ಬ್ರಹ್ಮಶ್ರೀ ನಾರಾಯಣ ಗುರು ನಿಗಮ ಕುರಿತು ಸರ್ಕಾರ ಬಜೆಟ್‌ನಲ್ಲಿ ಪ್ರಸ್ತಾವಿಸದೆ ಬಿಲ್ಲವ ಸಮಾಜವನ್ನು ಕಡೆಗಣಿಸಿದೆ
ಈ ವರ್ಷದ ಬಜೆಟ್‌ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ನಿಗಮ,ಸ್ವಸಹಾಯ ಗುಂಪುಗಳಿಗೆ ಕಡಿಮೆ ಬಡ್ಡಿದರ ಸಾಲ ಬೇಡಿಕೆಗಳನ್ನು ಪುರಸ್ಕರಿಸುತ್ತಾರೆ ಮತ್ತು ಬಿಲ್ಲವ ಸಮಾಜಕ್ಕೆ ಅನುಕೂಲಕರ ಯೋಜನೆಗಳನ್ನು ಪ್ರಕಟಿಸುತ್ತಾರೆ ಎನ್ನುವ ವಿಶ್ವಾಸವಿತ್ತು.ಆದರೆ ಎಲ್ಲಾ ನಿರೀಕ್ಷೆಗಳು ಹುಸಿಯಾಗಿದೆ.ನಮ್ಮ ಸಮಾಜದ ಮುಖಂಡರು ಅನೇಕ ಬಾರಿ ಜನಪ್ರತಿನಿಧಿಗಳು ಸೇರಿದಂತೆ ಮುಖ್ಯಮಂತ್ರಿಗಳನ್ನು ಬೇಟಿಯಾಗಿ ಈ ಕುರಿತು ಮನವಿ ನೀಡಿದ್ದರೂ ಸರ್ಕಾರ ಯಾವುದೇ ಮನ್ನಣೆ ನೀಡದೆ ಸಮಾಜವನ್ನು ಕಡೆಗಣಿಸಿದೆ.ಬಿಲ್ಲವ ಈಡಿಗ ಸಮುದಾಯ ರಾಜ್ಯದಲ್ಲಿ 26ಉಪಪಂಗಡಗಳೊಂದಿಗೆ 4ನೇ ಬೃಹತ್ ಜನಸಮುದಾಯವನ್ನು ಹೊಂದಿದ್ದರೂ ಪದೇಪದೆ ಸರ್ಕಾರ ನಿರ್ಲಕ್ಷಿಸುವುದು ಸಮಂಜಸವಲ್ಲ.ಬಿಲ್ಲವರನ್ನು ಬರೇ ವೋಟ್‌ಬ್ಯಾಂಕ್‌ಗೆ ಸೀಮಿತಗೊಳಿಸುತ್ತಾ ವಂಚಿಸುತ್ತಿರುವ ಕುರಿತು ಸಮಾಜದ ಎಲ್ಲರೂ ವಿವೇಚಿಸಿಕೊಳ್ಳವಂತೆ ವಿನಂತಿ.
ಪ್ರವೀಣ್ ಎಂ ಪೂಜಾರಿ
ಅಧ್ಯಕ್ಷರು
ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ)