ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಗೆಜ್ಜೆಗಿರಿ ಕ್ಷೇತ್ರದ ಸ್ಥಳ ಪುರಾಣ ಆಧಾರಿತ ಬಹುಜನರ ನಿರೀಕ್ಷೆಯ ಶ್ರೀ ದೇಯಿಬೈದೆತಿ ಕೋಟಿ ಚೆನ್ನಯ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಮೂಲಕ ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ ಎಂಬ ಪುಣ್ಯ ಕಥಾ ಯಕ್ಷಗಾನ ಪ್ರಸಂಗವನ್ನು ತುಳುನಾಡಿನ ಪ್ರಸಿದ್ಧ ಕ್ಷೇತ್ರ ಗೆಜ್ಜೆಗಿರಿಯಿಂದ ಬೆಳಕಿನ ಗೆಜ್ಜೆಸೇವೆಗೆ ಸನ್ನದ್ದ ಗೊಳಿಸುವ ಸಭೆ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಜರಗಿತು..
ಸಭೆ ಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕ್ಷೇತ್ರದ ಅಧ್ಯಕ್ಷರಾದ ಪೀತಾಂಬರ ಹೆರಾಜೆ ಯವರು ಕ್ಷೇತ್ರದ ಬಹುಸಂಖ್ಯೆಯ ಭಕ್ತರ ಬೇಡಿಕೆ ಯಂತೆ ಗೆಜ್ಜೆಗಿರಿ ಮೇಳವನ್ನು ಪ್ರಾರಂಭಿಸಲು ತೀರ್ಮಾನಿಸಲಾಗಿದೆ.
ನಮ್ಮ ನಿರೀಕ್ಷೆಗೂ ಮೀರಿ ಬೆಂಬಲ ವ್ಯಕ್ತವಾಗುತ್ತಿದ್ದು ತೆಂಕುತಿಟ್ಟಿನ ನೂತನ ಮೇಳ, ಪ್ರಸಿದ್ದ ಭಾಗವತರುಗಳಾದ ಗಾನಮಂದಾರ ಗಿರೀಶ್ ರೈ ಕಕ್ಕೆಪದವು, ನಿರಂಜನ ಪೂಜಾರಿ ಬಡಗಬೆಳ್ಳೂರುರವರ ಗಾನ ಸುಧೆಯನ್ನೊಳಗೊಂಡಂತೆ ಬಲಿಷ್ಠ ಹಿಮ್ಮೇಳ, ಮುಮ್ಮೇಳವನ್ನೊಳಗೊ಼ಂಡ ಸಮತೋಲಿತ ಮೇಳವಾಗಿ ಹೊರಹೊಮ್ಮಲಿದೆ ಎಂದರು. ಸಭೆಯಲ್ಲಿ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್, ಉಪಾಧ್ಯಕ್ಷರಾದ ರವಿಪೂಜಾರಿ ಚಿಲಿಂಬಿ, ಜೊತೆ ಕಾರ್ಯದರ್ಶಿ ಮೋಹನ್ ದಾಸ್ ವಾಮಂಜೂರು ಹಾಗೂ ಚಂದ್ರಶೇಖರ್ ಉಚ್ಚಿಲ್, ಕಾರ್ಯಕಾರಿ ಸದಸ್ಯರು ಮೇಳ ಸಂಚಾಲಕರಾದ ನವೀನ್ ಸುವರ್ಣ, ಕಾನೂನು ಸಲಹೆಗಾರರಾದ ನವನೀತ್ ಹಿಂಗಾಣಿ, ರಾಜೇಂದ್ರ ಚಿಲಿಂಬಿ, ಜನಾರ್ಧನ ಪೂಜಾರಿ ಪಡುಮಲೆ, ಸುರೇಶ್ ಪೂಜಾರಿ ಉಜಿರೆ, ನಿತಿನ್ ಕುಮಾರ್ ತೆಂಕ ಕಾರಾಂದೂರು, ಗಿರೀಶ್ ರೈ ಕಕ್ಕೆಪದವು, ಶಶಿಕಿರಣ ಕಾವು, ನಾರಾಯಣ ಸುವರ್ಣ, ದಾಮೋದರ ಪಾಟಳಿ ಸರಾವು, ಚಂದ್ರಶೇಖರ ಸುಳ್ಯಪದವು,ದಿವಾಕರ್ ದಾಸ್ ಕಾವಳಕಟ್ಟೆ, ಜಗದೀಶ್ ಕಜೆಕಾರ್ ಮುಂತಾದವರು ಉಪಸ್ಥಿತರಿದ್ದರು.