TOP STORIES:

ವಾಸನೆ ಕಳೆದುಕೊಳ್ಳುವುದು ಈ ರೋಗದ ಸೂಚಕವೂ ಹೌದು!


ಕೋವಿಡ್​ ಸೇರಿದಂತೆ ಅನೇಕ ಸೋಂಕಿನ ಸಂದರ್ಭದಲ್ಲಿ ವಾಸನೆ ನಷ್ಟ ಅನುಭಿಸುತ್ತೇವೆ. ಆದರೆ, ಅದಕ್ಕೆ ಮೀರಿದ ಮತ್ತೊಂದು ರೋಗದ ಚಿಹ್ನೆ ಕೂಡ ಇದಾಗಿದೆ.

ನ್ಯೂಯಾರ್ಕ್​: ವಾಸನೆ ಕಳೆದುಕೊಳ್ಳುವ ಸಾಮರ್ಥ್ಯವನ್ನು ಅನೇಕ ಸೋಂಕುಗಳ ಹಿನ್ನೆಲೆ ಅಧ್ಯಯನ ನಡೆಸಲಾಗಿದೆ. ಆದರೆ, ಇದೇ ಮೊದಲ ಬಾರಿ ಅದನ್ನು ಅಲ್ಝೈಮರ್​ ಹೊಂದಿರುವ ರೋಗಿಗಳನ್ನು ಪತ್ತೆ ಮಾಡಲಾಗಿದೆ.

 

ಅಲ್ಝೈಮರ್ಯ್​ ಕಾಯಿಲೆಗೆ ಸಂಬಂಧಿಸಿದ ಪ್ರಬಲ ಜೀನ್​ ಹೊಂದಿರುವ ವ್ಯಕ್ತಿಗಳು ಇತರರಿಗಿಂತ ಬೇಗ ವಾಸನೆ ಗ್ರಹಿಸುವ ಶಕ್ತಿಯನ್ನು ಕಳೆದುಕೊಳ್ಳುತ್ತಾರೆ ಎಂದು ಹೊಸ ಅಧ್ಯಯನ ತಿಳಿಸಿದೆ. ಇದು ಭವಿಷ್ಯದಲ್ಲಿ ಅರಿವಿನ ಕೊರತೆ ಉಂಟಾಗುವ ಆರಂಭಿಕ ಚಿಹ್ನೆಯಾಗಿರಬೇಹು ಎಂದು ಅಧ್ಯಯನ ತಿಳಿಸಿದೆ.

ಈ ಕುರಿತು ನ್ಯೂರಾಲಜಿಯ ಆನ್​ಲೈನ್​ ಸಂಚಿಕೆಯಲ್ಲಿ ಪ್ರಕಟಿಸಲಾಗಿದೆ. ಆಲ್ಝಮೈರ್​​ ಹೊಂದಿರುವವರಲ್ಲಿ ಜೀನ್​ ರೂಪಾಂತರವನ್ನು APOE e4 ಎಂದು ಕರೆಯಲಾಗುತ್ತದೆ. ವಯಸ್ಸಾದಂತೆ ಅರಿವಿನ ಕ್ಷೀಣತೆ, ನೆನಪಿನ ಸಾಮರ್ಥ್ಯದ ಕೊರತೆ ಅನುಭವಿಸುವ ಜನರ ಸಮಸ್ಯೆಯನ್ನು ಆರಂಭದಲ್ಲೇ ಪತ್ತೆ ಹಚ್ಚಲು ವಾಸನೆ ಪರಿಹಾರ ಉಪಯುಕ್ತವಾಗಿದೆ ಎಂದು ಚಿಕಾಗೋ ವಿಶ್ವವಿದ್ಯಾಲಯದ ಮ್ಯಾಥ್ಯೂ ಎಸ್​ ಗುಡ್​ಸ್ಮಿತ್​ ತಿಳಿಸಿದರು.

ಈ ಅಧ್ಯಯನವೂ ಭವಿಷ್ಯದಲ್ಲಿ ಆಲ್ಝಮೈರ್​​ ಸಮಸ್ಯೆ ಹೊಂದಿರುವವರ ಅಪಾಯವನ್ನು ನಿರ್ಧರಿಸಲು ಸಹಾಯ ಮಾಡಿದರೂ ಸಹ, ಈ ಸಂಬಂಧ ಹೆಚ್ಚಿನ ಅಧ್ಯಯನದ ಅಗತ್ಯ ಇದೆ. ಇದು ಸಮಸ್ಯೆ ಆರಂಭವನ್ನು ಪತ್ತೆ ಹಚ್ಚಲು ಸಹಾಯವಕಾಗುವ ಗುರಿ ಹೊಂದಲಿದೆ ಎಂದು ಅಧ್ಯಯನಕಾರರು ತಿಳಿಸಿದ್ದಾರೆ.

ಈ ಕುರಿತು ಐದು ವರ್ಷಗಳ ಕಾಲ ಮಧ್ಯಂತರ ಪರೀಕ್ಷೆ ಅಧ್ಯಯನ ನಡೆಸಲಾಗಿದ್ದು, ಇದರಲ್ಲಿ 865 ಮಂದಿ ಭಾಗಿಯಾಗಿದ್ದರು. ಭಾಗಿದಾರರ ವಾಸನೆ ಪ್ರಜ್ಞೆಯನ್ನು ಸಮೀಕ್ಷೆ ಮೂಲಕ ಪತ್ತೆ ಮಾಡಲಾಗಿದ್ದು, ಇದು ಅವರ ವಾಸನೆ ಗ್ರಹಿಕೆ ಸಾಮರ್ಥ್ಯ ಮತ್ತು ಯಾವ ವಾಸನೆ ಗ್ರಹಿಸುವ ಸಾಮರ್ಥ್ಯವನ್ನು ಅವರು ಹೊಂದಿದ್ದಾರೆ ಎಂದು ಪತ್ತೆ ಮಾಡಲಾಗಿದೆ.

ಇದೇ ವೇಳೆ ಐದು ವರ್ಷದ ಈ ಪರೀಕ್ಷೆ ಅವಧಿಯಲ್ಲಿ ಜನರ ಆಲೋಚನೆ ಮತ್ತು ಸ್ಮರಣೆ ಕೌಶಲ್ಯವನ್ನು ಎರಡು ಬಾರಿ ಪರೀಕ್ಷೆ ನಡೆಸಲಾಗಿದೆ. ಡಿಎನ್​ಎ ಮಾದರಿಯಲ್ಲಿ ಯಾವ ಜೀನ್​ ಕಾರಣದಿಂದ ಜನರಲ್ಲಿ ಆಲ್ಝಮೈರ್​ ಕಾರಣವಾಗುತ್ತಿದೆ ಎಂಬುದನ್ನು ಪತ್ತೆ ಮಾಡಲು ಮಾಹಿತಿ ನೀಡಲಾಗಿದೆ.

ಆಲ್ಝಮೈರ್​ ಜೀನ್​ ಹೊಂದಿರುವವರಲ್ಲಿ ಇತರೆ ಸಾಮಾನ್ಯ ಜೀನ್​ ಜನರಿಗಿಂತ ವಾಸನೆ ಪತ್ತೆ ಮಾಡುವ ಸಾಮರ್ಥ್ಯ ಶೇ 37ರಷ್ಟು ಕಡಿಮೆ ಇದೆ ಎಂದು ತೋರಿಸಿದೆ. ಈ ಜೀನ್​ ವಾಹಕಗಳು 65ರಿಂದ 69ನೇ ವಯಸ್ಸಿನಲ್ಲಿ ವಾಸನೆ ಸಾಮರ್ಥ್ಯವನ್ನು ಕಡಿಮೆ ಮಟ್ಟದಲ್ಲಿ ಪತ್ತೆ ಹಚ್ಚಿದೆ.

ಅಧ್ಯಯನದ ಆರಂಭದಲ್ಲಿ ಎರಡು ಗುಂಪಿನಲ್ಲಿ ವ್ಯಕ್ತಿಗಳ ಆಲೋಚನೆ ಮತ್ತು ನೆನಪಿನ ಸಾಮರ್ಥ್ಯ ಒಂದೇ ಆಗಿತ್ತು. ಆಲ್ಜಮೈರ್​ ಜೀನ್​ ಭಿನ್ನತೆ ಹೊಂದಿರುವವರು ಇತರೆ ಜನರಿಂತ ವೇಗವಾಗಿ ಸ್ಮರಣೆಯ ಕ್ಷೀಣತೆ ಅನುಭವಿಸಿದರು. ಈ ಅಧ್ಯಯನವು ನ್ಯೋರೋ ಡಿಜೆನರೇಶನ್​ ಮೂಲಕ ವಾಸನೆ ಪಾತ್ರವನ್ನು ಅರ್ಥ ಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ ಎಂದು ಅಧ್ಯಯನ ಕಾರ ಗುಡ್​ಸ್ಮಿತ್​ ತಿಳಿಸಿದ್ದಾರೆ. ಈ ಅಧ್ಯಯನದಲ್ಲಿ ತೀವ್ರ ಬುದ್ಧಿ ಮಾಂದ್ಯತೆ ಹೊಂದಿರುವ ಜನರನ್ನು ಭಾಗವಾಗಿಸಿಲ್ಲ ಎಂದು ಇದೇ ವೇಳೆ ತಿಳಿಸಿದ್ದಾರೆ.


Related Posts

ಕವಿ ಗವಿಸಿದ್ದ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಅನಿತಾ ಪಿ. ತಾಕೊಡೆಯವರ “ಮೇಣಕ್ಕಂಟಿದ ಬತ್ತಿ” ಕವನ ಸಂಕಲನ ಬಿಡುಗಡೆ


Share         ಅ.26: ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಅನಿತಾ ಪಿ. ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ಕವನ ಸಂಕಲನ ಬಿಡುಗಡೆ, ಪ್ರಶಸ್ತಿ ಪ್ರದಾನ,ಸಾಹಿತ್ಯ ಚರ್ಚೆ ಮುಂಬಯಿ, ಅ.23-  ಖ್ಯಾತ ಬಂಡಾಯ ಕವಿ ಗವಿಸಿದ್ದ ಎನ್. ಬಳ್ಳಾರಿ


Read More »

ಮಂಗಳೂರು: ಅಳದಂಗಡಿಯ ಶ್ರೀಮತಿ ಅನುಷಾ ಪ್ರಸಾದ್ ಪೂಜಾರಿ ಅವರಿಗೆ ಗಣಿತಶಾಸ್ತ್ರ ವಿಷಯದಲ್ಲಿ ಪಿ.ಎಚ್.ಡಿ ಪದವಿ


Share         ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಣಿಪಾಲ (Manipal Institute of Technology, Manipal) ನ ಗಣಿತಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಶ್ರೀಮತಿ ಅನುಷಾ ಎಲ್ ಅವರು ಮಂಡಿಸಿದ “A study on N-Covering


Read More »

ಬ್ರಿಟನ್ ಬಿಲ್ಲವ ಬಳಗ ಯುಕೆ ದೇಶದಲ್ಲಿ ಉತ್ಸಾಹದಿಂದ ಉದ್ಘಾಟನಾ ಸಮಾರಂಭವನ್ನು ಆಯೋಜಿಸಿದೆ.


Share         ಬ್ರಿಟನ್ ಬಿಲ್ಲವ ಬಳಗ ಯುಕೆಯ ಉದ್ಘಾಟನಾ ಸಮಾರಂಭವು ಸೆಪ್ಟೆಂಬರ್ 13 ರ ಶನಿವಾರದಂದು ಕೋವೆಂಟ್ರಿ ಹಾಲಿಡೇ ಇನ್ ಎಕ್ಸ್‌ಪ್ರೆಸ್ ಹೋಟೆಲ್‌ನಲ್ಲಿ ಸಂಘದ ಆಯ್ಕೆಯಾದ ಅಧ್ಯಕ್ಷ ಡಾ. ಪಿ.ಕೆ. ಮನೋಜ್ ಪೂಜಾರಿ ಅವರ ನೇತೃತ್ವದಲ್ಲಿ


Read More »

ಬಾರ್ಕೂರು ನಾಗರ ಮಠದ ಕ್ರೀಡಾ ಬಹು ಮುಖ ಪ್ರತಿಭೆಯ ಧನ್ವಿತಪೂಜಾರಿ ಧನ್ವಿತಪೂಜಾರಿ ಅವರಿಗೆ ಮೂರು ಪ್ರಶಸ್ತಿಗಳ ಗರಿ


Share         ಜನತಾ ಪದವಿ ಪೂರ್ವ ಕಾಲೇಜು ಹೆಮ್ಮಾಡಿ ಕಿರಿಮಂಜೇಶ್ವರ ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಕಿರಿ, ಮಂಜೇಶ್ವರ ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಉಡುಪಿ ಜಿಲ್ಲೆ ಇವರ ಆಶ್ರಯದಲ್ಲಿ  ದಿನಾಂಕ 30-08-2025 ರಂದು


Read More »

ಸತತ 216 ಗಂಟೆಗಳ ಭರತನಾಟ್ಯ ಮಾಡುವುದರ ಮೂಲಕ ಗೋಲ್ಡನ್ ಬುಕ್ ವಲ್ಡ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ಬರೆಸಿಕೊಂಡ ನವರಸಧಾರ ದೀಕ್ಷಾ. ವಿ


Share         ದೀಕ್ಷಾ ವಿ. ಅವರ ಜೀವನವು ಕಲೆಯ ತಪಸ್ಸಿನ ಜೀವಂತ ಪ್ರತೀಕವಾಗಿದೆ. ತಂದೆ ಶ್ರೀ ವಿಠಲ್ ಪೂಜಾರಿ ಮತ್ತು ತಾಯಿ ಶುಭಾ ವಿಠಲ್ ಅವರ ಮಗಳಾದ ಅವರು, ಬಾಲ್ಯದಿಂದಲೇ ಕಲೆಯ ಕಡೆ ಮನಸ್ಸು ತಿರುಗಿಸಿಕೊಂಡಿದ್ದರು.


Read More »

ಬಹರೖನ್ ನ ಕಸ್ತೂರಿ ಕನ್ನಡ ಎಫ್.ಎಂ ರೇಡಿಯೋ ಆರ್.ಜೆ ಕಮಲಾಕ್ಷ ಅಮೀನ್ ಅವರಿಗೆ ಗೋಲ್ಡನ್ ಐಕಾನಿಕ್ ಅವಾರ್ಡ್


Share         ಮಂಗಳೂರು: ಬಹರೖನ್ ನ ಕಸ್ತೂರಿ ಕನ್ನಡ ಎಫ್.ಎಂ ರೇಡಿಯೋ ಆರ್.ಜೆ ಕಮಲಾಕ್ಷ ಅಮೀನ್ ಅವರನ್ನು ಮಂಗಳೂರಿನಲ್ಲಿ ಗೋಲ್ಡನ್ ಐಕಾನಿಕ್ ಅವಾರ್ಡ್ ಗೌರವ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಹೋಟೆಲ್ ಓಷನ್ ಪರ್ಲ್ ನಲ್ಲಿ ನಡೆದ


Read More »