ಮಂಗಳೂರು ಫ್ರೆಂಡ್ಸ್ ಬಲ್ಲಾಳ್ ಬಾಗ್ ಬಿರುವೆರ್ ಕುಡ್ಲ ” ಸ್ಪಂದನ ಯೋಜನೆ” ವತಿಯಿಂದ ಅಶಕ್ತ ಮೂರು ಕುಟುಂಬಗಳಿಗೆ ಒಂದೂವರೆ ಲಕ್ಷ ರೂಪಾಯಿ ಮೌಲ್ಯದ ಸಹಾಯ ಧನ ವಿತರಣಾ ಕಾರ್ಯಕ್ರಮ ಮಂಗಳೂರಿನ ಕುದ್ರೋಳಿ ಗೋಕರ್ಣ ದೇವಸ್ಥಾನದ ಆವರಣದಲ್ಲಿ ನಡೆಯಿತು. ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ಚಾಲನೆ ನೀಡಿ, ಬಳಿಕ ಮಾತನಾಡಿದ ಅವರು. ಜಿಲ್ಲೆಯ ಜನತೆಗೆ ಬಿರವೆರ್ ಕುಡ್ಲ ಸಂಘಟನೆಯ ಸೇವೆ ಬಹು ದೊಡ್ಡ ಕೊಡುಗೆ. ಈ ಸಂಘಟನೆಯ ಜಿಲ್ಲೆಯ ಇತರ ಸಂಘ ಸಂಸ್ಥೆಗಳಿಗೆ ಮಾದರಿ ಈ ಸಂಘ ಕಳೆದ ಹಲವು ವರ್ಷದ ಅವಧಿಯಲ್ಲಿ ಒಂದುವರೆ ಕೋಟಿಗೂ ಅಧಿಕ ಮೊತ್ತದ ಸಹಾಯ ಅಸ್ತ ನೀಡುತ್ತಿದ್ದು ಶ್ಲಾಘನೀಯ ಕಾರ್ಯ ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೇವೆ ಈ ಸಂಘಟನೆಯಿಂದಾಗಲಿ ಎಂದವರು ಹೇಳಿದರು.
ಕಳೆದ 6 ವರ್ಷಗಳಲ್ಲಿ ಒಂದು ಕೋಟಿ ಎಪ್ಪತ್ತು ಲಕ್ಷಕ್ಕೂ ಮಿಕ್ಕಿ ಧನ ಸಹಾಯ ಅನಾರೋಗ್ಯ ಪೀಡಿತ ಕುಟುಂಬಕ್ಕೆ ಹಸ್ತಾಂತರಗೊಂಡಿದೆ. ನಾಗುರಿ ಮಜಾಲ್ ನಿವಾಸಿ ಲೋಕೇಶ್ ಅವರಿಗೆ ಸೊಂಟದ ಮೂಳೆ ಮುರಿತ ಹಾಗೂ ಒಂದು ಕಾಲು ಕಳೆದುಕೊಂಡವರಿಗೆ 50 ಸಾವಿರ ಸಹಾಯ ಹಸ್ತ.
ಬಜಾಲ್ ನಿವಾಸಿ ಪುರಂದರ ಅವರು ಕಿಡ್ನಿ ಮೂತ್ರ ಪಿಂಡ ವೈಫಲ್ಯ ಎರಡೂ ಕಾಲು ಕಳೆದುಕೊಂಡಿರುತ್ತಾರೆ ಇವರಿಗೆ 50 ಸಾವಿರದ ಸಹಾಯ ಹಸ್ತ.
ಪಿಲಿಕುಳ ಎದುರು ಪದವು ನಿವಾಸಿ ಬದ್ರುದ್ದೀನ್ ಮೂತ್ರ ಪಿಂಡ ವೈಫಲ್ಯದಿಂದ ಬಳಲುತ್ತಿದ್ದು ಇವರಿಗೆ 50 ಸಾವಿರ ಧನ ಸಹಾಯ.
ಈ ಸಂದರ್ಭದಲ್ಲಿ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ .ವೈ ಭರತ್ ಶೆಟ್ಟಿ, ಮಂಗಳೂರು ಮೇಯರ್ ದಿವಾಕರ್ ಪಾಂಡೇಶ್ವರ್, ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಎಚ್.ಎಸ್ ಸಾಯಿ ರಾಮ್,ಮೂಡ ಅಧ್ಯಕ್ಷ ರವಿ ಶಂಕರ್ ಮಿಜಾರ್,ರವೀಂದ್ರ ನಿಕಮ್,ಲತೀಶ್ ಬಲ್ಲಾಳ್ ಭಾಗ್,ಬಾಬಾ ಅಲಂಕಾರ್,ಸೂರಜ್ ಕಲ್ಯ,ಲಿಖಿತ್ ಕೋಟ್ಯಾನ್,ಲೋಹಿತ್ ಗಟ್ಟಿ,ರೆನಿತ್ ರಾಜ್ ಅಶೋಕ್ ನಗರ,ಮನೋಜ್ ಶೆಟ್ಟಿ,ರಾಕೇಶ್ ಸಾಲಿಯಾನ್,ಅಮಿತ್ ರಾಜ್,ರಾಮ್ ಎಕ್ಕೂರು,ವಾಝಿ ಪದವಿನಂಗಡಿ,ಅಶ್ರಫ್ ಆಲಿ ಕಾರ್ಕಳ,ದಿನಿಲ್ ಬಲ್ಲಾಳ್ ಭಾಗ್,ಸುರೇಶ್ ಬಲ್ಲಾಳ್ ಭಾಗ್,ರೋಷನ್ ಬಲ್ಲಾಳ್ ಭಾಗ್,ಕಿಶೋರ್ ಬಾಬು ಕೋಡಿಕಲ್,ಪ್ರಾಣೇಶ್ ಬಂಗೇರ,ಕಿರಣ್ ಉರ್ವ,ಯಶ್ವಿನ್ ಪೂಜಾರಿ,ರಕ್ಷಿತ್ ಮೂಲ್ಕಿ, ಮುಂತಾದ ಪ್ರಾಮುಖ ಸದಸ್ಯರು ಮತ್ತು ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.