ಪೂಜ್ಯ ಸ್ವಾಮೀಜಿಯವರ ನೇತೃತ್ವದಲ್ಲಿ ಉಪ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿ. ಕೆ ಶಿವಕುಮಾರ್ ರವರನ್ನು ಮತ್ತುಹಿಂದುಳಿದ ವರ್ಗದ ಸಚಿವರು ಶ್ರೀ ಶಿವರಾಜ್ ತಂಗಡಿ ಯವರನ್ನು ಭೇಟಿ ಬ್ರಹ್ಮ ಶ್ರೀ ನಾರಾಯಣ ಗುರು ನಿಗಮಕ್ಕೆ ಕೂಡಲೇ ಹಣಮೀಸಲಿಡುವುದಕ್ಕೆ ಮತ್ತು ಪದಾಧಿಕಾರಿಗಳ ಆಯ್ಕೆ ಮಾಡುವುದಕ್ಕೆ ಒತ್ತಾಯ.
ಈ ದಿನ ಬೆಂಗಳೂರಿನಲ್ಲಿ ಪೂಜ್ಯ ಸ್ವಾಮೀಜಿಯವರು ಮತ್ತು ಸಮಾಜದ ಹಿರಿಯ ಮುಖಂಡರು ಶ್ರೀ ಹೆಚ್. ಆರ್ ಶ್ರೀನಾಥ ಧಣಿಗಳುರಾಷ್ಟ್ರೀಯ ಈಡಿಗ ಬಿಲ್ಲವ ನಾಮಧಾರಿ ದೀವರ ಮಹಾ ಮಂಡಳಿಯ ಪದಾಧಿಕಾರಿಗಳ ನೇತೃತ್ವದಲ್ಲಿ ಉಪ ಮುಖ್ಯಮಂತ್ರಿಗಳಾದಸನ್ಮಾನ್ಯ ಶ್ರೀ ಡಿ.ಕೆ ಶಿವಕುಮಾರ್ ರವರನ್ನು ಮತ್ತು ಹಿಂದುಳಿದ ವರ್ಗದ ಸಚಿವರು ಶ್ರೀ ಶಿವರಾಜ್ ತಂಗಡಿ ಯವರನ್ನು ಭೇಟಿಯಾಗಿಬ್ರಹ್ಮ ಶ್ರೀ ನಾರಾಯಣ ಗುರು ನಿಗಮಕ್ಕೆ ಹಣವನ್ನು ಮೀಸಲಿಡದ ಕಾರಣ ಸಮಾಜದ ನೋವನ್ನು ವ್ಯಕ್ತಪಡಿಸಿದರು ಮತ್ತು ಈ ದಿನಕರ್ನಾಟಕದ ಕೆಲ ಪತ್ರಿಕೆಯಲ್ಲಿ ಕೂಡ 24 ನಿಗಮಗಳಲ್ಲಿ 7 ನಿಗಮಗಳಿಗೆ ಹಣವನ್ನು ಮೀಸಲೀಡಲಾಗಿರುವುದ್ದನ್ನು ಶ್ರೀ ಗಳುಸನ್ಮಾನ್ಯ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ ಶಿವಕುಮಾರ್ ಮತ್ತು ಹಿಂದುಳಿದ ವರ್ಗದ ಸಚಿವರು ಶ್ರೀ ಶಿವರಾಜ್ತಂಗಡಿಯವರಿಗೆ ಪತ್ರಿಕೆ ಯ ಪ್ರತಿಯನ್ನು ನೀಡಿದರು, ಹಾಗಾಗಿ ಕೂಡಲೇ ಬ್ರಹ್ಮಶ್ರೀ ನಾರಾಯಣ ಗುರು ನಿಗಮಕ್ಕೆ ಚುನಾವಣೆಪರ್ವದಲ್ಲಿ ನೀಡಿದ ಭರವಸೆಯಂತೆ 250 ಕೋಟಿ ರೂಗಳನ್ನು ಬಿಡುಗಡೆ ಮಾಡಬೇಕು ಮತ್ತು ಬ್ರಹ್ಮ ಶ್ರೀ ನಾರಾಯಣ ಗುರು ನಿಗಮಕ್ಕೆ ಅಧ್ಯಕ್ಷರನ್ನು ಮತ್ತು ಪದಾಧಿಕಾರಿಗಳನ್ನು ಆಯ್ಕೆ ಮಾಡಬೇಕೆಂದು ಶ್ರೀಗಳು ಸಚಿವರಿಗೆ ತಿಳಿಸಿದರು, ಇದಕ್ಕೆಸಕರಾತ್ಮಕವಾಗಿ ಸ್ಪಂದಿಸಿದ ಉಪಮುಖ್ಯಮಂತ್ರಿಗಳು ಮತ್ತು ಸಚಿವರು ಕೂಡಲೇ ಈ ವಿಷಯಗಳ ಬಗ್ಗೆ ಕ್ರಮ ಕೈಗೊಳ್ಳಲಾಗುವುದುಮತ್ತು ತಮ್ಮ ಸಮಾಜಕ್ಕೆ ಯಾವ ರೀತಿಯಲ್ಲಿಯೂ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುವುದೆಂದು ಬರವಸೆನೀಡಿದರು ಹೀಗೆಸಮಾಜದ ಸಂಪೂರ್ಣ ನೋವುಗಳನ್ನು ಶ್ರೀಗಳು ತೋಡಿಕೊಂಡರು, ಕೂಡಲೆ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಸನ್ಮಾನ್ಯಉಪಮುಖ್ಯಮಂತ್ರಿಗಳು ಮತ್ತು ಸಚಿವರು ಗುರುಗಳಿಗೆ ತಿಳಿಸಿದರು.
ಈ ಸಮಯದಲ್ಲಿ ರಾಷ್ಟ್ರೀಯ ಈಡಿಗ ಮಹಾಮಂಡಳಿಯ ರಾಷ್ಟ್ರೀಯ ಕಾರ್ಯದರ್ಶಿಯಾದ ಡಾ. ಶ್ರೀ ಮಂಚೇಗೌಡ, ರಾಜ್ಯಾಧ್ಯಕ್ಷರಾದ ಶ್ರೀ ಜಿ. ಎನ್ ಸಂತೋಷ್, ಶ್ರೀ ನಾಗರಾಜ್ ನಾಯಕ್ ,ಶ್ರೀ ಜನಾರ್ಧನ್,ಶ್ರೀ ಉದಯ ಗೌಡ , ಶ್ರೀ ನಾಗಯ್ಯಗುತೇಧಾರ್, ಶ್ರೀ ಗುರುರಾಜ್ ,ಶ್ರೀ ಸುನಿಲ್,ಶ್ರೀ ಸಚಿನ್ ನಾಯಕ್ ಶ್ರೀಗಳ ಜೊತೆ ಉಪಸ್ಥಿತರಿದ್ದರು.