜನೆ ಯನ್ನು
ಉಜಿರೆ ಕನ್ಯಾಡಿ ಬಳಿ ಜ.4 ರ ರಂದು ಮಾರುತಿ ಓಮ್ನಿ ಮತ್ತು ಕೆಎಸ್ಆರ್ ಟಿಸಿ ಬಸ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಾಯಗೊಂಡ ಓಮ್ನಿ ಸವಾರ ರೆಂಕೆದಗುತ್ತು ನಿವಾಸಿ ದೇವರಾಜ್ ಪೂಜಾರಿ ಇವರು ಗಂಭೀರ ಗಾಯಗೊಂಡು ಉಜಿರೆ ಬೆನಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ದೇವರಾಜ್ ಕುಟುಂಬಕ್ಕೆ ಹೆಚ್ಚಿನ ಚಿಕಿತ್ಸೆ ಕಷ್ಟವೆಂಬುದನ್ನರಿತ ಬಿರುವೆರ್ ಕುಡ್ಲ ಬೆಳ್ತಂಗಡಿ ಘಟಕವೂ ಸದಸ್ಯರ ಹಾಗೂ ದಾನಿಗಳ ಸಹಕಾರದಿಂದ 27ನೇ ಸೇವಾ ಯೋಜನೆಯಾಗಿ ನಗದು ಚೆಕ್ ಅನ್ನು ಬೆನಕ ಆಸ್ಪತ್ರೆಗೆ ತೆರಳಿ ನೀಡಲಾಯಿತು.
ಈ ಸಂದರ್ಭದಲ್ಲಿ ಬಿರುವೆರ್ ಕುಡ್ಲ ಬೆಳ್ತಂಗಡಿ ಘಟಕದ ಅಧ್ಯಕ್ಷರಾದ ರಾಜೇಶ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಅರುಣ್ ಪೂಜಾರಿ,ಕೋಶಾಧಿಕಾರಿ ಹರ್ಷ ಕೋಟ್ಯಾನ್, ಸಂಚಾಲಕರಾದ ಸುರೇಂದ್ರ ಕೋಟ್ಯಾನ್,ಹಾಗೂ ಸಂತೋಷ್ ಕರ್ಕೇರ,ವಿನೋದ್ ಶೆಣೈ ಉಪಸ್ಥಿತರಿದ್ದರು.ಧನ ಸಹಾಯ ನೀಡಿದ ಎಲ್ಲಾ ಧಾನಿಗಳಿಗೆ ಧನ್ಯವಾದಗಳು