ಮನೆ–ಮನ ಬೆಳಗುವ ಜ್ಯೋತಿಯಾದ ಗುರುಬೆಳದಿಂಗಳು
ಮಂಗಳೂರು: ಲಾಕ್‌ಡೌನ್‌ನಲ್ಲಿ ಯಾವುದೇ ಸದ್ದು ಗದ್ದಲ ಇಲ್ಲದೆ ಹಸಿದವರು, ಅಸಹಾಯಕರ ಸೇವೆಯಲ್ಲಿ ತೊಡಗುತ್ತಾನೊಂದವರ ಪಾಲಿಗೆ ಬದುಕು ಬೆಳಗಿಸುವ ಬೆಳಕಾಗಿದೆ ‘ಗುರುಬೆಳದಿಂಗಳು’.
ಕೋವಿಡ್ ಆರೋಗ್ಯ ವಿಷಮ ಸ್ಥಿತಿಯಲ್ಲಿ ಸಂಕಷ್ಟದಲ್ಲಿರುವ ಸೇವೆಗಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾದ್ಯಂತ ಆರಂಭಿಸಿದಸಹಾಯವಾಣಿಗೆ ಈಗಾಗಲೇ ನೂರಾರು ವಿನಂತಿಗಳು ಬಂದಿದ್ದು, ಒಂದು ತಿಂಗಳಿಗೆ ಬೇಕಾಗುವಷ್ಟು ಅಕ್ಕಿ ಸಹಿತ ದಿನಸಿ ಸಾಮಗ್ರಿ, ಅನಾರೋಗ್ಯ ಪೀಡಿತರಿಗೆ ಸಾವಿರಾರು ಮೌಲ್ಯದ ಮೆಡಿಸಿಸ್, ವೈದ್ಯಕೀಯ ನೇರವು, ಕೆಲವು ಮಂದಿಗೆ ಆರ್ಥಿಕ ಸಹಾಯನೀಡಲಾಗಿದೆ. ಮಾತ್ರವಲ್ಲದೆ ಅನೇಕ ಮಂದಿಗೆ ವೈದ್ಯರಿಂದ ವೈದ್ಯಕೀಯ ಸಲಹೆ, ಅಶಕ್ತ ಬಡವರ ಮನೆ ಬಾಗಿಲಿಗೆ ಪಡಿತರ ವ್ಯವಸ್ಥೆಕಲ್ಪಿಸುವ ಮೂಲಕ ಬದುಕು ಬೆಳಗಿಸುವ ಕಾರ್ಯದೊಂದಿಗೆ ಅವರ ಮೊಗದಲ್ಲಿ ಭರವಸೆಯ ನಗು ಮೂಡಿಸಿದ ಸಂತೃಪ್ತಿ ಈಸಂಸ್ಥೆಯದ್ದು.
ಜಾತಿ– ಮತ– ಪಕ್ಷ ಭೇದ ರಹಿತವಾಗಿ ಸಮಾಜ ಸೇವೆಗೆ ಕಟಿಬದ್ಧರಾಗುವ ನಿಟ್ಟಿನಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಆಶೀರ್ವಾದ ಮತ್ತು ಕೇಂದ್ರದ ಮಾಜಿ ಸಚಿವ ಶ್ರೀ ಬಿ.ಜನಾರ್ದನ ಪೂಜಾರಿಯವರ ಮಾರ್ಗದರ್ಶನದಲ್ಲಿ ಶಿಕ್ಷಣ, ಆರೋಗ್ಯ, ಆಸರೆಎಂಬ ಮುಖ್ಯ ಧ್ಯೇಯಗಳೊಂದಿಗೆ ಸಮಾಜಮುಖಿ ಕಾರ್ಯನಿರ್ವಹಿಸಿ ಎಲ್ಲರ ಪ್ರೀತಿಗೆ ಪಾತ್ರವಾದ ‘ಗುರುಬೆಳದಿಂಗಳು’ ಅವಿಭಜಿತದ.ಕ ಜಿಲ್ಲೆಯಲ್ಲಿ ಕರೊನಾ ಬಾಧಿಸಿ ಸಂಕಷ್ಟದಲ್ಲಿರುವವರಿಗೆ ವೈದ್ಯರ ಸಲಹೆ, ಆಂಬುಲೆನ್ಸ್ ಸೇವೆ, ಕ್ಷಣ ಕ್ಷಣದ ಆರೋಗ್ಯ ಮಾಹಿತಿ, ಔಷಧ ಪೂರೈಕೆ ಹಾಗೂ ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಅರ್ಹ ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಪೂರೈಕೆಯೊಂದಿಗೆಬಡವರ ಪಾಲಿನ ಬಡವರ ಪಾಲಿನ ಬೆಳಕಾಗಿದೆ. ನಮ್ಮ ಸೇವಾ ಯೋಜನೆಯಲ್ಲಿ ನೀವೂ ಕೈಜೋಡಿಸಬಹುದು. ಮಾಹಿತಿಗಾಗಿ9901246123,http://www.gurubeladingalu.org ಸಂಪರ್ಕಿಸಬಹುದು.