ಬ್ರಹ್ಮ ಶ್ರೀ ನಾರಾಯಣ ಗುರು ಅಧ್ಯಯನ ಪೀಠ ಮಂಗಳೂರು ವಿಶ್ವವಿದ್ಯಾನಿಲಯ ನಿರ್ದೇಶಕರಾದ ಮುದ್ದು ಮೂಡುಬೆಳ್ಳೆ ಇವರಿಂದ ” ಶ್ರೀ ಗುರು ಸ್ಮೃತಿ – 2020″
“ಒಂದೇ ಜಾತಿ..ಒಂದೇ ಮತ .. ಒಂದೇ ದೇವರು ”
ಈ ಸಾರವನ್ನು ಲೋಕಮುಖಕ್ಕೆ ಪಸರಿಸಿದ ವಿಶ್ವಗುರು ಬ್ರಹ್ಮಶ್ರೀ ನಾರಾಯಣ ಗುರುವರ್ಯರ ಜಯಂತಿಯ ಅಂಗವಾಗಿ ಫೇಸ್ ಬುಕ್ ವೀಡಿಯೋ ಪ್ರಬಂಧ ಮಂಡನಾ ಸ್ಪರ್ಧೆ.
ವಿಷಯ:”ಬ್ರಹ್ಮ ಶ್ರೀ ನಾರಾಯಣ ಗುರುಗಳ ತತ್ವಗಳನ್ನು ಜೀವನದಲ್ಲಿ ಅಳವಡಿಸುವಲ್ಲಿ ನಮ್ಮ ಪಾತ್ರ ”
ಸರ್ವ ಸಮಾಜದ ಚಿತ್ತ ಗುರುಗಳತ್ತ
▪️ಜಾತಿ ಮತ ಭೇದವಿಲ್ಲದೆ ಸ್ಪರ್ಧೆಯಲ್ಲಿ ಭಾಗವಹಿಸಲು ಮುಕ್ತ ಅವಕಾಶ
▪️ಪ್ರೌಢಶಾಲೆ ಶಾಲಾ ವಿಭಾಗ {ವೀಡಿಯೊ ಕನ್ನಡ ಅಥವಾ ಇಂಗ್ಲಿಷ್ ನಲ್ಲಿರಲಿ}
▪️ಕಾಲೇಜು ವಿಭಾಗ {ವೀಡಿಯೊ ಕನ್ನಡ ಅಥವಾ ಇಂಗ್ಲಿಷ್ ನಲ್ಲಿರಲಿ}
▪️ಸಾರ್ವಜನಿಕರಿಗೆ ವಿಭಾಗ {ವಯಸ್ಸಿನ ಮಿತಿಯಿಲ್ಲ ಮತ್ತು ವೀಡಿಯೊ ತುಳು ಅಥವಾ ಕನ್ನಡ ಅಥವಾ ಇಂಗ್ಲಿಷ್ ನಲ್ಲಿರಲಿ}
▪️ಪ್ರೌಢಾಶಾಲಾ ವಿಭಾಗ -ಕಾಲೇಜು ವಿಭಾಗ ಹಾಗೂ ಸಾರ್ವಜನಿಕ ವಿಭಾಗ ಹೀಗೆ 3 ವಿಭಾಗವನ್ನಾಗಿ ಪ್ರತ್ಯೇಕಿಸಿ ಅಂಕಗಳನ್ನು ನೀಡಲಾಗುವುದು.
▪️ಮೂರು ವಿಭಾಗಗಳಲ್ಲೂ
ಪ್ರಥಮ{3,000}
ದ್ವಿತೀಯ{2,000}
ತೃತೀಯ{1,000}
ಬಹುಮಾನಗಳನ್ನು ನೀಡಲಾಗುವುದು.
ನಿಯಮಗಳು:
▪️ನಿಮ್ಮ ಪ್ರಬಂಧ ವಾಚನದ ವೀಡಿಯೋ ಕಡ್ಡಾಯವಾಗಿ 5 ನಿಮಿಷಕ್ಕೆ ಮೀರಿರಬಾರದು
▪️ನಿಮ್ಮ ವೀಡಿಯೋ ಗುಣಮಟ್ಟ ಉತ್ತಮವಾಗಿರಲಿ ಹಾಗೂ ಮಾತುಗಳು ಸ್ಫುಟವಾಗಿರಲಿ.
▪️ನಿಮ್ಮ ಪ್ರತಿಭೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಿಲ್ಲವ ಸೇವಾ ಮಾಣಿಕ್ಯದಾತರ ಸಮಾಗಮ ಪೇಜ್ ಲ್ಲಿ ಅನಾವರಣಗೊಳ್ಳುವ ಮೂಲಕ ಲಿಂಕ್ ನ್ನು ಆಯಾ ಸ್ಪರ್ಧಿಗಳಿಗೆ ಕಳುಹಿಸಲಾಗುವುದು.
▪️ಒಟ್ಟು ಸ್ಪರ್ಧೆಯಲ್ಲಿ ಅತೀ ಹೆಚ್ಚು Views ಪಡೆದ ಒಂದು ವೀಡಿಯೋ ಗೆ ಆಕರ್ಷಕ ಬಹುಮಾನವಿದೆ.
▪️ತಾ-27-08-20 ರ ಸಾಯಂಕಾಲ 5 ಗಂಟೆಯ ವರೆಗಿನ views ನ್ನು ಸ್ಪರ್ಧೆಯಲ್ಲಿ ಗಣನೆಗೆ ತೆಗೆದುಕೊಳ್ಳಲಾಗುವುದು
▪️ನಿಮ್ಮ ವೀಡಿಯೋ ನಮ್ಮ ಕೈ ಸೇರಲು ಕೊನೆಯ ದಿನಾಂಕ 21-08-2020
▪️ನಿಮ್ಮ ವೀಡಿಯೋ ಕ್ಲಿಪ್ ಗಳನ್ನು ಈ ವಾಟ್ಸಾಪ್ ಲಿಂಕ್ ಮೂಲಕ ಕಳುಹಿಸಿ
▪️ಅಥವಾ ವಿಡಿಯೋ ಕ್ಲಿಪ್ ಗಳನ್ನು ಈ ನಂಬರಿಗೆ ವಾಟ್ಸಾಪ್ ಮುಖಾಂತರ ಕಳುಹಿಸಿ. +919607064431
▪️ತೀರ್ಪುಗಾರರ ತೀರ್ಮಾನವೇ ಅಂತಿಮ ತೀರ್ಮಾನ
▪️ಪ್ರಬಂಧವು ಗುರುವರ್ಯರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಹಾಗೂ ಈ ಮೂಲಕ ಗುರುಗಳ ಸಂದೇಶವನ್ನು ವಿಶ್ವಕ್ಕೆ ಸಾರುವುದಕ್ಕೆ ಪೂರಕವಾಗಿರಲಿ ಹಾಗೂ ಅಂಕಗಳು ಪಡೆಯಲು ಇದು ಬಹಳ ಪ್ರಾಮುಖ್ಯವಾಗಿರುತ್ತದೆ.