TOP STORIES:

ಮಂಗಳೂರು ದಕ್ಷಿಣ: ಕಾಂಗ್ರೆಸ್ ನಿಂದ ಈ ಬಾರಿ ಹೊಸ ಮುಖ?; ಕೇಂದ್ರ ಯುವ ನ್ಯಾಯವಾದಿ ಪದ್ಮರಾಜ್ ಆರ್. ಅಭ್ಯರ್ಥಿ?


ಮಂಗಳೂರು(reporterkarnataka.com): ಮುಂಬರುವ ವಿಧಾನ ಸಭೆ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮೊದಲ ಪಟ್ಟಿಈಗಾಗಲೇ ಬಿಡುಗಡೆಯಾಗಿದೆ. ಇದೀಗ ಎರಡನೇ ಪಟ್ಟಿಗೆ ಟಿಕೆಟ್ ಆಕಾಂಕ್ಷಿಗಳು ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ. ಮಂಗಳೂರುಉತ್ತರ, ಮಂಗಳೂರು ದಕ್ಷಿಣ ಹಾಗೂ ಪುತ್ತೂರು ಕ್ಷೇತ್ರದಲ್ಲಿ ಟಿಕೆಟ್ ಯಾರಿಗೆ ಎನ್ನುವ ಕುತೂಹಲ ಎಲ್ಲೆಡೆ ಮೂಡಿದೆ.
ಹಲವು ಚುನಾವಣೆಗಳಲ್ಲಿ ಸೋತ ಕಾಂಗ್ರೆಸ್ ಕೂಡ ಬಾರಿ ತನ್ನ ಸ್ಟಾಟಜಿಯನ್ನು ಸ್ವಲ್ಪ ಬದಲಾಯಿಸಿದೆ. ಬೆಳ್ತಂಗಡಿ ಕ್ಷೇತ್ರದಲ್ಲಿವಸಂತ ಬಂಗೇರ ಬದಲಿಗೆ ಹೊಸ ಮುಖಕ್ಕೆ ಟಿಕೆಟ್ ನೀಡಿದೆ. ರಕ್ಷಿತ್ ಶಿವರಾಂ ಬಾರಿ ಬೆಳ್ತಂಗಡಿಯಿಂದ ಅಖಾಡಕ್ಕಿಳಿದಿದ್ದಾರೆ. ಹಾಗೆ ಮಂಗಳೂರು ಉತ್ತರ ಮತ್ತು ಮಂಗಳೂರು ದಕ್ಷಿಣದಲ್ಲಿ ಕೂಡ ಕಾಂಗ್ರೆಸ್ ಹೊಸ ಮುಖಕ್ಕೆ ಅವಕಾಶ ನೀಡಲಿದೆ. ಕಾಂಗ್ರೆಸ್ಹೈಕಮಾಂಡಿನ ಸೂಚನೆ ಮೇರೆಗೆ ಕೆಪಿಸಿಸಿ ತನ್ನ ಸ್ಟಾಟಜಿ ಬದಲಾಯಿಸಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಮಂಗಳೂರು ಉತ್ತರ ಕ್ಷೇತ್ರದಲ್ಲಿ ಮಾಜಿ ಶಾಸಕ ಮೊಯ್ದೀನ್ ಬಾವಾ ಅವರ ಬದಲಿಗೆ ಕೆಪಿಸಿಸಿ ಕಾರ್ಯದರ್ಶಿ ಇನಾಯತ್ ಆಲಿಅವರನ್ನು ಕಣಕ್ಕಿಸುವ ಬಗ್ಗೆ ಕೆಪಿಸಿಸಿ ಚಿಂತನೆ ನಡೆಸಿದೆ. ಅದೇ ರೀತಿ ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿಯೂ ಬಾರಿಬದಲಾವಣೆಯಾಗಲಿದೆ ಎಂಬ ಮಾತು ಕೇಳಿ ಬರುತ್ತಿದೆ. ಮಂಗಳೂರು ಉತ್ತರವನ್ನು ಅಲ್ಪಸಂಖ್ಯಾತ ಅಭ್ಯರ್ಥಿ ಗೆಬಿಟ್ಟುಕೊಡುವುದರಿಂದ ಮಂಗಳೂರು ದಕ್ಷಿಣದಲ್ಲಿ ಬೇರೆ ಸಮುದಾಯದ ಅಭ್ಯರ್ಥಿ ಗೆ ಅವಕಾಶ ಕಲ್ಪಿಸುವ ಬಗ್ಗೆ ಪಕ್ಷದಹೈಕಮಾಂಡಿನಿಂದ ಸೂಚನೆ ಬಂದಿದೆ ಎನ್ನಲಾಗಿದೆ. ಕಾಂಗ್ರೆಸ್ ಬದಲಾದ ಸ್ಟಾಟಜಿ ಪ್ರಕಾರ ದಕ್ಷಿಣದಿಂದ ಯುವ ನ್ಯಾಯವಾದಿಪದ್ಮರಾಜ್ ಆರ್. ಅವರಿಗೆ ಟಿಕೆಟ್ ದೊರೆಯುವುದು ಬಹುತೇಕ ಖಚಿತವಾಗಿದೆ.

ಯಾರು ಪದ್ಮರಾಜ್?: ಮಂಗಳೂರಿನಲ್ಲಿ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಪದ್ಮರಾಜ್ ಅವರದ್ದು ಬಹುದೊಡ್ಡ ಹೆಸರು. ಕುದ್ರೋಳಿ ಗೋಕರ್ಣನಾಥ ದೇಗುಲದ ಟ್ರಸ್ಟಿಯಾಗಿ ಅವರು ನಾಡಿನುದ್ಧಗಲಕ್ಕೂ ಚಿರಪರಿಚಿತರು. ಸಾಮಾಜಿಕ ಹಾಗೂ ಧಾರ್ಮಿಕಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಪದ್ಮರಾಜ್ ಅವರು ಕೇಂದ್ರ ಮಾಜಿ ಸಚಿವ ಬಿ. ಜನಾರ್ಧನ ಪೂಜಾರಿ ಅವರ ಕಟ್ಟರ್ಅನುಯಾಯಿ. ಹಾಗೆ ಪೂಜಾರಿಯವರ ಆಪ್ತ ಬಳಗದವರಲ್ಲಿ ಒಬ್ಬರು. ಗುರು ಬೆಳದಿಂಗಳು ಟ್ರಸ್ಟ್ ಮೂಲಕ ಸಮಾಜ ಸೇವೆಯಲ್ಲಿಅವರು ತೊಡಗಿಸಿಕೊಂಡಿದ್ದಾರೆ. ಮಂಗಳೂರಿನ ನಾಗೂರಿ ಬಳಿ ಇತ್ತೀಚೆಗೆ ನಡೆದ ಕುಕ್ಕರ್ ಸ್ಫೋಟದಲ್ಲಿ ತೀವ್ರವಾಗಿ ಗಾಯಗೊಂಡಆಟೋ ಚಾಲಕನ ಕುಟುಂಬದ ಹಳೆಯ ಮನೆಯನ್ನು 6 ಲಕ್ಷ ರೂ. ವೆಚ್ಚದಲ್ಲಿ ಕೇವಲ 4 ತಿಂಗಳ ಅವಧಿಯಲ್ಲಿ ಪದ್ಮರಾಜ್ ಅವರನೇತೃತ್ವದ ಟ್ರಸ್ಡ್ ಮೂಲಕ ನವೀಕರಣ ಮಾಡಲಾಗಿದೆ. ಮೊನ್ನೆ ಯುಗಾದಿಯ ದಿನ ಮನೆಯ ಉದ್ಘಾಟನೆ ಕೂಡ ನಡೆದಿದೆ. ಇದುಪದ್ಮರಾಜ್ ಅವರ ಸಮಾಜ ಸೇವೆ ಬಗ್ಗೆ ಒಂದು ಸಣ್ಣ ಸ್ಯಾಂಪಲ್ ಅಷ್ಟೇ. ಬಿಲ್ಲವ ಸಮುದಾಯಕ್ಕೆ ಸೇರಿದ ಯುವ ನಾಯಕಪದ್ಮರಾಜ್ ಅವರ ಮೂಲಕ ಬಿಜೆಪಿಗೆ ಪ್ರಬಲ ಪೈಪೋಟಿ ನೀಡಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.


Related Posts

ಚಿಕ್ಕ ವಯಸ್ಸಿನಲ್ಲಿ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಬಾಲಕ ಸುಹಾಂಶ್‌ನ ಎಸ್ ಬಂಗೇರ ದಾಖಲೆ


Share         ದಾವಣಗೆರೆ : ನಗರದ ಶಾಂತಪ್ಪ ಪೂಜಾರಿ ಹಾಗೂ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ಇವರ ಮೊಮ್ಮಗನಾದ ಕು. ಸುಹಾಂಶ್ ಎಸ್ ಬಂಗೇರ “ಇಂಡಿಯಾ ಬುಕ್ ಆಫ್ ರೆಕಾರ್ಡ್’ನ ಸಾಧಕನಾಗಿದ್ದು, ಸರಿಸುಮಾರು 195 ರಾಷ್ಟ್ರಗಳ


Read More »

ಖೇಲೋ ಇಂಡಿಯಾ ರಾಷ್ಟ್ರೀಯ ಕರಾಟೆ ತಂಡಕ್ಕೆ ಆಯ್ಕೆಯಾದ ಕರಾಟೆ ಪಟು ಛಾಯಾ ಎಸ್. ಪೂಜಾರಿ.


Share         ಚಿನ್ನ 30 ಬೆಳ್ಳಿ 1 ಕಂಚು – ಇದು ಛಾಯಾ ಎಸ್. ಪೂಜಾರಿ ಅವರ ಒಂದು ದಶಕದ ಪರಿಶ್ರಮ ಹಾಗೂ ಸಾಧನೆಗೆ ಸಂದಿರುವ ಗೌರವದ ತುರಾಯಿ. ಉಡುಪಿ ಜಿಲ್ಲೆಯ ಹೆರ್ಗ ಕಾಂತಾ ಬೆಟ್ಟು


Read More »

ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಅವರಿಗೆ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ


Share         ನಮ್ಮ ಹೆಮ್ಮೆಯ ಕರಾವಳಿಯ ಪ್ರತಿಭೆ, ಅಂತರಾಷ್ಟ್ರೀಯ ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಸಿದ್ದಕಟ್ಟೆ ಅವರಿಗೆ ಫಸ್ಟ್ ನ್ಯೂಸ್ ವಾಹಿನಿಯ ಪ್ರತಿಷ್ಠಿತ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ ಲಭಿಸಿರುವುದು ನಾಡಿಗೆ ಸಂದ ಗೌರವ. ಗ್ರಾಮೀಣ


Read More »

ಪುತ್ತೂರು:ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿಯ ಮಾಜಿ ಅಧ್ಯಕ್ಷ ರವಿಕುಮಾರ್ ಕಲ್ಕಾರ್ ನಿಧನ


Share         ಪುತ್ತೂರು: ಶಾಂತಿಗೋಡು ಕಲ್ಕಾರ್ ನಿವಾಸಿ ರವಿಕುಮಾರ್ ಕಲ್ಕಾರ್(48ವ.)ರವರು ಫೆ.15ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಪೂಜೆ ಸಂದರ್ಭ ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿ ವತಿಯಿಂದ ನಡೆಸಲ್ಪಟ್ಟ ಕ್ರೀಡಾಕೂಟದಲ್ಲಿ ರವಿ ಕಲ್ಕಾರ್ ರವರು


Read More »

ಉದಯೋನ್ಮುಖ ಪ್ರತಿಭಾ ಪುರಸ್ಕಾರಕ್ಕೆ ಅಕ್ಷತಾ ಸುಧೀರ್


Share         ಮಂಗಳೂರು/ಬೆಂಗಳೂರು: ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘದ ವತಿಯಿಂದ ಆಯೋಜಿಸಲಾದ ರಾಷ್ಟ್ರೀಯ ಸಮ್ಮೇಳನದಲ್ಲಿ, ಯುವವಾಹಿನಿಯ ಬೆಂಗಳೂರು ಘಟಕದ ಹೆಮ್ಮೆಯ ಸದಸ್ಯೆಯೂ ಹಾಗೂ ಪ್ರಸಕ್ತ ಲೆಕ್ಕಪರಿಶೋಧಕರೂ ಆಗಿರುವ ಶ್ರೀಮತಿ ಅಕ್ಷತಾ ಸುಧೀರ್ ಅವರಿಗೆ ಉದಯೋನ್ಮುಖ


Read More »

ಕಲರ್ಸ್ ಕನ್ನಡ ಬಿಗ್ ಬಾಸ್ 12ರ ಸ್ಪರ್ಧಿ ಧ್ರುವಂತ್ (ಚರಿತ್ ಬಾಳಪ್ಪ ಪೂಜಾರಿ) ಜೀವನದ ಯಶೋಗಾಥೆ


Share         ಜೀವನದಲ್ಲಿ ಅದೆಷ್ಟೋ ಕಷ್ಟಗಳನ್ನು ಸಹಿಸಿಕೊಂಡು, ಅವಕಾಶಗಳಿಂದ ವಂಚಿತನಾದರೂ ಧೃತಿಗೆಡದೆ, ಸಾಧನೆಯ ಹಾದಿಯಲ್ಲಿ ಹಂತ ಹಂತವಾಗಿ ಮುನ್ನಡೆಯುತ್ತ ಇಂದು ಎಲ್ಲರ ಮನಗಳಲ್ಲಿ ಮನೆ ಮಾಡಿರುವಂತಹ ನಮ್ಮೆಲ್ಲರ ಹೆಮ್ಮೆಯ ಸಾಧಕ ಧ್ರುವಂತ್ ಇವರ ಯಶಸ್ಸಿನ ಹಿಂದಿನ


Read More »