TOP STORIES:

ಮಹಿಳೆ ಮನಸು ಮಾಡಿದರೆ ಏನು ಬೇಕಾದರೂ ಸಾದಿಸಬಹುದು ಅನ್ನುದಕ್ಕೆ ಉದಾಹರಣೆ ” ಆರ್ ಜೆ ರಶ್ಮಿ ಉಳ್ಳಾಲ್ ”


ತೆರೆ ಮರೆಯ ಹಿಂದೆ ಮನಸ್ಸಿಗೆ ಹಿತ ನೀಡುವ ಮಾತುಗಳು, ಮತ್ತೊಂದು ಕಡೆ ಪಟ ಪಟ ಮಾತನಾಡುವ ಕಲೆ, ಮಾತಿನಿಂದಲೇ ಜನರ ಮನಸ್ಸನ್ನು ಗೆದ್ದಿರುವ ತುಳುನಾಡಿನ ಪ್ರತಿಭೆ ಆರ್ ಜೆ ರಶ್ಮಿ ಉಳ್ಳಾಲ್. ಪರಿಸರ ಕಾಳಜಿ ಹಾಗು ಸಾಮಾಜಿಕ ಕಾರ್ಯಕರ್ತರಾಗಿ ಅವರದೇ ಆದ ಅಭಿಮಾನಿ ಬಳಗವೇ ಇದೆ.

ಮಂಗಳೂರಿನ ಉಳ್ಳಾಲದ ಯು ಎ ಪ್ರೇಮನಾಥ್ ಮತ್ತು ಶ್ರೀಮತಿ ಪ್ರಮೀಳಾ ದಂಪತಿಗಳ ಮುದ್ದಿನ ಮಗಳು.

ಬಾಲ್ಯದಿಂದಲೂ ರೇಡಿಯೋ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ . ವಿದ್ಯಾಭ್ಯಾಸ ಮಾಡುತ್ತಿರುವಾಗಲೆ ಸಾರಂಗ್ 107.8 ಎಫ್. ಎಮ್ ಆರ್.ಜೆ ಆಗಿ ಕೆಲಸ ಮಾಡುತ್ತಿದ್ದರು ಮತ್ತು ಮಂಗಳೂರಿನ ಆಕಾಶವಾಣಿಯಲ್ಲಿ “ಯುವವಾಣಿ” ಶೀರ್ಷಿಕೆಯಡಿ ಜನರಿಗೆ ಸ್ಫೂರ್ತಿ ನೀಡಿದ ಇವರು ಅನೇಕ ರೇಡಿಯೋ ಕಾರ್ಯ ಕ್ರಮ ನಡೆಸಿಕೊಟ್ಟಿದ್ದಾರೆ.


ಪದವಿಯಲ್ಲಿ ಉತ್ತಮ ದರ್ಜೆಯ ಅಂಕ ಪಡೆದು ಎಮ್. ಎನ್. ಸಿ ಕಂಪನಿಯಲ್ಲಿ ಎಕ್ಸಿಕ್ಯೂಟರ್ ಮತ್ತು ಕೋಟಕ್ ಮಹೇಂದ್ರ ಬ್ಯಾಂಕ್ನಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ,ರೆಡ್ ಎಫ್. ಎಮ್ ಅಲ್ಲಿ ಆರ್.ಜೆ ಆಗಿ ಕಾರ್ಯನಿರ್ವಹಿಸಿದ್ದಾರೆ

ಮಕ್ಕಳ ಮೌಲ್ಯದ ಬಗ್ಗೆ ಅರಿವು ಮೂಡಿಸಲು ದಿವ್ಯಾಸ್ ಯುವ ಸೇವಾ ಆರ್ಗನೈಜೇಷನ್ ಎನ್ .ಜಿ .ಒ ದಲ್ಲಿ ಸಾಮಾಜಿಕ ಕಾರ್ಯಕರ್ತರಾಗಿ ಕಾರ್ಯಕ್ರಮ ನಡೆಸಿಕೊಟ್ಟು ಪ್ರಶಂಸೆ ಪಡೆದವರು .ಇವರು ಸಮಾಜ ಸೇವೆ ಮಾಡುವ ಸೇವಾ ಸೇನಾನಿಯೂ ಹೌದು. ವೃದ್ಧರ ಮತ್ತು ಅನಾಥ ಆಶ್ರಮದ ಮಕ್ಕಳಿಗೆ ಮೌಲ್ಯ ಶಿಕ್ಷಣದ ಅರಿವು ಮೂಡಿಸುದು ಮತ್ತು ಅವರಿಗೆ ಬೇಕಾದ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುತ್ತಿರುವ ಕರುಣಾಮಯಿ.

ಮಹಿಳೆ ಮನಸು ಮಾಡಿದರೆ ಏನು ಬೇಕಾದರೂ ಸಾದಿಸಬಹುದು ಅನ್ನುದಕ್ಕೆ ಉದಾಹರಣೆ ರಶ್ಮಿ ಉಳ್ಳಾಲ್.

ಅನೇಕ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಹಲವಾರು ಸಂಘಸಂಸ್ಥೆಯಿಂದ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಉದಯ ಟಿವಿ ಸವಾಲಿಗೆ ಸೈ ಕಾರ್ಯಕ್ರಮದಲ್ಲಿ ಮಂಗಳೂರನ್ನು ಪ್ರತಿನಿಧಿಸಿ ಮಾತನಾಡಿದ ಇವರಿಗೆ ತುಳುಚಿತ್ರದ ವಾಯ್ಸ್ ಡಬ್ಬಿಂಗ್ ಮತ್ತು ಜಾಹಿರಾತಿಗೆ ವಾಯ್ಸ್ ನೀಡಿದ ಶ್ರೇಯ ಲಭಿಸುತ್ತದೆ . ಬಹಳಷ್ಟು ಸಿನಿಮಾ ಹಾಗು ಸಂಗೀತ ಕ್ಷೇತ್ರದ ದಿಗಜ್ಜರ ಸಂದರ್ಶನ ನಡೆಸಿದ್ದು ಪ್ರಕೃತಿ ಪ್ರೇಮಿಯಾಗಿ 1000 ಕ್ಕೂ ಸೀಡ್ಬೂಲ್ ತಯಾರಿಸಿ, ಸೀಡ್ಬೂಲ್ ಬೀಜವನ್ನು ಹಾಕಿ ಹಸಿರು ಉತ್ಪತ್ತಿ ಮಾಡುವ ಅಭಿಯಾನವನ್ನು ನಡೆಸಿದ ಇವರು ,ಮದುವೆಗೆ ಬಂದ ಎಲ್ಲಾ ಅತಿಥಿಗಳಿಗೆ ಗಿಡವನ್ನು ಉಡುಗೊರೆಯಾಗಿ ನೀಡಿದ್ದು ಜನ ಮೆಚ್ಚುಗೆ ಗಳಿಸಿದ್ದಾರೆ. ತನ್ನದೇ ಆದ ಯೌಟ್ಯೂಬ್ ಚಾನೆಲ್ “ಆರ್ ಜೆ ರಶ್ಮಿ ಉಳ್ಳಾಲ್” ಆರಂಭಿಸಿದ್ದು ಜನರಿಗೆ ಪ್ರೇರಣೆ ನೀಡುವ ಕಾರ್ಯವನ್ನು ನಡೆಸುತ್ತಿದ್ದಾರೆ.

ಈದೀಗ “ದಿವ್ಯಾಸ್ ಅನ್ನಪೂರ್ಣ ” ಯೋಜನೆಯ ಪ್ರಕಾರ ಮಂಗಳೂರಿನ,ಫಳ್ನೀರ್,ಕಂಕನಾಡಿ ,ಸ್ಟೇಟ್ ಬ್ಯಾಂಕ್,ಹಂಪನ್ಕಟ್ಟ ಸೇರಿದಂತೆ ಸುತ್ತಮುತ್ತಲಿನ ಪರಿಸರದಲ್ಲಿ ಇರುವ ಮೂಕ ಪ್ರಾಣಿ ಹಾಗು ಬಡ ಜನರಿಗೆ ರಾತ್ರಿ ಊಟ ನೀಡುವ ಯೋಜನೆ ಮಾಡಿದ್ದು ಬಹುತೇಕ ಯುವ ಜನರಿಗೆ, ಸಮಾಜಕ್ಕೆ ಏನಾದರೂ ಮಾಡಬೇಕು ಎನ್ನುವ ಪ್ರೇರಣೆ ನೀಡುತ್ತಾ ಇದ್ದಾರೆ ದಿವ್ಯಾಸ್ ತಂಡ.

ಮಂಗಳೂರು ಉಳ್ಳಾಲ ಸೇರಿದಂತೆ ಬಹಳಸ್ಟು ಮುಕಪ್ರಾಣಿ ಹಾಗು ಜನರಿಗೆ ಲಾಕ್ ಡೌನ್ ಸಂದರ್ಭ ದಲ್ಲಿ ಊಟದ ಕಿಟ್ ಹಾಗು ಸರಕಾರಿ ಶಾಲೆಗೆ ಪುಸ್ತಕ , ಕೋವಿಡ್ ಥರ್ಮೋಮೀಟರ್ ಸಿಗುವಂತೆ ಆರ್ಥಿಕ ಸಹಾಯ ಮಾಡಿರುತ್ತಾರೆ.


ಜನರು ಇಂತಹ ಕಾರ್ಯದಿಂದ ಪ್ರೇರಣೆ ಪಡೆದು ತಾನು ಕೂಡ ಇಂತಹ ಕೆಲಸಗಳನ್ನು ಮಾಡಿ ಇನ್ನೊಬ್ಬರಿಗೆ ಉಪಕಾರಿಯಾಗಬೇಕೆಂಬ ಅರಿವನ್ನು ಮೂಡಿಸಲು ಇಂತಹ ಸಮಾಜಮುಖಿ ಸೇವೆಗಳನ್ನು ಮುಂದುವರಿಸಬೇಕು ಎನ್ನುವುದು ರಶ್ಮಿಯ ಉದ್ದೇಶ.

ಇವರು ಪ್ರಸ್ತುತ ಮ್ಯಾನೇಜರ್ ಹುದ್ದೆಯಲ್ಲಿ ಇದ್ದು. ಇವರಿಗೆ ಇನ್ನಷ್ಟು ಅನೇಕ ಅವಕಾಶಗಳು ಒದಗಿ ಬರಲಿ,ಇನ್ನಷ್ಟು ಸಮಾಜ ಸೇವೆಮಾಡಲು ಆ ಭಗವಂತ ಶಕ್ತಿ, ಆರೋಗ್ಯ ಕೊಡಲಿ ಇನ್ನಷ್ಟು ಮಿಂಚಲಿ ಎಂದು ಹಾರೈಸುವ.

ಬರಹ: ✒️ ಪ್ರಶಾಂತ್ ಅಂಚನ್ ಮಸ್ಕತ್ತ್


Related Posts

ಶೈಕ್ಷಣಿಕ ಸಾಧನೆಯಲ್ಲೂ ‘ಸೇಮ್ ಟು ಸೇಮ್’: ಕುಂದಾಪುರದ ಅವಳಿ ಸಹೋದರಿಯರ SSLC ಪವಾಡ!


Share         ​ಕುಂದಾಪುರ: ಅವಳಿ ಜವಳಿ ಮಕ್ಕಳು ಅಂದಮೇಲೆ ಅವರ ರೂಪ, ಬಣ್ಣ, ನಡವಳಿಕೆ ಹಾಗೂ ಆಲೋಚನೆಗಳಲ್ಲಿ ಸಾಮ್ಯತೆ ಇರುವುದು ಸಹಜ ಸಂಗತಿ. ಆದರೆ, ಕುಂದಾಪುರದ ಈ ಇಬ್ಬರು ಸಹೋದರಿಯರು ಶೈಕ್ಷಣಿಕ ಸಾಧನೆಯಲ್ಲೂ ತಾವು ಸಂಪೂರ್ಣವಾಗಿ


Read More »

ಮಂಗಳೂರು ದಸರಾ ಇತಿಹಾಸದಲ್ಲಿ ಹೊಸ ಮೈಲಿಗಲ್ಲು – ₹67 ಕೋಟಿ ವೆಚ್ಚದ ಭೂಗತ ಕೇಬಲ್ ಯೋಜನೆಗೆ ಮಂಜೂರಾತಿ


Share         ವಿಶ್ವವಿಖ್ಯಾತ ಮಂಗಳೂರು ದಸರಾ ಮಹೋತ್ಸವದ ಮೆರವಣಿಗೆಗೆ ದಶಕಗಳಿಂದ ಎದುರಾಗಿದ್ದ ತಾಂತ್ರಿಕ ಸವಾಲಿಗೆ ಈಗ ಶಾಶ್ವತ ಪರಿಹಾರ ಸಿಕ್ಕಂತಾಗಿದೆ. ಕುದ್ರೋಳಿ ಶ್ರೀ ಗೋಕರ್ನಾಥ ಕ್ಷೇತ್ರದ ಆಡಳಿತ ಮಂಡಳಿಯ ಸುದೀರ್ಘ ಪ್ರಯತ್ನದ ಫಲವಾಗಿ, ಮೆರವಣಿಗೆ ಮಾರ್ಗದಲ್ಲಿ


Read More »

ಉಡುಪಿ ಸಿಟಿ ಬಸ್‌ ಚಾಲಕನ ಮಗಳು ಶಾಲೆಗೆ ಪ್ರಥಮ ರಾಂಕ್ – ದ್ರುತಿ ಪೂಜಾರಿ ಸಾಧನೆ…


Share         ಉಡುಪಿ: ಶ್ರಮ, ಸಂಕಲ್ಪ ಮತ್ತು ಕುಟುಂಬದ ಬೆಂಬಲ ಇದ್ದರೆ ಯಾವ ಸಾಧನೆಯೂ ಅಸಾಧ್ಯವಲ್ಲ ಎಂಬುದಕ್ಕೆ ನಗರದ ಸಿಟಿ ಬಸ್ ಚಾಲಕರ ಮಗಳು ದ್ರುತಿ ಪೂಜಾರಿ ಉತ್ತಮ ಉದಾಹರಣೆ ಆಗಿದ್ದಾಳೆ. 23/04/2026 ರಂದು ಪ್ರಕಟವಾದ


Read More »

ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ


Share         ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ ಲಭಿಸಿರುವುದು ನಮ್ಮ ಸಮಾಜಕ್ಕೆ ಹೆಮ್ಮೆಯ ಸಂಗತಿ. ಈ ಕುರಿತು ಏಪ್ರಿಲ್ 2ರಂದು ಸರಕಾರದ


Read More »

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »

ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕವನಕ್ಕೆ ಒಲಿದ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ


Share         ಕರ್ನಾಟಕ ಲೇಖಕಿಯರ ಸಂಘವು 2025ನೇ ಸಾಲಿನ ವಿವಿಧ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಸ್ತಪ್ರತಿಯಲ್ಲಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ, ಅನಿತಾ ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಕ್ಕೆ 


Read More »