TOP STORIES:

ಶಿರಸಿ ಮಾರಿಕಾಂಬ ಜಾತ್ರೆಯಲ್ಲಿ ಹಾರಿದ ಹಳದಿ ಬಾವುಟ, ಅಪ್ಪು ಸ್ಮರಣೆ


ಗುರುವಾರದಿಂದ ಪ್ರಪಂಚದಾದ್ಯಂತ ಜೇಮ್ಸ್‌ ಚಿತ್ರದ ಜಾತ್ರೆ ನಡೆಯಲಿದೆ.ನಟ ಪುನೀತ್‌ ರಾಜ್‌ ಕುಮಾರರ ಕೊನೆಯ ಚಿತ್ರ ಎನ್ನುವ ಕಾರಣಕ್ಕೆ ಈ ಚಿತ್ರದ ಬಿಡುಗಡೆ ದಿನ ಕನ್ನಡ ನಾಡಿಗೆ ಜಾತ್ರೆಯಾಗಿ ಪರಿಣಮಿಸಿದೆ. ಈ ಜಾತ್ರೆಗಿಂತ ಮೊದಲು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಮಾರಿಕಾಂಬಾ ಜಾತ್ರೆಯಲ್ಲಿ ಪುನೀತ್‌ ರಾಜ್‌ ಕುಮಾರ ಸ್ತಬ್ಧಚಿತ್ರಗಳ ಜೊತೆಗೆ ಯುವಕರ ಮರವಣಿಗೆ ಸುದ್ದಿ ಮಾಡಿದೆ.

 

ಮಂಗಳವಾರ ರಾತ್ರಿಯಿಂದ ಪ್ರಾರಂಭವಾದ ದಕ್ಷಿಣ ಭಾರತದ ದೊಡ್ಡ ಜಾತ್ರೆ ಶಿರಸಿ ಮಾರಿ ಜಾತ್ರೆಯ ಮೆರವಣಿಗೆಯೇ ವಿಶೇಶ. ಈ ರಥೋತ್ಸವದ ಸಂದರ್ಭದಲ್ಲಿ ಧಾರ್ಮಿಕ, ಸಾಂಸ್ಕೃತಿಕ ವೈಶಿಷ್ಟ್ಯಗಳ ಮೆರವಣಿಗೆಯೇ ನಡೆಯುತ್ತದೆ. ಈ ವರ್ಷದ ಬುಧವಾರದ ಮುಂಜಾನೆಯ ಮಾರಿಕಾಂಬಾ ರಥಾಗಮನ ಸಂದರ್ಭದಲ್ಲಿ ಹಿಂದಿನಂತೆ ಎಲ್ಲಾ ಧಾರ್ಮಿಕ, ಸಾಂಸ್ಕೃತಿಕ ಆಕರ್ಷಣೆಗಳಿದ್ದವು. ಇವುಗಳೊಂದಿಗೆ ಈ ಬಾರಿ ಇಲ್ಲಿಯ ಯುವಕರು ರಥ ಮೆರವಣಿಗೆಯಲ್ಲಿ ಪುನೀತ್‌ ರಾಜ್‌ ಕುಮಾರ ವೈಶಿಷ್ಟ್ಯ ನೆನಪಿಸುವ ಮೆರವಣಿಗೆಯೊಂದಿಗೆ ಡೊಳ್ಳಿನ ಕುಣಿತ ಮಾಡಿ ಸಾರ್ವಜನಿಕರ ಗಮನ ಸೆಳೆದರು.

ಪುನೀತ್‌ ರಾಜ್‌ ಕುಮಾರ್‌ ಬ್ಯಾನರ್ಗಳು, ಪೋಸ್ಟರ್‌ ಗಳೊಂದಿಗೆ ಡೊಳ್ಳು ಹೊಡೆದು ಸಿಳ್ಳೆ ಹಾಕಿದರು. ಜಾತ್ರೆಯಲ್ಲಿ ನಟನೊಬ್ಬನ ಆರಾಧನೆ, ಪುನೀತ್‌ ಸ್ಮರಣೆಗಾಗಿ ಬಾವುಟ,ಸ್ತಬ್ಧಚಿತ್ರ ಪ್ರದರ್ಶನ ಮಾಡಿ ಅಪ್ಪು ನೆನಪು ಚಿರಸ್ಥಾಯಿಯಾಗುವಂತೆ ಮಾಡಿದ್ದು ವಿಶೇ ಶವೆನಿಸಿತು.

ಇದರೊಂದಿಗೆ ಈ ವರ್ಷ ಬ್ರಹ್ಮಶ್ರೀ ನಾರಾಯಣ ಗುರುಗಳ ನೆನಪಿಗೆ ಹಳದಿ ಬಾವುಟ ಹಾರಿಸಿದ್ದೂ ವಿಶೇಶವೆನಿಸಿತು.

ರಾಜ್ಯದಾದ್ಯಂತ ನಾರಾಯಣ ಗುರುಗಳ ನೆನಪು, ಸ್ಮರಣೆ ಚಿಂತನೆಗಳ ಪ್ರಸಾರದ ಹಿನ್ನೆಲೆಯಲ್ಲಿ ಕೆಲಸ ಮಾಡುತ್ತಿರುವ ಸಂಘಟನೆಗಳು ಹಳದಿ ಶಾಲಿನೊಂದಿಗೆ ಡೊಳ್ಳುಹೊಡೆದು ಹಳದಿ ಬಾವುಟ ಹಾರಿಸಿದ್ದು ಜನಾಕರ್ಷಣೆ ಎನಿಸಿತು. ಸಂಪ್ರದಾಯ, ಚಾರಿತ್ರಿಕ ಆಚರಣೆಗಳ ವೈಶಿಷ್ಟ್ಯದ ಜೊತೆಗೆ ಮಾರಿಜಾತ್ರೆಯ ತೇರಿನಲ್ಲಿ ಕಾಣಿಸಿಕೊಂಡ ಅಪ್ಪು ಅಭಿಮಾನಿಗಳು, ನಾರಾಯಣಗುರು ಅನುಯಾಯಿಗಳು ಈ ವರ್ಷದ ಜಾತ್ರಾ ಮೆರವಣಿಗೆ ಸೊಗಸು ಹೆಚ್ಚಿಸಿದರು. ಶಿರಸಿ ಪೇಟೆಯಿಡಿ ತುಂಬಿದ್ದ ಜನರ ಮಧ್ಯೆ ಮಾರಿಕಾಂಬಾ ರಥದ ಜೊತೆಗೆ ಡೊಳ್ಳಿನೊಂದಿಗೆ ಹೆಜ್ಜೆಹಾಕಿದ ಪುನೀತ್‌ ಅಭಿಮಾನಿಗಳು, ನಾರಾಯಣಗುರುಗಳ ಬಿ.ಎಸ್. ಎನ್.ಡಿ.ಪಿ.‌ಹಳದಿ ವಸ್ತ್ರ ಜನಾಕರ್ಷಣೆಯ ಕೇಂದ್ರವೆನಿಸಿದವು.ಜೊತೆಗೆ ರಾಜ್ಯದಾದ್ಯಂತ ನಾರಾಯಣ ಗುರುಗಳ[Narayana Guru] ನೆನಪು, ಸ್ಮರಣೆ ಚಿಂತನೆಗಳ ಪ್ರಸಾರದ ಹಿನ್ನೆಲೆಯಲ್ಲಿ ಕೆಲಸ ಮಾಡುತ್ತಿರುವ ಸಂಘಟನೆಗಳ ಪ್ರಮುಖರಾದ ಲೋಹಿತ್ ನಾಯಕ, ಜಗದೀಶ ನಾಯ್ಕ, ಪ್ರಭು ಸಾಲರ್, ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಘು ಬೆಳಲೆ, ಹರೀಶ್ ನಾಯ್ಕ, ಪ್ರದೀಪ ನಾಯ್ಕ, ವಕೀಲರಾದ ಮಂಜುನಾಥ್, ಕನ್ನಡ ಪರ ಯುವ ಹೋರಾಟಗಾರರಾದ ಮಹೇಶ್, ನಾಗರಾಜ ಶೆಟ್ಟಿ, ನಾಮಧಾರಿ ಬಿಲ್ಲವ ಸಂಘದ ಮುಖಂಡರಾದ ಶೇಖರ್ ಪೂಜಾರಿ ಮುಂತಾದವರು ಭಾಗವಹಿಸಿದ್ದರು.


Related Posts

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »

ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕವನಕ್ಕೆ ಒಲಿದ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ


Share         ಕರ್ನಾಟಕ ಲೇಖಕಿಯರ ಸಂಘವು 2025ನೇ ಸಾಲಿನ ವಿವಿಧ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಸ್ತಪ್ರತಿಯಲ್ಲಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ, ಅನಿತಾ ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಕ್ಕೆ 


Read More »

ಚಿಕ್ಕ ವಯಸ್ಸಿನಲ್ಲಿ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಬಾಲಕ ಸುಹಾಂಶ್‌ನ ಎಸ್ ಬಂಗೇರ ದಾಖಲೆ


Share         ದಾವಣಗೆರೆ : ನಗರದ ಶಾಂತಪ್ಪ ಪೂಜಾರಿ ಹಾಗೂ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ಇವರ ಮೊಮ್ಮಗನಾದ ಕು. ಸುಹಾಂಶ್ ಎಸ್ ಬಂಗೇರ “ಇಂಡಿಯಾ ಬುಕ್ ಆಫ್ ರೆಕಾರ್ಡ್’ನ ಸಾಧಕನಾಗಿದ್ದು, ಸರಿಸುಮಾರು 195 ರಾಷ್ಟ್ರಗಳ


Read More »

ಖೇಲೋ ಇಂಡಿಯಾ ರಾಷ್ಟ್ರೀಯ ಕರಾಟೆ ತಂಡಕ್ಕೆ ಆಯ್ಕೆಯಾದ ಕರಾಟೆ ಪಟು ಛಾಯಾ ಎಸ್. ಪೂಜಾರಿ.


Share         ಚಿನ್ನ 30 ಬೆಳ್ಳಿ 1 ಕಂಚು – ಇದು ಛಾಯಾ ಎಸ್. ಪೂಜಾರಿ ಅವರ ಒಂದು ದಶಕದ ಪರಿಶ್ರಮ ಹಾಗೂ ಸಾಧನೆಗೆ ಸಂದಿರುವ ಗೌರವದ ತುರಾಯಿ. ಉಡುಪಿ ಜಿಲ್ಲೆಯ ಹೆರ್ಗ ಕಾಂತಾ ಬೆಟ್ಟು


Read More »

ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಅವರಿಗೆ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ


Share         ನಮ್ಮ ಹೆಮ್ಮೆಯ ಕರಾವಳಿಯ ಪ್ರತಿಭೆ, ಅಂತರಾಷ್ಟ್ರೀಯ ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಸಿದ್ದಕಟ್ಟೆ ಅವರಿಗೆ ಫಸ್ಟ್ ನ್ಯೂಸ್ ವಾಹಿನಿಯ ಪ್ರತಿಷ್ಠಿತ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ ಲಭಿಸಿರುವುದು ನಾಡಿಗೆ ಸಂದ ಗೌರವ. ಗ್ರಾಮೀಣ


Read More »

ಪುತ್ತೂರು:ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿಯ ಮಾಜಿ ಅಧ್ಯಕ್ಷ ರವಿಕುಮಾರ್ ಕಲ್ಕಾರ್ ನಿಧನ


Share         ಪುತ್ತೂರು: ಶಾಂತಿಗೋಡು ಕಲ್ಕಾರ್ ನಿವಾಸಿ ರವಿಕುಮಾರ್ ಕಲ್ಕಾರ್(48ವ.)ರವರು ಫೆ.15ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಪೂಜೆ ಸಂದರ್ಭ ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿ ವತಿಯಿಂದ ನಡೆಸಲ್ಪಟ್ಟ ಕ್ರೀಡಾಕೂಟದಲ್ಲಿ ರವಿ ಕಲ್ಕಾರ್ ರವರು


Read More »