ಬಿರುವೆರ್ ಕುಡ್ಲ ದೇರಳಕಟ್ಟೆ ಘಟಕದ ಪ್ರಥಮ ಸೇವಾ ಯೋಜನೆ
ಬಡವರ ಕಾಮಧೇನು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, SNDPS ಪ್ರಶಸ್ತಿ ಪುರಸ್ಕೃತ, ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಮ್ಮೇಳನದ ಬಿರುದು ಪಡೆದ, ಬ್ರಹ್ಮಶ್ರೀ ನಾರಾಯಣಗುರುಸ್ವಾಮಿ ಗಳ ತತ್ವ, ಆದರ್ಶಗಳ ಪ್ರಕಾರ *ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ತತ್ವದೊಂದಿಗೆ, ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ ಎಂಬ ಉದ್ದೇಶದೊಂದಿಗೆ ನಿರಂತರ ಸಮಾಜಸೇವೆ ಮಾಡುತ್ತಿರುವ ಹೆಮ್ಮೆಯ ಬಿರುವೆರ್ ಕುಡ್ಲ, ಸಂಘಟನೆಯ ಅಂಗ ಸಂಸ್ಥೆಯಾದ ಬಿರುವೆರ್ ಕುಡ್ಲ ದೇರಳಕಟ್ಟೆ ಘಟಕದ ಪ್ರಥಮಸೇವಾ ಯೋಜನೆ
ಕುಂಪಲ, ಕುಜುಮಗದ್ದೆ ನಿವಾಸಿಯಾದ ಶ್ರೀ ವಿಠ್ಠಲ್ ಶೋಭಾ ಸಫಲ್ಯ ರವರ ಮಗನಾದ ರಕ್ಷಿತ್.ಎಂ, ಪ್ರಾಯ 18 ವರ್ಷ ಇವರು ರಕ್ತದ ಕಾಯಿಲೆ (ಬ್ಲಡ್ ಕ್ಯಾನ್ಸರ್) ನಿಂದ ಬಳಲುತ್ತಿದ್ದು ನಗರದ, ದೇರಳಕಟ್ಟೆ K.S ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅತ್ಯಂತ ಕಡು ಬಡತನದಲ್ಲಿ ಜೀವನ ಸಾಗಿಸುತ್ತಿರುವ ಈ ಕುಟುಂಬಕ್ಕೆ ವಿಧಿ ನೀಡಿದ ಪರೀಕ್ಷೆ ಎದುರಿಸಲಾರದೆ ಪರಿತಪಿಸುತ್ತಿದ್ದು, ಇವರ ಕುಟುಂಬ, ನಮ್ಮಲ್ಲಿ ಸಹಾಯಕೋರಿ ಮನವಿ ಮಾಡಿದ್ದಾರೆ.
ನಮ್ಮ ಘಟಕದಿಂದ ಸೇವಾಯೋಜನೆಯ ಬಗ್ಗೆ ಇವರಿಗೆ ಪ್ರಥಮ ಸೇವಾಯೋಜನೆಯನ್ನು ಕೊಡುದಾಗಿ ನಿಶ್ಚಿಸಿದ್ದೇವೆ .
ಇವರ ಮನವಿಯಂತೆ, ಬಿರುವೆರ್ ಕುಡ್ಲ ದೇರಳಕಟ್ಟೆ ಘಟಕ* ತುರ್ತಾಗಿ ಸ್ಪಂದಿಸಿ, ದಿನಾಂಕ 29/01/2021ರಂದು ಅವರು ದಾಖಲಾದ ಆಸ್ಪತ್ರೆ ಗೆ ತೆರಳಿ ಧನಸಹಾಯವನ್ನು ಹಸ್ತಾಂತರ ಮಾಡಲಾಯಿತು.
ಈ ಸಂದರ್ಭದಲ್ಲಿ ಬಿರುವೆರ್ ಕುಡ್ಲ, ದೇರಳಕಟ್ಟೆ ಘಟಕದ, ಅಧ್ಯಕ್ಷರು ಶ್ರೀ ಶ್ರವಣ್ ಪೂಜಾರಿ ಅಂಬ್ಲಮೊಗರು, ಉಪಾಧ್ಯಕ್ಷರಾದ ಶ್ರೀಕಾಂತ್ ಕುತ್ತಾರ್, ಪ್ರದಾನ ಕಾರ್ಯದರ್ಶಿಯಾದ ಪ್ರಜ್ವಲ್ ಅಂಚನ್, ಕುಂಪಲ,
ಜೊತೆ ಕಾರ್ಯದರ್ಶಿಯಾದ ವಿಶಿತ್ ಪೂಜಾರಿ ವೈದ್ಯನಾಥ ನಗರ, ಕೋಶಾಧಿಕಾರಿಯಾದ ಮಿತಿಲೇಶ್ ಪೂಜಾರಿ ವೈದ್ಯನಾಥ ನಗರ, ಸಂಘಟನಾ ಕಾರ್ಯದರ್ಶಿಗಳಾದ ಶ್ರೇಯಸ್ ತಲ್ವಾರ್, ಸಂತೋಷ್ ಗಾಣಿಗ ಹಾಗೂ ಕ್ರೀಡಾ ಕಾರ್ಯದರ್ಶಿ ಯಾದ ಸ್ವರೂಪ್ ಬಿ. ವಿ ಕುಂಪಲ, ಅಕ್ಷಯ್ ಕುಂಪಲ ಮತ್ತಿತರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರಕಟಣೆ
ಬಿರುವೆರ್ ಕುಡ್ಲ ದೇರಳಕಟ್ಟೆ ಘಟಕ.
ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ.