TOP STORIES:

‘ಮೈಕ್ರೋ ಆರ್ಟ್’ ನಲ್ಲಿ ಸಾಧನೆಯ ಶಿಖರವನ್ನೇರಿದ ಸಂಜಯ್…!!!


‘ಮೈಕ್ರೋ ಆರ್ಟ್’ ನಲ್ಲಿ ಸಾಧನೆಯ ಶಿಖರವನ್ನೇರಿದ ಸಂಜಯ್…!!!

ಒಬ್ಬ ವ್ಯಕ್ತಿ ಅನೇಕ ಸವಾಲುಗಳನ್ನ ಎದುರಿಸಿ ಮುನ್ನಡೆಯುತ್ತಿದ್ದಾನೆ ಎಂದಾದರೆ ಆತ ಸಾಧನೆಯ ಹಾದಿಯಲ್ಲಿ ಹೊರಟಿದ್ದಾನೆ ಎಂದರ್ಥ. ಅಂದಹಾಗೆ ಅಂತಹದೇ ಸಾಧನೆಯ ಹಾದಿಯಲ್ಲಿ ಶಿಖರವನ್ನೇರಿದ ಓರ್ವ ವ್ಯಕ್ತಿ ಇದೀಗ ಜನಪ್ರೀಯತೆಯನ್ನ ಪಡೆದಿದ್ದಾನೆ. ಹೌದು ನಾವು ಹೇಳ ಹೊರಟಿರುವುದು ಉಡುಪಿಯ ಕಾಡೂರು ಮೂಲದ ದಯಾನಂದ ಮತ್ತು ಸುನೀತಾ ದಂಪತಿಯ ಪುತ್ರ ಸಂಜಯ್ ಅವ್ರ ಬಗ್ಗೆ. ಸಂಜಯ್ ಓದಿರೋದು ಡಿಪ್ಲೋಮ ಇನ್ ಸಯನ್ಸ್. ಹುಟ್ಟಿನಿಂದಲೇ ಒಂದಲ್ಲ ಒಂದು ಕ್ಷೇತ್ರದಲ್ಲಿ ಏನಾದ್ರು ಒಂದು ಸಾಧನೆಯನ್ನ ಮಾಡಲೇಬೇಕು ಅನ್ನೋ ಛಲವನ್ನ ಹೊಂದಿದ್ದ ಸಂಜಯ್ ಗೆ ‘ಮೈಕ್ರೋ ಆರ್ಟ್’ ತನ್ನಲ್ಲಿನ ಕಲೆಯನ್ನ ಪ್ರದರ್ಶಿಸಿತು. ಜೊತೆಗೆ ಜೀವನದಲ್ಲಿ ಸಾಧನೆಯನ್ನ ಮಾಡುವ ಛಲವನ್ನ ತೋರಿಸಿಕೊಟ್ಟಿತು. ಯಸ್ ಮೈಕ್ರೋ ಆರ್ಟ್ ಅರ್ಥಾತ್ ಸೂಕ್ಷ್ಮ ಕಲಾ ಕ್ಷೇತ್ರ. ಇದೇನು ಅಷ್ಟು ಸುಲಭದ ಕಲೆಯಲ್ಲ. ಅದಕ್ಕೆ ಅದರದೇ ರೀತಿ ಸೂಕ್ಷ್ಮ ಮತ್ತು ಕಠಿಣ ಪರಿಶ್ರಮಬೇಕು. ಚೂರು ಎಡವಿದರೂ ಕಲಾಕೃತಿ ಹಾಗೂ ಮಾಡಿದ ಪರಿಶ್ರಮ ವ್ಯರ್ಥವಾಗಿಬಿಡುತ್ತೆ. ಅಷ್ಟು ಸೂಕ್ಷ್ಮ ಕಲೆ ಇದು.

ತಾತ ಕೊರಗಪ್ಪ ಮತ್ತು ಅಜ್ಜಿ ಸುಂದರಮ್ಮರ ಮೂಲಕ ಮೈಕ್ರೋ ಆರ್ಟ್ ಮಾಡಲು ಸ್ಫೂರ್ತಿ ಪಡೆದ ಇವರಿಗೆ ಆರಂಭದಲ್ಲಿ ಬೆಂಬಲಕ್ಕೆ ನಿಂತವರು ಕೇವಲ ಕುಟುಂಬದವರು ಅರ್ಥಾತ್ ಸಹೋದರರು ಮತ್ತು ಪಾಲಕರು ಹಾಗೂ ಕೆಲವು ಗೆಳೆಯರು ಮಾತ್ರ. ಹಾಗಾಗಿ ಸಂಜಯ್ ಇವತ್ತಿಗೂ ಅವರಿಗೆ ಅಭಾರಿಯಾಗಿ ನನ್ನ ಸಾಧನೆಯ ಪರಿಶ್ರಮಕ್ಕೆ ಹೆಜ್ಜೆ ಹಾಕಿದವರು ಎನ್ನುತ್ತಾರೆ.

ಅಂದಹಾಗೆ ಸಂಜಯ್ ಇದುವರೆಗೂ 2 ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್, 1 ವರ್ಲ್ಡ್ ಕಿಂಗ್ಸ್, ಮತ್ತು 2 ಗಿನ್ನಿಸ್ ದಾಖಲೆ ಮಾಡಿದ್ದಾರೆ. ಇವರ ಸಾಧನೆ ಗುರುತಿಸಿ ಇದುವರೆಗೂ ರಾಜ್ಯ ಮತ್ತು ತಾಲೂಕು ಮಟ್ಟದಲ್ಲಿ ತಲಾ ಎರಡು, ಜಿಲ್ಲಾ ಮಟ್ಟದಲ್ಲಿ 1 ಸನ್ಮಾನ (ಸಂಘಟನೆಗಳ ಮೂಲಕ ), ಸ್ಥಳೀಯ ಆಡಳಿತ (ಗ್ರಾಮ ಪಂಚಾಯತ್ )ವತಿಯಿಂದ 5 ಸನ್ಮಾನ ಸೇರಿದಂತೆ 35ಕ್ಕೂ ಹೆಚ್ಚು ಸಂಘ ಸಂಸ್ಥೆಗಳಿಂದ ಸನ್ಮಾನ ಪಡೆದಿದ್ದಾರೆ. ಜೊತೆಗೆ ಮಂಗಳೂರಿಯನ್.ಕಾಮ್ ಮತ್ತು ಡೈಜಿವರ್ಲ್ಡ್ ಚಾನೆಲ್ ನ ವೆಬ್ಸೈಟ್ ನಲ್ಲಿ ಇವರ ಸಾಧನೆ ಕುರಿತು ಲೇಖನ ಪ್ರಕಟವಾಗಿತ್ತು.

ಇಷ್ಟೇ ಅಲ್ಲ ಇವರು ಇದುವರೆಗೂ 25 ಮಣ್ಣಿನ ಕಲಾಕೃತಿ, 15-20 ಸೋಪ್ ಆರ್ಟ್, 100ಕ್ಕೂ ಹೆಚ್ಚು ಚಾಕ್ ಆರ್ಟ್, 25-30 ಪೆನ್ಸಿಲ್ ಆರ್ಟ್, 30 ಪೆನ್ಸಿಲ್ ಗಣೇಶ ಮೂರ್ತಿ ಮಾಡಿದ್ದಾರೆ. ಇವರೊಬ್ಬ ಬಹುಮುಖ ಪ್ರತಿಭೆ. ‘ಚಿನ್ಮಯ’ ಹೆಸರಿನ ಒಂದು ಕವನ ಸಂಕಲನವನ್ನು ಕೂಡಾ ಬರೆದಿದ್ದು ಹಲವಾರು ಪೇಂಟಿಂಗ್ಸ್ ಕೂಡಾ ಮಾಡಿದ್ದಾರೆ.

ಇನ್ನೇನು ಸಂಜಯ್ 2 ಗಿನ್ನಿಸ್ ದಾಖಲೆ ಬರೆದಿದ್ದಾರೆ ಅಂದ ಮಾತ್ರಕ್ಕೆ ಇವರ ಆರಂಭಿಕ ಜೀವನ ಹೂವಿನ ಹಾಸಿಗೆಯಾಗಿತ್ತು ಅಂತ ಭಾವಿಸಿದ್ದರೆ ಅದು ಮೂರ್ಖತನ. ಯಾಕಂದ್ರೆ ಅವರ ಬದುಕಿನುದ್ದಕ್ಕೂ ಕಷ್ಟಗಳನ್ನೇ ಅನುಭವಿಸಿ ಮೇಲೆ ಬಂದವರು. ಹಾಗಾಗಿ ಇಂತಹ ಕಲಾವಿದರಿಗೆ ಇನ್ನಷ್ಟು ಬೆಂಬಲ ದೊರೆಯಲಿ ಮತ್ತು ಅದರಿಂದ ಇನ್ನಷ್ಟು ಸಾಧನೆ ಮಾಡಲು ಶಕ್ತಿ ಸ್ಫೂರ್ತಿ ದೊರೆಯಲಿ ಎನ್ನುವ ಆಶಯ ನಮ್ಮದು.


Related Posts

ನಿರೂಪಣಾ ಕ್ಷೇತ್ರದಲ್ಲಿ ಮಿಂಚುತ್ತಿರುವ ಉದಯೋನ್ಮುಖ ಪ್ರತಿಭೆ – ಕೃತಿ ಪೂಜಾರಿ ಮೂಡುಬೆಟ್ಟು


Share           ಸಾಧನೆಯೆಂಬುದು ಯಾರೊಬ್ಬನ ಸೊತ್ತೂ ಅಲ್ಲ, ಅದು ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಭಾವದಿಂದ ಮುನ್ನಡೆಯುವ ಮನಸು ಮತ್ತು ವ್ಯಕ್ತಿಗಳ ಪಾಲಿನ ವರದಾನ. ಸಾಧನೆಯ ಮನಸ್ಸೆಂಬ ಸಸಿಗೆ ಸತತ ನೀರೆರೆದು ಪೋಷಿಸಿ, ಶ್ರಮವನ್ನು


Read More »

ಸುರತ್ಕಲ್‌ನಲ್ಲಿ ರಂಗುರಂಗಿನ ರಂಗೋತ್ಸವ ನವೀನ್ ಡಿ ಪಡೀಲ್ ಗೆ ರಂಗಚಾವಡಿ ಪ್ರಶಸ್ತಿ ಪ್ರದಾನ


Share         ಸುರತ್ಕಲ್: ರಂಗಚಾವಡಿ ಮಂಗಳೂರು ಸಾಂಸ್ಕೃತಿಕ ಸಾಂಸ್ಕೃತಿಕ ಸಂಘಟನೆ ಮತ್ತು ಸುಭಾಷಿತನಗರ  ರೆಸಿಡೆಂಟ್ಸ್ ವೆಲ್ ಫೇರ್ ಅಸೋಸಿಯೇಶನ್ (ರಿ) ಸುರತ್ಕಲ್ ಇದರ ಆಶ್ರಯದಲ್ಲಿ ನಡೆದ ರಂಗಚಾವಡಿ ರಜತ ಸಂಭ್ರಮ ಮತ್ತು ರಂಗುರಂಗಿನ ರಂಗೋತ್ಸವ ಕಾರ್ಯಕ್ರಮ


Read More »

ಸುರತ್ಕಲ್‌ನಲ್ಲಿ ರಂಗುರಂಗಿನ ರಂಗೋತ್ಸವ ನವೀನ್ ಡಿ ಪಡೀಲ್ ಗೆ ರಂಗಚಾವಡಿ ಪ್ರಶಸ್ತಿ ಪ್ರದಾನ


Share         ಸುರತ್ಕಲ್‌ನಲ್ಲಿ ರಂಗುರಂಗಿನ ರಂಗೋತ್ಸವ   ನವೀನ್ ಡಿ ಪಡೀಲ್ ಗೆ ರಂಗಚಾವಡಿ ಪ್ರಶಸ್ತಿ ಪ್ರದಾನ   ಸುರತ್ಕಲ್: ರಂಗಚಾವಡಿ ಮಂಗಳೂರು ಸಾಂಸ್ಕೃತಿಕ ಸಾಂಸ್ಕೃತಿಕ ಸಂಘಟನೆ ಮತ್ತು ಸುಭಾಷಿತನಗರ ರೆಸಿಡೆಂಟ್ಸ್ ವೆಲ್ ಫೇರ್ ಅಸೋಸಿಯೇಶನ್


Read More »

ಸ್ವಾಮಿಗಳ ಚಿತ್ರ ಮತ್ತು ಪ್ರತಿಮೆಯ ಮುಂದೆ ರಾಜ್ಯಪಾಲರೊಂದಿಗೆ ಇರುವ ಚಿತ್ರ


Share         ಶಿವಗಿರಿ: ರಾಜ್ಯಪಾಲ ಆರ್.ವಿ. ಅರ್ಲೆಕ್ಕರ್ ಅವರು ರಾಜಭವನದ ಅತಿಥಿ ಕೊಠಡಿಯಲ್ಲಿ ಶ್ರೀ ನಾರಾಯಣ ಗುರುಗಳ ಚಿತ್ರ ಮತ್ತು ಕಂಚಿನ ಪ್ರತಿಮೆಯನ್ನು ಸ್ವಾಮಿಗಳಿಗೆ ತೋರಿಸಿದರು. ಅತಿಥಿ ಕೊಠಡಿಯನ್ನು ಪ್ರವೇಶಿಸುವಾಗ ಮೊದಲು ನೋಡುವುದು ಗುರುಗಳ ಚಿತ್ರ.


Read More »

ಕವಿ ಗವಿಸಿದ್ದ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಅನಿತಾ ಪಿ. ತಾಕೊಡೆಯವರ “ಮೇಣಕ್ಕಂಟಿದ ಬತ್ತಿ” ಕವನ ಸಂಕಲನ ಬಿಡುಗಡೆ


Share         ಅ.26: ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಅನಿತಾ ಪಿ. ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ಕವನ ಸಂಕಲನ ಬಿಡುಗಡೆ, ಪ್ರಶಸ್ತಿ ಪ್ರದಾನ,ಸಾಹಿತ್ಯ ಚರ್ಚೆ ಮುಂಬಯಿ, ಅ.23-  ಖ್ಯಾತ ಬಂಡಾಯ ಕವಿ ಗವಿಸಿದ್ದ ಎನ್. ಬಳ್ಳಾರಿ


Read More »

ಮಂಗಳೂರು: ಅಳದಂಗಡಿಯ ಶ್ರೀಮತಿ ಅನುಷಾ ಪ್ರಸಾದ್ ಪೂಜಾರಿ ಅವರಿಗೆ ಗಣಿತಶಾಸ್ತ್ರ ವಿಷಯದಲ್ಲಿ ಪಿ.ಎಚ್.ಡಿ ಪದವಿ


Share         ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಣಿಪಾಲ (Manipal Institute of Technology, Manipal) ನ ಗಣಿತಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಶ್ರೀಮತಿ ಅನುಷಾ ಎಲ್ ಅವರು ಮಂಡಿಸಿದ “A study on N-Covering


Read More »