TOP STORIES:

ರಾತ್ರಿ ಉತ್ತಮ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ವಾ: ಹಾಗಾದ್ರೆ ನಿಮ್ಮ ಜೀವನಶೈಲಿ ಬದಲಾಯಿಸಿಕೊಳ್ಳಿ! ಏಕೆಂದರೆ?


ಉತ್ತಮ ನಿದ್ರೆಗಾಗಿ ನಿರ್ದಿಷ್ಟ ಸಮಯ ಮೀಸಲಿಡಬೇಕು. ಇದರಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ತಡೆಯಬಹುದು.

 

ರಾತ್ರಿ ಕಣ್ತುಂಬ ಉತ್ತಮ ನಿದ್ದೆ ಮಾಡುವ ಸುಖವನ್ನು ಯಾರು ಕೂಡ ಬೇಡ ಅನ್ನುವುದಿಲ್ಲ. ಆದರೆ, ಕೆಲಸದ ಒತ್ತಡ ಮತ್ತು ಇತರ ಸಮಸ್ಯೆಗಳು ನಿದ್ದೆಗೆ ತೊಡಕಾಗುವಂತೆ ಮಾಡುತ್ತದೆ.

ಈ ನಿದ್ದೆ ಸಮಸ್ಯೆ ಪುರುಷರಿಗೆ ಹೋಲಿಕೆ ಮಾಡಿದಾಗ ಸ್ತ್ರೀಯರಲ್ಲಿ ಹೆಚ್ಚು. ಆರೋಗ್ಯ ಸಮಸ್ಯೆ ಕಾರಣ ಹೊರತಾಗಿ ಕೆಲವು ಉತ್ತಮ ಜೀವನಶೈಲಿ ರೂಢಿಸಿಕೊಳ್ಳುವ ಮೂಲಕ ಈ ಸಮಸ್ಯೆ ನಿವಾರಣೆಯನ್ನು ಪಡೆಯಬಹುದು. ಉತ್ತಮ ನಿದ್ರೆಗಾಗಿ ನಿರ್ದಿಷ್ಟ ಸಮಯವನ್ನು ಮೀಸಲಿಡಬೇಕು. ನಿರ್ದಿಷ್ಟ ಸಮಯದಲ್ಲಿ ಉತ್ತಮ ನಿದ್ದೆ ಮಾಡುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ತಡೆಯಬಹುದು.

ಉತ್ತಮ ಗಾಢವಾದ ನಿದ್ರೆಗೆ ಮೆಲೆಟೊನಿನ್​ ಹಾರ್ಮೋನ್​ ಅಗತ್ಯ. ಇದು ಮಲಗುವ ವಾತಾವರಣ ಅಥವಾ ಕೋಣೆ ಸಂಪೂರ್ಣ ಕತ್ತಲಾಗಿದ್ದಾರೆ ಇದು ಉತ್ತೇಜನಗೊಳ್ಳುತ್ತದೆ. ಎಂದರೆ, ಮಲಗುವಾಗ ಯಾವುದೇ ಟಿವಿ, ಕಂಪ್ಯೂಟರ್​ ಮತ್ತು ಫೋನ್​ ಸ್ಕ್ರೀನ್​ ಇಲ್ಲದೇ ಮಲಗುವುದರಿಂದ ಆರಾಮದಾಯಕ ಉತ್ತಮ ನಿದ್ರೆಯನ್ನು ನೀವು ಮಾಡಬಹುದು.

ಕೊಠಡಿಯ ತಾಪಮಾನ ಕೂಡ ಮುಖ್ಯ: ಅನೇಕರು ರಾತ್ರಿ ತಾಪಮಾನದ ಬಗ್ಗೆ ಅಷ್ಟೊಂದು ಮಹತ್ವ ನೀಡುವುದಿಲ್ಲ. ಆದರೆ, ನಿದ್ರೆ ವಿಚಾರದಲ್ಲಿ ಇದು ಅವಶ್ಯಕತೆ ಹೊಂದಿದೆ. ತೀರ ಚಳಿ ಅಥವಾ ತೀರ ಬಿಸಿಲಿನ ವಾತಾವರಣ ಕೂಡ ನಿಮ್ಮ ನಿದ್ದೆಗೆ ಭಂಗ ತರುತ್ತದೆ. ಜೊತೆಗೆ ಮಲಗುವ ಕೋಣೆಯಲ್ಲಿ ಯಾವುದೆ ಕಿರಿಕಿರಿ ಮಾಡುವ ವಾಸನೆ ಅಂಶ ಇಲ್ಲದೇ ಇರುವಂತೆ ನೋಡಿಕೊಳ್ಳುವುದು ಅವಶ್ಯ. ಕಾರ್ಪೂರ ಅಥವಾ ಸಾಂಬ್ರಾಣಿ, ಮಲ್ಲಿಗೆ ಸುಂಗಂಧಗಳು ಕೂಡ ನಿಮ್ಮ ನಿದ್ದೆಗೆ ಭಂಗ ತರುತ್ತದೆ.

ಶುಚಿತ್ವ: ಮಲಗುವ ವಾತಾವರಣ ಮತ್ತು ಹಾಸಿಗೆ ಶುಚಿಯಾಗಿರುವಂತೆ ನೋಡಿಕೊಳ್ಳಿ. ಎಂಬ್ರೋಯ್ಡರಿ ಧಿರಿಸಿ ಅಥವಾ ಬೆಡ್​​ಶೀಟ್​ಗಳು ನಿಮಗೆ ಕಿರಿಕಿರಿ ಮಾಡದಂತೆ ಇರಬೇಕು. ಜೊತೆಗೆ ಹೊದಿಕೆ ಮತ್ತು ದಿಂಬುಗಳು ಕೂಡ ಸಮಯದಕ್ಕೆ ಸರಿಯಾಗಿ ಸ್ವಚ್ಛ ಮಾಡುವತ್ತ ಗಮನಹರಿಸಿ. ರಾತ್ರಿ ಮಲಗುವಾಗ ಅದಷ್ಟು ಸಡಿಲವಾದ ಕಾಟನ್​ ಧಿರಿಸಿನಲ್ಲಿ ಮಲಗುವುದು ಉತ್ತಮ.

ಈ ಚಟದಿಂದ ದೂರ ಇರಿ: ಹಗಲಿನ ಹೊತ್ತಿನಲ್ಲಿ ಹೆಚ್ಚು ನಿದ್ದೆ, ಅಥವಾ ಮಲಗುವ ಮುನ್ನ ಹೆಚ್ಚಿನ ವ್ಯಾಯಾಮ ಅಥವಾ ನೀರು ಕಡಿಯುವುದು ಕೂಡ ನಿದ್ರಾಹೀನತೆಗೆ ಕಾರಣವಾಗಲಿದೆ. ಅನೇಕ ಜನರು ಮಲಗುವ ಮುನ್ನ ಕೆಲವು ಸಮಯ ನೀರು ಕುಡಿಯುವುದನ್ನು ನಿಲ್ಲಿಸುತ್ತಾರೆ. ಇದರಿಂದ ಪದೆ ಪದೇ ಎಚ್ಚರವಾಗುವುದು ತಪ್ಪುತ್ತದೆ ಎಂಬ ಲೆಕ್ಕಾಚಾರ ನಡೆಸುತ್ತಾರೆ. ಆದರೆ ಇದು ಕೂಡ ತಪ್ಪು ಅಭ್ಯಾಸ ಇದರಿಂದ ದೇಹ ನಿರ್ಜಲೀಕರಣಗೊಂಡು, ಎಚ್ಚರಗೊಳ್ಳುವಂತೆ ಮಾಡುತ್ತದೆ.

ಆರು ಗಂಟೆಗಿಂತ ಕಡಿಮೆ ನಿದ್ದೆ ಮಾಡುವ , 9ಗಂಟೆಗಿಂತಲೂ ಹೆಚ್ಚಿನ ಅವಧಿ ನಿದ್ದೆ ಮಾಡುವುದು ಅನೇಕ ಸಮಸ್ಯೆಗಳಿಗೆ ನಿಮ್ಮನ್ನು ತುತ್ತು ಮಾಡುವ ಸಾಧ್ಯತೆ ಇದೆ. ಆರು ಗಂಟೆಗಿಂತ ಕಡಿಮೆ ನಿದ್ದೆ ಅಥವಾ ನಿದ್ರಾಹೀನತೆ ಹೊಂದಿರುವವರು ಅನೇಕ ಗಂಭೀರ ಆರೋಗ್ಯಕರ ಸಮಸ್ಯೆ ಎದುರಿಸುವಂತೆ ಆಗುತ್ತದೆ. ಈ ಹಿನ್ನೆಲೆ ಸರಿಯಾದ ನಿದ್ರೆ ಸಮಯವನ್ನು ಪಾಲಿಸುವುದು ಅಗತ್ಯವಾಗಿದೆ. ಇದು ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಡೆಂಘೀ ರೋಗ ನಿಯಂತ್ರಣಕ್ಕೆ ಪಪ್ಪಾಯ ಎಲೆ ಸಹಾಯಕವಾಗುತ್ತದೆಯಾ?


Related Posts

ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ


Share         ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ ಲಭಿಸಿರುವುದು ನಮ್ಮ ಸಮಾಜಕ್ಕೆ ಹೆಮ್ಮೆಯ ಸಂಗತಿ. ಈ ಕುರಿತು ಏಪ್ರಿಲ್ 2ರಂದು ಸರಕಾರದ


Read More »

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »

ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕವನಕ್ಕೆ ಒಲಿದ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ


Share         ಕರ್ನಾಟಕ ಲೇಖಕಿಯರ ಸಂಘವು 2025ನೇ ಸಾಲಿನ ವಿವಿಧ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಸ್ತಪ್ರತಿಯಲ್ಲಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ, ಅನಿತಾ ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಕ್ಕೆ 


Read More »

ಚಿಕ್ಕ ವಯಸ್ಸಿನಲ್ಲಿ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಬಾಲಕ ಸುಹಾಂಶ್‌ನ ಎಸ್ ಬಂಗೇರ ದಾಖಲೆ


Share         ದಾವಣಗೆರೆ : ನಗರದ ಶಾಂತಪ್ಪ ಪೂಜಾರಿ ಹಾಗೂ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ಇವರ ಮೊಮ್ಮಗನಾದ ಕು. ಸುಹಾಂಶ್ ಎಸ್ ಬಂಗೇರ “ಇಂಡಿಯಾ ಬುಕ್ ಆಫ್ ರೆಕಾರ್ಡ್’ನ ಸಾಧಕನಾಗಿದ್ದು, ಸರಿಸುಮಾರು 195 ರಾಷ್ಟ್ರಗಳ


Read More »

ಖೇಲೋ ಇಂಡಿಯಾ ರಾಷ್ಟ್ರೀಯ ಕರಾಟೆ ತಂಡಕ್ಕೆ ಆಯ್ಕೆಯಾದ ಕರಾಟೆ ಪಟು ಛಾಯಾ ಎಸ್. ಪೂಜಾರಿ.


Share         ಚಿನ್ನ 30 ಬೆಳ್ಳಿ 1 ಕಂಚು – ಇದು ಛಾಯಾ ಎಸ್. ಪೂಜಾರಿ ಅವರ ಒಂದು ದಶಕದ ಪರಿಶ್ರಮ ಹಾಗೂ ಸಾಧನೆಗೆ ಸಂದಿರುವ ಗೌರವದ ತುರಾಯಿ. ಉಡುಪಿ ಜಿಲ್ಲೆಯ ಹೆರ್ಗ ಕಾಂತಾ ಬೆಟ್ಟು


Read More »

ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಅವರಿಗೆ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ


Share         ನಮ್ಮ ಹೆಮ್ಮೆಯ ಕರಾವಳಿಯ ಪ್ರತಿಭೆ, ಅಂತರಾಷ್ಟ್ರೀಯ ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಸಿದ್ದಕಟ್ಟೆ ಅವರಿಗೆ ಫಸ್ಟ್ ನ್ಯೂಸ್ ವಾಹಿನಿಯ ಪ್ರತಿಷ್ಠಿತ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ ಲಭಿಸಿರುವುದು ನಾಡಿಗೆ ಸಂದ ಗೌರವ. ಗ್ರಾಮೀಣ


Read More »