TOP STORIES:

ಬೇಗ ತೂಕ ಇಳಿಸಲು ಈ ಐದು ಹಣ್ಣುಗಳನ್ನು ಸೇವಿಸಿ


ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವವರು ಅತ್ಯಂತ ಬೇಗನೆ ತೂಕ ಕಳೆದೊಳ್ಳಬೇಕು ಎಂದುಕೊಂಡಿದ್ರೆ ಫ್ರೂಟ್‌ ಡಯಟ್‌ ಆಯ್ಕೆ ಮಾಡಿಕೊಳ್ಳೋದು ಉತ್ತಮ. ದೇಹಕ್ಕೆ ಬೇಕಾದ ಫೈಬರ್‌ ಅಂಶವನ್ನು ಇದು ಪೂರೈಸುತ್ತದೆ. ಆದ್ರೆ ಡಯಟ್‌ ಗೆ ಯಾವ ಹಣ್ಣು ಸೂಕ್ತ ಎಂಬುದನ್ನು ತಿಳಿದುಕೊಳ್ಳಬೇಕು.

ಬಾಳೆಹಣ್ಣು : ಅತ್ಯಧಿಕ ಪೋಷಕಾಂಶಗಳುಳ್ಳ ಬಾಳೆಹಣ್ಣು ಡಯಟ್‌ ಗೆ ಸೂಕ್ತ. ಮ್ಯಾಂಗನೀಸ್‌ ಹಾಗೂ ಪೊಟ್ಯಾಶಿಯಂ ಅಂಶಗಳು ಇದರಲ್ಲಿವೆ. ಇದು ದೇಹದಲ್ಲಿರುವ ಕೊಲೆಸ್ಟ್ರಾಲ್‌ ಅನ್ನು ನಿಯಂತ್ರಣದಲ್ಲಿಡುತ್ತದೆ. ಬಾಳೆಹಣ್ಣನ್ನು ಓಟ್‌ ಮೀಲ್‌ ಬೌಲ್‌ ಜೊತೆಗೆ ಸೇವಿಸಿ. ಅಥವಾ ಬನಾನಾ ಶೇಕ್‌ ಮಾಡಿಕೊಳ್ಳಿ, ಇಲ್ಲವಾದಲ್ಲಿ ಸಲಾಡ್‌ ನೊಟ್ಟಿಗೂ ತಿನ್ನಬಹುದು.

ಸೇಬು : ಕಡಿಮೆ ಕ್ಯಾಲೋರಿ ಹಾಗೂ ಅತ್ಯಧಿಕ ಫೈಬರ್‌ ಹೊಂದಿರೋ ಹಣ್ಣು ಇದು. ಆಗಾಗ ಏನಾದ್ರೂ ಕುರುಕಲು ತಿನ್ನಬೇಕೆಂಬ ಚಪಲ ತಡೆದು, ತೂಕ ಇಳಿಸಲು ಇದು ಸಹಾಯ ಮಾಡುತ್ತದೆ. ದಿನವಿಡೀ ಚಟುವಟಿಕೆಯಿಂದಿರಲು ಕೂಡ ಸೇಬು ಸಹಕರಿಸುತ್ತದೆ.

ಅವಕಾಡೊ : ನಿಮ್ಮ ಹಸಿವನ್ನು ಇಂಗಿಸಿ, ಬಾಯಿ ಚಪಲ ಕಡಿಮೆ ಮಾಡುತ್ತದೆ ಈ ಹಣ್ಣು. ಅವಕಾಡೊ ತಿನ್ನುವುದರಿಂದ ತೂಕ ಹೆಚ್ಚಬಹುದೆಂಬ ಭಯವಿಲ್ಲ. ಯಾಕಂದ್ರೆ ಇದರಲ್ಲಿ ನಿಮ್ಮ ದೇಹಕ್ಕೆ ಅಗತ್ಯವಾದ ಗುಡ್‌ ಫ್ಯಾಟ್‌ ಇದೆ.

ದ್ರಾಕ್ಷಿ : ಪೆಂಡಮಿಕ್‌ ನಿಂದಾಗಿ ಎಲ್ಲರೂ ಇಮ್ಯೂನಿಟಿ ಹೆಚ್ಚಿಸಿಕೊಳ್ಳುವತ್ತ ಗಮನಹರಿಸ್ತಿದ್ದಾರೆ. ದ್ರಾಕ್ಷಿ ಹಣ್ಣಿನಲ್ಲಿ ವಿಟಮಿನ್‌ ಸಿ ಹೇರಳವಾಗಿದ್ದು, ನಿಮ್ಮ ಇಮ್ಯೂನಿಟಿ ಬೂಸ್ಟರ್‌ ಆಗಿ ಇದು ಕೆಲಸ ಮಾಡುತ್ತದೆ. ನಿಮ್ಮ ರಕ್ತದೊತ್ತಡವನ್ನು ನಿಯಂತ್ರಣದಲ್ಲಿರಲು ಸಹಕರಿಸುತ್ತದೆ.

ಬೆರ್ರಿ : ರಾಸ್ ಬೆರ್ರಿ, ಬ್ಲೂ ಬೆರ್ರಿ, ಸ್ಟ್ರಾಬೆರ್ರಿ ಹಣ್ಣುಗಳು ತಿನ್ನಲು ಬಹಳ ರುಚಿಕರ, ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು. ಇವುಗಳಲ್ಲಿ ಆಂಟಿಒಕ್ಸಿಡೆಂಟ್ಸ್‌ ಹೇರಳವಾಗಿದೆ. ವಿಟಮಿನ್‌, ಮಿನರಲ್ಸ್‌ ಕೂಡ ಇದೆ. ಹಾಗಾಗಿ ನಿಮ್ಮ ಡಯಟ್‌ ನಲ್ಲಿ ಸೇರಿಸಿಕೊಳ್ಳಿ.


Related Posts

ಬಹರೖನ್ ನ ಕಸ್ತೂರಿ ಕನ್ನಡ ಎಫ್.ಎಂ ರೇಡಿಯೋ ಆರ್.ಜೆ ಕಮಲಾಕ್ಷ ಅಮೀನ್ ಅವರಿಗೆ ಗೋಲ್ಡನ್ ಐಕಾನಿಕ್ ಅವಾರ್ಡ್


Share         ಮಂಗಳೂರು: ಬಹರೖನ್ ನ ಕಸ್ತೂರಿ ಕನ್ನಡ ಎಫ್.ಎಂ ರೇಡಿಯೋ ಆರ್.ಜೆ ಕಮಲಾಕ್ಷ ಅಮೀನ್ ಅವರನ್ನು ಮಂಗಳೂರಿನಲ್ಲಿ ಗೋಲ್ಡನ್ ಐಕಾನಿಕ್ ಅವಾರ್ಡ್ ಗೌರವ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಹೋಟೆಲ್ ಓಷನ್ ಪರ್ಲ್ ನಲ್ಲಿ ನಡೆದ


Read More »

ಪೂಜಾರಿ ಎಂದು ಗುರುತಿಸಿಕೊಂಡಿರುವವರು ಜನಗಣತಿಯಲ್ಲಿ ಕಡ್ಡಾಯವಾಗಿ ಬಿಲ್ಲವ ಎಂದು ನಮೂದಿಸಿ ಡಾ. ರಾಜಶೇಖರ್ ಕೋಟ್ಯಾನ್


Share         ಮಂಗಳೂರು ಅಗಸ್ಟ್ 18: ಅನೇಕ ಕಡೆ ದೇವಸ್ಥಾನದಲ್ಲಿ ಪೂಜೆ ಮಾಡುವವರೂ ಪೂಜಾರಿ ಎಂದು ಗುರುತಿಸಿಕೊಂಡಿರುವುದರಿಂದ ಈ ಸಲದ ಜನಗಣತಿಯಲ್ಲಿ ನಾವು ʻಜಾತಿ’ ಎಂಬ ಕಾಲಂನಲ್ಲಿ ಕಡ್ಡಾಯವಾಗಿ ʻಬಿಲ್ಲವ’ ಎಂದೇ ನಮೂದಿಸಬೇಕು ಎಂದು ಬಿಲ್ಲವ


Read More »

ಬಿಲ್ಲವ ಸಮಾಜದ ಹೆಮ್ಮೆಯ ಕಣ್ಮಣಿ ಪ್ರಾಮಾಣಿಕ ಪೊಲೀಸ್ ಅಧಿಕಾರಿ ಶಾಂತಾರಾಮ್ ಕುಂದರ್


Share         ಬಿಲ್ಲವ ಸಮಾಜದ  ಹೆಮ್ಮೆಯ ಕಣ್ಮಣಿ ದಕ್ಷ, ಧೈರ್ಯ ಪ್ರಾಮಾಣಿಕ ಪೊಲೀಸ್ ಅಧಿಕಾರಿ ನಮ್ಮವರಾಧ ಪೊಲೀಸ್ ಇನ್ಸ್ಪೆಕ್ಟರ್ ಶಾಂತಾರಾಮ್ ಕುಂದರ್ ಅವರ ವೃತ್ತಿಜೀವನದುದ್ದಕ್ಕೂ ಸಾರ್ವಜನಿಕ ಸೇವೆಯ ಕಡೆಗೆ ಅವರ ಅಪಾರ ಸಮರ್ಪಣೆ, ಶಿಸ್ತು, ನಿಷ್ಠೆ


Read More »

ಪುತ್ತೂರು ಕೆಯ್ಯೂರಿನ ಪಿಎಸ್‌ಐ ಪ್ರದೀಪ್ ಪೂಜಾರಿಯವರಿಗೆ ಮುಂಬಡ್ತಿ ಲೋಕಾಯುಕ್ತ ಇನ್ಸ್‌ಪೆಕ್ಟ‌ರ್ ಆಗಿ ನಿಯುಕ್ತಿ..


Share         ಬೆಂಗಳೂರು: ರಾಜ್ಯದಲ್ಲಿ ಸಬ್ ಇನ್ ಪೆಕ್ಟರ್ (ಸಿವಿಲ್)ಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದ 16 ಮಂದಿಗೆ ಪೊಲೀಸ್ ಇನ್ಸ್‌ಪೆಕ್ಟರ್‌ಗಳಾಗಿ ಮುಂಬಡ್ತಿ ನೀಡಿ ವರ್ಗಾವಣೆ ಮಾಡಲಾಗಿದ್ದು ಕೆಯ್ಯರಿನ ಪ್ರದೀಪ್ ಪೂಜಾರಿಯವರನ್ನು ಪೊಲೀಸ್ ಇನ್ಸ್‌ಪೆಕ್ಟ‌ರ್ ಆಗಿ ಭಡ್ತಿಗೊಳಿಸಿ ಕರ್ನಾಟಕ


Read More »

ವೆನ್ಲಾಕ್‌ನ ಖ್ಯಾತ ಮೂತ್ರರೋಗ ತಜ್ಞ ಡಾ.ಸದಾನಂದ ಪೂಜಾರಿಗೆ ಪ್ರತಿಷ್ಠಿತ ಹೆಲ್ತ್‌ಕೇರ್‌ ಎಕ್ಸಲೆನ್ಸ್‌ ಅವಾರ್ಡ್‌


Share         ಮಂಗಳೂರು: ಕನ್ನಡದ ಜನಪ್ರಿಯ ವಾಹಿನಿ ‘ಏಷ್ಯಾನೆಟ್‌ ಸುವರ್ಣ ನ್ಯೂಸ್’ ಹಾಗೂ ಕನ್ನಡದ ಖ್ಯಾತ ದಿನಪತ್ರಿಕೆ ‘ಕನ್ನಡ ಪ್ರಭ’ ಜಂಟಿಯಾಗಿ ನೀಡುವ ಪ್ರತಿಷ್ಠಿತ ‘ಹೆಲ್ತ್‌ಕೇರ್ ಎಕ್ಸಲೆನ್ಸ್ 2025’ ಅವಾರ್ಡ್‌ಗೆ ಮಂಗಳೂರು ವೆನ್ಲಾಕ್‌ ಆಸ್ಪತ್ರೆಯ ಖ್ಯಾತ


Read More »