TOP STORIES:

ಮೊಗೆದಷ್ಟು ಮುಗಿಯದ.. ಬಗೆದಷ್ಟು ಅಳಕ್ಕಿರುವ ಪರ್ಪಲೆಯ ರಹಸ್ಯ.


ಮೊಗೆದಷ್ಟು ಮುಗಿಯದ.. ಬಗೆದಷ್ಟು ಅಳಕ್ಕಿರುವ ಪರ್ಪಲೆಯ ರಹಸ್ಯ.


15ನೇ ಶತಮಾನದ ಒಂದು ಸಂಜೆ ಪಾಂಡ್ಯ ನಗರಿ ಕಾರ್ಕಳ ತನ್ನ ದಿನದ ವಹಿವಾಟನ್ನು ಮುಗಿಸಿ ಪಡುಗಡಲ ಸೆರಗಲ್ಲಿ ಮರೆಯಾಗುತ್ತಿದ್ದ ನೇಸರ ನನ್ನೇ ದಿಟ್ಟಿಸುತ್ತಿತ್ತು. ಅಷ್ಟರಲ್ಲೇ ಕೇಳಿಬಂತು ಎಲ್ಲೆಲ್ಲೂ ಹಾಹಾಕಾರ.. ಹೋ ಎಂದು ಬೆಚ್ಚಿ ಬೆದರಿ ಓಡುವ ಜನಮಂದೆಯ ಬೊಬ್ಬೆ ಗಲಾಟೆ. ನೋಡುವುದೇನು?
ಆಗಸದೆತ್ತರಕ್ಕೆ ಧೂಳೆಬ್ಬಿಸುತ್ತ ಹೂಂಕರಿಸುತ್ತಾ ಘೀಳಿಡುತ್ತಾ ಪರ್ವತ ಗಾತ್ರದ ಅರಸನ ಪಟ್ಟದ ಆನೆ ಇಡೀ ಪಟ್ಟಣವನ್ನೇ ಪುಡಿ ಗಟ್ಟುವ ಹುಮ್ಮಸ್ಸಿನಲ್ಲಿ ಮುನ್ನುಗ್ಗಿ ಬರುತ್ತಿತ್ತು. ಅರಮನೆಯ ಲಾಯದಲ್ಲಿ ಕಾಲಿಗೆ ಕಟ್ಟಿದ ಕಬ್ಬಿಣದ ಸಂಕೋಲೆಯನ್ನು ತುಂಡರಿಸಿಕೊಂಡು ಮದ ಏರಿದ ಆನೆ ಪೇಟೆಯ ಕಡೆಗೆ ನುಗ್ಗಿತ್ತು. ಒಂದಷ್ಟು ಕಟ್ಟಾಳುಗಳು ಆನೆಯನ್ನು ಕಟ್ಟಿ ಹಾಕುವ ಭರದಲ್ಲಿ ಮುನ್ನುಗ್ಗಿದರು. ಅವರಲ್ಲಿ ಕೆಲವರು ಸೊಂಡಿಲಿಗೆ ಸಿಕ್ಕಿ ಕಬ್ಬಿನ ಜಲ್ಲೆಯಂತೆ ನೆಲಕ್ಕೆ ಒಗೆಯಲ್ಪಟ್ಟರು. ಇನ್ನು ಕೆಲವರು ಆನೆಯ ಕಾಲಡಿಗೆ ಸಿಕ್ಕಿ ಕುಂಬಳಕಾಯಿಯಂತೆ ತಲೆ ಒಡೆಸಿಕೊಂಡರು. ಈ ರುದ್ರ ಭಯಾನಕ ದೃಶ್ಯ ಕಂಡ ನಗರದ ಜನರು ಆನೆಯನ್ನು ಹಿಡಿಯುವ ಯತ್ನವನ್ನು ಬಿಟ್ಟು ತಮ್ಮ ಮನೆ ಮಠ ಸ್ವತ್ತು ಸಾಮಗ್ರಿಗಳನ್ನು ಉಳಿಸುವ ಧಾವಂತಕ್ಕೆ ಬಿದ್ದರು. ತೆಂಗಿನ ಸೋಗೆಗಳನ್ನು ಸುಟ್ಟು ಆನೆಯನ್ನು ತಮ್ಮ ಬೀದಿಗೆ ಬರದಂತೆ ತಡೆದರು. ದೊಂದಿ ರಾಳಗಳನ್ನು ಹಿಡಿದು ಆನೆಯನ್ನು ಕಾಡಿಗಟ್ಟುವ ಪ್ರಯತ್ನದಲ್ಲಿ ತೊಡಗಿದರು. ಬೆಂಕಿ ಕಂಡು ಬೆದರಿದ ಆನೆ ಪರ್ಪಲೆಯ ತಪ್ಪಲಿಗೆ ಬಂತು. ಅಲ್ಲಿಂದ ಮುಂದೆ ಪರ್ಪಲೆ ಗುಡ್ಡೆ ಹತ್ತಿ ಕಾಣೆಯಾಯಿತು.
ಪಟ್ಟದ ಆನೆಗೆ ಮದ ಏರಿದ ಚಿಂತೆಯಲ್ಲಿ ಅರಸನಿದ್ದರೆ, ಮದ ಏರಿದ ಆನೆ ಪೇಟೆ ಬಿಟ್ಟು ಪರ್ಪಲೆಯ ಗುಡ್ಡ ಹತ್ತಿದ ನೆಮ್ಮದಿಯಲ್ಲಿ ಜನರು ನಿದ್ದೆ ಮಾಡಿದರು.
ಕಾಡಿನಲ್ಲಿ ಅಲೆದು ಮರಗಳ ಮೇಲೆ ಸಿಟ್ಟು ತೋರಿಸಿ ಸುಸ್ತಾದ ಆನೆ ಮರುದಿನ ಮದ ಇಳಿದು ಬಾಯರಿ ನೀರನ್ನು ಅರಸಿಕೊಂಡು ಮೆಲ್ಲನೆ ಪರ್ಪಲೆ ಗುಡ್ಡದ ಪೂರ್ವಕ್ಕೆ ಇಳಿದು ಆನೆಕೆರೆಯ ಕಡೆಗೆ ಹೆಜ್ಜೆ ಹಾಕಿತು. ನಗರದ ಜನರು ಮತ್ತೆ ಸೇರಿದರು. ಮಾವುತನಿಗೆ ಸುದ್ದಿ ಮುಟ್ಟಿಸಿದರು. ಆನೆ ಸಹಜ ಸ್ಥಿತಿಗೆ ಬಂದಿತ್ತು. ಮಾವುತನನ್ನು ಹಿಂಬಾಲಿಸುತ್ತ ಏನೂ ಆಗಿಲ್ಲವೆಂಬಂತೆ ಅರಮನೆಯ ಕಡೆಗೆ ಹೆಜ್ಜೆ ಹಾಕಿತು.
ಅರಮನೆಯ ಬಳಿ ಬಂದು ಗಜ ಲಾಯದ ಗೂಟದ ಸಂಕೋಲೆಯನ್ನು ಆನೆಯ ಕಾಲಿಗೆ ಕಟ್ಟಬೇಕು ಎಂದು ಮಾವುತ ಬಗ್ಗಿದಾಗ ನೋಡುವುದೇನು?
ಆನೆಯ ಕಾಲಿನಲ್ಲಿದ್ದ ಕಬ್ಬಿಣದ ತುಂಡು ಸರಪಳಿ ಬಂಗಾರವಾಗಿದೆ!
ಅಷ್ಟಕ್ಕೂ ಆನೆಯ ಕಾಲಿನಲ್ಲಿದ್ದ ಕಬ್ಬಿಣದ ಸರಪಳಿ ಬಂಗಾರ ವಾಗಿದ್ದು ಹೇಗೆ ?
ಕಬ್ಬಿಣವನ್ನು ಬಂಗಾರ ಮಾಡಿದ ಆ ರಸಬಾವಿ ಅಥವಾ ಸ್ಪರ್ಶಮಣಿ ಪರ್ಪಲೆ ಗುಡ್ಡದಲ್ಲಿ ಎಲ್ಲಿದೆ ?
ಆ ಇಡಿ ರಾತ್ರಿ ಆನೆ ಅಲೆದಾಡಿದ ಪ್ರದೇಶದಲ್ಲಿ ಕಾಲ ಕಬ್ಬಿಣದ ಸರಪಳಿಗೆ ಸ್ಪರ್ಶಿಸಿದ ಆ ಚಮತ್ಕಾರಿ ವಸ್ತು ಯಾವುದು?
ಇತಿಹಾಸದ ಅನೇಕ ಪುಟಗಳಲ್ಲಿ ಬಂದು ಹೋಗುವ ರಸವಿದ್ಯೆಯನ್ನು ಕರಗತ ಮಾಡಿಕೊಂಡ ಯೋಗಿಗಳು ಈ ಗುಡ್ಡದ ಮೇಲಿದ್ದರೇ?
5 ಶತಮಾನಗಳಿಂದ ಜನರ ಬಾಯಿಂದ ಬಾಯಿಗೆ ಹರಡಿ ಕೊಂಡು ಬಂದ ಈ ದಂತ ಕಥೆಯ ಹಿಂದಿನ ರೋಚಕ ಸತ್ಯವೇನು?
ಮೊನ್ನೆ ಅಷ್ಟಮಂಗಲ ಪ್ರಶ್ನೆ ಇರಿಸಿದ ಪಯ್ಯನ್ನೂರಿನ ನಾರಾಯಣ ಪೊದುವಾಲರು.. ಇದ್ ಭೂಮಿ ಸ್ವರ್ಣ ಮಯಿ…ಈ ಭೂಮಿಕ್ಕ್ ಸ್ವರ್ಣ ಸೃಷ್ಟಿಕ್ಕಿನ ಶಕ್ತಿ ಇಂಡ್ ಎಂದಾಗ ನಮ್ಮೆಲ್ಲರ ಮೈ ಮುಳ್ಳೆದ್ದಿದ್ದು ಇದೇ ಕಾರಣಕ್ಕೆ..
ಆವತ್ತಿನ ಅಷ್ಟಮಂಗಲ ಪ್ರಶ್ನೆಯಲ್ಲಿ ಇಂತಹ ಅನೇಕ ಮುಖ್ಯ ಬಿಂದುಗಳು ದೈವಜ್ಞರ ಗಮನಕ್ಕೆ ಬಂದರೂ ಅದನ್ನು ವಿಸ್ತರಿಸುವ ಕೆಲಸ ನಡೆದಿರಲಿಲ್ಲ
ಅರಸನ ಆನೆಯ ಸರಪಳಿ ಬಂಗಾರವಾದ ಕಥೆ ನನಗೆ ತಿಳಿದಿದ್ದು ಅಷ್ಟಮಂಗಲ ಪ್ರಶ್ನೆ ಮುಗಿದು ಒಂದು ವಾರದ ಬಳಿಕ. ಯಾರೋ ಒಬ್ಬರು ಹಿರಿಯ ಜೈನ ಇಂದ್ರರ ಮೂಲಕ
ಕಾಲದ ಚಿಪ್ಪಿನೊಳಗೆ ಭದ್ರವಾಗಿ ಕುಳಿತಿರುವ ಅನೇಕ ಸಂಗತಿಗಳು ಆ ಶಕ್ತಿಗಳ ಅಪೇಕ್ಷೆಗನುಗುಣವಾಗಿ ಮತ್ತೆ ಮುನ್ನೆಲೆಗೆ ಬರುತ್ತಿದೆ.
ಪರ್ಪಲೆಯ ಸತ್ಯ ಸಾನಿಧ್ಯ ನಿತ್ಯ ನಿರಂತರ ಬೆಳಗುತ್ತಿರಲಿ
ಜೈ ಮಹಾಕಾಲ್

credits: beauty of tulunadu


Related Posts

ಬಹರೖನ್ ನ ಕಸ್ತೂರಿ ಕನ್ನಡ ಎಫ್.ಎಂ ರೇಡಿಯೋ ಆರ್.ಜೆ ಕಮಲಾಕ್ಷ ಅಮೀನ್ ಅವರಿಗೆ ಗೋಲ್ಡನ್ ಐಕಾನಿಕ್ ಅವಾರ್ಡ್


Share         ಮಂಗಳೂರು: ಬಹರೖನ್ ನ ಕಸ್ತೂರಿ ಕನ್ನಡ ಎಫ್.ಎಂ ರೇಡಿಯೋ ಆರ್.ಜೆ ಕಮಲಾಕ್ಷ ಅಮೀನ್ ಅವರನ್ನು ಮಂಗಳೂರಿನಲ್ಲಿ ಗೋಲ್ಡನ್ ಐಕಾನಿಕ್ ಅವಾರ್ಡ್ ಗೌರವ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಹೋಟೆಲ್ ಓಷನ್ ಪರ್ಲ್ ನಲ್ಲಿ ನಡೆದ


Read More »

ಪೂಜಾರಿ ಎಂದು ಗುರುತಿಸಿಕೊಂಡಿರುವವರು ಜನಗಣತಿಯಲ್ಲಿ ಕಡ್ಡಾಯವಾಗಿ ಬಿಲ್ಲವ ಎಂದು ನಮೂದಿಸಿ ಡಾ. ರಾಜಶೇಖರ್ ಕೋಟ್ಯಾನ್


Share         ಮಂಗಳೂರು ಅಗಸ್ಟ್ 18: ಅನೇಕ ಕಡೆ ದೇವಸ್ಥಾನದಲ್ಲಿ ಪೂಜೆ ಮಾಡುವವರೂ ಪೂಜಾರಿ ಎಂದು ಗುರುತಿಸಿಕೊಂಡಿರುವುದರಿಂದ ಈ ಸಲದ ಜನಗಣತಿಯಲ್ಲಿ ನಾವು ʻಜಾತಿ’ ಎಂಬ ಕಾಲಂನಲ್ಲಿ ಕಡ್ಡಾಯವಾಗಿ ʻಬಿಲ್ಲವ’ ಎಂದೇ ನಮೂದಿಸಬೇಕು ಎಂದು ಬಿಲ್ಲವ


Read More »

ಬಿಲ್ಲವ ಸಮಾಜದ ಹೆಮ್ಮೆಯ ಕಣ್ಮಣಿ ಪ್ರಾಮಾಣಿಕ ಪೊಲೀಸ್ ಅಧಿಕಾರಿ ಶಾಂತಾರಾಮ್ ಕುಂದರ್


Share         ಬಿಲ್ಲವ ಸಮಾಜದ  ಹೆಮ್ಮೆಯ ಕಣ್ಮಣಿ ದಕ್ಷ, ಧೈರ್ಯ ಪ್ರಾಮಾಣಿಕ ಪೊಲೀಸ್ ಅಧಿಕಾರಿ ನಮ್ಮವರಾಧ ಪೊಲೀಸ್ ಇನ್ಸ್ಪೆಕ್ಟರ್ ಶಾಂತಾರಾಮ್ ಕುಂದರ್ ಅವರ ವೃತ್ತಿಜೀವನದುದ್ದಕ್ಕೂ ಸಾರ್ವಜನಿಕ ಸೇವೆಯ ಕಡೆಗೆ ಅವರ ಅಪಾರ ಸಮರ್ಪಣೆ, ಶಿಸ್ತು, ನಿಷ್ಠೆ


Read More »

ಪುತ್ತೂರು ಕೆಯ್ಯೂರಿನ ಪಿಎಸ್‌ಐ ಪ್ರದೀಪ್ ಪೂಜಾರಿಯವರಿಗೆ ಮುಂಬಡ್ತಿ ಲೋಕಾಯುಕ್ತ ಇನ್ಸ್‌ಪೆಕ್ಟ‌ರ್ ಆಗಿ ನಿಯುಕ್ತಿ..


Share         ಬೆಂಗಳೂರು: ರಾಜ್ಯದಲ್ಲಿ ಸಬ್ ಇನ್ ಪೆಕ್ಟರ್ (ಸಿವಿಲ್)ಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದ 16 ಮಂದಿಗೆ ಪೊಲೀಸ್ ಇನ್ಸ್‌ಪೆಕ್ಟರ್‌ಗಳಾಗಿ ಮುಂಬಡ್ತಿ ನೀಡಿ ವರ್ಗಾವಣೆ ಮಾಡಲಾಗಿದ್ದು ಕೆಯ್ಯರಿನ ಪ್ರದೀಪ್ ಪೂಜಾರಿಯವರನ್ನು ಪೊಲೀಸ್ ಇನ್ಸ್‌ಪೆಕ್ಟ‌ರ್ ಆಗಿ ಭಡ್ತಿಗೊಳಿಸಿ ಕರ್ನಾಟಕ


Read More »

ವೆನ್ಲಾಕ್‌ನ ಖ್ಯಾತ ಮೂತ್ರರೋಗ ತಜ್ಞ ಡಾ.ಸದಾನಂದ ಪೂಜಾರಿಗೆ ಪ್ರತಿಷ್ಠಿತ ಹೆಲ್ತ್‌ಕೇರ್‌ ಎಕ್ಸಲೆನ್ಸ್‌ ಅವಾರ್ಡ್‌


Share         ಮಂಗಳೂರು: ಕನ್ನಡದ ಜನಪ್ರಿಯ ವಾಹಿನಿ ‘ಏಷ್ಯಾನೆಟ್‌ ಸುವರ್ಣ ನ್ಯೂಸ್’ ಹಾಗೂ ಕನ್ನಡದ ಖ್ಯಾತ ದಿನಪತ್ರಿಕೆ ‘ಕನ್ನಡ ಪ್ರಭ’ ಜಂಟಿಯಾಗಿ ನೀಡುವ ಪ್ರತಿಷ್ಠಿತ ‘ಹೆಲ್ತ್‌ಕೇರ್ ಎಕ್ಸಲೆನ್ಸ್ 2025’ ಅವಾರ್ಡ್‌ಗೆ ಮಂಗಳೂರು ವೆನ್ಲಾಕ್‌ ಆಸ್ಪತ್ರೆಯ ಖ್ಯಾತ


Read More »