TOP STORIES:

ಮನ್ಸೂನ್​ನಲ್ಲಿ ಕಾಡುತ್ತಿದ್ಯಾ ಕೀಲು ನೋವು; ಇಲ್ಲಿದೆ ಇದಕ್ಕೆ ಪರಿಹಾರ


ಬೆಂಗಳೂರು: ಮಳೆಗಾಲದಲ್ಲಿ ಕೆಲವು ಮಂದಿಗೆ ಕೀಲು ನೋವಿನ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಈ ಅವಧಿಯಲ್ಲಿ ನೋವು ಉಲ್ಬಣಗೊಳ್ಳಲು ನಿಖರವಾದ ಕಾರಣ ತಿಳಿದಿಲ್ಲ.

ಸಂಶೋಧನೆಗಳು ಕೂಡ ಈ ಬಗ್ಗೆ ಹೆಚ್ಚು ಸ್ಪಷ್ಟವಾಗಿ ತಿಳಿಸಿಲ್ಲ. ಮಳೆಗಾಲದಲ್ಲಿ ಈ ನೋವು ಹೆಚ್ಚು ಎಂದು ಕೆಲವು ಅಧ್ಯಯನಗಳು ವಾದಿಸಿದರೆ, ಮತ್ತೆ ಕೆಲವು ಅಧ್ಯಯನಗಳು ಈ ಆರೋಪವನ್ನು ತಳ್ಳಿಹಾಕುತ್ತದೆ. ಆದರೆ, ತಜ್ಞರ ಪ್ರಕಾರ, ಪರಿಸರದಲ್ಲಿನ ಬದಲಾವಣೆಗಳು ಕೀಲು ನೋವಿಗೆ ಪ್ರಮುಖ ಕಾರಣವಾಗಿದೆ.

ಮಳೆಗಾಲದಲ್ಲಿ ಪರಿಸರದಲ್ಲಿನ ವಾಯುವಿನ ಒತ್ತಡ ಕಡಿಮೆಯಾಗುತ್ತದೆ. ದೇಹದಲ್ಲಿನ ಗಾಳಿಯ ಒತ್ತಡವೂ ಈ ಋತುಮಾನದಲ್ಲಿ ಕಡಿಮೆಯಾಗುತ್ತದೆ. ಫಲಿತಾಂಶವಾಗಿ ಕೀಲುಗಳ ಸುತ್ತಲು ಇರುವ ಸ್ನಾಯು, ಅಸ್ಥಿರಜ್ಜು ಮತ್ತು ಇನ್ನಿತರೆ ಟಿಶ್ಯೂಗಳ ಮೇಲೆ ಒತ್ತಡ ಬೀಳುತ್ತದೆ. ಇದು ಕೀಲು ನೋವಿಗೆ ಕಾರಣವಾಗುತ್ತದೆ. ಸಂಧಿವಾತದೊಂದಿಗೆ ಬಳಲುತ್ತಿರುವ ಮಂದಿ ಅಥವಾ ಇತರೆ ದೀರ್ಘ ನೋವಿನ ಅನುಭವ ಹೊಂದಿರುವವರು ಇದರಿಂದ ಕಿರಿಕಿರಿ ಅನುಭವಿಸುತ್ತಾರೆ. ವಾತಾವರಣ ಸರಿ ಹೋದಂತೆ ಗಾಳಿಯ ಒತ್ತಡವೂ ಹೊಂದಾಣಿಕೆಯಾಗುತ್ತದೆ. ಇದರಿಂದ ನೋವು ಕೂಡ ಕಡಿಮೆಯಾಗುತ್ತದೆ. ಕೀಲು ನೋವಿಗೆ ಇದು ಮಾತ್ರವಲ್ಲದೇ, ಇನ್ನಿತರೆ ಕಾರಣಗಳು ಸಹ ಇವೆ.

ಮಳೆ ವಾತಾವರಣದಿಂದ ಮನೆಯಿಂದ ಹೊರ ಹೋಗಲು ಸಾಧ್ಯವಾಗುವುದಿಲ್ಲ. ಇದರಿಂದ ಮನೆಯಲ್ಲಿಯೇ ದೀರ್ಘಕಾಲ ಇರಬೇಕಾಗುತ್ತದೆ. ಮನೆಯಲ್ಲೇ ದೀರ್ಘಕಾಲ ಕುಳಿತಿರುವ ಕಾರಣ ಸ್ನಾಯು ಮತ್ತು ಕೀಲುಗಳು ಜಡತ್ವಗೊಂಡು ನೋವು ಹೆಚ್ಚುತ್ತದೆ.

ಮೋಡ ಕವಿದ ವಾತಾವರಣದಿಂದ ನಿಮ್ಮ ಮನಸ್ಥಿತಿ ಕೂಡ ಬದಲಾಗಬಹುದು. ಇದರಿಂದ ನಿಮ್ಮ ಗಮನ ನೋವಿನಂತಹ ನಕಾರಾತ್ಮಕ ಅಂಶಗಳಿಗೆ ಹೆಚ್ಚು ಹೋಗುತ್ತದೆ. ನೋವಿನ ಬಗ್ಗೆ ಹೆಚ್ಚು ಯೋಚಿಸಿದಂತೆ ಅದು ಮತ್ತಷ್ಟು ಕೆಟ್ಟದಾಗಬಹುದು.

ಅನೇಕ ಮಂದಿಗೆ ಮಳೆ ಬಂದರೆ ನೋವು ಹೆಚ್ಚಿದಂತೆ ಎಂಬ ಅಂಶ ತಲೆಯಲ್ಲಿ ಹೊಕ್ಕಿರುತ್ತದೆ. ಅವರ ಮನಸ್ಥಿತಿ ಅನುಸಾರವಾಗಿ ಕೂಡ ಅನೇಕ ಬಾರಿ ನೋವು ಹೆಚ್ಚುತ್ತದೆ.

ನೋವು ಕಡಿಮೆ ಮಾಡುವುದು ಹೇಗೆ? ಸಂಶೋಧನೆಗಳು ಮಳೆಗಾಲದಲ್ಲಿ ಕೀಲು ನೋವು ಹೆಚ್ಚಿಸುತ್ತದೆ ಎಂಬುದನ್ನು ಸಾಬೀತು ಮಾಡಲಿ, ಬಿಡಲಿ, ನೀವು ಕೆಲವು ಮುನ್ನೆಚ್ಚರಿಕೆಗಳನ್ನು ವಹಿಸುವುದು ಮುಖ್ಯವಾಗುತ್ತದೆ. ಹವಾಮಾನ ಬದಲಾಗುತ್ತಿದ್ದಂತೆ ಈ ಬಗ್ಗೆ ಕ್ರಮವಹಿಸಿ.

ಸ್ನಾಯು ಮತ್ತು ಮೂಳೆಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ನಿಯಮಿತವಾಗಿ ವ್ಯಾಯಾಮದಂತಹ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು.

ನಡೆದಾಡುವುದಕ್ಕಿಂತ ಒಟ್ಟಿಗೆ ಕುಳಿತುಕೊಳ್ಳುವುದು ಉತ್ತಮ. ನೀವು ಹೊರಗೆ ಹೋಗಲು ಸಾಧ್ಯವಾಗದೇ ಇದ್ದರೆ, ಮನೆಯ ಒಳಗಡೆಯೇ ಓಡಾಡಿ. ಟ್ರೆಡ್​ ಮಿಲ್​ನಲ್ಲಿ ವಾಕಿಂಗ್​ ಮಾಡುವುದು ಉತ್ತಮವಾಗಿರಲಿದೆ.

ತೂಕ ಹೆಚ್ಚಳ ಕೂಡ ಕೀಲು, ಸಂಧಿಗಳ ಮೇಲೆ ಒತ್ತಡ ಹೆಚ್ಚಾಗಿ ನೋವಿನ ಹೆಚ್ಚಳಕ್ಕೆ ಕಾರಣವಾಗುತ್ತದೆ. ಈ ಹಿನ್ನೆಲೆ ತೂಕವನ್ನು ಕಡಿಮೆ ಮಾಡಿ. ಸಾಮಾನ್ಯ ತೂಕವನ್ನು ನೀವು ಹೊಂದಿದ್ದರೆ, ಅದನ್ನು ಹೆಚ್ಚಿಸಿ.

ಶಾಖ ಕೂಡ ಅನೇಕ ಬಾರಿ ನೋವಿನ ಉಪಶಮನ ಮಾಡುತ್ತದೆ. ಈ ಹಿನ್ನೆಲೆ ನೋವು ಇರುವ ಪ್ರದೇಶದಲ್ಲಿ ಬಿಸಿ ನೀರನ್ನು ಹಾಕಿಕೊಳ್ಳುವುದು ಉತ್ತಮ ಮಾರ್ಗವಾಗಿರಲಿದೆ. ಅಥವಾ ಆ ಪ್ರದೇಶದಲ್ಲಿ ಬಿಸಿ ನೀರಿನಲ್ಲಿ ಮುಳುಗಿ ಏಳಿಸಿದ ಟವೆಲ್​ ಅನ್ನು ಅನ್ನು ಇಡುವುದು ಆರಾಮದಾಯವಾಗಬಹುದು. ಸಾಧ್ಯವಾದರೆ, ಹೀಟಿಂಗ್​ ಪಾಡ್ಸ್​ ಅನ್ನು ಬಳಸಬಹುದು. ಬಿಸಿ ನೀರಿನಲ್ಲಿ ಸ್ನಾನ ಮಾಡುವುದು ನೋವು ಕಡಿಮೆ ಮಾಡಲಿದೆ.

ಹೊಟ್ಟೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾದರೆ, ಕೀಲುಗಳು ಸರಿಯಾಗಿ ಚಲಿಸಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆ ಮಳೆಗಾಲದಲ್ಲೂ ಸಾಕಷ್ಟು ಪ್ರಮಾಣದ ನೀರು ಸೇವಿಸುವುದು ಉತ್ತಮ.


Related Posts

ಬಹರೖನ್ ನ ಕಸ್ತೂರಿ ಕನ್ನಡ ಎಫ್.ಎಂ ರೇಡಿಯೋ ಆರ್.ಜೆ ಕಮಲಾಕ್ಷ ಅಮೀನ್ ಅವರಿಗೆ ಗೋಲ್ಡನ್ ಐಕಾನಿಕ್ ಅವಾರ್ಡ್


Share         ಮಂಗಳೂರು: ಬಹರೖನ್ ನ ಕಸ್ತೂರಿ ಕನ್ನಡ ಎಫ್.ಎಂ ರೇಡಿಯೋ ಆರ್.ಜೆ ಕಮಲಾಕ್ಷ ಅಮೀನ್ ಅವರನ್ನು ಮಂಗಳೂರಿನಲ್ಲಿ ಗೋಲ್ಡನ್ ಐಕಾನಿಕ್ ಅವಾರ್ಡ್ ಗೌರವ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಹೋಟೆಲ್ ಓಷನ್ ಪರ್ಲ್ ನಲ್ಲಿ ನಡೆದ


Read More »

ಪೂಜಾರಿ ಎಂದು ಗುರುತಿಸಿಕೊಂಡಿರುವವರು ಜನಗಣತಿಯಲ್ಲಿ ಕಡ್ಡಾಯವಾಗಿ ಬಿಲ್ಲವ ಎಂದು ನಮೂದಿಸಿ ಡಾ. ರಾಜಶೇಖರ್ ಕೋಟ್ಯಾನ್


Share         ಮಂಗಳೂರು ಅಗಸ್ಟ್ 18: ಅನೇಕ ಕಡೆ ದೇವಸ್ಥಾನದಲ್ಲಿ ಪೂಜೆ ಮಾಡುವವರೂ ಪೂಜಾರಿ ಎಂದು ಗುರುತಿಸಿಕೊಂಡಿರುವುದರಿಂದ ಈ ಸಲದ ಜನಗಣತಿಯಲ್ಲಿ ನಾವು ʻಜಾತಿ’ ಎಂಬ ಕಾಲಂನಲ್ಲಿ ಕಡ್ಡಾಯವಾಗಿ ʻಬಿಲ್ಲವ’ ಎಂದೇ ನಮೂದಿಸಬೇಕು ಎಂದು ಬಿಲ್ಲವ


Read More »

ಬಿಲ್ಲವ ಸಮಾಜದ ಹೆಮ್ಮೆಯ ಕಣ್ಮಣಿ ಪ್ರಾಮಾಣಿಕ ಪೊಲೀಸ್ ಅಧಿಕಾರಿ ಶಾಂತಾರಾಮ್ ಕುಂದರ್


Share         ಬಿಲ್ಲವ ಸಮಾಜದ  ಹೆಮ್ಮೆಯ ಕಣ್ಮಣಿ ದಕ್ಷ, ಧೈರ್ಯ ಪ್ರಾಮಾಣಿಕ ಪೊಲೀಸ್ ಅಧಿಕಾರಿ ನಮ್ಮವರಾಧ ಪೊಲೀಸ್ ಇನ್ಸ್ಪೆಕ್ಟರ್ ಶಾಂತಾರಾಮ್ ಕುಂದರ್ ಅವರ ವೃತ್ತಿಜೀವನದುದ್ದಕ್ಕೂ ಸಾರ್ವಜನಿಕ ಸೇವೆಯ ಕಡೆಗೆ ಅವರ ಅಪಾರ ಸಮರ್ಪಣೆ, ಶಿಸ್ತು, ನಿಷ್ಠೆ


Read More »

ಪುತ್ತೂರು ಕೆಯ್ಯೂರಿನ ಪಿಎಸ್‌ಐ ಪ್ರದೀಪ್ ಪೂಜಾರಿಯವರಿಗೆ ಮುಂಬಡ್ತಿ ಲೋಕಾಯುಕ್ತ ಇನ್ಸ್‌ಪೆಕ್ಟ‌ರ್ ಆಗಿ ನಿಯುಕ್ತಿ..


Share         ಬೆಂಗಳೂರು: ರಾಜ್ಯದಲ್ಲಿ ಸಬ್ ಇನ್ ಪೆಕ್ಟರ್ (ಸಿವಿಲ್)ಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದ 16 ಮಂದಿಗೆ ಪೊಲೀಸ್ ಇನ್ಸ್‌ಪೆಕ್ಟರ್‌ಗಳಾಗಿ ಮುಂಬಡ್ತಿ ನೀಡಿ ವರ್ಗಾವಣೆ ಮಾಡಲಾಗಿದ್ದು ಕೆಯ್ಯರಿನ ಪ್ರದೀಪ್ ಪೂಜಾರಿಯವರನ್ನು ಪೊಲೀಸ್ ಇನ್ಸ್‌ಪೆಕ್ಟ‌ರ್ ಆಗಿ ಭಡ್ತಿಗೊಳಿಸಿ ಕರ್ನಾಟಕ


Read More »

ವೆನ್ಲಾಕ್‌ನ ಖ್ಯಾತ ಮೂತ್ರರೋಗ ತಜ್ಞ ಡಾ.ಸದಾನಂದ ಪೂಜಾರಿಗೆ ಪ್ರತಿಷ್ಠಿತ ಹೆಲ್ತ್‌ಕೇರ್‌ ಎಕ್ಸಲೆನ್ಸ್‌ ಅವಾರ್ಡ್‌


Share         ಮಂಗಳೂರು: ಕನ್ನಡದ ಜನಪ್ರಿಯ ವಾಹಿನಿ ‘ಏಷ್ಯಾನೆಟ್‌ ಸುವರ್ಣ ನ್ಯೂಸ್’ ಹಾಗೂ ಕನ್ನಡದ ಖ್ಯಾತ ದಿನಪತ್ರಿಕೆ ‘ಕನ್ನಡ ಪ್ರಭ’ ಜಂಟಿಯಾಗಿ ನೀಡುವ ಪ್ರತಿಷ್ಠಿತ ‘ಹೆಲ್ತ್‌ಕೇರ್ ಎಕ್ಸಲೆನ್ಸ್ 2025’ ಅವಾರ್ಡ್‌ಗೆ ಮಂಗಳೂರು ವೆನ್ಲಾಕ್‌ ಆಸ್ಪತ್ರೆಯ ಖ್ಯಾತ


Read More »