TOP STORIES:

ವಿಷ ಕಾರುವವರಿಗೆ “ವಿಷಯ”ಯುಕ್ತ ಕಾರ್ಕೋಟಕ ವಿಷದಿಂದ ಅರ್ಪಣೆ…


ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋಟಿ-ಚೆನ್ನಯರ ಹೆಸರಿಡಬೇಕೆಂಬ ಕೂಗು ಇವತ್ತು ನಿನ್ನೆಯದ್ದಲ್ಲ, ಸಮಾರು ವರುಷದಿಂದ ಕೇಳಿ ಬಂದ ಕೂಗು ಇದಾಗಿದೆ.


ಈ ಕೂಗಿಗೆ ನಾನು ಧ್ವನಿಯಾಗಿದ್ದೆ, ಆ ಧ್ವನಿ ಮೆಲ್ಲಗೆ ಗಡಸು ಧ್ವನಿಯಾಗುತ್ತ ಬೆಳೆದಿತ್ತು..!!
ಕರಾವಳಿಗರ ಒಕ್ಕೊರಲ ಅಭಿಪ್ರಾಯಕ್ಕೆ ಒಂದು ರೀತಿಯ ಬಲವು ನಿಧಾನವಾಗಿ ಬಲ ಸೇರುತ್ತಿತ್ತು.!
ಆದರೆ ಅದರ ಬಲವನ್ನು ಕುಗ್ಗಿಸುವ ಸಣ್ಣ ಧ್ವನಿಯು ಕೂಡ ಮೆಲ್ಲಗೆ ಏಳುತ್ತಿದೆ ಎಂಬುದನ್ನು ಹೇಳಲು ಭಯ ಪಡಬೇಕಾಗಿಲ್ಲ.


ಇತ್ತೀಚೆಗೆ ಮಾನ್ಯ ಸ್ವಾಮೀಜಿಗಳಿಂದ ಒಂದು ಹೇಳಿಕೆಯ ಮಾತು ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿತ್ತು.! ಕೋಟಿ-ಚೆನ್ನಯರ ಹೆಸರಿಗೆ ಬದಲಾಗಿ ಇನ್ನೊಂದು ಹೆಸರನ್ನು ಸೂಚಿಸಿದ್ದರು.! ಒಂದು ವಿಚಿತ್ರ ಅನಿಸಿದ್ದು ಆ ಹೆಸರಿಗೆ ಖಂಡಿತ ನಮ್ಮ ವಿರೋಧವಿಲ್ಲ, ಆದರೆ ಇಷ್ಟು ದಿನ ಇಲ್ಲದ ಆ ಹೆಸರು ಬಲು ಬೇಗನೆ ಬಂದ ಕಾರಣ ಗೊತ್ತಾಗಬೇಕಿತ್ತು ಅಷ್ಟೇ!! ಶ್ರೀ ಗಳೇ ಕೋಟಿ ಚೆನ್ನಯರು ಹಿಂದುಗಳು ಅಲ್ಲವೇ, ಅಲ್ಲದಿದ್ದರೆ ನೇರವಾಗಿ ಹೇಳಿಬಿಡಿ! ಅಥವಾ ಕೋಟಿ ಚೆನ್ನಯರ ಹೆಸರಿಗೆ ಇರುವ ಬಲದ ಶಕ್ತಿಯನ್ನು ಒಡೆಯುವ ಕಾರ್ಯಕ್ಕೆ ಕೈ ಹಾಕಿದಿರ, ಅಥವಾ ಇನ್ಯಾವುದೇ ಕುತಂತ್ರ ಶಕ್ತಿಗಳ ಒತ್ತಾಸೆಗೆ ಬಲಿಯಾದಿರಿ ಎಂಬುದು ನೀವೇ ಹೇಳಬೇಕಾಗಿದೆ..! ಕೋಟಿ ಚೆನ್ನಯರು ಮಾಡಿದ ಸಾಮಾಜಿಕ ಕಾರ್ಯದ ಬಗ್ಗೆ ಒಮ್ಮೆ ಗಮನ ಹರಿಸಿ ಬನ್ನಿ ಗುರುಗಳೇ..! ಇದನ್ನು ಗೌರವಯುತವಾಗಿಯೇ ಹೇಳುತ್ತಿದ್ದೇನೆ.

ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋಟಿ-ಚೆನ್ನಯರ ಹೆಸರನ್ನು ಇಡಬಾರದೆಂದು ಹೇಳುವವರಲ್ಲಿ ಒಂದು ಸಣ್ಣ ಮನವಿ, ನೀವು ನೇರವಾಗಿ ಹೇಳಿಬಿಡಿ ಬೆಂಬಲವಿಲ್ಲ ಎಂದು, ಅದರ ಜೊತೆಗೆ ಕಾರಣವನ್ನು ತಿಳಿಸಿಬಿಡಿ ಅಷ್ಟೇ.

ಕೋಟಿ-ಚೆನ್ನಯರ ಹೆಸರನ್ನು ವಿರೋಧಿಸುವ ಅಥವಾ ಅವಮಾನಿಸುವ ವ್ಯಕ್ತಿಗಳು ಯಾರೇ ಇರಲಿ, ಯಾವುದೇ ಸಂಘಟನೆಯಿರಲಿ ಅಥವಾ ರಾಜಕೀಯ ಪಕ್ಷವೇ ಇರಲಿ ಅದು ನಿಮ್ಮ ಸಮಾಧಿಗೆ ನೀವೇ ತೋಡಿದ ಹೊಂಡದಂತೆ!

ರಾಜಕೀಯ ಪಕ್ಷಗಳ ಸ್ಥಿರತೆ ಅಸ್ಥಿರತೆಯ ಕಡೆಗೆ ಸಾಗುತ್ತದೆ ಅದು ಮಾತ್ರ ಸಣ್ಣಗೆ ನೆನಪಿರಲಿ.
ಮತ್ತೊಂದು ಬೇಸರದ ವಿಷಯವೆಂದರೆ ಯಾವುದೇ ಹಿಂದು ಸಂಘಟನೆಗಳು ಇದರ ಪರವಾದ ಮಾತುಗಳನ್ನೇ ಆಡಿಲ್ಲ, ಕೋಟಿ-ಚೆನ್ನಯರ ಹೆಸರಿಡಬೇಕೆಂಬ ಕೂಗಿಗೆ ಬಲವಾದ ಧ್ವನಿ ಆಗಲೇ ಇಲ್ಲ ಎಂಬುದು ನನ್ನಂತಹ ನೂರಾರು ಹಿಂದು ಕಾರ್ಯಕರ್ತರ ಮನದಾಳದ ಪ್ರಶ್ನೆಯಾಗಿಯೇ ಉಳಿದಿದೆ. ಹಿಂದು ಸಂಸ್ಕೃತಿಗೆ ಬೆಂಬಲವಾಗಿ ನಿಲ್ಲುವ ಬಾ.ಜ.ಪ ದಿಂದಲೂ ಇದಕ್ಕೆ ಸೂಕ್ತವಾದ ಬೆಂಬಲವೂ ಕೂಡ ವ್ಯಕ್ತವಾಗಿಲ್ಲ ಇದು ಕೂಡ ನನ್ನಂತಹ ಕಾರ್ಯಕರ್ತರಿಗೆ ಮೂಡಿದ ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ.

ಮಿಥುನ್ ರೈ ಯವರು ಕೆಲ ದಿನಗಳ ಹಿಂದೆ ನಡೆಸಿದ ಪರ ಹೋರಾಟದ ದಾರಿ ಪಕ್ಷಾತೀತವಾಗಿ ಎಲ್ಲರೂ ಒಪ್ಪುವಂತದ್ದೇ, ಆದರೆ ಇದು ರಾಜಕೀಯದ ಆಸೆಗಾಗಿ ಸಾಗಬಾರದಷ್ಟೇ..!

ಎಲ್ಲಾ ಗ್ರಾಮಗಳಲ್ಲೂ ಬಲಿಷ್ಟವಾಗಿರುವ ನಮ್ಮ ಬಿಲ್ಲವ ಸಂಘಟನೆಯ ಮುಖಂಡರೆಲ್ಲೀ..??
ಕಳೆದ ಎರಡು ಮೂರು ವಾರಗಳಿಂದ ಕಾರ್ಯ ಚಟುವಟಿಕೆಗಳು ಮಾತ್ರ ಕಣ್ಣಿಗೆ ಗೋಚರಿಸುತ್ತಿದೆ, ಅದಕ್ಕಿಂತ ಮೊದಲಿನ ಪರ ಕಾರ್ಯಗಳೇ ಇಲ್ಲಾ..!
ಕರಾವಳಿಯ ಎಂ.ಪಿ ಮತ್ತು ಎಂ.ಎಲ್.ಎಗಳು ಇದರ ಪರವಾದ ಒಂದು ಮಾತನ್ನು ಆಡುತ್ತಿಲ್ಲ..!? ಕಾರಣ ಏನೆಂದು ತಿಳಿಸುವಿರಾ..!?

ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರು ಮರು ನಾಮಕರಣ ಆಗಬೇಕೆಂಬ ಕೂಗು ಜಾತಿ, ಪಕ್ಷ ಮತ್ತು ಧರ್ಮಕ್ಕಿಂತ ಮೀರಿದ ಕೂಗು..! ನೆನಪಿರಲಿ ಇದು ಈಡೇರದಿದ್ದರೆ ಕರಾವಳಿಯ ರಾಜಕೀಯ ಚಿತ್ರಣವೇ ಬದಲಾದೀತು ಜೋಕೆ..!!

– ವಿಜೇತ್ ಪೂಜಾರಿ ಶಿಬಾಜೆ.


Related Posts

ಉದಯೋನ್ಮುಖ ಪ್ರತಿಭಾ ಪುರಸ್ಕಾರಕ್ಕೆ ಅಕ್ಷತಾ ಸುಧೀರ್


Share         ಮಂಗಳೂರು/ಬೆಂಗಳೂರು: ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘದ ವತಿಯಿಂದ ಆಯೋಜಿಸಲಾದ ರಾಷ್ಟ್ರೀಯ ಸಮ್ಮೇಳನದಲ್ಲಿ, ಯುವವಾಹಿನಿಯ ಬೆಂಗಳೂರು ಘಟಕದ ಹೆಮ್ಮೆಯ ಸದಸ್ಯೆಯೂ ಹಾಗೂ ಪ್ರಸಕ್ತ ಲೆಕ್ಕಪರಿಶೋಧಕರೂ ಆಗಿರುವ ಶ್ರೀಮತಿ ಅಕ್ಷತಾ ಸುಧೀರ್ ಅವರಿಗೆ ಉದಯೋನ್ಮುಖ


Read More »

ಕಲರ್ಸ್ ಕನ್ನಡ ಬಿಗ್ ಬಾಸ್ 12ರ ಸ್ಪರ್ಧಿ ಧ್ರುವಂತ್ (ಚರಿತ್ ಬಾಳಪ್ಪ ಪೂಜಾರಿ) ಜೀವನದ ಯಶೋಗಾಥೆ


Share         ಜೀವನದಲ್ಲಿ ಅದೆಷ್ಟೋ ಕಷ್ಟಗಳನ್ನು ಸಹಿಸಿಕೊಂಡು, ಅವಕಾಶಗಳಿಂದ ವಂಚಿತನಾದರೂ ಧೃತಿಗೆಡದೆ, ಸಾಧನೆಯ ಹಾದಿಯಲ್ಲಿ ಹಂತ ಹಂತವಾಗಿ ಮುನ್ನಡೆಯುತ್ತ ಇಂದು ಎಲ್ಲರ ಮನಗಳಲ್ಲಿ ಮನೆ ಮಾಡಿರುವಂತಹ ನಮ್ಮೆಲ್ಲರ ಹೆಮ್ಮೆಯ ಸಾಧಕ ಧ್ರುವಂತ್ ಇವರ ಯಶಸ್ಸಿನ ಹಿಂದಿನ


Read More »

🩸 ಓಮಾನ್ ಬಿಲ್ಲವಾಸ್ ವತಿಯಿಂದ ಆಯೋಜಿಸಲಾದ ಸಾಮೂಹಿಕ ರಕ್ತದಾನ ಶಿಬಿರ 🩸 ಬೌಶರ್ ಬ್ಲಡ್ ಬ್ಯಾಂಕ್, ಘಾಲಾ ಇಲ್ಲಿ ಯಶಸ್ವಿಯಾಗಿ ನಡೆಯಿತು.


Share          ಒಂದು ಕಾಲದಲ್ಲಿ ತುಳುನಾಡಿನ ಮೂಲದವರಾದ ಬಿಲ್ಲವರು ಕೃಷಿಕರಾಗಿ ಹಾಗೂ ಬೈದರಾಗಿ ತಮ್ಮ ಪರಿಶ್ರಮ, ಶ್ರಮಸಾಧನೆ ಮತ್ತು ಸಾಮಾಜಿಕ ಜವಾಬ್ದಾರಿಗಳ ಮೂಲಕ ಸಮಾಜದಲ್ಲಿ ಗೌರವಯುತ ಸ್ಥಾನವನ್ನು ಪಡೆದವರು. ಪ್ರಕೃತಿಯೊಂದಿಗೆ ಸಮನ್ವಯದಿಂದ ಬದುಕನ್ನು ಸಾಗಿಸುತ್ತಾ, ಪರಸ್ಪರ


Read More »

ನಾನು ಕಂಡ ಪ್ರವೀಣ್ ಪೂಜಾರಿ


Share         ನಾನು ಕಂಡ ಪ್ರವೀಣ್ ಪೂಜಾರಿ ಸಾಧಾರಣ 15 ವರ್ಷಗಳಿಂದ ನಮ್ಮ ಆತ್ಮೀಯತೆ ಬಿಲ್ಲವ ಸಮಾಜದ ಸಾಮಾನ್ಯ ಜನರಿಗೂ ಸಮಸ್ಯೆ ಬಂದಂತ ಸಂದರ್ಭದಲ್ಲಿ ವಕೀಲನಾಗಿ ಅಥವಾ ಸಾಮಾಜಿಕ ಕಾರ್ಯಕರ್ತನಾಗಿ ನ್ಯಾಯ ದೊರಕಿಸಿಕೊಟ್ಟಂತಹ ಒಬ್ಬ ನಮ್ಮ


Read More »

ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ನಿಶಾ ಪೂಜಾರಿ ಉತ್ತೀರ್ಣರಾಗಿದ್ದಾರೆ.


Share         ಮುಂಬಯಿ : ಕಾಂದಿವಲಿ ಪೂರ್ವದ ಠಾಕೂರ್ ಕಾಂಪ್ಲೆಕ್ಸ್ ನಿವಾಸಿ ನಿಶಾ ಪೂಜಾರಿ ಅವರು ಇತ್ತೀಚೆಗೆ ಸೆಪ್ಟೆಂಬರ್‌ನಲ್ಲಿ ನಡೆದ ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ. ಅವರು ಕಾರ್ಕಳ


Read More »

ಬಹುಮುಖ ಪ್ರತಿಭಾವಂತೆ ಹರ್ಷಿಕಾ ಕಾಣಿಯೂರು ಅವರಿಗೆ ಅಭಿನಂದನೆಗಳು


Share         ಹರ್ಷಿಕಾ ಕಾಣಿಯೂರು ಅವರ ಬಾಲ್ಯದ ವಯಸ್ಸಿನಲ್ಲಿಯೇ ಕೃಷಿ ಕಾರ್ಯದ ಮೇಲಿನ ಆಸಕ್ತಿ ಹಾಗೂ ಶ್ರಮವನ್ನು ಗುರುತಿಸಿ ಸೈಟ್ ರೀಟಾ ವಿದ್ಯಾ ಸಂಸ್ಥೆ ಗೌರವಿಸಿದ ಕ್ಷಣ ನಿಜಕ್ಕೂ ಹೆಮ್ಮೆಯದು. 🌾🌱👏   ಅಷ್ಟೇ ಅಲ್ಲದೆ,


Read More »