TOP STORIES:

FOLLOW US

ರವಿ ಕಕ್ಯಪದವುಗೆ ಮಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿ


ಮಗಳೂರು: ಮಂಗಳೂರು ಪ್ರೆಸ್ ಕ್ಲಬ್‌ನಿಂದ ದಕ್ಷಿಣ ಕನ್ನಡ ಜಿಲ್ಲೆಯ ಶ್ರೇಷ್ಠ ಸಾಧಕರಿಗೆ ಪ್ರತಿವರ್ಷ ನೀಡಲಾಗುವ ಮಂಗಳೂರುಪ್ರೆಸ್ ಕ್ಲಬ್– 2021ನೇ ಸಾಲಿನ ವರ್ಷದ ಪ್ರಶಸ್ತಿಗೆ ಅಕ್ಷರ ಜ್ಞಾನವಿಲ್ಲದೆಯೂ ಪರಿಶ್ರಮದಿಂದ ಯಶಸ್ವಿ ಉದ್ಯಮಿಯಾಗಿ 300ರಷ್ಟುಮಂದಿಗೆ ಉದ್ಯೋಗ, ಬಡವರಿಗೆ ನೆರವು ನೀಡುತ್ತಿರುವ ಸಮಾಜಸೇವಕ ರವಿ ಕಕ್ಯಪದವು ಆಯ್ಕೆಯಾಗಿದ್ದಾರೆ.

ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್, ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ದಕ್ಷಿಣ ಕನ್ನಡ ಶಾಖೆಯ ಕಾರ್ಯಕಾರಿ ಸಮಿತಿಸದಸ್ಯ, ಸಮಾಜ ಸೇವಕ ರವೀಂದ್ರನಾಥ್ ಕೆ. ಹಾಗೂ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ.ಜಿ.ಅನಂತ ಪ್ರಭುನೇತೃತ್ವದ ನಿರ್ಣಾಯಕ ಸಮಿತಿ ಆಯ್ಕೆ ನಡೆಸಿದೆ.

ಮಾ.6ರಂದು ಪ್ರಶಸ್ತಿ ಪ್ರದಾನ: ಮಾ.6ರಂದು ತಣ್ಣೀರುಬಾವಿಯ ಟ್ರೀ ಪಾರ್ಕ್‌ನಲ್ಲಿ ನಡೆಯಲಿರುವ ಪ್ರೆಸ್ ಕ್ಲಬ್ ದಿನಾಚರಣೆಯಂದುರವಿ ಕಕ್ಯಪದವು ಅವರಿಗೆ ಮಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು 10,001 ರೂ. ನಗದು, ಪ್ರಶಸ್ತಿ ಫಲಕ ಮತ್ತು ಸನ್ಮಾನವನ್ನೊಳಗೊಂಡಿದೆ ಎಂದು ಮಂಗಳೂರು ಪ್ರೆಸ್ ಕ್ಲಬ್‌ನ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಆರಿಫ್ಪಡುಬಿದ್ರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರವಿ ಕಕ್ಯಪದವು ಪರಿಚಯ: ಬಂಟ್ವಾಳ ತಾಲೂಕಿನ ಉಳಿ ಗ್ರಾಮದ ಮುದಲಾಡಿ ಕುಟುಂಬದ ದಿವಂಗತ ಚಂದು ಪೂಜಾರಿಕಮಲದಂಪತಿಯ ಇಬ್ಬರು ಮಕ್ಕಳ ಪೈಕಿ ಹಿರಿಯವರು ರವಿ ಕಕ್ಯಪದವು. ಬಡ ಕುಟುಂಬದಲ್ಲಿ ಹುಟ್ಟಿದ ಅವರಿಗೆ ಆರನೇ ವರ್ಷದಲ್ಲಿ ಶಾಲೆಗೆಸೇರಿಸಲಾಗಿತ್ತು. ಕಟ್ಟಿಗೆ ಒಡೆಯುವ ಕಾಯಕ ಮಾಡುತ್ತಿದ್ದ ತಂದೆಯ ಕಾಲಿಗೆ ಕೊಡಲಿ ಪೆಟ್ಟು ಬಿದ್ದು, ಗಂಭೀರ ಗಾಯವಾದ ದಿನವೇಶಾಲೆ ಬಿಟ್ಟಿದ್ದಾರೆ. ಕೇವಲ 15 ದಿನ ಶಾಲೆಯ ಮೆಟ್ಟಿಲು ಹತ್ತಿದ್ದು, ಅವರಿಗೆ ಅಕ್ಷರ ಜ್ಞಾನವಿಲ್ಲ.

ಕುಟುಂಬವನ್ನು ಸಾಗಿಸುವ ಜವಾಬ್ದಾರಿಯಿಂದ ಬಾಲ್ಯದಲ್ಲೇ ದುಡಿಮೆ ಆರಂಭಿಸಿದ ಅವರು, ಧರ್ಮಸ್ಥಳದಲ್ಲಿ ಪತ್ರಿಕಾವಿತರಕರಾಗಿದ್ದರು. ಅಂಗಡಿಯಲ್ಲಿ ಸಹಾಯಕರಾಗಿದ್ದರು. ಮುಂಬಯಿಯಲ್ಲಿ ಹೋಟೆಲ್ ಕ್ಲೀನರ್ ಆಗಿದ್ದರು. ಮೇಸ್ತ್ರಿಗೆ ಹೆಲ್ಪರ್ಆಗಿದ್ದರು. ಹೋಟೆಲ್‌ನಲ್ಲಿ ಸಹಾಯಕರಾಗಿದ್ದರು. ಅರ್ಚಕರ ಸಹಾಯಕನಾಗಿಯೂ ಕೆಲಸ ಮಾಡಿದ್ದರು.

2000 ಇಸವಿಗೆ ಸುಬ್ರಹ್ಮಣ್ಯಕ್ಕೆ ಬಂದ ಅವರು, ಪೈಂಟರ್, ಸಾರಣೆ ಕೆಲಸಗಾರನಾಗಿ ದುಡಿದು ಬಳಿಕ ಗುತ್ತಿಗೆದಾರನಾದರು. ಬಳಿಕಸ್ವಂತ ಅನುಗ್ರಹ ಕನ್‌ಸ್ಟ್ರಕ್ಷನ್, ಏನೆಕಲ್‌ನಲ್ಲಿ ಅಮೃತ ಅನುಗ್ರಹ ಇಂಡಸ್ಟ್ರೀಸ್ ಸ್ಥಾಪಿಸಿ, ಯಶಸ್ವಿ ಮತ್ತು ಬೇಡಿಕೆಯಗುತ್ತಿಗೆದಾರನಾಗಿದ್ದಾರೆ. ಇಷ್ಟರ ತನಕ 265ಕ್ಕೂ ಹೆಚ್ಚು ಮನೆಗಳನ್ನು ಹಾಗೂ ಐದು ಅಪಾರ್ಟ್‌ಮೆಂಟ್‌ ನಿರ್ಮಿಸಿದ ಹಿರಿಮೆಅವರದ್ದು. ಇಂದು ಸುಮಾರು 300 ಮಂದಿಗೆ ನೇರ ಉದ್ಯೋಗ ಒದಗಿಸಿದ್ದಾರೆ.

ಸಮಾಜಸೇವೆ: ಸಮಾಜಸೇವೆಯು ರವಿ ಕಕ್ಯಪದವು ಅವರ ಇಷ್ಟದ ಪ್ರವೃತ್ತಿ. ತನ್ನ ದುಡಿಮೆಯ ಉಳಿತಾಯದ ಶೇ.25 ಭಾಗವನ್ನುಸಮಾಜಸೇವೆಗೆ ವ್ಯಯ ಮಾಡುತ್ತಿದ್ದಾರೆ. ಪ್ರತಿವರ್ಷ ನೂರಾರು ಮಕ್ಕಳಿಗೆ ಪುಸ್ತಕ ಮತ್ತು ಸಮವಸ್ತ್ರ ನೀಡುತ್ತಿದ್ದಾರೆ. ಕುಲ್ಕುಂದಗ್ರಾಮದಲ್ಲಿ 80 ಸೆಂಟ್ಸ್ ಜಾಗವನ್ನು ಖರೀದಿಸಿ, ಅದನ್ನು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ದಾನ ಮಾಡಿದ್ದಾರೆ. ಅದರಲ್ಲಿಅರ್ಹ ವ್ಯಕ್ತಿಗಳಿಗೆ ಮನೆಗಳನ್ನೂ ಉಚಿತವಾಗಿ ನಿರ್ಮಿಸಿ ಕೊಟ್ಟಿದ್ದಾರೆ. ಪ್ರತಿವರ್ಷ ಷಷ್ಠಿ ಸಂದರ್ಭದಲ್ಲಿ ಬಡವರಿಗೆ ಅಕ್ಕಿಯನ್ನು ದಾನಮಾಡುತ್ತಿದ್ದಾರೆ.

ಸಮಾಜಸೇವೆಗಾಗಿ ಜೇಸಿಐ ಮತ್ತಿತರ ಸಂಘ ಸಂಸ್ಥೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಜೆಸಿಐನ ವಲಯ ಉಪಾಧ್ಯಕ್ಷ, ವಲಯಾಧಿಕಾರಿ ಆಗಿದ್ದರು. ಅವರ ಜೀವನ, ಸಾಧನೆ ಕುರಿತು ದಂತ ವೈದ್ಯೆ ಡಾ.ರಾಜೇಶ್ವರಿ ಗೌತಮ್ ಅವರು *’ಬೆಂಕಿಯಲ್ಲಿ ಅರಳಿದಹೂವು‘ ಎಂಬ ಪುಸ್ತಕ ಬರೆದಿದ್ದಾರೆ.

ರವಿ ಕಕ್ಯಪದವು ಅವರಿಗೆ ಜೆಸಿಐ ಸಾಧನಾಶ್ರೀ, ಕಮಲ ಪತ್ರ ಪ್ರಶಸ್ತಿ, ಸ್ವಸ್ತಿಶ್ರೀ ರಾಜ್ಯ ಪ್ರಶಸ್ತಿ ಇತ್ಯಾದಿಯಲ್ಲದೇ, 270ಕ್ಕೂ ಅಧಿಕಸನ್ಮಾನಗಳು ಲಭಿಸಿವೆ.

ಶೂನ್ಯದಿಂದ ಬಂದು ಸಾಧಕನಾಗಿ ಮೆರೆದ ಅವರ ಜೀವನ ವೃತ್ತಾಂತ ಮತ್ತೊಬ್ಬರಿಗೆ ಪ್ರೇರಣದಾಯಕ. ಬದುಕಿನ ಕಷ್ಟ, ಕಾರ್ಪಣ್ಯ, ಕಲ್ಲು ಮುಳ್ಳುಗಳನ್ನು ದಾಟಿ ಸಾಧನೆ ಮಾಡಿದ್ದಾರೆ.


Share:

More Posts

Category

Send Us A Message

Related Posts

ಗೆಜ್ಜೆಗಿರಿ ನೂತನ ಪಧಾಧಿಕಾರಿಗಳ ಪದಗ್ರಹಣ


Share       ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿಯ ನೂತನ ಅಧ್ಯಕ್ಷರಾದ ರವಿ ಪೂಜಾರಿ ಚಿಲಿಂಬಿ ಇವರ ನೇತೃತ್ವದ ಪಧಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಇಂದು ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಜರಗಿತು. ನೂತನ ಪಧಾಧಿಕಾರಿಗಳನ್ನು


Read More »

ನಾರಾಯಣ ಗುರುಗಳ ಗುಣಗಾನ ಮಾಡಿದ ಪೋಪ್! ವ್ಯಾಟಿಕನ್ ಸಿಟಿಯಲ್ಲಿ ಕ್ರೈಸ್ತ ಪರಮೋಚ್ಛ ಗುರುವಿನಿಂದಲೇ ‘ಬ್ರಹ್ಮಶ್ರೀ’ಗೆ’ನಮನ!


Share       బ్ర ಹ್ಮ ಶ್ರೀ ನಾರಾಯಣ ಗುರುಗಳ (Brahma Shree Narayana Guru) ಪ್ರಸ್ತುತ ಜಗತ್ತಿನಲ್ಲಿ ಬಹಳ ಪ್ರಸ್ತುತವಾಗಿವೆ ಎಂದು ಪೋಪ್‌ ಫ್ರಾನ್ಸಿಸ್ (Pope Francis) ಹೇಳಿದರು. ಪ್ರತಿಯೊಬ್ಬ ಮಾನವರೂ ಒಂದೇ ಕುಟುಂಬ ಎಂದು


Read More »

ನಗರ ಪಾಲಿಕೆ ಪ್ರತಿಪಕ್ಷದ ನಾಯಕರಾಗಿ ಅನಿಲ್ ಕುಮಾರ್ ಆಯ್ಕೆ


Share       ಮಂಗಳೂರು ಮಹಾನಗರ ಪಾಲಿಕೆಯ ಪ್ರತಿಪಕ್ಷದ ನಾಯಕರಾಗಿ ನೂತನವಾಗಿ ಆಯ್ಕೆಯಾದ ಜನಪರ ನಿಲುವಿನ ರಾಜಕೀಯ ನಾಯಕ, ಬ್ರಹ್ಮ ಶ್ರೀ ನಾರಾಯಣ ಗುರು ಧರ್ಮ ಪರಿಪಾಲನೆಯ ಪ್ರತಿಪಾದಕ, ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ


Read More »

ವಿಟ್ಲ :ಯುವವಾಹಿನಿ (ರಿ.)ವಿಟ್ಲ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ :ಅಧ್ಯಕ್ಷರಾಗಿ ಹರೀಶ್ ಪೂಜಾರಿ ಮರುವಾಳ


Share       ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಯುವವಾಹಿನಿ (ರಿ.) ವಿಟ್ಲ ಘಟಕದ 2024 /25 ನೇ ವರ್ಷದ ನೂತನ ಪದಾಧಿಕಾರಿಗಳ ಆಯ್ಕೆಯು ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನ ವಿಟ್ಲದಲ್ಲಿ ನಡೆಯಿತು. ಅಧ್ಯಕ್ಷರಾಗಿ ಹರೀಶ್ ಪೂಜಾರಿ


Read More »

ಕೇರಳದ ಕಾಸರಗೋಡಿನ ಬಿರುವೆರ್ ಕುಡ್ಲ (ರಿ)ಮಂಜೇಶ್ವರ ತಾಲೂಕು ತಂಡದ ವತಿಯಿಂದ 6 ನೆಯ ಸೇವಾಯೋಜನೆ


Share       ತುಳುನಾಡಿನ ಹಲವಾರು ಬಡಕುಟುಂಬಗಳ ಕಣ್ಣೀರೊರಸಿ ಅವರ ನೇರವಿಗೆ ಕಾರಣವಾದ ಬಲಿಷ್ಠ ಹಾಗೂ ಪ್ರಸಿದ್ದಿ ಪಡೆದ ಸಂಘಟನೆ ಫ್ರೆಂಡ್ಸ್ ಬಲ್ಲಾಳ್ಬಾಗ್  ಬಿರುವೆರ್ ಕುಡ್ಲ ಇದರ ಸ್ಥಾಪಕಾಧ್ಯಕ್ಷರಾದ  ಶ್ರೀಯುತ ಉದಯ ಪೂಜಾರಿಯವರ ವ್ಯಕ್ತಿತ್ವ, ಮನುಷ್ಯತ್ವ ಹಾಗೂ


Read More »

ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷರಾಗಿ ರವಿ ಪೂಜಾರಿ ಚಿಲಿಂಬಿ ಸರ್ವಾನುಮತದಿಂದ ಆಯ್ಕೆ


Share       ತುಳುನಾಡಿನ ಧಾರ್ಮಿಕ ಪರಂಪರೆಯಲ್ಲೇ ಹೊಸ ಇತಿಹಾಸವನ್ನು ಸೃಷ್ಟಿಸಿದ ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷರಾಗಿ ರವಿ ಪೂಜಾರಿ ಚಿಲಿಂಬಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.   ನಾಡಿನ


Read More »