TOP STORIES:

ಮಂಗಳೂರು ವಿಮಾನ ನಿಲ್ದಾಣಕ್ಕೆ “ಕೋಟಿ ಚೆನ್ನಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಂಗಳೂರು” ಎಂಬ ಹೆಸರಿನಿಂದ ನಾಮಕರಣ ಮಾಡುವ ಕುರಿತು ಮನವಿ


ಮಾನ್ಯ ಸಂಸದರು ಶಾಸಕರುಗಳಿಗೆ. ಮಂಗಳೂರು ಬಜಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ “ಕೋಟಿ ಚೆನ್ನಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಂಗಳೂರು” ಎಂಬ ಹೆಸರಿನಿಂದ ನಾಮಕರಣ ಮಾಡುವ ಕುರಿತು ಮನವಿ.

✒️ ಪ್ರಶಾಂತ್ ಪೂಜಾರಿ ಮಸ್ಕತ್, ಪಜೀರ್

ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ನಿವೇದಿಸಿಕೊಳ್ಳುವುದೇನೆಂದರೆ ಸುಮಾರು ಐದು ಶತಮಾನಗಳ ಹಿಂದೆ ತುಳುನಾಡ ಮಣ್ಣಲ್ಲಿ ಅವತಾರ ತಾಳಿ ತಮ್ಮ ಜೀವಿತಾವಧಿಯ ಕಾಲದಲ್ಲಿಯೇ 66 ಗರಡಿ ಮತ್ತು 33 ತಾವು(ಶಿಬಿರ) ಗಳನ್ನು ನಿರ್ಮಿಸಿ ಸತ್ಯ, ಧರ್ಮಕ್ಕಾಗಿ ಹೋರಾಡಿ ಅಮರರಾದ ಕಾಯ ಬಿಟ್ಟು ಮಹಾ ಶಕ್ತಿಗಳಾಗಿ ಬ್ರಹ್ಮೈಖ್ಯರಾದ ಕೋಟಿ ಚೆನ್ನಯರನ್ನು ಇಂದಿಗೂ ಕರ್ನಾಟಕದ ಕರಾವಳಿ ಭಾಗ, ಮಡಿಕೇರಿ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲದೆ ನೆರೆಯ ರಾಜ್ಯವಾದ ಮಹರಾಷ್ಟ್ರದ ಮುಂಬೈ, ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಸೇರಿದಂತೆ ವಿವಿಧ ಧರ್ಮದವರು ಸುಮಾರು 250 ಕ್ಕೂ ಹೆಚ್ಚು ಗರಡಿಗಳನ್ನು ನಿರ್ಮಿಸಿ ಕೋಟಿ ಚೆನ್ನಯರನ್ನು ಆರಾಧಿಸುತ್ತಿದ್ದು, ಸದರಿ ಗರಡಿಗಳಿಗೆ ಜಾತಿ ಭೇದ ಮರೆತು ಜಾತ್ರಮಹೋತ್ಸವ ಹಾಗೂ ಇನ್ನಿತರ ಕಾರ್ಯಕ್ರಮಗಳಿಗೆ ಲಕ್ಷಾಂತರ ಭಕ್ತರು ಭಾಗವಹಿಸುತ್ತಾರೆ. ನಾಡಿನಾದ್ಯಂತ ದೇಶ, ವಿದೇಶಗಳಲ್ಲಿ ಕೋಟ್ಯಾಂತರ ಭಕ್ತರಿರುತ್ತಾರೆ. ಮಂಗಳೂರು ನಗರದ ಹೃದಯ ಭಾಗದಲ್ಲಿರುವ ಕಂಕನಾಡಿ ಶ್ರೀ ಬ್ರಹ್ಮಬೈದರ್ಕಳ ಗರೋಡಿ ಕ್ಷೇತ್ರದ ವರ್ಷಂಪ್ರತಿ ಜಾತ್ರೆಗೆ ಜಾತಿ ಭೇದ ಮರೆತು ಲಕ್ಷಾಂತರ ಭಕ್ತರು ದೇಶ ವಿದೇಶಗಳಿಂದ ಆಗಮಿಸುವ ಭಕ್ತಜನ ಸಮೂಹವೇ ಇದಕ್ಕೆ ಸಾಕ್ಷಿಯಾಗಿರುತ್ತದೆ.

ಪ್ರಸ್ತುತ ಕೋಟಿ ಚೆನ್ನಯರು ಹುಟ್ಟಿ ಬೆಳೆದ ಸ್ಥಳವಾದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪಡುಮಲೆಯ ಗೆಜ್ಜೆಗಿರಿ ನಂದನ ಬಿತ್ತ್’ಲ್ ಎಂಬಲ್ಲಿ ಮೂಲಸ್ಥಾನ ಗರಡಿ 2020 ರ ಫೆಬ್ರುವರಿ 28 ರಂದು ಪ್ರತಿಷ್ಠಾ ಬ್ರಹ್ಮಕಲಶೋತ್ಸವದೊಂದಿಗೆ ಲೋಕಾರ್ಪಣೆಗೊಂಡಿದೆ. ಈ ಕಾರ್ಯಕ್ರಮದಲ್ಲಿ 15 ಲಕ್ಷಕ್ಕೂ ಅಧಿಕ ಭಕ್ತರು ಪಾಲ್ಗೊಂಡಿದ್ದು ಇದು ತುಳುನಾಡಿನ ಇತಿಹಾಸ ಪುಟದಲ್ಲಿ ಚರಿತ್ರೆ ನಿರ್ಮಾಣ ಆಗಿತ್ತು. ಈ ಸಂದರ್ಭದಲ್ಲಿ ಅವರುಗಳ ಭಕ್ತಾದಿಗಳೆಲ್ಲರ ಅಭಿಲಾಷೆಯಂತೆ, ಸರ್ವ ಧರ್ಮೀಯರು ಆರಾಧಿಸುವ ಆರಾಧ್ಯ ಪುರುಷರು, ಅವಳಿ ವೀರರೆಂದು ವಿರಾಜಮಾನರಾಗಿರುವ ಕೋಟಿ ಚೆನ್ನಯರ ಹೆಸರು ವಿಶ್ವ ಮಟ್ಟದಲ್ಲಿ ಬೆಳಗುವಂತೆ ಮಾಡಲು ಮಂಗಳೂರು ಬಜಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ “ಕೋಟಿ ಚೆನ್ನಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಂಗಳೂರು” ಎಂಬ ಹೆಸರಿನಲ್ಲಿ ನಾಮಕರಣಗೊಳಿಸಿ ಆದೇಶ ಹೊರಡಿಸುವಂತೆ ಸಂಬಂಧಪಟ್ಟ ಇಲಾಖೆಗೆ ಸೂಚಿಸುವಂತೆ ವಿನಯ ಪೂರ್ವಕವಾಗಿ ವಿನಂತಿಸುತ್ತೇವೆ.

ಗಮನಕ್ಕೆ : 1, ಬಜಪೆ ವಿಮಾನ ನಿಲ್ದಾಣದ ಸ್ಥಳೀಯ ಮಳವೂರು ಗ್ರಾಮ ಪಂಚಾಯತ್ ನ ನಿರ್ಣಯ ಪ್ರತಿಯನ್ನು ಲಗತ್ತಿಸಲಾಗಿದೆ.

2, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ನೇತೃತ್ವದಲ್ಲಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರಿಡಲು ಸಾಮಾನ್ಯ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಂಡು ಪ್ರಸ್ತಾವಣೆಯು ರಾಜ್ಯ ಸರಕಾರಕ್ಕೆ ಸಲ್ಲಿಕೆಯಾಗಿದೆ.

ಆದುದರಿಂದ ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಿಗೆ ತಾವುಗಳು ಶ್ರೀ ಕೋಟಿ ಚೆನ್ನಯರ ಹೆಸರನ್ನು ಮಂಗಳೂರು ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡುವಂತೆ ಇದೇ ಬರುವ ವಿಧಾನ ಮಂಡಲದ ಅಧಿವೇಶನದಲ್ಲಿ ಶಿಫಾರಸು ಮಾಡುವ ನಿರ್ಧಾರವನ್ನು ಕೈಗೊಳ್ಳುವಂತೆ ಮನವಿ.

ಕೋಟಿ ಚೆನ್ನಯ ಸಂಚಲನಾ ಸಮಿತಿ


Related Posts

ಯುವ ವೈಭವ 2025 -ಯುವವಾಹಿನಿ (ರಿ.)ಬೆಂಗಳೂರು ಘಟಕದ ಪತ್ರಿಕಾಗೋಷ್ಠಿ


Share         #ಯುವ ವೈಭವ 2025 05/12/25 ಇಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಯುವವಾಹಿನಿ (ರಿ.)ಬೆಂಗಳೂರು ಘಟಕ ಅಧ್ಯಕ್ಷರಾದ ಶಶಿಧರ್ ಕೋಟ್ಯಾನ್ ಮತ್ತು ಕಾರ್ಯದರ್ಶಿ ಸಂತೋಷ್ ಪೂಜಾರಿ ಪಣಪಿಲ ಅವರು


Read More »

ಕೇರಳದ ಶಿವಗಿರಿಯ ಶಾಖಾ ಮಠವನ್ನು ಉಡುಪಿ ಅಥವಾ ಮಂಗಳೂರಿನಲ್ಲಿ ಸ್ಥಾಪಿಸಲು ಅಗತ್ಯ ಇರುವ ಐದು ಎಕರೆ ಜಮೀನನ್ನು ಒದಗಿಸಲಾಗುವುದು : ಮುಖ್ಯಮಂತ್ರಿ ಸಿದ್ದರಾಮಯ್ಯ


Share         ಕೇರಳದ ಶಿವಗಿರಿಯ ಶಾಖಾ ಮಠವನ್ನು ಉಡುಪಿ ಅಥವಾ ಮಂಗಳೂರಿನಲ್ಲಿ ಸ್ಥಾಪಿಸಲು ಅಗತ್ಯ ಇರುವ ಐದು ಎಕರೆ ಜಮೀನನ್ನು ಒದಗಿಸಲಾಗುವುದು : ಮುಖ್ಯಮಂತ್ರಿ ಸಿದ್ದರಾಮಯ್ಯ ಉಳ್ಳಾಲ: ಕೇರಳದ ಶಿವಗಿರಿಯ ಶಾಖಾ ಮಠವನ್ನು ಉಡುಪಿ ಅಥವಾ


Read More »

ವಿಶೇಷ ಮಕ್ಕಳ ಕಲೆಗಾರಿಕೆಯಿಂದ ರೂಪುಗೊಂಡ ಜನನಾಯಕ ಪದ್ಮರಾಜ್ ಆರ್. ಪೂಜಾರಿಯವರ ಭಾವಚಿತ್ರ


Share         ಕಲಾಸೇತು — ಬಂಟ್ವಾಳ ತಾಲೂಕಿನ ಕಾವಳಕಟ್ಟೆಯ ಗುರಿಮಜಲ್ ಹಿದಾಯ ವಿಶೇಷ ಮಕ್ಕಳ ವಸತಿ ಶಾಲೆ ದಶಮಾನೋತ್ಸವ ಕಾರ್ಯಕ್ರಮದಲ್ಲಿ, ವಿಶೇಷ ಮಕ್ಕಳ ಕಲೆಗಾರಿಕೆಯಿಂದ ರೂಪುಗೊಂಡ ಜನನಾಯಕ ಪದ್ಮರಾಜ್ ಆರ್. ಪೂಜಾರಿಯವರ ಭಾವಚಿತ್ರ ವನ್ನು ಶಾಲೆಯ


Read More »

ಯುವವಾಹಿನಿ ಪುತ್ತೂರು ಘಟಕದಿಂದ ಅವಿಭಜಿತ ಪುತ್ತೂರು ತಾ ಮಟ್ಟದ ಕೋಟಿ-ಚೆನ್ನಯ ಕ್ರೀಡಾಕೂಟ ಸಮಾರೋಪ.


Share         ಪುತ್ತೂರು:ವಿದ್ಯೆ, ಉದ್ಯೋಗ, ಸಂಪರ್ಕ ಧ್ಯೇಯವನ್ನೊಳಗೊಂಡ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಪುತ್ತೂರು ಘಟಕ ಇದರ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು ಇದರ ವ್ಯಾಪ್ತಿಗೆ ಒಳಪಟ್ಟ ಸಮಾಜ ಬಾಂಧವರಿಗಾಗಿ


Read More »

🏆ವಿಶ್ವ ಚಾಂಪಿಯನ್ ಭಾರತ 🇮🇳🏆ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಧನಲಕ್ಷ್ಮಿ ಪೂಜಾರಿ


Share         🏆ವಿಶ್ವ ಚಾಂಪಿಯನ್ ಭಾರತ 🇮🇳🏆 ಢಾಕಾದಲ್ಲಿ ನಡೆದ 2025ರ ಕಬಡ್ಡಿ ವಿಶ್ವಕಪ್ ಟೂರ್ನಿಯಲ್ಲಿ ಚೈನೀಸ್ ತೈಪೆ ತಂಡವನ್ನು ರೋಚಕವಾಗಿ ಮಣಿಸಿ ಪ್ರತಿಷ್ಠಿತ ಕಬಡ್ಡಿ ವಿಶ್ವಕಪ್ ಟ್ರೋಫಿಯನ್ನು ಗೆದ್ದ ಭಾರತೀಯ ಮಹಿಳಾ ಕಬಡ್ಡಿ ತಂಡಕ್ಕೆ


Read More »

ಮಸ್ಕತ್ ನ ಭೀಷ್ಮ ಎಂಬ ಹೆಗ್ಗಳಿಕೆಗೆ ಪಾತ್ರರಾದ ಹಿರಿಯ ಉದ್ಯಮಿ ಶ್ರೀಯುತ ಎಸ್ ಕೆ ಪೂಜಾರಿ


Share         ಮೂಲತಃ ಗಂಜಿಮಠ ಪೆರಾರ ಎಂಬಲ್ಲಿ 1956 ರಲ್ಲಿ ಜನಿಸಿದ ಶ್ರೀಯುತರು ಕಿರಿಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಊರಿನಲ್ಲಿ ಪ್ರಾರಂಭಿಸಿ ನಂತರ ಮುಂಬೈಗೆ ಬಂದು ಕೆಲಸದ ಜೊತೆಗೆ ಹೆಚ್ಚಿನ ವಿದ್ಯಾಭ್ಯಾಸವನ್ನು ಮುಂಬೈನಲ್ಲಿ ಪ್ರಾರಂಭಿಸಿ


Read More »